ದೀಪಿಕಾ ಪಾತ್ರದ ಮೂಲಕ ಕಿರುತೆರೆಗೆ ರೀ-ಎಂಟ್ರಿ ಕೊಟ್ಟ ಐಶ್ವರ್ಯಾ ಶಿಂಧೋಗಿ

By ಅನಿತಾ ಬನಾರಿ

ಐಶ್ವರ್ಯಾ ಶಿಂಧೋಗಿ ಕನ್ನಡ ಚಿತ್ರರಂಗದಲ್ಲಿ ಬಹುಪರಿಚಿತ ನಟಿಯರಲ್ಲಿ ಒಬ್ಬರು. ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಲ್ಲದೇ ತನ್ನದೇ ಪ್ರಾಡಕ್ಟ್ ಬ್ರಾಂಡನ್ನು ಹೊಂದಿರುವ ನಟಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು, ಐಶ್ವರ್ಯಾ ಶಿಂಧೋಗಿ ಮತ್ತೊಮ್ಮೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಇನ್ನು ಮುಂದೆ ಐಶ್ವರ್ಯಾ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಲಚ್ಚಿ ಧಾರಾವಾಹಿಯಲ್ಲಿ ರಿಯಾಳ ತಾಯಿ ದೀಪಿಕಾರ ಪಾತ್ರವನ್ನು ನಿಭಾಯಿಸುತ್ತಿದ್ದ ಸಾರಾ ಅಣ್ಣಯ್ಯ ಹಠಾತ್ತಾಗಿ ಸೀರಿಯಲ್‌ನಿಂದ ಹೊರಬಂದಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯೇನೂ ದೊರೆತಿಲ್ಲ. ಆದರೆ ಅವರ ಸ್ಥಾನಕ್ಕೆ 'ನಾಗಿಣಿ 2' ಹಾಗೂ 'ಮಂಗಳಗೌರಿ ಮದುವೆ' ಧಾರಾವಾಹಿ ಖ್ಯಾತಿಯ ಐಶ್ವರ್ಯಾ ಸಿಂಧೋಗಿ ಎಂಟ್ರಿ ಕೊಡಲಿದ್ದಾರೆ.

Aishwarya Shindhogi entered Namma Lacchi Serial through the role of Deepika

ಹೋಟೆಲ್ ಮ್ಯಾನೇಜ್ ಮೆಂಟ್ ಪದವೀಧರೆ

ಹೋಟೆಲ್ ಮ್ಯಾನೇಜ್ ಮೆಂಟ್‌ನಲ್ಲಿ ಪದವಿಯನ್ನು ಪಡೆದಿರುವ ಐಶ್ವರ್ಯಾ ಅವರ ನಟನಾ ಪಯಣ ಪ್ರಾರಂಭವಾದದ್ದು 'ಸಿಂಹಾದ್ರಿ' ಸಿನಿಮಾದ ಮೂಲಕ. ತಮ್ಮ ಒಂಬತ್ತನೇ ವಯಸ್ಸಿನಲ್ಲಿ ಐಶ್ವರ್ಯಾ ಈ ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿದ್ದರು. ತದನಂತರ ನಟನೆಗಿಂತ ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಐಶ್ವರ್ಯಾ, ಪದವಿ ಶಿಕ್ಷಣ ಪೂರ್ಣಗೊಳ್ಳುವವರೆಗೂ ನಟನೆಯನ್ನು ಮುಂದುವರಿಸಲಿಲ್ಲ.

ಸಿನಿಮಾದಲ್ಲಿಯೂ ಮೋಡಿ

2015 ರಲ್ಲಿ ದುನಿಯಾ ವಿಜಯ್ ನಟಿಸಿದ ಸನತ್ ಕುಮಾರ್ ಅವರ 'ಜಾಕ್ಸನ್' ಚಿತ್ರದೊಂದಿಗೆ ಮತ್ತೆ ಚಿತ್ರರಂಗ ಪ್ರವೇಶಿಸಿದ ಐಶ್ವರ್ಯಾ ಆ ಸಿನಿಮಾದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡರು. ಮುಂದೆ ಅದೇ ವರ್ಷ ತೆರೆ ಕಂಡ 'ಸಪ್ನೋ ಕಿ ರಾಣಿ', 2016ರಲ್ಲಿ'ರಣತಂತ್ರ', 'ಮಮ್ಮಿ: ಸೇವ್ ಮಿ', 'ಚಿನ್ನಾರಿ' ಮತ್ತು 2017ರಲ್ಲಿ 'ಸಂಯುಕ್ತ 2' ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡ ಚೆಲುವೆ ಐಶ್ವರ್ಯಾ.

Aishwarya Shindhogi entered Namma Lacchi Serial through the role of Deepika

ಕಿರುತೆರೆಯ ಮೂಲಕ ಮನಸೆಳೆದ ಐಶ್ವರ್ಯಾ

'ನಾಗಿಣಿ 2' ಧಾರಾವಾಹಿಯ ಮಾಯಾಂಗನೆಯಾಗಿ ಕಿರುತೆರೆ ಜಗತ್ತಿಗೆ ಕಾಲಿಟ್ಟ ಐಶ್ವರ್ಯಾ ಶಿಂಧೋಗಿ ತದ ನಂತರ 'ಮಂಗಳ ಗೌರಿ ಮದುವೆ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ಅಭಿನಯಿಸಿದರು. ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೂಪರ್ ಕ್ವೀನ್' ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿ ಸೈ ಎನಿಸಿಕೊಂಡ ಈಕೆ, ಇದೀಗ ದೀಪಿಕಾ ಪಾತ್ರದ ಮೂಲಕ ರಂಜಿಸಲು ಬರುತ್ತಿದ್ದಾರೆ.

ಉದ್ಯಮಿಯೂ ಹೌದು

ಚಿತ್ರರಂಗದ ಹೊರತಾಗಿ 2018ರಲ್ಲಿ, ನಟಿ ಚರ್ಮದ ಆರೈಕೆ ಉತ್ಪನ್ನಗಳ ಬ್ರ್ಯಾಂಡ್, ಕಾನ್ ಅಮೋರನ್ನು ಪ್ರಾರಂಭಿಸಿದರು. ಹ್ಯಾಂಡ್ ಮೇಡ್ ಸಸ್ಯಶಾಸ್ತ್ರೀಯ ಸೌಂದರ್ಯವರ್ಧಕಗಳನ್ನು ಈ ಕಂಪನಿ ಮಾರಾಟ ಮಾಡುತ್ತದೆ.

More from Filmibeat

English summary
Sara Annaiah, who bid farewell to the role of Deepika in Lachi, will be replaced by Aishwarya Shindhogi of Mayangane fame, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X