Aishwarya Shindogi: ಬಿಕಿನಿಯಲ್ಲಿ ಬಾಲಿಯ ಜಲಪಾತಕ್ಕೆ ಮೈಯೊಡ್ಡಿದ ಮಾಯಾಂಗನೆ

By ಪ್ರಿಯಾ ದೊರೆ

ನಟಿ ಐಶ್ವರ್ಯ ಸಿಂಧೋಗಿ ಅವರು ಬಾಲಿ ಟ್ರಿಪ್‌ನಲ್ಲಿ ಎಂಜಾಯ್ ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಕಳೆದೊಂದು ವಾರದಿಂದ ನಟಿ ನಮ್ರತಾ ಗೌಡ ಹಾಗೂ ಐಶ್ವರ್ಯ ಸಿಂಧೋಗಿ ಬಾಲಿಯ ಸೌಂದರ್ಯ ಸವಿಯುತ್ತಿದ್ದಾರೆ. ಮೋಜು ಮಸ್ತಿ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ

ಬೀಚ್, ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜುಡುಗೆ ತೊಟ್ಟು ಈಜಿ ಖುಷಿಪಡುತ್ತಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಡುತ್ತಿದ್ದಾರೆ. ಆಗಾಗ ಹಾಟ್ ಫೋಟೋಶೂಟ್ ಮಾಡಿಸುವ ಮಾಯಾಂಗನೆ, ಈಗ ಬಾಲಿಯಲ್ಲಿ ಇನ್ನಷ್ಟು ಹಾಟ್ ಆಗಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.

Aishwarya Shindogi hot Bikini pics from bali vacation

ಬಾಲಿಯಲ್ಲಿ ಐಶ್ವರ್ಯ ಸಿಂಧೋಗಿ ಅವರು ಕಾಂಟೊ ಲ್ಯಾಂಪೊ ಜಲಪಾತ, ಕುಟಾ ಬೀಚ್, ಲಯನ್ ರೆಸ್ಟೋರೆಂಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟಿದ್ದಾರೆ.

ಬಿಂದಾಸ್‌ ಐಶ್ವರ್ಯ ಸಿಂಧೋಗಿ

ಕಪ್ಪು ಬಂಡೆಗಳ ಮೇಲಿನಿಂದ ಧುಮಿಕ್ಕುವ ಜಲಪಾತದ ನಡುವೆ ಸ್ವಿಮ್ ಸೂಟ್ ಧರಿಸಿ, ಐಶ್ವರ್ಯ ಸಿಂಧೋಗಿ ಖುಷಿಪಟ್ಟಿದ್ದಾರೆ. ಆಗಾಗ ಪ್ರವಾಸ ಮಾಡುವ ಐಶ್ವರ್ಯ ಅವರಿಗೆ ಜೊತೆಗಾತಿ ನಟ ನಮ್ರತಾ ಗೌಡ. ಇವರಿಬ್ಬರು ಧಾರಾವಾಹಿಯಲ್ಲಿ ದುಷ್ಮನ್‌ಗಳಾಗಿದ್ದರೂ, ರಿಯಲ್ ಲೈಫ್‌ ಬಹಳ ಆತ್ಮೀಯರು. ಹೀಗಾಗಿ ಎಲ್ಲಿಯೇ ಹೋದರೂ ಜೊತೆಯಾಗಿಯೇ ಹೋಗುತ್ತಾರೆ. ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಾರೆ. ಬಾಲಿಗೂ ಕೂಡ ಐಶ್ವರ್ಯ ಜೊತೆಗೆ ನಮ್ರತಾ ಇದ್ದಾರೆ. ಇಬ್ಬರೂ ಬೋಲ್ಡ್ ಲುಕ್‌ನಲ್ಲಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

ಜಲಪಾತದ ಕೆಳಗೆ ಸುರಸುಂದರಿ

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಐಶ್ವರ್ಯ ಅವರು ಹೊಟೇಲ್ ಮ್ಯಾನೇಜ್‌ಮೆಂಟ್ ನಲ್ಲಿ ಪದವಿ ಪಡೆದಿದ್ದು, ಅಮೇರಿಕಾದ ಅಮೇರಿಕನ್ ಕ್ಲಬ್‌ನಲ್ಲಿ ಕೆಲಸ ಮಾಡಿದ್ದರು. ನಟನೆಗೆ ಆರಂಭಿಸಿದ ಬಳಿಕ ಕೆಲಸ ಬಿಟ್ಟು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಪ್ರವಾಸ ಕೈಗೊಳ್ಳುತ್ತಾರೆ. ಬಾಲಿಯ ಸುಂದರ ತಾಣಗಳಲ್ಲಿ ದೇವತೆಯಂತೆ ಕಂಗೊಳಿಸುತ್ತಿದ್ದಾರೆ. ಮುದ್ದಾಗಿ ಕಾಣುವ ಈ ಚೆಲುವೆ ಫಿದಾ ಆಗದ ಅಭಿಮಾನಿಗಳಿಲ್ಲ. ಬಾಲಿಯ ಕಾಂಟೊ ಲ್ಯಾಂಪೊ ಫಾಲ್ಸ್ ಬಳಿ ತೆಗಿಸಿಕೊಂಡ ಫೋಟೋ ಹಾಕಿ ಇನ್ನೂ ಕೇವಲ ಮೂರು ಗಂಟೆಗಳಾಗಿದೆ. ಅದಾಗಲೇ ಐದು ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ. ಮೊನ್ನೆಯಷ್ಟೇ ಐಶ್ವರ್ಯ ಅವರು ಹಾಕಿದ ಫೋಟೋಗಳಿಗೆ ದೇವಲೋಕದ ಅಪ್ಸರೆ ಎಂದು ಕೂಡ ಅಭಿಮಾನಿಗಳು ಕಮೆಂಟ್ ಮಾಡಿದ್ದರು.

Aishwarya Shindogi hot Bikini pics from bali vacation

ಬೀಚ್‌ನಲ್ಲಿ ಮೊನಾಕಿನಿ ಧರಿಸಿ ಪೋಸ್

ಇನ್ನು ಕಡಲ ತಡಿಯಲ್ಲಿ ಕೇಸರಿ ಬಣ್ಣದ ಮೊನಾಕಿನಿ ಧರಿಸಿ ಐಶ್ವರ್ಯ ಸಿಂಧೋಗಿ ಪೋಸ್ ಕೊಟ್ಟಿದ್ದಾರೆ. ಆ ಫೋಟೊಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕೇಸರಿ ಬಣ್ಣದ ಈಜುಡುಗೆ ಮೇಲೆ ಶಾಲು ಹೊದ್ದು ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೊಗಳು ಸಖತ್ ವೈರಲ್ ಆಗ್ತಿದೆ.

ಸಿನಿಮಾಗಳಲ್ಲೂ ಆಕ್ಟೀವ್

ಇನ್ನು ಐಶ್ವರ್ಯ ಅವರು ಕೇವಲ ಧಾರಾವಾಹಿಗಳಲ್ಲಿ ಮಾತ್ರವಲ್ಲದೇ, ಸಿನಿಮಾಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಆಗಾಗ ಡಿಫರೆಂಟ್ ಉಡುಗೆಗಳಲ್ಲಿ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಐಶ್ವರ್ಯ ಸಿಂಧೋಗಿ ಅವರು ಶಾಲಾ ಕಾಲೇಜು ದಿನಗಳಿಂದಲೂ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದರು. ರಾಜ್ಯಮಟ್ಟದ ಹಾಕಿ ಆಟಗಾರ್ತಿಯಾಗಿದ್ದರು.

ಐಶ್ವರ್ಯ ಸಿಂಧೋಗಿ ಅವರು ನಟನೆಗೆ ಬಂದಿದ್ದು, ಸಿನಿಮಾ ನಾಯಕಿಯಾಗಿ. ಸೃಜನ್ ಲೋಕೇಶ್ ಅವರ ನಟನೆಯ ಸಿನಿಮಾ 'ಸಪ್ನೋಂಕಿ ರಾಣಿ' ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಸಿಂಹಾದ್ರಿ', 'ಮಟಾಷ್', 'ಸಂಯುಕ್ತ- 2' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 'ವಾವ್', 'ಸೈತಾನ್' ಹಾಗೂ ಸೈಕಲಾಜಿಕಲ್ ಥ್ರಿಲ್ಲರ್ ಆಗಿರುವ 'ಯಾರು ಯಾರು ನೀ ಯಾರು' ಚಿತ್ರಗಳಲ್ಲಿ ಐಶ್ವರ್ಯ ಅವರು ನಟಿಸಿದ್ದಾರೆ.

ಡಿಫರೆಂಟ್ ಲುಕ್ ನಲ್ಲಿ ಐಶ್ವರ್ಯ

ಸಿನಿಮಾ ಲೋಕದಿಂದ ಐಶ್ವರ್ಯ ಅವರು ಕಿರುತೆರೆಗೆ ಎಂಟ್ರಿಕೊಟ್ಟು, 'ಮಂಗಳಗೌರಿ' ಧಾರಾವಾಹಿಯಲ್ಲಿ ನಟಿಸಿದರು. ಬಳಿಕ ನಾಗಿಣಿ-2 ಧಾರಾವಾಹಿಯಲ್ಲಿ ನಟಿಸಿದ್ದು, ಇದೀಗ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ದೀಪಿಕಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಾಶ್ಮಿರಿ ಸ್ಟೈಲ್‌ನಿಂದ ಹಿಡಿದು ದೇವಿ ಅವತಾರದಲ್ಲೂ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

More from Filmibeat

English summary
Aishwarya Shindogi' hot Bikini pics from bali vacation. actress Namratha Gowda also went on tour with her. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X