ತಿಮಿಂಗಲಗಳ ಜೊತೆ ಅಜಯ್ ದೇವಗನ್ ಈಜಾಟ! ಬಿಯರ್ ಗ್ರಿಲ್ಸ್ ಜೊತೆ ಸಾಹಸ

ನಟ ಅಜಯ್ ದೇವಗನ್ ಬಾಲಿವುಡ್‌ನ ಪ್ರಮುಖ ಆಕ್ಷನ್ ಹೀರೊ. ಸಿನಿಮಾಗಳಲ್ಲಿ ಅವರು ಮಾಡುವ ಸಾಹಸ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ತಾನು ನಟಿಸಿದ ಮೊದಲ ಸಿನಿಮಾದಲ್ಲಿಯೇ ಡ್ಯೂಪ್ ಇಲ್ಲದೆ ಎರಡು ಬೈಕ್‌ ಮೇಲೆ ನಿಂತು ಶಾಟ್ ನೀಡಿದ್ದರು ಅಜಯ್.

ಒಂದು ಕಾಲದಲ್ಲಿ ಡ್ಯೂಪ್‌ಗಳಿಲ್ಲದೆ ಸ್ಟಂಟ್‌ಗಳನ್ನು ಮಾಡುತ್ತಿದ್ದ ಅಜಯ್ ದೇವಗನ್‌ಗೆ ಈಗ ವಯಸ್ಸಾಗಿದೆ. ಆದರೆ ಸಾಹಸ ಮಾಡುವ ಉತ್ಸಾಹ ಕುಗ್ಗಿಲ್ಲ.

ವಿಶ್ವವಿಖ್ಯಾತ ಸರ್ವೈವಲ್ ಶೋ 'ಇನ್‌ ಟು ದಿ ವೈಲ್ಡ್ ವಿತ್ ಬಿಯರ್ ಗ್ರಿಲ್ಸ್' ಶೋ ನಲ್ಲಿ ಭಾಗವಹಿಸಿರುವ ಅಜಯ್ ದೇವಗನ್ ಭಾರಿ ಸಾಹಸಗಳನ್ನು ಮಾಡಿದ್ದಾರೆ. ಅದರಲ್ಲೊಂದು ತಿಮಿಂಗಳಗಳಿಂದ ಕೂಡಿದ ಸಮುದ್ರದಲ್ಲಿ ಈಜಾಡಿದ್ದಾರೆ!

ಬಿಯರ್‌ ಗ್ರಿಲ್ಸ್‌ ಶೋನಲ್ಲಿ ಅಜಯ್ ದೇವಗನ್ ಭಾಗವಹಿಸಿರುವ ಎಪಿಸೋಡ್‌ನ ಟ್ರೇಲರ್ ಬಿಡುಗಡೆ ಆಗಿದ್ದು, ಟ್ರೇಲರ್‌ನಲ್ಲಿ ಕಾಣುತ್ತಿರುವಂತೆ ಅಜಯ್ ದೇವಗನ್, ತಿಮಿಂಗಲಗಳಿಂದ ಕೂಡಿದ ಸಮುದ್ರದಲ್ಲಿ ಯಾವುದೇ ರಕ್ಷಣೆ ಇಲ್ಲದೆ ಈಜಾಡಿದ್ದಾರೆ.

Ajay Devgans Into The Wild With Bear Grylls Trailer Released

ದ್ವೀಪವೊಂದರಿಂದ ಹಳೆಯ ಬೋಟು, ಮರದ ತುಂಡುಗಳನ್ನು ಬಳಸಿ ಸಮುದ್ರದಲ್ಲಿ ತೇಲಾಟ ನಡೆಸಿದ್ದಾರೆ. ಸಮುದ್ರಕ್ಕೆ ಹಾರಿ ಅಲ್ಲಿಂದ ಹಗ್ಗದ ಮೂಲಕ ಮೇಲೆ ಹಾರುತ್ತಿರುವ ಹೆಲಿಕಾಪ್ಟರ್‌ಗೆ ಹತ್ತಿದ್ದಾರೆ. ಇನ್ನೂ ಹಲವು ಸಾಹಸಗಳನ್ನು ಅಜಯ್ ದೇವಗನ್, ಬಿಯರ್ ಗ್ರಿಲ್ಸ್ ಜೊತೆಗೆ ಮಾಡಿದ್ದಾರೆ.

ಶೋ ಬಗ್ಗೆ ಮಾತನಾಡಿಡರುವ ಅಜಯ್ ದೇವಗನ್, ''ಬಿಯರ್ ಗ್ರಿಲ್ಸ್‌ಗೆ ವಿಶೇಷ ನಮನ. ಪ್ರಕೃತಿಯೊಂದಿಗೆ ಸಂಬಂಧ ಇರಿಸಿಕೊಳ್ಳಲು, ಹೊಸ ವಿಷಯಗಳನ್ನು ಅನ್ವೇಷಿಸಲು ಅವರು ಕೋಟ್ಯಂತರ ಜನರಿಗೆ ಸ್ಪೂರ್ತಿ ಒದಗಿಸುತ್ತಿದ್ದಾರೆ. ನನ್ನನ್ನು ಸುರಕ್ಷಿತವಾಗಿ ಆ ಕಾಡು, ಸಮುದ್ರದಿಂದ ಪಾರು ಮಾಡಿಸಿ ಕರೆದುಕೊಂಡು ಬಂದಿದ್ದಕ್ಕೆ ಸಹ ಧನ್ಯವಾದ. ಕಾಡಾಗಲಿ, ಸಮುದ್ರವಾಗಲಿ ಬಿಯರ್ ಗ್ರಿಲ್ಸ್‌ಗೆ ಎಲ್ಲವೂ ಗೊತ್ತು'' ಎಂದಿದ್ದಾರೆ ಅಜಯ್ ದೇವಗನ್.

''ನಾನು ಬಾಲಿವುಡ್‌ನ ಆಕ್ಷನ್ ನಿರ್ದೇಶಕರ ಮಗ. ನನ್ನ 30 ವರ್ಷಗಳ ವೃತ್ತಿ ಜೀವನದಲ್ಲಿ ಹಲವು ಸ್ಟಂಟ್‌ಗಳನ್ನು ಮಾಡಿದ್ದೇನೆ. ಹಲವು ಅಪಾಯಕರಾಗಿ ಸ್ಟಂಟ್‌ಗಳಲ್ಲಿ ಪಾಲ್ಗೊಂಡಿದ್ದೇನೆ. ನನ್ನ ಆ ಕಲಿಕೆಯನ್ನೆಲ್ಲ ಬಿಯರ್ ಗ್ರಿಲ್ಸ್ ಶೋನಲ್ಲಿ ಒಟ್ಟಿಗೆ ತೊಡಗಿಸಿದ್ದೆ. ಖಂಡಿತವಾಗಿಯೂ ಇದು ಮಕ್ಕಳಾಟವಂತೂ ಆಗಿರಲಿಲ್ಲ. 'ಇನ್‌ ಟು ದಿ ವೈಲ್ಡ್ಸ್‌'ಗೆ ಮೊದಲ ಬಾರಿಗೆ ಬಂದಿದ್ದೇನೆ. ಈ ಅವಕಾಶಕ್ಕೆ ಧಕ್ಕಿದ್ದಕ್ಕೆ ನಾನು ಉಲ್ಲಸಿತನಾಗಿದ್ದೇನೆ. ಈ ಅವಕಾಶದಿಂದ ನಾನು ಹೊಸ ವಿಷಯಗಳನ್ನುನ ಅನ್ವೇಷಿಸಲು ಹಾಗೂ ನಾನು ನನ್ನ ಆರಾಮದಾಯಕ ಜೀವನ ಬಿಟ್ಟು ಕಠಿಣತೆಗೆ ತೆರೆದುಕೊಳ್ಳುವಂತೆ ಮಾಡಿತು'' ಎಂದಿದ್ದಾರೆ.

'ಇನ್‌ ಟು ದಿ ವೈಲ್ಡ್ ವಿತ್ ಬಿಯರ್ ಗ್ರಿಲ್ಸ್‌' ಕಾರ್ಯಕ್ರಮ ವಿಶ್ವದಾದ್ಯಂತ ಜನಪ್ರಿಯತೆ ಹೊಂದಿರುವ ಕಾರ್ಯಕ್ರಮಗಳಲ್ಲಿ ಒಂದು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಹಲವು ಗಣ್ಯಾತಿಗಣ್ಯರು ಈ ಶೋನಲ್ಲಿ ಬಿಯರ್ ಗ್ರಿಲ್ಸ್‌ ಜೊತೆಗೆ ಸಾಹಸ ಯಾತ್ರೆ ಮಾಡಿದ್ದಾರೆ. ಭಾರತದಿಂದ ಈ ವರೆಗೆ ಮೂರು ವ್ಯಕ್ತಿಗಳಷ್ಟೆ ಬಿಯರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಮೊದಲು ಪ್ರಧಾನಿ ಮೋದಿ, ನಂತರ ರಜನೀಕಾಂತ್ ಹಾಗೂ ಈಗ ಅಜಯ್ ದೇವಗನ್ ಭಾಗವಹಿಸಿದ್ದಾರೆ.

ಅಜಯ್ ದೇವಗನ್-ಬಿಯರ್ ಗ್ರಿಲ್ಸ್‌ ಕಾರ್ಯಕ್ರಮವು ಇದೇ ತಿಂಗಳ 22 ರಂದು ಡಿಸ್ಕವರಿ ಒಟಿಟಿಯಲ್ಲಿ ಹಾಗೂ 25 ರಂದು ಟಿವಿಯಲ್ಲಿ ಪ್ರಸಾರವಾಗಲಿದೆ.

More from Filmibeat

English summary
Actor Ajay Devagan's into the wild with Bear Grylls trailer released. Show will telecast on October 22 and 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X