ಗಂಡು ಬೇಡ, ಹೆಣ್ಣು ಬೇಡ ; ನನಗೆ ಯಾರಿಂದಲೂ ದೈಹಿಕ ಸುಖ ಬೇಡ, ಡಿವೋರ್ಸ್ ಬೆನ್ನಲ್ಲೇ ನಟಿಯ ಶಾಕಿಂಗ್ ಹೇಳಿಕೆ
ಮದುವೆಯಾದ ಹೊಸತರಲ್ಲಿ ಹಲವರು ಎರಡು ಹೆಸರು ಒಂದೇ ಉಸಿರು ಎನ್ನುವಂತೆ ಇರುತ್ತಾರೆ. ಆದರೆ.. ಕಾಲ ಕ್ರಮೇಣ ದಾಂಪತ್ಯದಲ್ಲಿನ ಈ ಪ್ರೀತಿ-ಪ್ರಣಯ ನಿಧಾನಕ್ಕೆ ನೇಪಥ್ಯಕ್ಕೆ ಸರಿಯಲು ಶುರು ಮಾಡುತ್ತೆ. ಅಲ್ಲಿಯವರೆಗೆ ಕಾಣದ ಭಿನ್ನಾಭಿಪ್ರಾಯಗಳು ಕಾಣುತ್ತವೆ.
ಇನ್ನೂ ಯಾವುದೇ ಸಂಬಂಧವಾದರೂ ಸರಿ, ಅಲ್ಲಿ ಪರಸ್ಪರ ನಂಬಿಕೆ ಇರಬೇಕು.ಅರೆಂಜ್ ಮ್ಯಾರೇಜ್ ಆಗಿರಲಿ.. ಲವ್ ಮ್ಯಾರೇಜ್ ಆಗಿರಲಿ.. ಸಂಬಂಧದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ ಇರಬೇಕು. ಆಗಲೇ ದಾಂಪತ್ಯ ಜೀವನ ಯಶಸ್ವಿಯಾಗಿ ಮುನ್ನಡೆಯಲು ಸಾಧ್ಯ.

ಆದರೆ.. ಬದಲಾದ ಈ ಕಾಲದಲ್ಲಿ. ಬದುಕಲು ದೊರೆತ ಅಸಂಖ್ಯ ಅವಕಾಶಗಳು, ವ್ಯಕ್ತಿ ಸ್ವಾತಂತ್ರ್ಯ .. ಹೊಂದಾಣಿಕೆ ಕೊರತೆ .. ದೈಹಿಕ ಅತೃಪ್ತಿ .. ಪ್ರೀತಿಯ ಕೊರತೆ .. ಹೀಗೆ ಮುಂತಾದ ಕಾರಣಗಳಿಂದ ಹಲವರು ಮದುವೆಯ ನಂತರ ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಿದ್ದಾರೆ. ವೈವಾಹಿಕ ಸಂಬಂಧದಲ್ಲಿ ಸಿಗದಿದ್ದನ್ನು ಹೊರಗಡೆ ಹುಡುಕುವ ಮನೋಭಾವ ಬೆಳೆಸಿಕೊಳ್ಳುತ್ತಾರೆ. ವರ್ಷಾನುವರ್ಷದ ಸಂಬಂಧಕ್ಕೆ ಎಳ್ಳು ನೀರು ಬಿಡುತ್ತಾರೆ.
ಈ ಪೈಕಿ ಒಬ್ಬರಾಗಿರುವ ಆಕಾಂಕ್ಷಾ ಚಮೋಲಾ ಈಗ ಮತ್ತೊಂದು ಬಾಂಬ್ ಎಸೆದಿದ್ದು, ಗಂಡನಿಂದ ದೂರವಾದ ನಂತರ ನನಗೆ ಈಗ ಸೆ*ಕ್ಸ್‌ನಲ್ಲಿ ಯಾವ ಆಸಕ್ತಿಯೂ ಇಲ್ಲ ಎಂದು ರಿಯಾಲಿಟಿ ಶೋದಲ್ಲಿ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ಹತ್ತು ವರ್ಷದ ದಾಂಪತ್ಯ ಅಂತ್ಯ
ಹೌದು, ಹಿಂದಿಯಲ್ಲಿ ರಿಯಾಲಿಟಿ ಶೋ ಒಂದು ಪ್ರಸಾರವಾಗುತ್ತಿದೆ. ಅದರ ಹೆಸರು ''ಲಾಕಪ್ 2''. ರಿತೇಶ್ ದೇಶಮುಖ್ ಮತ್ತು ಫರ್ಹಾ ಖಾನ್ ಈ ಕಾರ್ಯಕ್ರಮದ ಸಾರಥ್ಯ ವಹಿಸಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಆಕಾಂಕ್ಷಾ ಚಮೋಲಾ ಭಾಗವಹಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಕೆಲ ದಿನಗಳ ಹಿಂದೆ ತಮ್ಮ ಗಂಡ ಗೌರವ್ ಖನ್ನಾ ಅವರಿಂದ ದೂರವಾಗುತ್ತಿರುವ ವಿಚಾರವನ್ನು ಆಕಾಂಕ್ಷಾ ಹೇಳಿದ್ದರು. ಹತ್ತು ವರ್ಷದ ದಾಂಪತ್ಯ ಜೀವನ ಅಂತ್ಯವಾಗಿದೆ ಎಂದು ಘಂಟಾಘೋಷವಾಗಿ ಹೇಳಿದ್ದರು.

ಮಗು ಕಾರಣಕ್ಕೆ ಡಿವೋರ್ಸ್
ಇಷ್ಟೇ ಅಲ್ಲ ಮುಂದುವರೆದು ತಮ್ಮ ವಿಚ್ಚೇದನಕ್ಕೆ ಮಗು ವಿಚಾರವೇ ಕಾರಣ ಎಂದು ಹೇಳದ್ದ ಆಕಾಂಕ್ಷಾ, ಮಕ್ಕಳನ್ನು ಹೊಂದುವ ವಿಷಯದಲ್ಲಿ ಇಬ್ಬರ ನಡುವೆ ಇದ್ದ ಭಿನ್ನಾಭಿಪ್ರಾಯವೇ ನಮ್ಮ ಡಿವೋರ್ಸ್‌ಗೆ ಕಾರಣ ಎಂದು ಸ್ಪಷ್ಟಪಡಿಸಿದ್ದರು.
ನನಗೆ ಮೊದಲಿಂದಲೂ ತಾಯಿಯಾಗುವ ಹಂಬಲ ಇರಲಿಲ್ಲ, ಈಗಲೂ ಇಲ್ಲ ಎಂದು ಹೇಳಿರುವ ಆಕಾಂಕ್ಷಾ ಕಾಲ ಕ್ರಮೇಣ ಮಗು ಬೇಕೆಂಬ ಹಂಬಲ ನನ್ನಲ್ಲಿ ಬರಬಹುದು ಎಂದು ನಾನು ಅಂದುಕೊಂಡಿದ್ದೆ, ಆದರೆ ಅದಾಗಲೇ ಇಲ್ಲ ಎಂದು ಬಿಕ್ಕಿದ್ದರು.
ಇದಾದ ನಂತರ ಇದೇ ''ಲಾಕಪ್'' ರಿಯಾಲಿಟಿ ಶೋನಲ್ಲಿ ಮತ್ತೊಂದು ಬಾಂಬ್ ಎಸೆದಿದ್ದ ಆಕಾಂಕ್ಷಾ, ನಾನು ಗೌರವ್ ಖನ್ನಾ ಜೊತೆ ಮದುವೆಯಾಗುವ ಮೊದಲು ಬೈಸೆಕ್ಷುವಲ್ ಆಗಿದ್ದೆ. ಕೆಲವು ಹುಡುಗಿಯರ ಜೊತೆ ನನಗೆ ಸಂಬಂಧವಿತ್ತು ಎಂದು ಹೇಳಿರುವ ಆಕಾಂಕ್ಷಾ, ಆದರೆ ದೈಹಿಕ ಸಂಪರ್ಕ ಹೊಂದಿರಲಿಲ್ಲ ಎಂದು ಹೇಳಿದ್ದಾರೆ. ಕೇವಲ ಸಂಬಂಧದಲ್ಲಿದ್ದೆ ಎಂದಿದ್ದರು. ಹೆಣ್ಣಾಗಿ ನಾನು ಹೆಣ್ಣಿನತ್ತ ಆಕರ್ಷಿತಳಾಗುತ್ತೇನೆ ಎಂದೆಲ್ಲ ಹೇಳಿ ಬಿಕ್ಕಿದ್ದರು.
ಇಂಥಾ ಆಕಾಂಕ್ಷಾ ಇದೀಗ ಮತ್ತೊಮ್ಮೆ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹೆಣ್ಣಿರಲಿ ಗಂಡಿರಲಿ ನನಗೆ ಈಗ ಯಾರಲ್ಲಿಯೂ ಆಸಕ್ತಿ ಇಲ್ಲ ಎಂದಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ದೇಶವ್ಯಾಪಿ ಚರ್ಚೆಗೀಡಾಗಿದ್ದಾರೆ.

ನನಗೆ ಈಗ ಯಾರ ಮೇಲೂ ಆಸಕ್ತಿ ಇಲ್ಲ ಎಂದ ಚೆಲುವೆ
ಈ ಕುರಿತು ಕಾರ್ಯಕ್ರಮದ ಸಹ ಸ್ಫರ್ಧಿ ವರುಣ್ ಜೊತೆ ಮಾತನಾಡಿರುವ ಆಕಾಂಕ್ಷಾ ಚಮೋಲಾ ಮತ್ತೊಂದು ಮದುವೆಯಾಗುವ ಯಾವ ಆಸೆಯೂ ನನಗೆ ಇಲ್ಲ ಎಂದಿದ್ದಾರೆ. ನನಗೆ ಈಗ ಮದುವೆ ಅಂದರೆ ಭಯ ಆಗುತ್ತಿದೆ ಎಂದಿದ್ದಾರೆ.
ಇದೇ ಸಮಯದಲ್ಲಿ ಲೈಂ*ಗಿಕ ಆಸಕ್ತಿಯ ಕುರಿತು ವರುಣ್ ಪ್ರಶ್ನೆ ಕೇಳಿದ್ದು, ಆಗ ಲೈಂಗಿಕ ಆಸಕ್ತಿ ಅನ್ನೋದು ಬದುಕಿನ ಬೇರೆ ಬೇರೆ ಹಂತಗಳಲ್ಲಿ ಬದಲಾಗುತ್ತಾ ಹೋಗಬಹುದು. ಸದ್ಯ ನಾನು ಡಿವೋರ್ಸ್ ಪ್ರಕ್ರಿಯೆಯಲ್ಲಿದ್ದೇನೆ. ನನಗೆ ಈಗ ಯಾರೊಂದಿಗೂ ದೈಹಿಕ ಸಂಬಂಧ ಹೊಂದುವ ಇಷ್ಟ ಇಲ್ಲ ಎಂದು ಹೇಳಿದ್ದಾರೆ.
ಗಂಡಿರಲಿ.. ಹೆಣ್ಣಿರಲಿ.. ಯಾರ ಜೊತೆಯೂ ಸೆ*ಕ್ಸ್ ಮಾಡುವುದು ಬೇಡ ಎಂಬ ಭಾವನೆ ನನ್ನಲ್ಲಿ ಆಳವಾಗಿ ಬೇರೂರಿದೆ ಎಂದು ಹೇಳಿರುವ ಆಕಾಂಕ್ಷಾ ಚಮೋಲಾ, ಪ್ರೀತಿ ಮತ್ತು ದೈಹಿಕ ಸಂಬಂಧದ ಕುರಿತು ನನಗೆ ಇದ್ದ ನಂಬಿಕೆಯೇ ಬುಡಮೇಲಾಗಿದೆ ಎಂದಿದ್ದಾರೆ. ಮದುವೆಯ ವ್ಯವಸ್ಥೆ ಮೇಲೆ ನನಗೆ ನಂಬಿಕೆ ಹೋಗಿದೆ, ಇನ್ನೆಂದು ನಾನು ಮದುವೆಯಾಗಲಾರೆ ಎಂದು ಬಿಕ್ಕಿದ್ದಾರೆ. ಸದ್ಯ ಆಕಾಂಕ್ಷಾ ಚಮೋಲಾ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪರ ವಿರೋಧದ ಚರ್ಚೆಗೆ ಕಾರಣವಾಗಿದೆ.


Click it and Unblock the Notifications