ಕಿರುತೆರೆಯ ಶಾರುಖ್ ಖಾನ್ ಸಂಸಾರದಲ್ಲಿ ಬಿರುಗಾಳಿ ; ಮುರಿದು ಬಿತ್ತು ಬಿಗ್ ಬಾಸ್‌ ವಿನ್ನರ್‌ನ 10 ವರ್ಷದ ದಾಂಪತ್ಯ

ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವೈಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾನೇ ಸಂತೋಷಮಯವಾಗಿರುತ್ತೆ.

ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ.ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ.

akanksha-chamola-drops-bombshell-separation-news-from-gaurav-khanna-on-lock-upp-2

ಒಂದೆರಡಲ್ಲ ಹಲವಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿ ಕೂಡಿ ಬಾಳಿದರೂ ಕೂಡ ಆ ನಂತರ ಏಕಾಏಕಿ ಡಿವೋರ್ಸ್ ಘೋಷಿಸುತ್ತಾರೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಉದಾಹರಣೆಗೆ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ.

ಹೌದು, ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ. ಹಿಂದಿ ಕಿರುತೆರೆಯ ಸ್ಟಾರ್ ಜೋಡಿ. 2006ರಲ್ಲಿ ''ಬಾಬಿ'' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಗೌರವ್ ಖನ್ನಾ ''ಮೇರಿ ಡೋಲಿ ತೇರೆ ಅಂಗನಾ'' ಮೂಲಕ ಮನೆ ಮಾತಾದರು. 2001ರಲ್ಲಿ ಪ್ರಸಾರವಾದ ''ಅನುಪಮಾ'' ಧಾರಾವಾಹಿ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದರು.

''ಸಿಐಡಿ''.. ''ಪ್ರೇಮ್ ಯಾ ಪಹೇಲಿ-ಚಂದ್ರಕಾಂತ''.. ''ಯೇ ಪ್ಯಾರ್ ನಾ ಹೋಗಾ ಕಮ್''.. ''ತೇರೆ ಬಿನ್''.. ''ಲವ್‌ ನೇ ಮಿಲಾ ದಿ ಜೋಡಿ''.. ಹೀಗೆ ಹಲವು ಧಾರಾವಾಹಿ ಮೂಲಕ ಖ್ಯಾತಿಯ ಶಿಖರಕ್ಕೇರಿದ ಗೌರವ್ ಖನ್ನಾ ''ಸೆಲೆಬ್ರೆಟಿ ಮಾಸ್ಟರ್ ಶೆಫ್‌''ನ ವಿನ್ನರ್ ಕೂಡ ಹೌದು. ಕಳೆದ ಬಾರಿಯ ''ಬಿಗ್ ಬಾಸ್‌'' 19ರ ವಿಜೇತ ಕೂಡ ಹೌದು.

ಇನ್ನು ಆಕಾಂಕ್ಷಾ ಚಮೋಲಾ ಕೂಡ ನಟಿಯಾಗಿ ಹೆಸರು ಮಾಡಿದವರು. ''ಸ್ವರ್ಗಿಣಿ-ಜೋಡೇ ರಿಶ್ತೋ ಕಾ ಸುರ್''.. ''ಭಾಗ್ಯ ಲಕ್ಷ್ಮೀ''.. ''ಕೈಸೇ ಮುಝೇ ತುಮ್ ಮಿಲ್ ಗಯೇ''.. ಇವರು ಅಭಿನಯಿಸಿರುವ ಪ್ರಖ್ಯಾತ ಸೀರಿಯಲ್‌ಗಳು.

akanksha-chamola-drops-bombshell-separation-news-from-gaurav-khanna-on-lock-upp-2

ಹೀಗೆ ಧಾರಾವಾಹಿ ಲೋಕದಲ್ಲಿ ಹೆಸರು ಮಾಡಿದ್ದ ಗೌರವ್ ಖನ್ನಾ ಮತ್ತು ಆಕಾಂಕ್ಷಾ 2015ರಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದರು. ಅದಾಗಲೇ 15 ಧಾರಾವಾಹಿಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದ ಗೌರವ್ ಖನ್ನಾ ತಾವೊಬ್ಬ ಅವಕಾಶಕ್ಕಾಗಿ ಸೈಕಲ್ ಹೊಡೆಯುತ್ತಿರುವ ಕಲಾವಿದ ಎಂದು ಆಕಾಂಕ್ಷಾ ಅವರನ್ನು ಪರಿಚಯ ಮಾಡಿಕೊಂಡಿದ್ದರು.

ಗೌರವ್ ಹಿನ್ನೆಲೆ ಗೊತ್ತಿರದ, ಆಗಷ್ಟೇ ಅವಕಾಶವನ್ನು ಹುಡುಕಿಕೊಂಡು ಆಡಿಷನ್‌ಗಳನ್ನು ನೀಡುತ್ತಿದ್ದ ಆಕಾಂಕ್ಷಾ, ಗೌರವ್ ಮಾತುಗಳನ್ನು ನಿಜಾ ಎಂದುಕೊಂಡಿದ್ದರು. ಆಡಿಷನ್‌ನಲ್ಲಿ ಹೇಗೆ ಅಭಿನಯಿಸಬೇಕೆಂದು ಪಾಠ ಮಾಡಿದ್ದರು. ಆ ನಂತರ ಸತ್ಯ ಗೊತ್ತಾಗಿ ಭಾರೀ ಮುಜುಗರಕ್ಕೀಡಾಗಿದ್ದರು.

ಆ ನಂತರ ಇಬ್ಬರ ಸ್ನೇಹ ಪ್ರೀತಿಯ ಸ್ವರೂಪ ಪಡೆಯಿತು. ಒಂದು ವರ್ಷ ಜೊತೆಯಲ್ಲಿ ಓಡಾಡಿದ ಇಬ್ಬರು ನವೆಂಬರ್ 24-2016ರಂದು ಕಾನ್ಪುರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಕಳೆದ 9-10 ವರ್ಷ ಖುಷಿ ಖುಷಿಯಾಗಿ ಕಾಲವನ್ನು ಕಳೆದರು. ಆದರೆ ಈಗ ಇವರ ನಡುವೆ ಇದ್ದ ಪ್ರೀತಿ ಕಮರಿ ಹೋಗಿದೆ. ಖುದ್ದು ಆಕಾಂಕ್ಷಾ ಈ ವಿಚಾರವನ್ನು ಹೇಳಿದ್ದಾರೆ. ಅದು ರಿಯಾಲಿಟಿ ಶೋ ವೇದಿಕೆಯಲ್ಲಿ ಅನ್ನೋದು ದುರಂತ.

ಹೌದು, ಎಲ್ಲರಿಗೆ ಗೊತ್ತಿರುವಂತೆ ತಾರೆಯರ ವೈಯಕ್ತಿಕ ಬದುಕು ಮೊದಲಿಂದ ಮನರಂಜನೆಯ ಸರಕು. ಕಿರುತೆರೆಯಲ್ಲಿ ಪ್ರಸಾರವಾಗುವ ಬಹುತೇಕ ರಿಯಾಲಿಟಿಗೆ ಶೋಗಳಿಗೆ ಇದೇ ಬಂಡವಾಳ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ''ಲಾಕ್‌ಅಪ್‌'' ಎಂಬ ಕಾರ್ಯಕ್ರಮದ ಎರಡನೇ ಸೀಸನ್ ಶುರುವಾಗಿದೆ.

ಇದೇ ಕಾರ್ಯಕ್ರಮದಲ್ಲಿ ಆಕಾಂಕ್ಷಾ ಸ್ಫರ್ಧಿಯಾಗಿ ಭಾಗವಹಿಸಿದ್ದು, ಎಲ್ಲರೆದುರು ತಮ್ಮ ದಾಂಪತ್ಯ ಮುರಿದು ಬಿದ್ದು ಒಂದು ವರ್ಷವಾಗಿದೆ ಎಂದಿದ್ದಾರೆ. ಒಂದು ವರ್ಷದಿಂದ ಅವನ್ಯಾರೋ ನಾನ್ಯಾರೋ ಎಂಬಂತೆ ಬೇರೆ ಬೇರೆ ವಾಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಸದ್ಯ ಈ ಸುದ್ದಿ ಇವರಿಬ್ಬರ ಅಭಿಮಾನಿಗಳಿಗೆ ಬರಸಿಡಿಲಿನಂತೆ ಬಡಿದಿದೆ. ಯಾಕೆಂದರೆ ಹಲವರ ನೆಚ್ಚಿನ ಜೋಡಿ ಇದು. ಕನಸು ಮನಸಿನಲ್ಲಿಯೂ ಇವರು ದೂರ ಆಗ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿರಲಿಲ್ಲ. ಹೀಗಾಗಿಯೇ ತಮ್ಮ ಬೇಸರ, ಅಸಮಾಧಾನವನ್ನು ಸದ್ಯ ಹಲವರು ಸೋ‍ಶಿಯಲ್ ಮೀಡಿಯಾದಲ್ಲಿ ಹೊರ ಹಾಕುತ್ತಿದ್ದಾರೆ.

ಸಂಸಾರಕ್ಕೆ ಮುಳ್ಳಾಯ್ತಾ ಮಗು ವಿಚಾರ?

ಹೆಚ್ಚೇನು ಇಲ್ಲ. ಈ ವರ್ಷದ ಆರಂಭದಲ್ಲಿ ಆಕಾಂಕ್ಷಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾದ ಬರಹ ಹಂಚಿಕೊಂಡಿದ್ದರು. ಕೇವಲ ಅಗತ್ಯತೆಯ ಮೇಲೆ ಮಾತ್ರ ನಿಂತ ಸಂಬಂಧದಲ್ಲಿ ಹೃದಯ ಯಾವಾಗಲೂ ತ್ಯಾಗ ಮಾಡಬೇಕಾಗುತ್ತೆ ಎಂದು ಬರೆದುಕೊಂಡಿದ್ದ ಆಕಾಂಕ್ಷಾ ನಾನು ಸಿದ್ದಳಾಗಿದ್ದೇನೆ ಎಂದುಕೊಂಡಿದ್ದೆ, ಆದರೆ ವಾಸ್ತವದಲ್ಲಿ ನಾನು ಸಿದ್ಧವಾಗಿರಲಿಲ್ಲ ಎಂದು ಹೇಳಿದ್ದರು.

ಆಕಾಂಕ್ಷಾ ಬರೆದುಕೊಂಡ ಈ ಸಾಲುಗಳು ವಿಚ್ಛೇದನದ ವದಂತಿಯ ಕಿಡಿಯನ್ನೂ ಹಚ್ಚಿಸಿದ್ದವು. ಮಗು ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರಲು ಶುರುವಾದವು.

ಯಾಕೆಂದರೆ ಗೌರವ್ ಖನ್ನಾಗೆ ತಂದೆಯಾಗುವ ಆಸೆ ಇತ್ತು. ಹಲವು ಬಾರಿ ಖುದ್ದು ಗೌರವ್ ಖನ್ನಾ ಈ ಮಾತನ್ನು ಹೇಳಿದ್ದರು ಕೂಡ. ಆದರೆ.. ಆಕಾಂಕ್ಷಾಗೆ ಮಗು ಬೇಡವಾಗಿತ್ತು. ''ಬಿಗ್ ಬಾಸ್‌'' ಮನೆಗೆ ಆಕಾಂಕ್ಷಾ ಬಂದ ಸಮಯದಲ್ಲಿ ಈ ಪ್ರಶ್ನೆಯನ್ನು ಕೂಡ ಅವರಿಗೆ ಕೇಳಲಾಗಿತ್ತು.

ಆಗ ಮಗುಗೆ ಜನ್ಮ ನೀಡುವುದು ಅಂದರೆ ಹಲ್ವಾ ಮಾಡಿದಂತೆ ಅಲ್ಲ ಎಂದು ಆಕಾಂಕ್ಷಾ ಹೇಳಿದ್ದರು. ಅದೊಂದು ದೊಡ್ಡ ಜವಾಬ್ದಾರಿ ಎಂದು ಹೇಳಿದ್ದ ಆಕಾಂಕ್ಷಾ ಈಗ ಮಾತ್ರ ಅಲ್ಲ ಮುಂದೆಯೂ ಕೂಡ ಆ ಜವಾಬ್ದಾರಿಯನ್ನು ನಾನು ಸಮರ್ಥವಾಗಿ ನಿರ್ವಹಿಸಲಾರೆ ಎಂದು ಹೇಳಿದ್ದರು.

ವಯಸ್ಸಿನ ಅಂತರ ಕಾರಣವಾಯ್ತಾ ?

ಇನ್ನೂ ಗೌರವ್ ಖನ್ನಾಗೆ ಈಗ 44ರ ಹರೆಯ. ಮತ್ತೊಂದು ಕಡೆ ಆಕಾಂಕ್ಷಾಗೆ 35 ವರ್ಷ. ಇಬ್ಬರ ನಡುವೆ 09 ವರ್ಷಗಳ ಅಂತರ ಇದೆ. ಅಂತರದಿಂದ ಭಿನ್ನಾಬಿಪ್ರಾಯ ಹೆಚ್ಚಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮಗು ವಿಚಾರದಲ್ಲಿ ಇಬ್ಬರ ತದ್ವಿರುದ್ದ ನಿಲುವು ಸಾಂಸಾರಿಕ ನೆಮ್ಮದಿಗೆ ಕೊಳ್ಳಿ ಇಟ್ಟಿದೆ ಎಂಬ ಮಾತು ಈ ವರ್ಷದ ಆರಂಭದಲ್ಲಿ ಕೇಳಿ ಬಂದಿತ್ತು.

ಹಾಗೇನು ಇಲ್ವಲ್ಲಾ ಎಂದಿದ್ದ ಆಕಾಂಕ್ಷಾ

ವರ್ಷದ ಆರಂಭದಲ್ಲಿ ಹಬ್ಬಿದ್ದ ಈ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡಿದ್ದ ಆಕಾಂಕ್ಷಾ, ನಮ್ಮ ಸಂಸಾರ ಆನಂದ ಸಾಗರ ಎಂದು ಸುಳ್ಳು ಹೇಳಿದ್ದರು. ''ಟೈಮ್ಸ್‌ ಆಫ್ ಇಂಡಿಯಾ'' ಮತ್ತು ''ಬಾಂಬೆ ಟೈಮ್ಸ್‌''ಗೆ ತಮ್ಮ ವಿಚ್ಚೇದನದ ವದಂತಿಯ ಕುರಿತು ಪ್ರತಿಕ್ರಿಯೆ ನೀಡಿದ್ದ ಆಕಾಂಕ್ಷಾ, ನಾನು ಹೇಳಿದ್ದು ಮುಂಬರುವ ನನ್ನ ಸೀರಿಸ್ ಬಗ್ಗೆ ಎಂದಿದ್ದರು. ನಮ್ಮ ದಾಂಪತ್ಯ ಸುಖಕರವಾಗಿದೆ, ನಿಮ್ಮ ಇಷ್ಟಾನುಸಾರ ಕಲ್ಪನೆಗಳನ್ನು ಮಾಡಿಕೊಳ್ಳಬೇಡಿ ಎಂದು ಕೆಂಡ ಕೂಡ ಕಾರಿದ್ದರು. ಆದರೆ ಇವರಿಬ್ಬರ ಅಭಿಮಾನಿಗಳ ದೌರ್ಭಾಗ್ಯ. ಈಗ ಆ ಅಂತೆ ಕಂತೆಗಳ ಮಾತೇ ನಿಜವಾಗಿವೆ. ಇಬ್ಬರ ಹತ್ತು ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ. ಡಿವೋರ್ಸ್ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

English summary
End of an era. Akanksha Chamola opens up about her upcoming divorce from Gaurav Khanna after nearly a decade together. Here is what went wrong.
Read more about: biggboss ಟಿವಿ divorce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X