ಅವನಿಗೆ ಮಗು ಬೇಕಿತ್ತು, ನನ್ನಲ್ಲಿ ಆ ಭಾವನೆಯೇ ಇರಲಿಲ್ಲ ; ಕೊನೆಗೂ ಡಿವೋರ್ಸ್‌ ಹಿಂದಿನ ಸತ್ಯ ಒಪ್ಕೊಂಡ ಖ್ಯಾತ ನಟಿ

ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ.

ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು..ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ.. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಉದಾಹರಣೆಗೆ ಆಕಾಂಕ್ಷಾ ಚಮೋಲಾ.

He Wants Kids I Don t Akanksha Chamola s Explosive Lock Upp 2 Revelation On Gaurav Khanna
ಮುಖ್ಯಾಂಶಗಳು
ನನಗೆ ಯಾವತ್ತೂ ಮಗು ಹೆರುವ ಆಸೆ ಇರಲಿಲ್ಲ
ಅವನಿಗೆ ತಂದೆಯಾಗಬೇಕೆಂಬ ಬಯಕೆ ಇತ್ತು
ಅವರವರ ಬದುಕು ಅವರವರ ದೃಷ್ಟಿಕೋನ

ಯಾರು ಈ ಆಕಾಂಕ್ಷಾ ಚಮೋಲಾ ..?

ಹೌದು, ಆಕಾಂಕ್ಷಾ ಚಮೋಲಾ.. ಹಿಂದಿ ಕಿರುತೆರೆಯ ಖ್ಯಾತ ಚೆಲುವೆ. ''ಸ್ವರಾಗಿಣಿ-ಜೋಡೇ ರಿಶ್ತೋ ಕಾ ಸುರ್''.. ''ಭಾಗ್ಯ ಲಕ್ಷ್ಮೀ''.. ''ಕೈಸೇ ಮುಝೇ ತುಮ್ ಮಿಲ್ ಗಯೇ''.. ಇವರು ಅಭಿನಯಿಸಿರುವ ಪ್ರಖ್ಯಾತ ಸೀರಿಯಲ್‌ಗಳು.

ಸರಿಯಾಗಿ ಹತ್ತು ಹನ್ನೊಂದು ವರ್ಷದ ಹಿಂದೆ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಂದಿದ್ದ ಆಕಾಂಕ್ಷಾ, 2015ರಲ್ಲಿ ಗೌರವ್ ಖನ್ನಾ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರು. ಈ ಗೌರವ್ ಖನ್ನಾ ಬೇರೆ ಯಾರು ಅಲ್ಲ. ಬದಲಿಗೆ ಹಿಂದಿ ಕಿರುತೆರೆಯ ಶಾರುಖ್ ಖಾನ್.

ಗೌರವ್ ಖನ್ನಾ ವೃತ್ತಿ ಬದುಕು

2006ರಲ್ಲಿ ''ಬಾಬಿ'' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಗೌರವ್ ಖನ್ನಾ ''ಮೇರಿ ಡೋಲಿ ತೇರೆ ಅಂಗನಾ'' ಮೂಲಕ ಮನೆ ಮಾತಾದರು. 2001ರಲ್ಲಿ ಪ್ರಸಾರವಾದ ''ಅನುಪಮಾ'' ಧಾರಾವಾಹಿ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದರು.

''ಸಿಐಡಿ''.. ''ಪ್ರೇಮ್ ಯಾ ಪಹೇಲಿ-ಚಂದ್ರಕಾಂತ''.. ''ಯೇ ಪ್ಯಾರ್ ನಾ ಹೋಗಾ ಕಮ್''.. ''ತೇರೆ ಬಿನ್''.. ''ಲವ್‌ ನೇ ಮಿಲಾ ದಿ ಜೋಡಿ''.. ಹೀಗೆ ಹಲವು ಧಾರಾವಾಹಿ ಮೂಲಕ ಖ್ಯಾತಿಯ ಶಿಖರಕ್ಕೇರಿದ ಗೌರವ್ ಖನ್ನಾ ''ಸೆಲೆಬ್ರೆಟಿ ಮಾಸ್ಟರ್ ಶೆಫ್‌''ನ ವಿನ್ನರ್ ಕೂಡ ಹೌದು. ಕಳೆದ ಬಾರಿಯ ''ಬಿಗ್ ಬಾಸ್‌'' 19ರ ವಿಜೇತ ಕೂಡ ಹೌದು.

He Wants Kids I Don t Akanksha Chamola s Explosive Lock Upp 2 Revelation On Gaurav Khanna

ಆಕಾಂಕ್ಷಾ ಎದುರು ನಾಟಕವಾಡಿದ್ದ ಗೌರವ್

ಆಕಾಂಕ್ಷಾ ಅವರನ್ನು ಭೇಟಿಯಾಗುವ ಮುನ್ನ ಅದಾಗಲೇ 15 ಧಾರಾವಾಹಿಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದ ಗೌರವ್ ಖನ್ನಾ ತಾವೊಬ್ಬ ಅವಕಾಶಕ್ಕಾಗಿ ಸೈಕಲ್ ಹೊಡೆಯುತ್ತಿರುವ ಕಲಾವಿದ ಎಂದು ಆಕಾಂಕ್ಷಾ ಅವರನ್ನು ಪರಿಚಯ ಮಾಡಿಕೊಂಡಿದ್ದರು. ಗೌರವ್ ಹಿನ್ನೆಲೆ ಗೊತ್ತಿರದ, ಆಗಷ್ಟೇ ಅವಕಾಶವನ್ನು ಹುಡುಕಿಕೊಂಡು ಆಡಿಷನ್‌ಗಳನ್ನು ನೀಡುತ್ತಿದ್ದ ಆಕಾಂಕ್ಷಾ, ಗೌರವ್ ಮಾತುಗಳನ್ನು ನಿಜಾ ಎಂದುಕೊಂಡಿದ್ದರು. ಆಡಿಷನ್‌ನಲ್ಲಿ ಹೇಗೆ ಅಭಿನಯಿಸಬೇಕೆಂದು ಪಾಠ ಮಾಡಿದ್ದರು.

ಆ ನಂತರ ಸತ್ಯ ಗೊತ್ತಾಗಿ ಭಾರೀ ಮುಜುಗರಕ್ಕೀಡಾಗಿದ್ದರು. ಆ ನಂತರ ಇಬ್ಬರ ಸ್ನೇಹ ಪ್ರೀತಿಯ ಸ್ವರೂಪ ಪಡೆಯಿತು. ಒಂದು ವರ್ಷ ಜೊತೆಯಲ್ಲಿ ಓಡಾಡಿದ ಇಬ್ಬರು ನವೆಂಬರ್ 24-2016ರಂದು ಕಾನ್ಪುರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಕಳೆದ 9-10 ವರ್ಷ ಖುಷಿ ಖುಷಿಯಾಗಿ ಕಾಲವನ್ನು ಕಳೆದರು.

ಆದರೆ ಈಗ ಇವರ ನಡುವೆ ಇದ್ದ ಪ್ರೀತಿ ಕಮರಿ ಹೋಗಿದೆ. ಖುದ್ದು ಆಕಾಂಕ್ಷಾ ಈ ವಿಚಾರವನ್ನು ಮೊನ್ನೆ ಮೊನ್ನೆ ಹೊಸದಾಗಿ ಶುರುವಾಗಿರುವ ರಿಯಾಲಿಟಿ ಶೋ ''ಲಾಕಪ್ 2'' ನಲ್ಲಿ ಹೇಳಿದ್ದರು. ಎಲ್ಲರೆದುರು ತಮ್ಮ ದಾಂಪತ್ಯ ಮುರಿದು ಬಿದ್ದು ಒಂದು ವರ್ಷವಾಗಿದೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದರು.

ಯಾಕೆಂದರೆ ಹಿಂದಿ ಕಿರುತೆರೆಯಲ್ಲಿ ಹಲವರ ನೆಚ್ಚಿನ ಜೋಡಿ ಇದು. ಕನಸು ಮನಸಿನಲ್ಲಿಯೂ ಇವರು ದೂರ ಆಗ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿರಲಿಲ್ಲ. ಹೀಗಾಗಿಯೇ ತಮ್ಮ ಬೇಸರ, ಅಸಮಾಧಾನವನ್ನು ಸದ್ಯ ಹಲವರು ಸೋ‍ಶಿಯಲ್ ಮೀಡಿಯಾದಲ್ಲಿ ಹೊರ ಹಾಕಲು ಶುರು ಮಾಡಿದ್ದರು. ದಾಂಪತ್ಯ ಜೀವನ ಮುರಿದು ಬೀಳಲು ಮಗು ವಿಚಾರವೇ ಕಾರಣ ಇರಬಹುದು ಎಂದುಕೊಂಡಿದ್ದರು. ಸದ್ಯ ಎಲ್ಲರು ಅಂದುಕೊಂಡಂತೆ ದಾಂಪತ್ಯ ಜೀವನ ಮಗು ವಿಚಾರಕ್ಕೆ ಕೊನೆಯಾಗಿದ್ದು ಆಕಾಂಕ್ಷಾ ಈ ಕುರಿತು ಈಗ ಮಾತನಾಡಿದ್ಧಾರೆ.

ಮಗು ವಿಚಾರಕ್ಕೆ ಮುರಿದು ಬಿತ್ತು ದಾಂಪತ್ಯ

''ಲಾಕಪ್‌'' ಸೀಸನ್‌ನ ಮೂರನೇ ದಿನ ಸಹ ಸ್ಫರ್ಧಿಗಳಾದ ಯೂಟ್ಯೂಬರ್ ಶ್ರೇಯಾ ಕಲ್ರಾ ಮತ್ತು ಸೂಫಿ ಮೋತಿವಾಲಾ ಜೊತೆ ತಮ್ಮ ವೈಯಕ್ತಿಕ ಬದುಕಿನ ಕುರಿತು ಮನದ ಮಾತು ಹಂಚಿಕೊಂಡಿರುವ ಆಕಾಂಕ್ಷಾ,
ಮಕ್ಕಳನ್ನು ಹೊಂದುವ ವಿಷಯದಲ್ಲಿ ಇಬ್ಬರ ನಡುವೆ ಇದ್ದ ಭಿನ್ನಾಭಿಪ್ರಾಯವೇ ನಮ್ಮ ಡಿವೋರ್ಸ್‌ಗೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ನನಗೆ ಮೊದಲಿಂದಲೂ ತಾಯಿಯಾಗುವ ಹಂಬಲ ಇರಲಿಲ್ಲ, ಈಗಲೂ ಇಲ್ಲ ಎಂದು ಹೇಳಿರುವ ಆಕಾಂಕ್ಷಾ ಕಾಲ ಕ್ರಮೇಣ ಮಗು ಬೇಕೆಂಬ ಹಂಬಲ ನನ್ನಲ್ಲಿ ಬರಬಹುದು ಎಂದು ನಾನು ಅಂದುಕೊಂಡಿದ್ದೆ, ಆದರೆ ಅದಾಗಲೇ ಇಲ್ಲ ಎಂದಿದ್ದಾರೆ.

ಆಗಲೇ ಹೇಳಿದಂತೆ ನನಗ್ಯಾವತ್ತು ಮಗು ಹೆರುವ ಆಸೆ ಇರಲೇ ಇಲ್ಲ, ನಾನು ತುಂಬಾ ಹಿಂದೆಯೇ ಈ ವಿಷಯವನ್ನು ಗೌರವ್‌ಗೆ ಸ್ಪಷ್ಟ ಪಡಿಸಿದ್ದೆ ಎಂದು ಹೇಳಿರುವ ಆಕಾಂಕ್ಷಾ, ಒಂದು ವೇಳೆ ನಿನಗೆ ನನಗಿಂತ ಮಗು ಮುಖ್ಯ ಎನಿಸಿದರೆ ನೀನು ನನ್ನ ಬಿಟ್ಟು ಹೋಗಬಹುದು ಎಂದು ಅವತ್ತೇ ನಾನು ಹೇಳಿದ್ದೆ ಎಂದಿದ್ದಾರೆ.

ಕೊನೆಗೆ ನನಗೆ ತಾಯ್ತನದ ಸುಖ ಎಂದು ನನಗೆ ಅರಿವು ಆದಾಗ, ಆ ಬಯಕೆ ನನಗೆ ಕೊನೆಗೂ ಬಾರದಿದ್ದಾಗ ನಾನು ಗೌರವ್ ಹತ್ತಿರ ಈ ಕುರಿತು ಚರ್ಚೆ ಮಾಡಿದೆ ಎಂದು ಹೇಳಿರುವ ಆಕಾಂಕ್ಷಾ, ನನ್ನ ಪ್ರಕಾರ ಮದುವೆ ಅಂದರೆ ಕೇವಲ ವಂಶ ವೃಕ್ಷ ಮುಂದುವರೆಸುವುದು ಅಲ್ಲ ಎಂದಿದ್ದಾರೆ. ಇದೇ ಸಮಯದಲ್ಲಿ ಹಲವರು ಮಕ್ಕಳು ಬೇಕೆಂದು ಮದುವೆಯಾಗುತ್ತಾರೆ ಎಂದು ಕೂಡ ಒಪ್ಪಿಕೊಂಡಿದ್ದಾರೆ. ಎಲ್ಲವೂ ಅವರ ಅವರ ನಂಬಿಕೆ ಮತ್ತು ದೃಷ್ಟಿಕೋನ ಎಂದಿದ್ದಾರೆ.

ಮುಂದುವರೆದು ಗೌರವ್‌ಗೆ ತಂದೆಯಾಗಬೇಕೆಂಬ ಆಸೆ ತೀವೃವಾಗಿತ್ತು, ಅವರ ಈ ಮನದ ಆಸೆ ಕಾಲಕ್ರಮೇಣ ಮನದಟ್ಟಾಯ್ತು ಎಂದು ಹೇಳಿರುವ ಆಕಾಂಕ್ಷಾ ಆ ನಂತರ ''ಬಿಗ್ ಬಾಸ್'' ಶುರುವಾಯ್ತು. ಅಲ್ಲಿ ಗೌರವ್‌ಗೆ
ಮಕ್ಕಳ ಮೇಲಿರುವ ಪ್ರೀತಿ ಮತ್ತು ತಂದೆಯಾಗುವ ಬಯಕೆ ನನಗೆ ಸ್ಪಷ್ಟವಾಗಿ ಅರ್ಥವಾಯಿತು ಎಂದು ಅವರು ಹೇಳಿದ್ದಾರೆ.

ನನ್ನ ಗಂಡನ ಕನಸಿಗೆ ನಾನು ಯಾವತ್ತು ಅಡಿಯಾಗಬಾರದು,ಎಲ್ಲರಿಗೆ ಅವರ ಅವರ ಬದುಕು ಇರುತ್ತೆ ಎಂದು ಹೇಳಿರುವ ಆಕಾಂಕ್ಷಾ ಅವರಿಷ್ಟದಂತೆ ಬದುಕಲು ಅವರಿಗೆ ಅವಕಾಶ ನೀಡಬೇಕೆಂಬ ಕಾರಣದಿಂದ ಕೊನೆಗೆ ದೂರ ಆಗುವ ತೀರ್ಮಾನಕ್ಕೆ ನಾವು ಬಂದೆವು ಎಂದು ಹೇಳಿದ್ಧಾರೆ.

ಇದೇ ಸಮಯದಲ್ಲಿ ಭವಿಷ್ಯದಲ್ಲಿ ಮಕ್ಕಳನ್ನು ದತ್ತು ಪಡೆಯುವ ಯೋಚನೆ ಏನಾದರು ಇದೆಯಾ ಎಂದು ಶ್ರೇಯಾ ಕೇಳಿದ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಆಕಾಂಕ್ಷಾ, ನನಗೆ ಮಗು ಯಾವತ್ತು ಬೇಡವೇ ಬೇಡ. ನಾನು ಯಾವುದೇ ಜವಾಬ್ದಾರಿ ಇಲ್ಲದೆ ಸ್ವತಂತ್ರವಾಗಿ ಇರಲು ಬಯಸುತ್ತೇನೆ. ಮಕ್ಕಳಿಲ್ಲದ ಜೀವನವೇ ನನ್ನ ಆಯ್ಕೆ ಎಂದು ಹೇಳಿದ್ದಾರೆ.

ಇಬ್ಬರ ನಡುವಿನ ವಯಸ್ಸಿನ ಅಂತರ ಎಷ್ಟು ?

ಅಂದ್ಹಾಗೇ ಗೌರವ್ ಖನ್ನಾಗೆ ಈಗ 44ರ ಹರೆಯ. ಮತ್ತೊಂದು ಕಡೆ ಆಕಾಂಕ್ಷಾ ಚಮೋಲಾಗೆ 35 ವರ್ಷ. ಇಬ್ಬರ ನಡುವೆ 09 ವರ್ಷಗಳ ಅಂತರ ಇದೆ. ಅಂತರದಿಂದ ಭಿನ್ನಾಭಿಪ್ರಾಯ ಹೆಚ್ಚಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮಗು ವಿಚಾರದಲ್ಲಿ ಇಬ್ಬರ ತದ್ವಿರುದ್ದ ನಿಲುವು ಸಾಂಸಾರಿಕ ನೆಮ್ಮದಿಗೆ ಕೊಳ್ಳಿ ಇಟ್ಟಿದೆ ಎಂಬ ಮಾತು ಈ ವರ್ಷದ ಆರಂಭದಲ್ಲಿ ಕೇಳಿ ಬಂದಿತ್ತು. ಈ ಮಾತು ಕೊನೆಗೂ ನಿಜವಾಗಿದ್ದು ದುರದೃಷ್ಟಕರ.

English summary
Akanksha Chamola drops a bombshell on Lock Upp 2, revealing her divorce from Gaurav Khanna was due to differing views on having kids. Read the full story!
Read more about: motherhood divorce ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X