ಗರ್ಭಿಣಿಯಾಗಿದ್ದಾಗ ಹೊಟ್ಟೆಗೆ ಒದ್ದಿದ್ದ ಗಂಡ.. ಮುದ್ದಾದ ಮಗುವಿಗೆ ಜನ್ಮ ನೀಡಿದ ನಟಿ ದಿವ್ಯಾ ಶ್ರೀಧರ್

ನಟಿ ದಿವ್ಯಾ ಶ್ರೀಧರ್ ಹಾಗೂ ಅರ್ನವ್ ಅಮ್ಜದ್ ವಿಚ್ಛೇದನ ಪಡೆದು ದೂರಾಗಿದ್ದು ಗೊತ್ತೇಯಿದೆ. ಕಿರುಕುಳ ನೀಡಿದ್ದ ಪತಿಯ ವಿರುದ್ದ ನಟಿ ಕಳೆದ ವರ್ಷ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಅರ್ನವ್‌ನ ಬಂಧಿಸಿದ್ದರು. ಸದ್ಯ ನಟಿ ದಿವ್ಯಾ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ಬೆಳೆದ ದಿವ್ಯಾ ಶ್ರೀಧರ್ ತಮಿಳು ಕಿರುತೆರೆಯಲ್ಲಿ ಹೆಚ್ಚು ಗುರ್ತಿಸಿಕೊಂಡಿದ್ದರು. ಕನ್ನಡ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಪ್ರೀತಿಸಿ ಮದುವೆಯಾದ ಗಂಡ ನಾನು ಗರ್ಭಿಣಿ ಆಗುತ್ತಿದ್ದಂತೆ ಮತ್ತೊಬ್ಬಳ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ. ನನಗೆ ಕಿರುಕುಳ ಕೊಡುತ್ತಿದ್ದಾನೆ ಎಂದು ಆರೋಪಿಸಿ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಕಿರುತೆರೆ ನಟನು ಆಗಿದ್ದ ಅರ್ನವ್ ಅಮ್ಜದ್‌ನ ಪೊಲೀಸರು ಬಂಧಿಸಿದ್ದರು. ಕಳೆದ ವರ್ಷ ಈ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು.

Akasha Deepa Fame Divya Shridhar Welcomes Baby Girl, She shares happy news on Instagram

ಮುದ್ದು ಮಗಳ ಕೈ ಹಿಡಿದು ಕ್ಲಿಕ್ಕಿಸಿರುವ ಫೋಟೊ ಹಾಕಿ ದಿವ್ಯಾ, "ಈ ಕಾಯುವಿಕೆ ಬಹಳ ವಿಶೇಷವಾದದ್ದು. ಈ ಹಿಂದೆ ಏನು ನಡೆದಿತ್ತು ಎನ್ನುವುದಕ್ಕಿಂತ ಇನ್ನು ಮುಂದೆ ಏನು ಆಗುತ್ತದೆ ಎನ್ನುವುದು ಮುಖ್ಯ. ನೀನು ನನಗೆ ಪ್ರೀತಿ, ಬಲ, ಬೆಂಬಲ ಎನ್ನವನ್ನು ಕೇಳುವುದಕ್ಕೂ ಮೊದ್ಲೆ ಕೊಟ್ಟಿದ್ದೀಯಾ. ನನ್ನ ಭಾಗವಾಗಿದ್ದಕ್ಕೆ ನಿನಗೆ ಕೃತಜ್ಞತೆಗಳು. ಎಂದೆಂದಿಗೂ ನಾನು ನಿನ್ನವಳೇ ಎಂದು ಮಾತು ಕೊಡುತ್ತಿದ್ದೇನೆ. ಎಂದೆಂದು ನಿನ್ನೊಟ್ಟಿಗೆ ನಾನು ಇರುತ್ತೇನೆ. ನನ್ನ ಮುದ್ದು ಕಂದ. ಲವ್ ಯು ಡಾರ್ಲಿಂಗ್. ಈ ಹಾದಿನಲ್ಲಿ ನನ್ನೊಟ್ಟಿಗೆ ನಿಂತ ಎಲ್ಲರಿಗೂ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.

'ಸೇವಂತಿ' ಎನ್ನುವ ಧಾರಾವಾಹಿ ಮೂಲಕ ತಮಿಳು ಕಿರುತೆರೆ ಪ್ರವೇಶಿಸಿದ ನಟಿ ದಿವ್ಯಾ ಶ್ರೀಧರ್ ಮನೆ ಮಾತಾಗಿದ್ದರು. ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕು ಮೊದ್ಲೆ ನಟಿಗೆ 2012ರಲ್ಲಿ ಮದುವೆಯಾಗಿ ಒಂದು ಮಗು ಕೂಡ ಇತ್ತು. ಆದರೆ ಕೆಲ ಭಿನ್ನಾಭಿಪ್ರಾಯಗಳಿಂದ ದಂಪತಿ ವಿಚ್ಛೇದನ ಪಡೆದಿದ್ದರು. ಧಾರಾವಾಹಿಗಳಲ್ಲಿ ನಟಿಸುವ ವೇಳೆ ಸಹ ನಟ ಅರ್ನವ್ ಅಮ್ಜದ್ ಜೊತೆ ದಿವ್ಯಾ ಪ್ರೀತಿಲಿ ಬಿದ್ದಿದ್ದರು. ಆತನಿಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದರು.

ದಿವ್ಯಾ- ಅರ್ನವ್ ಕಳೆದ ವರ್ಷ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ದಿವ್ಯಾ ಗರ್ಭಿಣಿ ಆಗಿದ್ದಾಗ ಆಕೆಗೆ ಈ ಹಿಂದೆ ಮದುವೆಯಾಗಿ ಮಗಳು ಇರುವುದು ಗೊತ್ತಾಗಿ ಮನೆಯಲ್ಲಿ ಗಲಾಟೆ ಶುರುವಾಗಿತ್ತು. ಮತ್ತೊಂದು ಕಡೆ ಅರ್ನವ್ ಮತ್ತೊಬ್ಬಳ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ದಿವ್ಯಾ ಆರೋಪಿಸಿದ್ದರು. ಪ್ರಿಯ ದರ್ಶಿನಿ ಎಂಬ ಮಂಗಳಮುಖಿಯೊಬ್ಬರು ಅಮ್ಜದ್ ತಮಗೆ ಮೋಸ ಮಾಡಿರುವುದಾಗಿ ಹೇಳಿರುವ ಆಡಿಯೋ ಕ್ಲಿಪ್ ವೈರಲ್ ಆಗಿತ್ತು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ದಿವ್ಯಾ ಶ್ರೀಧರ್ ಇನ್ನು 10-15 ದಿನಗಳಲ್ಲಿ ನನಗೆ ಮಗು ಹುಟ್ಟುತ್ತದೆ. ಆದರೂ ಕೂಡ ನಾನು ಧಾರಾವಾಹಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದೇನೆ. ಆರ್ಥಿಕ ಸಮಸ್ಯೆಯಿಂದ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದರು.

ಸಂದರ್ಶನದಲ್ಲಿ ದಿವ್ಯಾ, "ಇವನಿಂದ ಅನೇಕರು ಮೋಸ ಹೋಗಿದ್ದಾರೆ ಎಂದಿದ್ದರು. ನಿಮಗೆ ಈ ಮಗು ಬೇಡ, ಒಬ್ಬ ಮೋಸಗಾರನ ಮಗು ಕೂಡ ಅವನಂತೆಯೇ ಇರುತ್ತದೆ, ನಿನಗೆ ಕರಿಯರ್‌ ಬೇಕೋ ಮಗು ಬೇಕೋ ಎಂದು ಅನೇಕರು ಸಲಹೆ ನೀಡಿದ್ರು. ಆದ್ರೆ ಯಾವುದೇ ಜೀವಿಯನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ದೇವರು ಕೊಟ್ಟ ಈ ಮಗುವಿಗೆ ಜನ್ಮ ನೀಡಬೇಕೆಂದುಕೊಂಡಿದ್ದೇನೆ. ಈ ಸಮಾಜಕ್ಕೆ ಒಳ್ಳೆ ಮಗುವನ್ನು ಕೊಡುತ್ತೇನೆ" ಎಂದು ಹೇಳಿದ್ದರು.

"ನನಗೆ ಒಂದು ಗಂಡು ಮಗು ಬೇಕು. ಆ ಮಗುವನ್ನು ಸಮಾಜದಲ್ಲಿ ಒಬ್ಬ ಒಳ್ಳೆ ವ್ಯಕ್ತಿಯಾಗಿ ಬೆಳಸಬೇಕು. ಹೆಣ್ಣಿಗೆ ಗೌರವ ಕೊಡಬೇಕು. ಹೆಣ್ಣಿನ ಜೀವನದಲ್ಲಿ ಆಟ ಆಡದಂತೆ ಅವನನ್ನು ನಾನು ಬೆಳೆಸಬೇಕು" ಎಂದು ನಟಿ ದಿವ್ಯಾ ಶ್ರೀಧರ್ ಆಸೆ ವ್ಯಕ್ತಪಡಿಸಿದ್ದರು.

More from Filmibeat

English summary
Akasha Deepa Fame Divya Shridhar Welcomes Baby Girl, She shares happy news on Instagram. Last Year Divya filed a complaint against Husband Arnav accusing the actor of harassment. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X