ಅನುಪಮಾ ಗೌಡ ಹೊಸ ಸಾಹಸ.. 'ದಿ ಫಾಲೆನ್... ಆರ್ ಕನೆಕ್ಟೆಡ್' ಟ್ರೈಲರ್ ರಿಲೀಸ್

By ಪ್ರಿಯಾ ದೊರೆ

ನಟಿ, ನಿರೂಪಕಿ ಅನುಪಮಾ ಗೌಡ ಅವರು‌ ಟ್ರಾವೆಲಿಂಗ್‌ ಹಾಗೂ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇವತ್ತ ಅಲ್ಲ ನಾಳೆ ಕಿರುತೆರೆಗೆ ಮರಳುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಈಗ ಅನುಪಮಾ ಗೌಡ ಅವರು ಎಲ್ಲರಿಗೂ ಶಾಕ್‌ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಬರುವುದಿರಲಿ ಸಿನಿಮಾ ಒಂದರಲ್ಲಿ ನಟಿಸಿದ್ದು, ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟರ್‌ ನೋಡಿದ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ಅನುಪಮಾ ಅವರನ್ನು ತೆರೆಮೇಲೆ ನೋಡಲು ಕಾತುರರಾಗಿದ್ದಾರೆ. ಟ್ರೈಲರ್‌ ನೋಡಿ ಫಿದಾ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಿದ ಅನುಪಮಾ ಗೌಡ ಅವರು ನಂತರ ಕಿರುತೆರೆಯಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಬದಲಿಗೆ ಅಭಿಮಾನಿಗಳ ಜೊತೆಗೆ ಹೆಚ್ಚು ಕಾಣಿಸಿಕೊಂಡಿದ್ದರು. ಎರಡು ಬಾರಿ ಬಿಗ್ ಬಾಸ್‌ನಲ್ಲಿ ಭಾಗವಹಿಸಿದ್ದ ಅನುಪಮಾ ಅವರು ಮೊದಲ ಬಾರಿಗಿಂತಲೂ ಎರಡನೇಯ ಸಲ ಅದ್ಭುತವಾಗಿ ಆಟವಾಡಿದರು. ಈ ಮೂಲಕ ತಮ್ಮ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರು.

Akka Serial Fame Anupama Gowda Starrer The Fallen are connected Movie Trailer Released

'ಅಕ್ಕ' ಧಾರಾವಾಹಿಯ ಮೂಲಕವೇ ಕಿರುತೆರೆಯಲ್ಲಿ ಗುರುತಿಸಿಕೊಂಡ ಅನುಪಮಾ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಬಳಿಕ ಆಂಕರಿಂಗ್ ಮಾಡುತ್ತಾ ಮನೆ ಮಾತಾದರು. 'ರಾಜಾ-ರಾಣಿ' ಎಂಬ ಕಪಲ್ಸ್ ಶೋನಲ್ಲಿ ನಿರೂಪಣೆ ಪ್ರಾರಂಭಿಸಿದರು. 'ರಾಜಾ-ರಾಣಿ' ಶೋ ಬಳಿಕ 'ನಮ್ಮಮ್ಮ ಸೂಪರ್ ಸ್ಟಾರ್' ಎಂಬ ರಿಯಾಲಿಟಿ ಶೋನ ಅನುಪಮಾ ಅವರೇ ನಿರೂಪಣೆ ಮಾಡಿದರು. ಮತ್ತೆ ಅನುಪಮಾ ಅವರ ಆಂಕರಿಂಗ್‌ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅನುಪಮಾ ಅವರು ಕೂಡ ಚಾನ್ಸ್‌ಗಾಗಿ ಕಾಯುತ್ತಿದ್ದಾರೆ.

ಇತ್ತೀಚೆಗಷ್ಟೇ ವ್ಯಾಲೆನ್‌ಟೈಂನ್ಸ್‌ ಡೇಗೆ ಸ್ಟಾರ್ ಸುವರ್ಣ ವಾಹಿನಿ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದರು. 'ಸುವರ್ಣ ಪ್ರೇಮೋತ್ಸವ' ಕಾರ್ಯಕ್ರಮವನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡಿದ್ದಕ್ಕೆ ಅಭಿಮಾನಿಗಳು ಖುಷಿಪಟ್ಟಿದ್ದರು. ಇದಾದ ಬಳಿಕ ಅನುಪಮಾ ಗೌಡ ಅವರು ಟ್ರಾವೆಲ್‌ ಮಾಡುವುದರಲ್ಲಿ ಬ್ಯುಸಿಯಾಗಿ ಬಿಟ್ಟರು. ಅನುಪಮಾ ಅವರಿಗೆ ಟ್ರಾವೆಲ್‌ ಮಾಡುವುದೆಂದರೆ ಬಹಳ ಇಷ್ಟ. ಅದರಲ್ಲೂ ಸೋಲೋ ಟ್ರಿಪ್‌ ಎಂದರೆ ತುಂಬಾ ಇಷ್ಟವಂತೆ. ಇತ್ತೀಚೆಗೆ ಅನುಪಮಾ ಗೌಡ ಅವರು ಜೈಪುರಕ್ಕೆ ಹೋಗಿ ಬಂದಿದ್ದಾರೆ. ಇದರ ಫೋಟೋ ಹಾಗೂ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಇನ್ನು ಅನುಪಮಾ ಗೌಡ ಅವರು ತಮ್ಮದೇ ಯೂಟ್ಯೂಬ್‌ ಚಾನೆಲ್‌ ಅನ್ನು ಹೊಂದಿದ್ದಾರೆ. ಇದರಲ್ಲಿ ಆಗಾಗ ತಮ್ಮ ದಿನಚರಿ, ಟ್ರಾವೆಲ್‌, ಫಿಟ್ನೆಸ್‌, ಡಯಟ್‌ ಹಾಗೂ ಇತರೆ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ 'ದಿ ಫಾಲನ್‌' ಸಿನಿಮಾ ಬಗ್ಗೆ ಹಂಚಿಕೊಂಡಿದ್ದಾರೆ. "ದಿ ಫಾಲನ್ ಸಿನಿಮಾ ಸುದೀರ್ಘ ಮತ್ತು ಸುಂದರವಾದ ಪ್ರಯಾಣ. ಇದು ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರದರ್ಶಿಸಿರುವ ಅನೇಕ ಹಬ್ಬಗಳ ಒಂದು ಭಾಗವಾಗಿದೆ" ಎಂದು ಅನುಪಮಾ ಅವರು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇದರ ಟ್ರೈಲರ್‌ ರಿಲೀಸ್‌ ಆಗಿದೆ. ಅಭಿಮಾನಿಗಳು ಟ್ರೈಲರ್‌ ನೋಡಿ ಖುಷಿ ಪಟ್ಟಿದ್ದಾರೆ.

Akka Serial Fame Anupama Gowda Starrer The Fallen are connected Movie Trailer Released

'ದಿ ಫಾಲೆನ್ ಆರ್ ಕನೆಕ್ಟೆಡ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಹಿಂದಿಯಲ್ಲಿ ಮೂಡಿ ಬಂದಿರುವ ಈ ಸಿನಿಮಾ 4000 ಸಾವಿರ ವರ್ಷಗಳ ಹಳೆಯ ಕಥೆಯನ್ನು ಆಧರಿಸಿದೆ. ಪ್ರದೀಪ್ ವರ್ಮಾ ಅವರು ನಿರ್ದೇಶನ ಮಾಡಿದ್ದು, ಮನಾಲಿ, ಲೇಹ್, ಲಡಾಖ್ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಅನುಪಮಾ ಗೌಡ ಅವರ ಜೊತೆಗೆ ನಟಿ ಯಮುನಾ ಶ್ರೀನಿಧಿ ಅವರು ಕೂಡ ನಟಿಸಿದ್ದಾರೆ. ಟ್ರೈಲರ್ ನೋಡಿ ಅಭಿಮಾನಿಗಳು ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ.

More from Filmibeat

English summary
Akka Serial Fame Anupama Gowda Starrer The Fallen are connected Movie Trailer Released. BSP Varma Directed Movie Bank Bankrolled by Dhakka Productions. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X