Shravani Subramanya: ಕಡೆಗೂ ಶ್ರಾವಣಿಯ ತಾಯಿಯ ದರ್ಶನ; ಇವರೇ ನೋಡಿ ವೀರು ಪ್ರಿಯತಮೆ!

By ಎಸ್ ಸುಮಂತ್

ಜೀ ಕನ್ನಡದ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಶ್ರಾವಣಿಗೆ ತನ್ನ ತಾಯಿಯನ್ನು ನೋಡುವ ಬಯಕೆ. ಆದರೆ ತಾಯಿಯ ಬಗ್ಗೆ ಮನೆಯಲ್ಲಿ ವಿಷಯವನ್ನೇ ಎತ್ತುವಂತೆ ಇಲ್ಲ. ಯಾರಾದರೂ ಶ್ರಾವಣಿಯ ತಾಯಿಯ ಬಗ್ಗೆ ಮಾತನಾಡಿದರೆ ವೀರೂ ಕೆಂಡಾಮಂಡಲನಾಗಿ ಬಿಡುತ್ತಿದ್ದ. ಹೀಗಾಗಿ ಅದೆಷ್ಟೋ ವರ್ಷಗಳ ಕಾಲ ಶ್ರಾವಣಿಗೆ ತನ್ನ ತಾಯಿಯ ಹೆಸರು ಕೂಡ ಗೊತ್ತಿರಲಿಲ್ಲ. ಈಗ ತಾಯಿಯ ಬಗ್ಗೆ ಒಂದೊಂದೆ ವಿಚಾರಗಳು ತಿಳಿಯುತ್ತಾ ಇದಾವೆ.

ತನ್ನ ತಾಯಿ ಹಾಗೂ ವೀರೇಂದ್ರ ಅವರ ಕ್ಲೋಸ್ ಫ್ರೆಂಡ್‌ನಿಂದ ತನ್ನ ತಾಯಿಯ ಹೆಸರು ತಿಳಿದುಕೊಳ್ಳುತ್ತಾಳೆ. ನಂದಿ‌ನಿಯ ಮಗಳು ಅಂತ ಯಾರಾದರೂ ಕರೆದರೆ ಅವಳಿಗೆ ಆಗ್ತಾ ಇದ್ದಂತ ಖುಷಿಯೇ ಬೇರೆ. ಈಗ ಅಜ್ಜಿ ಊರಿಗೆ ಹೋಗಿದ್ದಾಳೆ. ಅಮ್ಮನ ಬಗ್ಗೆ ಎಲ್ಲವೂ ತಿಳಿದಿದ್ದಾಳೆ. ಅಷ್ಟೇ ಅಲ್ಲ ಅಜ್ಜಿಯ ಪ್ರೀತಿಯೂ ಸಿಕ್ಕಿದೆ. ಬಯಸುತ್ತಿದ್ದಂತ ತಂದೆಯ ಪ್ರೀತಿಯೂ ಸಿಕ್ಕಿದೆ.

Akshata joins the cast of kannada serial shravani subramanya

ಶ್ರಾವಣಿ ತಾಯಿ ದರ್ಶನ ಯಾವಾಗ?

ಇಷ್ಟು ದಿನ ವೀರೇಂದ್ರ ಇಷ್ಟಪಟ್ಟು, ಪ್ರೀತಿ ಮಾಡಿ ಮದುವೆಯಾದ ನಂದಿನಿ ಬಗ್ಗೆ ಅಷ್ಟಾಗಿ ಗೊತ್ತಿರಲಿಲ್ಲ. ಇತ್ತೀಚೆಗಷ್ಟೇ ನಂದಿನಿ ಹೇಗಿದ್ದಳು, ಗುಣ ಯಾವ ರೀತಿಯದ್ದು ಎಂಬ ವಿಚಾರಗಳು ಬೆಳಕಿಗೆ ಬಂದಿವೆ. ಆದರೆ ನಂದಿನಿ ಯಾರು ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ಯಾಕಂದ್ರೆ ಮನೆಯಲ್ಲಿ ಒಂದು ಫೊಟೋ ಕೂಡ ಇಟ್ಟಿರಲಿಲ್ಲ. ಇದೀಗ ದರ್ಶನ ಭಾಗ್ಯ ನೀಡುವ ಸಮಯ ಹತ್ತಿರ ಬಂದೇ ಬಿಟ್ಟಿದೆ.

ಶ್ರಾವಣಿಯ ಬದುಕಲ್ಲಿ ನಂದಿನಿ

ಶ್ರಾವಣಿಗೆ ತಾಯಿಯ ಪ್ರೀತಿಯನ್ನು ಚಿಕ್ಕಮ್ಮ - ಚಿಕ್ಕಪ್ಪ ನೀಡಿದ್ದಾರೆ. ಈಗ ಬೇರೆ ಸುಬ್ಬು ಮೇಲೆ ಲವ್ವಾಗಿದೆ. ಆದರೂ ತನ್ನ ತಾಯಿಯನ್ನು ನೋಡಬೇಕೆಂಬ ಆಸೆ ಅವಳಲ್ಲೂ ಇದೆ. ಒಂದೇ ಒಂದು ಫೋಟೋ ಸಿಕ್ಕಿದರೂ ಸಾಕು ಎಂಬ ಆಸೆ ಅವಳದ್ದು. ಈಗ ಶ್ರಾವಣಿಯ ಕನಸು ನನಸಾಗುವ ದಿನ ಬಂದಿದೆ. ಒಂದು ವೇಳೆ ನಂದಿನಿ ವಾಪಾಸ್ ಬಂದರೆ ವಿಜಯಾಂಬಿಕೆಗೆ ಉಳಿಗಾಲವಿಲ್ಲ.

ಸ್ವಾರ್ಥಕ್ಕಾಗಿ ತಮ್ಮನ ಜೀವನ ಬಲಿಪಡೆದ ವಿಜಯಾಂಬಿಕೆ

ನಂದಿನಿ ಮೇಲೆ ವಿಜಯಾಂಬಿಕೆ ಅಪವಾದ

ವಿಜಯಾಂಬಿಕೆ ದೊಡ್ಡ ಸ್ವಾರ್ಥಿ. ಆದರೆ ಆ ವಿಚಾರ ವೀರೇಂದ್ರನಿಗೆ ಅರ್ಥವಾಗುತ್ತಿಲ್ಲ. ಅಕ್ಕ ನನಗಾಗಿಯೇ ಬದುಕುತ್ತಿದ್ದಾಳೆ ಎಂದು ನಂಬಿ ಬಿಟ್ಟಿದ್ದಾನೆ. ಅದಕ್ಕೆ ಅಕ್ಕ ಏನೇ ಕೇಳಿದರು ಇಲ್ಲ ಎಂಬ ಮಾತೆ ಇಲ್ಲ. ಇದನ್ನೇ ಅಡ್ವಾಂಟೇಜ್ ಆಗಿ ತೆಗೆದುಕೊಂಡ ವಿಜಯಾಂಬಿಕೆ, ವೀರೂ ಸಂಸಾರವನ್ನೇ ಹಾಳು ಮಾಡಿದ್ದಾಳೆ. ನಂದಿನಿಯನ್ನ ಮನೆಯಿಂದ ದೂರ ಮಾಡಿ, ವೀರೂ ಬಳಿ ಹೊಸ ಕಥೆ ಕಟ್ಟಿದ್ದಾಳೆ. ನಂದಿನಿಯೇ ಸರಿ ಇಲ್ಲ ಎಂಬ ಕಥೆಯನ್ನ ವೀರೂ ಕೂಡ ನಂಬಿದ್ದಾನೆ. ಮಗಳು ನನ್ನವಳೇ ಅಲ್ಲ ಅಂತಾನೂ ನಂಬಿಸಿದ್ದಾಳೆ.

Akshata joins the cast of kannada serial shravani subramanya

ಈ ಅಕ್ಷತಾ ಗಣೇಶ್ ಯಾರು..?

ಇಷ್ಟು ದಿನ ನಂದಿನಿಯ ಹೆಸರು ಮಾತ್ರ ಕೇಳಿದ್ದೆವು. ಆದರೆ ನೋಡುವ ಅದೃಷ್ಟ ಇರಲಿಲ್ಲ. ಅದರಲ್ಲೂ ಶ್ರಾವಣಿಯನ್ನು ಕಂಡಾಗಲೆಲ್ಲ ನೀನು ನಿಮ್ಮ ಅಮ್ಮನ ಥರಾನೇ ಇದ್ದೀಯಾ ್ಙೋ ಮಾತುಗಳು. ಹೀಗಾಗಿ ಇನ್ಮುಂದೆ ನಂದಿನಿಯ ರೂಪ ದರ್ಶನವಾದರೂ ಶ್ರಾವಣಿಯ ಮುಖಕ್ಕೂ ಹೋಲಿಕೆಯಾಗಲೇಬೇಕು. ಧಾರಾವಾಹಿಯ ನಿರ್ದೇಶಕರು ಅಂಥವರನ್ನೇ ಹುಡುಕಿದ್ದಾರೆ. ಅವರೇ ಅಕ್ಷತಾ ಗಣೇಶ್. ಈಗಾಗಲೇ ಅಂತರಪಟ, 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಮುದ್ದಾದ ಚೆಲುವೆ ಕೂಡ. ಇನ್ಮುಂದೆ ಶ್ರಾವಣಿಯ ಅಮ್ಮನಾಗಿ ಬರಲಿದ್ದಾರೆ.

More from Filmibeat

English summary
Zee kannada serial shravani subramanya Written Update on Nandini role. Here is the details about Akshata entry as Shravani's mother;
Read more about: tv sumanth serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X