ಬ್ಯಾನ್ ಆದ 'ಗಿಣಿರಾಮ' ನಯನಾ ಬಗ್ಗೆ ಅಕ್ಷತಾ ಪಾಂಡವಪುರ ಹೇಳಿದ್ದೇನು?

By ಎಸ್ ಸುಮಂತ್

ಇತ್ತೀಚೆಗಷ್ಟೇ 2020ನೇ ಸಾಲಿನ ಅತ್ಯುತ್ತಮ ನಟಿ ಪ್ರಶಸ್ತಿಗೆ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ. 'ಪಿಂಕಿ ಎಲ್ಲಿ?' ಚಿತ್ರದ ನಟನೆಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಖುಷಿಯನ್ನು its majjakannada ಯೂಟ್ಯೂಬ್ ಚಾನೆಲ್‌ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ನಟಿ ನಯನಾ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.

ನಯನಾ ನಾಗರಾಜ್ 'ಗಿಣಿರಾಮ' ಹಾಗೂ 'ಪಾಪ ಪಾಂಡು' ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಆದರೆ ಇದ್ದಕ್ಕಿದ್ದಂತೆ ನಟನಾ ಬದುಕಿನಿಂದಾನೇ ದೂರವಾದರು. ಇತ್ತೀಚೆಗಷ್ಟೇ ನಯನಾ ಅವರೇ ಒಂದು ಇಂಟರ್‌ವ್ಯೂನಲ್ಲಿ ಹೇಳಿದ ಮೇಲೆ ಈ ಬಗ್ಗೆ ಎಲ್ಲರಿಗೂ ತಿಳಿದಂತ ಸತ್ಯವಾಗಿದೆ. ತಾನೂ ನಟಿಸುತ್ತಿದ್ದ ಧಾರಾವಾಹಿಯಲ್ಲಿ ವ್ಯಕ್ತಿಯೊಬ್ಬ ಕಿರುಕುಳದ ವಿರುದ್ಧ ಮಾತಾಡಿದ್ದಕ್ಕೆ ಧಾರಾವಾಹಿಯಿಂದ ಬ್ಯಾನ್ ಆಗಿದ್ದರಂತೆ. ಇದೀಗ ನಯನಾ ಬಗ್ಗೆ ಉತ್ತಮ ನಟಿ ಪ್ರಶಸ್ತಿ ಪಡೆದ ನಟಿ ಅಕ್ಷತಾ ಪಾಂಡವಪುರ ಮಾತನಾಡಿದ್ದಾರೆ.

Akshatha pandavapura interesting comments on Nayana nagaraj

ಬ್ಯಾನ್ ವಿಚಾರ ಗೊತ್ತಿತ್ತಾ ಸಮಿತಿಗೆ?

ಈ ವಿಚಾರಕ್ಕೆ ಏನು ಹೇಳಬೇಕು ಅನ್ನೋದೆ ಅರ್ಥವಾಗುತ್ತಿಲ್ಲ. ಇದು ನಮ್ಮ ಗಮನಕ್ಕೆ ಬಂದಿಲ್ಲ ಅನ್ಸುತ್ತೆ. ಕವಿತಾ ಲಂಕೇಶ್, ವಿಜಯಮ್ಮ ಎಲ್ಲರೂ ಸೇರಿ ಒಂದು ಸಮಿತಿ ಮಾಡಿದ್ದಾರೆ. ಇಂಡಸ್ಟ್ರಿಯಲ್ಲಿ ಹೆಣ್ಣು ಮಕ್ಕಳಿಗೆ ಈ ರೀತಿಯ ಸಮಸ್ಯೆ ಏನಾದರೂ ಆಗ್ತಾ ಇರೋದು ಗಮನಕ್ಕೆ ಬಂದರೆ ಅವರ ಪರ ಸ್ಟ್ಯಾಂಡ್ ತೆಗೆದುಕೊಳ್ಳಬೇಕು ಎಂಬ ಉದ್ದೇಶ. ಆದರೆ ಇದು ಅವರ ಗಮನಕ್ಕೆ ಬಂದಿಲ್ಲ ಅನ್ಸುತ್ತೆ. ಅದು ಕಿರುತೆರೆ ಆದರೂ ಸರಿ ಹಿರಿತೆರೆ ಆದರೂ ಸರಿ.

ನಯನಾ ಬಗ್ಗೆ ಅಕ್ಷತಾ ಏನಂದ್ರು?

ನಯನಾ ತುಂಬಾ ಸುಂದರವಾದ ಹುಡುಗಿ. ನಂಗೆ ತುಂಬಾ ಇಷ್ಟ ಅವರು. ಎರಡು ಸೀರಿಯಲ್‌ನಲ್ಲಿ ಅವರನ್ನು ನೋಡಿದ್ದೀನಿ. ಅವರಿಗೆ ಟ್ಯಾಲೆಂಟ್ ಇದೆ. ಹಾಡನ್ನು ಹಾಡ್ತಾರೆ. ಅವರ ಉದ್ದೇಶ ಏನು ಟ್ಯಾಲೆಂಟ್‌ನಲ್ಲಿಯೇ ಅಪ್ರೋಚ್ ಆಗಲಿ ತನ್ನದು ಏನೇ ಇದ್ದರೂ ಅನ್ನೋದು. ಬೇರೆ ಏನನ್ನೋ ಖಂಡಿಸುತ್ತಾರೆ. ಆಗ ಈ ಯಮ್ಮನಿಗೆ ಭಲೇ ಆಟ್ಯಿಟ್ಯೂಡ್ ಅಂತ ಅಂದುಕೊಂಡರೆ. ನಾವೂ ಕರೆಯದೆ ಇದ್ದರೆ ಇನ್ನ್ಯಾರು ಕರೆಯುತ್ತಾ ಇದ್ರು ಅಂತೆಲ್ಲಾ ಅಂದುಕೊಂಡು ಬ್ಯಾನ್ ಮಾಡಿದ್ರೆ. ಬ್ಯಾನ್ ಮಾಡಿರೋದೆಲ್ಲಾ ನಿಜ ನಂಗೆ ಗೊತ್ತಿಲ್ಲ. ಇದು ಶುದ್ಧ ತಪ್ಪು. ನಾನು ಖಂಡಿಸುತ್ತೀನಿ.

ಕಾಂಪ್ರೂಮೈಸ್ ಬಗ್ಗೆ ಮಾತು

ನಂಗೆ ಈ ಬಗ್ಗೆ ಅನುಭವ ಆಗಿಲ್ಲ. ನನ್ನ ಯಾರೂ ಕೇಳಿಲ್ಲ. ಬೇಜಾನ್ ಜನ ಹೇಳ್ತಾರೆ. ಚರ್ಚೆನೂ ಮಾಡ್ತಾರೆ. ನಾನು ಹೇಳೋದು ಏನು ಗೊತ್ತಾ ಅಂಥವೆಲ್ಲ ಡಿಸ್ಕಷನ್ ತನಕ ತರೋದೆ ಅಲ್ಲ. ನಿಮಗೆ ಅವಕಾಶ ಇಲ್ವಾ ಬೇಡ. ಸಮಾಜ ತುಂಬಾ ದೊಡ್ಡದು. ನೀವ್ಯಾಕೆ ಕಾಂಪ್ರೂಮೈಸ್ ಆಗ್ತೀರಾ. ನಿಮ್ಮ ಧ್ವನಿ ನೀವೇ ಆಗ್ಬೇಕು. ನಿಮಗೆ ಇಷ್ಟ ಇದ್ಯಾ ಹೋಗಿ. ಇಷ್ಟ ಇದ್ದು ಹೋಗೋದು ತಪ್ಪಲ್ಲ. ಆದ್ರೆ ಬಂದು ನಂಗೆ ಹೀಂಗಾಯ್ತು ಹಂಗಾಯ್ತು, ಅವಕಾಶ ತಗೊಂಡು ಮೇಲೋಗಿ ಆಮೇಲೆ ಮಾತಾಡುದ್ರೆ ನಾನು ಒಪ್ಪಲ್ಲ.

ಸೌಜನ್ಯ ಬಗ್ಗೆ ಅಕ್ಷತಾ ಹೇಳಿದ್ದೇನು?

ಎಲ್ಲಾ ಹೆಣ್ಣು‌ ಮಕ್ಕಳಿಗೂ ಈ ಒಂದು ಆಕ್ರೋಶ ಇರಬೇಕು. ಸೌಜನ್ಯದು ಇನ್ನು ಎಷ್ಟು ವರ್ಷ ಆದ್ರೂ ಆಗಲಿ ಆದರೆ ನ್ಯಾಯ ತೆಗೆದುಕೊಳ್ಳದೆ ಹಿಂದೆ ಸರಿಯುವುದೇ ಇಲ್ಲ. ನನಗೂ ಅನ್ನಿಸ್ಯಾ ಇದೆ ನ್ಯಾಯ ಸಿಗುತ್ತೆ ಎಂಬುದು. ನಾನಿಲ್ಲಿ ದೇವಸ್ಥಾನ ಅದು ಇದು ಅನ್ನೋದಲ್ಲ. ನನಗೂ ಒ್ಬಳು ಮಗಳಿದ್ದಾಳೆ. ಶೂಟಿಂಗ್ ಅಂತ ಮಗಳನ್ನ ಬಿಟ್ಟು ಹೋಗ್ತೀನಿ. ನಮ್ಮಲ್ಲಿಯೇ ಯಾರಿಗಾದ್ರೂ ಆ ರೀತಿ ಆದ್ರೆ ಎಂದು ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Actress Akshatha pandavapura opens up about soujanya and Nayana nagaraj;
Read more about: serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X