twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಗ್ಗೆ 'ಬಿಗ್ ಬಾಸ್' ಅಕ್ಷತಾ ಪಾಂಡವಪುರ ಹೇಳಿದ್ದೇನು?

    |

    ನಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮನೆಗೆ ಮಹಾಲಕ್ಷ್ಮಿ ಆಗಮಿಸಿದ ಸಂತಸದಲ್ಲಿದ್ದಾರೆ ಅಕ್ಷತಾ. ಮಗು ಜನಿಸಿ ಒಂದುವಾರವಾಗಿದ್ದು, ಸದ್ಯ ಅಕ್ಷತಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ.

    ಆಸ್ಪತ್ರೆಯಿಂದ ಮನೆಗೆ ಮರಳಿರುವ ಅಕ್ಷತಾ ಸರ್ಕಾರಿ ಆಸ್ಪತ್ರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೆ ಅಕ್ಷತಾ ಮಗುವಿಗೆ ಜನ್ಮ ನೀಡಿದ್ದು ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ. ಸರ್ಕಾರಿ ಆಸ್ಪತ್ರೆ ಅಂದರೆ ಮೂಗು ಮುರಿಯುವವರೇ ಜಾಸ್ತಿ. ಸರ್ಕಾರಿ ಆಸ್ಪತ್ರೆ ಬಡವರಿಗೆ ಮಾತ್ರ ಸೀಮಿತ ಎನ್ನಲಾಗುತ್ತೆ. ಶ್ರೀಮಂತರು ಸರ್ಕಾರಿ ಆಸ್ಪತ್ರೆ ಕಡೆ ತಿರುಗಿಯೂ ನೋಡುವುದಿಲ್ಲ. ಇನ್ನೂ ಸೆಲೆಬ್ರಿಟಿಗಳು ಕೇಳಬೇಕಾ? ಎಷ್ಟು ಖರ್ಚಾದರು ಪರವಾಗಿಲ್ಲ, ಖಾಸಗಿ ಆಸ್ಪತ್ರೆಯಲ್ಲೇ ಯಾವುದು ಬೆಸ್ಟ್ ಎಂದು ಹುಡುಕಿ ಹೋಗುತ್ತಾರೆ.

    ಆದರೆ ಅಕ್ಷತಾ ಪಾಂಡವಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಅಕ್ಷತಾ ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ.

    'ನಿಮ್ಮೆಲ್ಲರ ಹಾರೈಕೆಯಿಂದ ನಾವು ಬಯಸಿದಂತೆ ಮಗಳು ಹುಟ್ಟಿ ಇಂದಿಗೆ ಒಂದು ವಾರ ಆಯಿತು. ಬಹಳಷ್ಟು ಜನ ಶುಭಾಶಯಗಳನ್ನು ತಿಳಿಸಿ ಅರೋಗ್ಯ ವಿಚಾರಿಸಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ಇನ್ನೂ ಮಗಳು ಅಜ್ಜಿ ಮನೆಯ ಅಂಗಳದಲ್ಲಿ ಆಡೋದೊಂದೇ ಬಾಕಿ.

    Akshatha Pandavapura talk about the government hospital After give birth to baby girl

    'ಎಲ್ಲದಕ್ಕಿಂದ ಮುಖ್ಯ ವಿಷಯ ಅಂದ್ರೆ ಮಗಳು ನಮ್ಮೂರಿನ ಸರ್ಕಾರಿ ಆಸ್ಪತ್ರೆಯಲ್ಲೇ ಹುಟ್ಟಿದ್ದು. ನಮ್ಮೂರ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ. Dr Shipashri, Dr Prithvi, Sister Sofia Rani, ಆಸ್ಪತ್ರೆ ಆಡಳಿತಧಿಕಾರಿ Dr Kumar & ಎಲ್ಲಾ ಸಿಬ್ಬಂದಿ, ಶುಶ್ರುತ ಆಡಳಿತದವರ ಆರೈಕೆಯಿಂದ ಮಗಳೊಂದಿಗೆ ತಾಯಿ ಮನೆ ಸೇರಿದೆ.'

    Akshatha Pandavapura talk about the government hospital After give birth to baby girl

    'ಮಕ್ಕಳ ವಿಷ್ಯದಲ್ಲಿ ತಮಾಷೆನಾ.? ನಿಜ್ವಾಗ್ಲೂ ಸರ್ಕಾರಿ ಆಸ್ಪತ್ರೆ ಯೋಚನೆ ಸರಿನಾ? ಎಷ್ಟೇ ವೆಚ್ಚವಾದರೂ ಸರಿಯೇ ಒಳ್ಳೆಯ ಹಾಸ್ಪಿಟಲ್ ನಲಿ ತೋರಿಸಬೇಕು. ಕಾಸು ಕೊಟ್ಟಂತೆ ಕಜ್ಜಾಯ. ಏನೋ ಮಾಡೋಕೆ ಹೋಗಿ ಇನ್ನೇನೋ ಆಗಿಬಿಡಬಹುದು. ಅಬ್ಬಾ! ಹೀಗೆ ನಾನು ನನ್ನ ಡೆಲಿವರಿ ನಮ್ಮೂರಿನ ಸರ್ಕಾರಿ ಆಸ್ಪತ್ರೆಲೇ ಅಂತಾ ನಿರ್ಧಾರ ಮಾಡಿದಾಗ ಕೇಳಿಸಿದ ಮಾತು ಒಂದೋ, ಎರಡೊ, ಇವೆಲ್ಲದರ ಮದ್ಯೆ ಅಂತೂ ಇಂತೂ ನಮ್ಮ ಸರ್ಕಾರಿ ಆಸ್ಪತ್ರೆ ನಮ್ಮ ಹೆಮ್ಮೆ ಅಂತಾ ಹೇಳಬಲ್ಲೇ ಅಂದ್ರೆ ಅದಕ್ಕೆ ಇಡೀ ಸಿಬ್ಬಂದಿವರ್ಗವೇ ಕಾರಣ.' ಎಂದು ಬರೆದುಕೊಂಡಿದ್ದಾರೆ.

    English summary
    After give birth to the baby girl, Akshatha Pandavapura talk about the government hospital.
    Saturday, January 23, 2021, 7:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X