twitter
    For Quick Alerts
    ALLOW NOTIFICATIONS  
    For Daily Alerts

    ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆಗೆ ಯಾರು ಉತ್ತರ ಕೊಟ್ಟಿಲ್ಲ, ಆಮೇಲೆ ಏನಾಯ್ತು?

    |

    ಕನ್ನಡದ ಕೋಟ್ಯಧಿಪತಿಯ ಹಾಟ್ ಸೀಟ್ ನಲ್ಲಿ ಕುಳಿತುಕೊಳ್ಳಬೇಕು ಅಂದ್ರೆ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆಗೆ ಉತ್ತರ ಕೊಡಬೇಕು. ಅತಿ ವೇಗವಾಗಿ ಉತ್ತರ ಕೊಟ್ಟ ಸ್ಪರ್ಧಿಗಳು ಹಾಟ್ ಸೀಟ್ ಗೆ ಬರ್ತಾರೆ.

    ಒಂದು ವೇಳೆ 'ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ'ಗೆ ಯಾರೂ ಉತ್ತರ ಕೊಟ್ಟಿಲ್ಲ ಅಂದ್ರೆ ಏನಾಗುತ್ತೆ? ಬಹುಶಃ ಇಂತಹ ಘಟನೆಗಳು ಸಾಮಾನ್ಯವಾಗಿ ನಡೆಯಲ್ಲ. ಆದರೆ, ಈ ರೀತಿ ಆದ್ರೆ ಏನ್ ಮಾಡ್ತಾರೆ ಎಂಬುದಕ್ಕೆ ಈ ಆವೃತ್ತಿಯಲ್ಲಿ ಒಂದು ಸಂಚಿಕೆ ಸಾಕ್ಷಿಯಾಯಿತು.

    ಕೋಟ್ಯಧಿಪತಿಯಲ್ಲಿ ನಿವೇದಿತಾ ಗೌಡ ಕಮಾಲ್: ಎಷ್ಟು ಹಣ ಗೆದ್ದರು?ಕೋಟ್ಯಧಿಪತಿಯಲ್ಲಿ ನಿವೇದಿತಾ ಗೌಡ ಕಮಾಲ್: ಎಷ್ಟು ಹಣ ಗೆದ್ದರು?

    ಹೌದು, ಕಳೆದ ಭಾನುವಾರ ನಡೆದ ಕನ್ನಡದ ಕೋಟ್ಯಧಿಪತಿಯಲ್ಲಿ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಆಮೇಲೆ ಏನಾಯ್ತು? ಮುಂದೆ ಓದಿ....

    ಅಕುಲ್, ಕೃಷಿ, ಪವಿತ್ರಾ ನಾಯಕ್ ಇದ್ದರು

    ಅಕುಲ್, ಕೃಷಿ, ಪವಿತ್ರಾ ನಾಯಕ್ ಇದ್ದರು

    ಕಳೆದ ವಾರ ಕನ್ನಡದ ಕೋಟ್ಯಧಿಪತಿಯಲ್ಲಿ ಸೆಲೆಬ್ರಿಟಿ ಎಪಿಸೋಡ್ ಟೆಲಿಕಾಸ್ಟ್ ಆಗಿತ್ತು. ಕಾರ್ತಿಕ್ ಜಯರಾಂ, ನಿವೇದಿತಾ ಗೌಡ, ಭವಾನಿ ಸಿಂಗ್, ಅಕುಲ್, ಕೃಷಿ, ಪವಿತ್ರಾ ಭಾಗವಹಿಸಿದ್ದರು. ಕಾರ್ತಿಕ್ ಜಯರಾಂ, ನಿವೇದಿತಾ ಗೌಡ, ಭವಾನಿ ಸಿಂಗ್ ಮೊದಲು ಅವಕಾಶ ಪಡೆದು ಆಟ ಆಡಿದರು. ಬಳಿಕ, ಅಕುಲ್, ಕೃಷಿ, ಪವಿತ್ರಾ ನಾಯಕ್ ಉಳಿದುಕೊಂಡಿದ್ದರು. ಈ ವೇಳೆ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಸುತ್ತ ಬಂತು. ಇಲ್ಲಿ ಕೇಳಲಾದ ಪ್ರಶ್ನೆಗೆ ಈ ಮೂವರು ಕೂಡ ಉತ್ತರ ಕೊಡಲಿಲ್ಲ.

    ಯಾವುದು ಆ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ

    ಯಾವುದು ಆ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ

    ಚಿಕ್ಕದರಿಂದ ಪ್ರಾರಂಭಿಸಿ ಈ ದೇಶಗಳನ್ನು ಅವುಗಳ ಭೂ ವಿಸ್ತೀರ್ಣಕ್ಕೆ ಅನುಗುಣವಾಗಿ ಏರಿಕೆ ಕ್ರಮದಲ್ಲಿ ಜೋಡಿಸಿ?

    A ಶ್ರೀಲಂಕಾ, B ರಷ್ಯಾ, C ಭಾರತ, D ಚೈನಾ ಆಯ್ಕೆಗಳನ್ನ ನೀಡಲಾಗಿತ್ತು. ಈ ಪ್ರಶ್ನೆಗೆ ಮೂವರು ಸರಿ ಉತ್ತರ ನೀಡಲಿಲ್ಲ.

    ಸರಿ ಉತ್ತರ ಏನಾಗಿತ್ತು: A ಶ್ರೀಲಂಕಾ, C ಭಾರತ, D ಚೈನಾ, B ರಷ್ಯಾ

    ಆಡಿಯೆನ್ಸ್ ಮಾತು ಕೇಳಿ 'ಕೋಟ್ಯಧಿಪತಿ'ಯಲ್ಲಿ ದೊಡ್ಡ ಮೊತ್ತ ಕಳೆದುಕೊಂಡ ಜೆಕೆಆಡಿಯೆನ್ಸ್ ಮಾತು ಕೇಳಿ 'ಕೋಟ್ಯಧಿಪತಿ'ಯಲ್ಲಿ ದೊಡ್ಡ ಮೊತ್ತ ಕಳೆದುಕೊಂಡ ಜೆಕೆ

    ಎರಡನೇ ಅವಕಾಶ ಸಿಕ್ತು

    ಎರಡನೇ ಅವಕಾಶ ಸಿಕ್ತು

    ಮೊದಲ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆಗೆ ಯಾರೂ ಸರಿ ಉತ್ತರ ನೀಡದ ಕಾರಣ, ಮೂವರಿಗೂ ಇನ್ನೊಂದು ಅವಕಾಶ ಸಿಕ್ತು. ಮತ್ತೊಮ್ಮೆ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಮೊರೆ ಹೋದರು. ಎರಡನೇ ಸಲ ಕೇಳಿದ ಪ್ರಶ್ನೆಗೆ ಮೂವರಲ್ಲಿ ಒಬ್ಬರೇ ಉತ್ತರ ಕೊಟ್ಟಿದ್ದು. ಉಳಿದ ಇಬ್ಬರು ಕೂಡ ಹಾಟ್ ಸೀಟ್ ಗೆ ಬರಲೇ ಇಲ್ಲ. (ಸಮಯ ಮುಗಿದಿತ್ತು)

    ಎರಡನೇ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಯಾವುದು?

    ಎರಡನೇ ಫಾಸ್ಟೆಸ್ಟ್ ಫಿಂಗರ್ ಪ್ರಶ್ನೆ ಯಾವುದು?

    ತಲೆಯಿಂದ ಪ್ರಾರಂಭಿಸಿ ಮಾನವ ದೇಹದ ಈ ಅಂಗಗಳನ್ನು ಸಾಮಾನ್ಯ ಮನುಷ್ಯನೊಬ್ಬನ ದೇಹದಲ್ಲಿ ಅವು ಇರುವ ಹಾಗೆ ಜೋಡಿಸಿ?

    A ಮೆದುಳು

    B ಮೂತ್ರಪಿಂಡ

    C ಹೃದಯ

    D ಧ್ವನಿ ಪೆಟ್ಟಿಗೆ

    ಉತ್ತರ ಕೊಟ್ಟಿದ್ದು ಒಬ್ಬರೇ

    ಉತ್ತರ ಕೊಟ್ಟಿದ್ದು ಒಬ್ಬರೇ

    ಸರಿಯಾದ ಉತ್ತರ: A ಮೆದುಳು, D ಧ್ವನಿ ಪೆಟ್ಟಿಗೆ, C ಹೃದಯ, B ಮೂತ್ರಪಿಂಡ

    ಈ ಉತ್ತರವನ್ನ ಕೊಟ್ಟಿದ್ದು ಪವಿತ್ರ ನಾಯಕ್ ಒಬ್ಬರೇ. ಅಕುಲ್ ಮತ್ತು ಕೃಷಿ ತಾಪಂಡ ತಪ್ಪು ಉತ್ತರ ನೀಡಿದ್ದರು. ಒಂಬತ್ತು ಪ್ರಶ್ನೆಗಳಿಗೆ ಉತ್ತರ ನೀಡಿ 1.60 ಲಕ್ಷ ಗೆದ್ದು ಧೀನ ಬಂಧು ಟ್ರಸ್ಟ್ ಮಕ್ಕಳಿಗೆ ನೀಡಿದರು.

    English summary
    TV Anchor Akul Balaji and Krishi Thapanda did not get chance to play Kannadada Kotyadipathi 4.
    Wednesday, August 7, 2019, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X