For Quick Alerts
  ALLOW NOTIFICATIONS  
  For Daily Alerts

  'ತಕಧಿಮಿತ' ವೇದಿಕೆ ಮೇಲೆ ಆದಂಗೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.!

  |
  ತಕಧಿಮಿತ' ವೇದಿಕೆ ಮೇಲೆ ಕ್ಷಮೆ ಕೇಳಿದ ಅಕುಲ್ ಬಾಲಾಜಿ.! | FILOMIBEAT KANNADA

  ಬೆಂಗಳೂರಿನ ಮೊಟ್ಟ ಮೊದಲ ಡ್ರ್ಯಾಗ್ ಕ್ವೀನ್ ಆಗಿರುವ ಆದಂ ಪಾಶಾ 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದರು. ಆದ್ರೆ, LGBT ಸಮುದಾಯಕ್ಕೆ ಸೇರಿದ ಆದಂ ಪಾಶಾ ಜೆಂಡರ್ ಬಗ್ಗೆ 'ತಕಧಿಮಿತ' ವೇದಿಕೆ ಮೇಲೆ ಅವಮಾನ ಆಯ್ತಂತೆ. ಹಾಗೆಂದು ಆರೋಪಿಸಿ ಆದಂ ಪಾಶಾ 'ತಕಧಿಮಿತ' ಶೋದಿಂದ ಹೊರಬಂದಿದ್ದಾರೆ.

  ಜೆಂಡರ್ ಬಗ್ಗೆ ಅವಮಾನ ಮಾಡಿರುವ ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಆದಂ ಪಾಶಾ ಪಟ್ಟು ಹಿಡಿದಿದ್ದರು. ಅದರಂತೆ ನಿನ್ನೆ ಪ್ರಸಾರ ಆದ ಸಂಚಿಕೆಯಲ್ಲಿ 'ತಕಧಿಮಿತ' ವೇದಿಕೆ ಮೇಲೆ ಆದಂ ಪಾಶಾಗೆ ಅಕುಲ್ ಬಾಲಾಜಿ ಕೈ ಮುಗಿದು ಕ್ಷಮೆಯಾಚಿಸಿದ್ದಾರೆ.

  ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!ಆದಮ್ ಪಾಶಾಗೆ ಅವಮಾನ: 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋದಿಂದ ವಾಕ್ ಔಟ್.!

  ಆದಂ ಪಾಶಾ ಹೊರಗೆ ಬಂದಿರುವ ಪರಿಣಾಮ ಅವರ ಡ್ಯಾನ್ಸ್ ಪಾರ್ಟ್ನರ್ ಪುನೀತ್ ನಾಯಕ್ ಎಲಿಮಿನೇಟ್ ಆಗಿಲ್ಲ. ಪುನೀತ್ ಗೆ ಬೇರೆ ಪಾರ್ಟ್ನರ್ ಕೊಟ್ಟು ಇನ್ನೊಂದು ಅವಕಾಶ ಕೊಡಲು ತೀರ್ಪುಗಾರರಾದ ಕ್ರೇಜಿ ಸ್ಟಾರ್ ರವಿಚಂದ್ರನ್, ಅನುರಾಧಾ ವಿಕ್ರಾಂತ್, ಸುಮನ್ ರಂಗನಾಥ್ ಮನಸ್ಸು ಮಾಡಿದ್ದಾರೆ. ಮುಂದೆ ಓದಿರಿ...

  ಯಾರು ಔಟ್ ಆಗಬೇಕು.?

  ಯಾರು ಔಟ್ ಆಗಬೇಕು.?

  ಆದಂ ಪಾಶಾ ಮತ್ತು ಪುನೀತ್ ನಾಯಕ್ ಡೇಂಜರ್ ಝೋನ್ ನಲ್ಲಿದ್ದರು. ಈಗಾಗಲೇ, ಆದಂ ಪಾಶಾ ಶೋ ಕ್ವಿಟ್ ಮಾಡಿರುವುದರಿಂದ ಪುನೀತ್ ನಾಯಕ್ ಔಟ್ ಆಗಬೇಕು ಎಂದು ಇತರೆ ಸ್ಪರ್ಧಿಗಳು ಹೇಳಿದರು.

  ಆದಂ 'ತಕಧಿಮಿತ' ಶೋ ಕ್ವಿಟ್ ಮಾಡಿದ್ದು ವೀಕ್ಷಕರಿಗೆ ಮಾಡಿದ ಅವಮಾನ.!ಆದಂ 'ತಕಧಿಮಿತ' ಶೋ ಕ್ವಿಟ್ ಮಾಡಿದ್ದು ವೀಕ್ಷಕರಿಗೆ ಮಾಡಿದ ಅವಮಾನ.!

  ನೇಹಾ ಗೌಡ ಹೀಗಂದ್ರು.!

  ನೇಹಾ ಗೌಡ ಹೀಗಂದ್ರು.!

  ''ಸೋಲನ್ನು ಆದಂ ಪಾಶಾ ಆಗಲೇ ಒಪ್ಪಿಕೊಂಡಿದ್ದಾರೆ. ಮುಂದಿನ ಹಂತಕ್ಕೆ ಹೋಗಲು ಪುನೀತ್ ಗೆ ಸಾಮರ್ಥ್ಯ ಇದೆ. ಆದ್ರೆ, ಆತನಿಗೆ ಆದಂ ಅಂತಹ ಪಾರ್ಟ್ನರ್ ಸಿಕ್ಕಿರುವುದು ಬ್ಯಾಡ್ ಲಕ್'' ಎಂದರು ಕಿರುತೆರೆ ನಟಿ ನೇಹಾ ಗೌಡ.

  ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!

  ಅವಮಾನ ಆಗುವ ಹಾಗೆ ಮಾಡಿದ್ದೇನಾ.?

  ಅವಮಾನ ಆಗುವ ಹಾಗೆ ಮಾಡಿದ್ದೇನಾ.?

  ''ಯಾವುದಾದರೂ ಸಂದರ್ಭದಲ್ಲಿ ನಾನು ನಿಮ್ಮನ್ನ ಕೆಳಗೆ ಹಾಕಿ, ಹೀನಾಯವಾಗಿ ನೋಡಿಕೊಂಡು, ಅವಮಾನ ಆಗುವ ಹಾಗೆ ಮಾತನಾಡಿದ್ದೀನಾ ಹೇಳಿ.? ಹಾಗಿದ್ದರೆ, ಈ ಕ್ಷಣವೇ ಈ ವೇದಿಕೆ ಬಿಟ್ಟು ಹೊರಟು ಹೋಗುವೆ. ನಾನು ಯಾರಿಗಾದರೂ ಅವಮಾನ ಮಾಡಿದ್ದೇನೆ ಅಂತ ನಿಮಗೆ ಅನಿಸಿದರೆ ಹೇಳಿ, ಇನ್ಮುಂದೆ ಜೀವನದಲ್ಲಿ ನಾನು ಆಂಕರಿಂಗ್ ಮಾಡಲ್ಲ'' ಎಂದು ವೇದಿಕೆ ಮೇಲೆ ಅಕುಲ್ ಬಾಲಾಜಿ ನುಡಿದರು.

  ಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆಧಕ್ಕೆ ತರುವ ಹಾಗೆ ಮಾತನಾಡಿಲ್ಲ: ಆದಮ್ ಆರೋಪದ ಬಗ್ಗೆ ಅಕುಲ್ ಸ್ಪಷ್ಟನೆ

  ಆದಂ ಪಾಶಾಗೆ ಈಗೋ ಪ್ರಾಬ್ಲಂ

  ಆದಂ ಪಾಶಾಗೆ ಈಗೋ ಪ್ರಾಬ್ಲಂ

  ''ನಿಮ್ಮ ಬಗ್ಗೆ ಎಲ್ಲರಿಗೂ ಗೌರವ ಇದೆ. ನೀವು ಒಂಥರಾ ಎನರ್ಜಿ ಬೂಸ್ಟರ್ ಇದ್ದ ಹಾಗೆ. ಇಡೀ ದಿನ ನಾವೂ ಆಕ್ಟಿವ್ ಆಗಿರುವುದಕ್ಕೆ ಅದು ಪ್ಲಸ್ ಪಾಯಿಂಟ್. ನಮಗೆ ಮತ್ತು ಆದಂಗೆ ಒಬ್ಬರೇ ಕೊರಿಯೋಗ್ರಾಫರ್ ಇರುವುದು. ತಪ್ಪು ಮಾಡುತ್ತಿದ್ದೀರಾ ಅಂತ ಯಾರಾದರೂ ಹೇಳಿದರೆ, ಅದನ್ನ ಆದಂ ಸ್ವೀಕರಿಸುತ್ತಿರಲಿಲ್ಲ. ಅವರಿಗೆ ತುಂಬಾ ಈಗೋ ಪ್ರಾಬ್ಲಂ ಇದೆ. ಅದನ್ನ ಬಿಟ್ಟರೆ ಅವರು ಜೀವನದಲ್ಲಿ ಏನಾದರೂ ಸಾಧಿಸಬಹುದು'' ಎಂದು ಅಕುಲ್ ಬಾಲಾಜಿ ಸಪೋರ್ಟ್ ಗೆ ನಿಂತರು ನೇಹಾ ಗೌಡ.

  ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!ಸಂಚಿಕೆಯಲ್ಲಿ ಕೀಳಾಗಿ ಏನ್ನನ್ನೂ ತೋರಿಸಿಲ್ಲ: ಆದರೂ ಮುನಿಸಿಕೊಂಡ ಆದಮ್.!

  ಕಾರುಣ್ಯ ರಾಮ್ ಹೇಳಿದ್ದೇನು.?

  ಕಾರುಣ್ಯ ರಾಮ್ ಹೇಳಿದ್ದೇನು.?

  ''ಆಂಕರ್ ಜೊತೆಗೆ ನೀವು ಆಂಕರ್, ಎಂಟರ್ ಟೇನರ್, ಫ್ಯಾಮಿಲಿ ಪರ್ಸನ್. ಪ್ರತಿಯೊಬ್ಬರ ಪರ್ಫಾಮೆನ್ಸ್ ಆದ್ಮೇಲೆ, ''ಚೆನ್ನಾಗಿದೆ'' ಅಂತಲೇ ನೀವು ಶುರು ಮಾಡ್ತೀರಾ. ಆದರೂ ಆದಂ ಯಾಕೆ ಈ ರೀತಿ ಮಾಡಿದರು ಅನ್ನೋದು ಅರ್ಥ ಆಗುತ್ತಿಲ್ಲ'' ಎಂದರು ಕಾರುಣ್ಯ ರಾಮ್.

  ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?ಆದಮ್ ಪಾಶಾ ವಿರುದ್ಧ ಡ್ಯಾನ್ಸ್ ಪಾರ್ಟ್ನರ್ ಆರೋಪ: 'ತಕಧಿಮಿತ' ಶೋನಲ್ಲಿ ಏನಾಯ್ತು.?

  ಅಕುಲ್ ಗೆ ರಾಜೇಶ್ ಸಾಥ್

  ಅಕುಲ್ ಗೆ ರಾಜೇಶ್ ಸಾಥ್

  ''ನಾನು ನಿಮ್ಮನ್ನ ಆಂಕರ್ ಗಿಂತ ಬ್ರದರ್ ಆಗಿ ನೋಡುತ್ತೇನೆ. ಸಿಕ್ಕ ಅವಕಾಶವನ್ನು ಆದಂ ಕಳೆದುಕೊಂಡಿದ್ದಾರೆ. ನಾವು ನಿಮ್ಮ ಜೊತೆಗೆ ಇರುತ್ತೇವೆ'' ಅಂತ ರಾಜೇಶ್ ಧ್ರುವ ಹೇಳಿದರು.

  'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ'ತಕಧಿಮಿತ' ಶೋನಲ್ಲಿ ನಡೆದಿದ್ದೇನು: ಆದಮ್ ಪಾಶಾ ಎಕ್ಸ್ ಕ್ಲೂಸಿವ್ ಸಂದರ್ಶನ

  ಕ್ಷಮೆ ಕೇಳಿದ ಅಕುಲ್ ಬಾಲಾಜಿ

  ಕ್ಷಮೆ ಕೇಳಿದ ಅಕುಲ್ ಬಾಲಾಜಿ

  ''ಆದಂ.. ನಿಮಗೆ ನನ್ನ ಮೇಲೆ ಪ್ರಾಬ್ಲಂ ಇತ್ತು. ನಾನು ಮಾತನಾಡಿದ್ದು ನಿಮಗೆ ಅವಮಾನ ಆಯ್ತು ಅನ್ನೋ ಹಾಗಿದ್ರೆ, ಆಗಲೇ ಒಂದು ಮಾತು ಹೇಳಿದ್ದರೆ ಸಮಸ್ಯೆ ಪರಿಹಾರ ಮಾಡಬಹುದಿತ್ತು. ನಾನು ಖಂಡಿತ ಕ್ಷಮೆ ಕೇಳುತ್ತಿದ್ದೆ. ನನ್ನ ಮೇಲೆ ಬೇಸರ ಇದ್ದರೆ, ಅದನ್ನ ವೇದಿಕೆ ಮೇಲೆ ತೋರಿಸುವುದು ಯಾಕೆ.? ಇದರಿಂದ ಪ್ರಾಬ್ಲಂ ನನಗೆ ಅಲ್ಲ. ನಿಮ್ಮ ಪಾರ್ಟ್ನರ್ ಗೆ. ನಿಮ್ಮ ಪಾರ್ಟ್ನರ್ ಕನಸು ನುಚ್ಚು ನೂರಾಗಿದೆ. ಈಗಲೂ ನಾನು ಕ್ಷಮೆ ಕೇಳುವೆ. ನನ್ನಿಂದ ನಿಮಗೆ ಏನಾದರೂ ನೋವಾಗಿದ್ದರೆ, ಕ್ಷಮೆ ಇರಲಿ'' ಎಂದು ಕೈಮುಗಿದರು ಅಕುಲ್ ಬಾಲಾಜಿ.

  ಪುನೀತ್ ಗೆ ಸಿಕ್ತು ಮತ್ತೊಂದು ಚಾನ್ಸ್

  ಪುನೀತ್ ಗೆ ಸಿಕ್ತು ಮತ್ತೊಂದು ಚಾನ್ಸ್

  ''ಪುನೀತ್ ಗೆ ಅನ್ಯಾಯ ಆಗಿದೆ. ಹೀಗಾಗಿ, ಅವನಿಗೆ ಮತ್ತೊಂದು ಚಾನ್ಸ್ ಕೊಟ್ಟು, ಬೇರೆ ಪಾರ್ಟ್ನರ್ ಕೊಡಿ'' ಎಂದರು ರವಿಚಂದ್ರನ್. ತೀರ್ಪುಗಾರರ ಮಾತಿನಂತೆ ಪುನೀತ್ ಗೆ ಮತ್ತೊಂದು ಅವಕಾಶ ನೀಡಲಾಗಿದೆ.

  English summary
  Anchor Akul Balaji apologizes Contestant Adam Pasha in 'Takadhimita' Dance reality show stage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X