For Quick Alerts
  ALLOW NOTIFICATIONS  
  For Daily Alerts

  ಅನುಶ್ರೀಯ ಫೇವರೇಟ್ ಅಂಕರ್ ಯಾರು ಗೊತ್ತೆ?

  |

  ಸದ್ಯದ ಕನ್ನಡ ಕಿರುತೆರೆಯಲ್ಲಿ ಅಂಕರ್ ಅಂದ್ರೆ ಅನುಶ್ರೀ, ಅನುಶ್ರೀ ಅಂದ್ರೆ ಅಂಕರ್ ಎನ್ನುವ ಹಾಗೆ ಆಗಿದೆ. ಹೀರೋಯಿನ್ ಗಳ ಮಟ್ಟಿಗೆ ಅಂಕರ್ ಅನುಶ್ರೀ ಫೇಮಸ್ ಆಗಿದ್ದಾರೆ. ಸಂಭಾವನೆ ವಿಷಯದಲ್ಲಿಯೂ ಉಳಿದ ಅಂಕರ್ ಗಳನ್ನು ಅನುಶ್ರೀ ಮೀರಿಸುತ್ತಿದ್ದಾರೆ.

  ಬರಿಗೈನಲ್ಲಿ ಬೆಂಗಳೂರಿಗೆ ಬಂದಿದ್ದ ಅನುಶ್ರೀ ತಮ್ಮನನ್ನು ನೆನೆದು ಕಣ್ಣೀರು ಹಾಕಿದರು! ಬರಿಗೈನಲ್ಲಿ ಬೆಂಗಳೂರಿಗೆ ಬಂದಿದ್ದ ಅನುಶ್ರೀ ತಮ್ಮನನ್ನು ನೆನೆದು ಕಣ್ಣೀರು ಹಾಕಿದರು!

  ಕನ್ನಡದ ಬಹಳಷ್ಟು ವಾಹಿನಿಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವ ಅನುಶ್ರೀ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ನಾನು ಅಂಕರ್ ಆಗಬೇಕು ಎಂದು ಕನಸು ಹೊಂದಿರುವ ಅದೆಷ್ಟೋ ಯುವಕ ಯುವತಿಯರಿಗೆ ಅನುಶ್ರೀ ಸ್ಫೂರ್ತಿಯಾಗಿದ್ದಾರೆ.

  ತಮ್ಮ ಮಾತಿನ ಚಾತುರ್ಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ.

  ಟಿವಿ ನಿರೂಪಕಿಯರಾಗಿದ್ದ ಇವ್ರು ಈಗ ಸಿನಿಮಾ ನಟಿಯರುಟಿವಿ ನಿರೂಪಕಿಯರಾಗಿದ್ದ ಇವ್ರು ಈಗ ಸಿನಿಮಾ ನಟಿಯರು

  ಈ ರೀತಿ ತಮ್ಮ ನಿರೂಪಣ ಶೈಲಿಯ ಮೂಲಕ ಕನ್ನಡದ ಟಾಪ್ ಅಂಕರ್ ಆಗಿರುವ ಅನುಶ್ರೀಗೆ ಒಬ್ಬ ಅಂಕರ್ ಕಂಡರೆ ಬಹಳ ಇಷ್ಟ ಅಂತೆ. ಅವರು ಯಾರು ಎನ್ನುವುದು ಮುಂದಿದೆ ಓದಿ...

  ನಿರೂಪಕ ಅಕುಲ್ ಬಾಲಾಜಿ

  ನಿರೂಪಕ ಅಕುಲ್ ಬಾಲಾಜಿ

  ಅಂಕರ್ ಅನುಶ್ರೀಗೆ ಬಹಳ ಇಷ್ಟ ಆಗುವ ಕಿರುತೆರೆಯ ನಿರೂಪಕ ಅಂದರೆ ಅದು ಬೇರೆ ಯಾರು ಅಲ್ಲ ಅಕುಲ್ ಬಾಲಾಜಿ. ಅಕುಲ್ ಅಂಕರಿಂಗ್ ನೋಡುವುದು ಅನುಶ್ರೀಗೆ ಬಹಳ ಇಷ್ಟವಂತೆ. ಅಕುಲ್ ಯಾಕೆ ಅನುಶ್ರೀಗೆ ಮೆಚ್ಚುಗೆ ಆಗಿದ್ದಾರೆ ಎನ್ನುವುನ್ನೂ ಅವರು ತಿಳಿಸಿದ್ದಾರೆ.

  ಅಕುಲ್ ಏನರ್ಜಿ ಚೆನ್ನಾಗಿರುತ್ತದೆ

  ಅಕುಲ್ ಏನರ್ಜಿ ಚೆನ್ನಾಗಿರುತ್ತದೆ

  ಒಂದು ಶೋ ಏನರ್ಜಿ ನಿಂತಿರುವುದು ಅಂಕರ್ ಮೇಲೆ. ನಿರೂಪಕರು ಮೊದಲು ಏನರ್ಜಿಯಾಗಿದ್ದರೆ ಇಡೀ ಕಾರ್ಯಕ್ರಮ ಏನರ್ಜಿಯಾಗಿ ಇರುತ್ತದೆ ಎನ್ನುವ ಅನುಶ್ರೀ ಅಕುಲ್ ಏನರ್ಜಿ ತುಂಬ ಚೆನ್ನಾಗಿದೆ ಎಂದಿದ್ದಾರೆ. ಅವರು ನಿರೂಪಣೆ ಮಾಡುವಾಗ ತುಂಬ ಏನರ್ಜಿ ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.

  ಅನುಶ್ರೀಯ ಹೊಸ ಯೂ ಟ್ಯೂಬ್ ಚಾನಲ್

  ಅನುಶ್ರೀಯ ಹೊಸ ಯೂ ಟ್ಯೂಬ್ ಚಾನಲ್

  ನಿರೂಪಕಿ ಅನುಶ್ರೀ ಇತ್ತೀಚಿಗಷ್ಟೆ ತಮ್ಮದೆ ಆದ ಹೊಸ ಯೂ ಟ್ಯೂಬ್ ಚಾನಲ್ ಶುರು ಮಾಡಿದ್ದಾರೆ. ಅದರಲ್ಲಿ ಒಂದು ವಿಡಿಯೋ ಮಾಡಿ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಈ ರೀತಿ ಫ್ಯಾನ್ಸ್ ಒಬ್ಬರು ಕೇಳಿದ ಪ್ರಶ್ನೆಗೆ ಅನುಶ್ರೀ ಅಕುಲ್ ಹೆಸರು ಹೇಳಿದರು.

  ಅನುಶ್ರೀಯ ಕಾರ್ಯಕ್ರಮಗಳು

  ಅನುಶ್ರೀಯ ಕಾರ್ಯಕ್ರಮಗಳು

  ಸದ್ಯ, ಅನುಶ್ರೀ ಜೀ ಕನ್ನಡ ವಾಹಿನಿಯ ಕಾರ್ಯಕ್ರಮಗಳಲ್ಲಿ ಬ್ಯುಸಿ ಇದ್ದಾರೆ. 'ಸರಿಗಮಪ ಸೀಸನ್ 16' ಹಾಗೂ 'ಸೂಪರ್ ಸ್ಟಾರ್' ಕಾರ್ಯಕ್ರಮಗಳ ನಿರೂಪಣೆ ಮಾಡುತ್ತಿದ್ದಾರೆ. 'ಸರಿಗಮಪ ಸೀಸನ್ 16' ಮೊದಲ ಸಂಚಿಕೆ ಮುಗಿದಿದೆ. ಒಂದರ ನಂತರ ಒಂದರಂತೆ ಜೀ ವಾಹಿನಿಯ ಕಾರ್ಯಕ್ರಮಗಳಲ್ಲಿ ಅನುಶ್ರೀ ತೊಡಗಿದ್ದಾರೆ.

  English summary
  Akul Balaji is Anushree's favorite anchor. Anushree liked Akul Balaji energy.
  Tuesday, March 19, 2019, 8:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X