Serial Stars: ಯಾವ ಸಿನಿಮಾ ನಟರಿಗೂ ಕಮ್ಮಿ ಇರದಷ್ಟು ಫೇಮಸ್ ಈ ಕಿರುತೆರೆ ನಟರು.. ಯಾರವರು?
ಪ್ರತಿ ಕಲಾವಿದರಿಗೂ ತಾವು ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಬೇಕು, ಹಲವಷ್ಟು ಜನರ ಪ್ರೀತಿಯ ಅಭಿಮಾನವನ್ನು ಗಳಿಸಬೇಕು, ಬಹಳ ಫೇಮಸ್ ಆಗಬೇಕು ಇಂಬಿತ್ಯಾಗಿ ಕನಸುಗಳು ಇರುವುದು ಸರ್ವೇಸಾಮಾನ್ಯ. ಈ ಕನಸನ್ನು ನನಸು ಮಾಡಲು ನಟರು ಬಹಳಷ್ಟು ಶ್ರಮಪಡುತ್ತಾರೆ. ಇದರ ಜೊತೆಗೆ ಅದೃಷ್ಟವೂ ಇರಬೇಕು. ಕನ್ನಡ ಕಿರುತೆರೆಯಿಂದ ತಮ್ಮ ನಟನಾ ಜರ್ನಿ ಶುರು ಮಾಡಿ ಹಿರಿತರಿಗೆ ಹಾರಿ ಹಲವಾರು ಸಿನಿಮಾಗಳನ್ನು ಮಾಡಿ ಫೇಮಸ್ ಆಗಿರುವ ಬಹಳಷ್ಟು ನಟರು ನಮ್ಮೊಂದಿಗೆ ಇದ್ದಾರೆ. ಅಂತೆಯೇ ಕಿರುತೆರೆಯಿಂದ ಬೆಳ್ಳಿತರೆಗೆ ಹೋಗಿಯೂ ಮತ್ತೆ ಕಿರುತೆರೆಗೆ ವಾಪಸ್ ಬಂದು ಹೆಚ್ಚು ಹೆಸರು ಮಾಡಿದ ನಟರೂ ಇದ್ದಾರೆ.
ಹೌದು, ಕಿರುತೆರೆಯಲಿದ್ದುಕೊಂಡು ಯಾವುದೇ ಸಿನಿಮಾ ನಟರಿಗೂ ಕಮ್ಮಿ ಇಲ್ಲದಷ್ಟು ಪಾಪ್ಯುಲರ್ ಆದ ಹಲವಾರು ನಟ ನಟಿಯರು ಇಂದು ನಮ್ಮೊಂದಿಗಿದ್ದಾರೆ. ತಮ್ಮ ನಟನೆ ಹಾಗೂ ಡೆಡಿಕೇಶನ್ ಮೂಲಕವೇ ಯಶಸ್ಸನ್ನು ಗೈದಿರುವ ಇವರೆಲ್ಲರೂ ಕರುನಾಡ ಜನರ ಮನ ಗೆದ್ದಿರುವುದಂತೂ ಹೌದು. ಇಂತಹ ಕೆಲವು ಯಶಸ್ವಿ ನಟರ ಪಟ್ಟಿಯನ್ನು ನೋಡೋಣ ಬನ್ನಿ....

ಅಕುಲ್ ಬಾಲಾಜಿ
'ಆತ್ಮೀಯ' ಸಿನಿಮಾ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯಿಸಿಕೊಂಡಿದ್ದ ನಟ ಅಕುಲ್ ಬಾಲಾಜಿ ಅವರು ಯಾರಿಗೆ ಗೊತ್ತಿಲ್ಲ ಹೇಳಿ?! ಇದಾದ ಮೇಲೂ 'ಮಿಲನ', 'ಕ್ರೇಜಿಸ್ಟಾರ್' ಇತ್ಯಾದಿ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಹೆಚ್ಚಿನ ಯಶಸ್ಸು ಕಾಣದೆ ನಂತರ ಹಿರಿಯ ಕನ್ನಡ ರಿಯಾಲಿಟಿ ಶೋಗಳಲ್ಲಿ ಆ್ಯಂಕರ್ ಆಗಿ ಮಿಂಚಲು ಶುರು ಮಾಡಿದರು ನಟ ಅಕುಲ್ ಬಾಲಾಜಿ. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫ್', 'ಇಂಡಿಯನ್' ಇತ್ಯಾದಿ ಹಲವಾರು ರಿಯಾಲಿಟಿ ಶೋಗಳನ್ನು ಅದ್ಬುತವಾಗಿ ನಡೆಸಿಕೊಟ್ಟಿದ್ದು ಇವರೇ. ಸದ್ಯ ಅಕುಲ್ ಬಾಲಾಜಿ ಅವರು ತೆಲುಗು ಧಾರಾವಾಹಿಯೊಂದರಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.

ಜಗನ್
ಜಗನ್ ಚಂದ್ರಶೇಖರ್ ಚಿಕ್ಕ ವಯಸ್ಸಿನಿಂದಲೂ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ ಸಕ್ರಿಯವಾಗಿ ಕಿರುತೆರೆಯಲ್ಲಿ ನಾಯಕನಟನಾಗಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಪುನರ್ ವಿವಾಹ', 'ಗಾಂಧಾರಿ', 'ಸೀತಾವಲ್ಲಭ' ಧಾರಾವಾಹಿಯ ನಂತರ ಸದ್ಯ 'ಲಕ್ಷಣ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿರುವ ಜಗನ್ ಇದೀಗ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಅನ್ನು ಹೊಂದಿದ್ದಾರೆ. ಕಿರುತೆರೆಯಲ್ಲಿಯೇ ಹಲವಾರು ವರ್ಷಗಳಿಂದ ಇದ್ದು, ಯಶಸ್ಸನ್ನು ಗಳಿಸಿ ತಮ್ಮದೇ ಸ್ವಂತ ಪ್ರೊಡಕ್ಷನ್ ಹೌಸ್ ಅನ್ನು ಇಟ್ಟುಕೊಂಡಿರುವ ಕೆಲವೇ ಕೆಲವು ನಟರಲ್ಲಿ ಇವರು ಒಬ್ಬರು.

'ರಕ್ಷಿತ್ ಗೌಡ'
'ಪುಟ್ಟಗೌರಿಯ ಮದುವೆ'ಯ ಮಹೇಶ ಎಂಬ ನಾಯಕನ ಪಾತ್ರದ ಮೂಲಕ ಕಿರುತೆರೆಗೆ ಪರಿಚಯವಾದ ರಕ್ಷ್ ಅವರು ನಂತರ ಹಲವಾರು ಧಾರಾವಾಹಿಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸದ್ಯಕ್ಕೆ 'ಗಟ್ಟಿಮೇಳ' ಎಂಬ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದು, ಆ ಧಾರವಾಹಿಯ ನಿರ್ಮಾಪಕರೂ ಆಗಿದ್ದಾರೆ.

ರಿತ್ವಿಕ್ ಮಠದ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ಗಿಣಿರಾಮ' ಧಾರಾವಾಹಿಯಲ್ಲಿ ನಾಯಕ ಶಿವರಾಮ್ ದೇಶಪಾಂಡೆ ಆಗಿ ಅಭಿನಯಿಸುತ್ತಿರುವ ರಿತ್ವಿಕ್ ಮಠದ್ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಅನುರೂಪ' ಧಾರಾವಾಹಿಯ ಮೂಲಕ ಕಿರುತೆರೆ ಲೋಕದಲ್ಲಿ ಮನೆ ಮಾತಾದರು. ಮನೋಜ್ಞ ಅಭಿನಯ ಮತ್ತು ನಟನೆಯ ಮೇಲಿನ ಡೆಡಿಕೇಶನ್‌ಗೆ ರಿತ್ವಿಕ್ ಅವರನ್ನು ಇಷ್ಟಪಡುವ ಅಭಿಮಾನಿಗಳು ಬೆಳ್ಳಿತೆರೆಗಿಂತ ಕಿರುತೆರೆಯಲ್ಲಿ ಅವರನ್ನು ಹೆಚ್ಚು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











