ಮತ್ತೆ ಧಾರಾವಾಹಿಗೆ ಮರಳಿದ ಅಕುಲ್ ಬಾಲಾಜಿ; ಯಾವ ಸೀರಿಯಲ್‌ನಲ್ಲಿ ನಟನೆ?

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕ, ನಟ ಅಕುಲ್ ಬಾಲಾಜಿ ಸದ್ಯ ಕನ್ನಡ ಕಿರುತೆರೆಯಲ್ಲಿ ಅಡುಗೆ ಶೋ ನಡೆಸಿಕೊಡುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಶೋಗಳನ್ನು ಹೋಸ್ಟ್ ಮಾಡುತ್ತಾ ಪ್ರಖ್ಯಾತಿಗಳಿಸಿರುವ ಅಕುಲ್ ಕನ್ನಡದ ಬಹುಬೇಡಿಕೆಯ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ವಿಭಿನ್ನ ಶೈಲಿಯ ನಿರೂಪಣೆ ಮೂಲಕ ಕನ್ನಡ ವೀಕ್ಷಕರ ಮನಗೆದ್ದಿರುವ ಅಕುಲ್ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.

ಡಾನ್ಸ್ ರಿಯಾಲಿಟಿ ಶೋ ಮೂಲಕ ನಿರೂಪಕರಾಗಿ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಅಕುಲ್ ಸಾಕಷ್ಟು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ನಿರೂಪಣೆ ಜೊತೆ ಕೆಲವು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ನಿರೂಪಣೆ ತಂದುಕೊಟ್ಟ ಖ್ಯಾತಿ ಸಿನಿಮಾ ಮತ್ತು ಧಾರಾವಾಹಿಯಲ್ಲಿ ಸಿಕ್ಕಿಲ್ಲ.

ಇದೀಗ ಅಕುಲ್ ಮತ್ತೆ ಧಾರಾವಾಹಿ ಲೋಕಕ್ಕೆ ಮರಳಿದ್ದು, ಪ್ರಮುಖ ಪಾತ್ರದ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅಷ್ಟಕ್ಕೂ ಯಾವ ಧಾರಾವಾಹಿ ಅಂತ ಯೋಚಿಸುತ್ತಿದ್ದೀರಾ? ಅಕುಲ್ ಬಣ್ಣ ಹಚ್ಚಿದ್ದು ತೆಲುಗು ಧಾರಾವಾಹಿಯಲ್ಲಿ. ತೆಲುಗಿನ 'ಓಹಲು ಗುಸಾಗುಸಲಾಡೆ' ಎನ್ನುವ ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ. ಮುಂದೆ ಓದಿ...

ಅನೇಕ ವರ್ಷಗಳ ಬಳಿಕ ತೆಲುಗು ಧಾರಾವಾಹಿಯಲ್ಲಿ ಅಕುಲ್

ಅನೇಕ ವರ್ಷಗಳ ಬಳಿಕ ತೆಲುಗು ಧಾರಾವಾಹಿಯಲ್ಲಿ ಅಕುಲ್

ಅನೇಕ ವರ್ಷಗಳ ಬಳಿಕ ಅಕುಲ್ ತೆಲುಗು ಧಾರಾವಾಹಿ ಲೋಕಕ್ಕೆ ಮರಳಿದ್ದಾರೆ. ಈಗಾಗಲೇ ಈ ಧಾರಾವಾಹಿ ಪ್ರಾರಂಭವಾಗಿದ್ದು, ಕಳೆದ ವಾರದಿಂದ ಪ್ರಸಾರ ಶುರುವಾಗಿದೆ. ಧಾರಾವಾಹಿಯಲ್ಲಿ ಅಕುಲ್ ಅಭಿರಾಮ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಾತ್ರದ ಬಗ್ಗೆ ಅಕುಲ್ ಹೇಳಿದ್ದೇನು?

ಪಾತ್ರದ ಬಗ್ಗೆ ಅಕುಲ್ ಹೇಳಿದ್ದೇನು?

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ಜೊತೆ ಮಾತನಾಡಿರುವ ಅಕುಲ್, 'ಅಭಿರಾಮ್ ಎನ್ನವ ಪತ್ನಿ ಇಲ್ಲದ ವ್ಯಕ್ತಿಯ ಪಾತ್ರ ನಿರ್ವಹಿಸುತ್ತಿದ್ದೇನೆ. ಈ ಹಿಂದೆ ಮಾಡಿದ ಎಲ್ಲಾ ಪಾತ್ರಕ್ಕಿಂತ ಅಭಿರಾಮ್ ಪಾತ್ರ ವಿಭಿನ್ನವಾಗಿದೆ. ಇಬ್ಬರು ಮಕ್ಕಳ ತಂದೆಯಾಗಿರುತ್ತಾನೆ ಅಭಿರಾಮ್. ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾನೆ ಎನ್ನುವುದು ಕಥೆಯ ತಿರುಳು' ಎಂದಿದ್ದಾರೆ.

ತೆಲುಗು ಧಾರಾವಾಹಿ ಒಪ್ಪಿಕೊಂಡಿದ್ದೇಕೆ ಅಕುಲ್?

ತೆಲುಗು ಧಾರಾವಾಹಿ ಒಪ್ಪಿಕೊಂಡಿದ್ದೇಕೆ ಅಕುಲ್?

ಕಥೆಯ ಮತ್ತೊಂದು ಭಾಗ ಧಾರಾವಾಹಿಯ ನಾಯಕಿ ವಿಚ್ಛೇದನ ಪಡೆದ ಮಹಿಳೆ ಸಂಗಾತಿಯನ್ನು ಹುಡುತ್ತಿರುತ್ತಾರೆ. ಈಗಾಗಲೇ ಧಾರಾವಾಹಿಯ ಚಿತ್ರೀಕರಣ ಪ್ರಾರಂಭವಾಗಿದೆ, ತಿಂಗಳಿಗೆ 12 ದಿನಗಳು ಮಾತ್ರ ಚಿತ್ರೀಕರಣ ಇರುವುದರಿಂದ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಓಡಾಟ ಕಡಿಮೆ ಇರುತ್ತೆ ಹಾಗಾಗಿ ಈ ಧಾರಾವಾಹಿ ಒಪ್ಪಿಕೊಂಡೆ' ಎಂದಿದ್ದಾರೆ.

Recommended Video

Bigg Boss ಮನೆಯಿಂದ ಬಂದ ತಕ್ಷಣ Shubha Poonja ಮಾಡ್ತಿರೋ ಕೆಲಸ ನೋಡಿ | Filmibeat Kannada
ಅಕುಲ್ ನಟಿಸಿರುವ ಧಾರಾವಾಹಿಗಳು

ಅಕುಲ್ ನಟಿಸಿರುವ ಧಾರಾವಾಹಿಗಳು

ಮೂಲತಃ ತೆಲುಗಿನವರೇ ಆಗಿರುವ ಅಕುಲ್ ಖ್ಯಾತಿಗಳಿಸಿದ್ದು ಕನ್ನಡ ಕಿರುತೆರೆ ಲೋಕದಲ್ಲಿ. ಕನ್ನಡದಲ್ಲಿ ಅಕುಲ್ ಗುಪ್ತ ಗಾಮಿನಿ, ಯಾವ ಜನ್ಮದ ಮೈತ್ರಿ, ಜಗಳಗಂಟಿಯರು ಧಾರಾವಾಹಿಗಳಲ್ಲಿ ನಟಿಸಿದ್ದರು. ಇನ್ನು ತೆಲುಗಿನಲ್ಲಿ 2012ರಲ್ಲಿ ಪ್ರಸಾರವಾಗುತ್ತಿದ್ದ ಪೆಲ್ಲಿನಾಟಿ ಪ್ರೇಮಾಣಲು ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದರು. ಬಳಿಕ ಮತ್ತೆ ಬಣ್ಣಹಚ್ಚಿರಲಿಲ್ಲ. ಇದೀಗ ಅಕುಲ್ ಅನೇಕ ವರ್ಷಗಳ ನಂತರ ಮತ್ತೆ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.

More from Filmibeat

English summary
Kannada famous TV host Akul Balaji returns to Telugu serial. He is Acting with Telugu serial Oohalu Gusagusalade.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X