ಜೀ ಕನ್ನಡಕ್ಕೆ ಮರಳಿದ ಅಕುಲ್ ಬಾಲಾಜಿ.. 'ಭರ್ಜರಿ ಬ್ಯಾಚುಲರ್‌'ಗಳ ಕಾಲೆಳೆಯೋರು ಇವರೇ!

By ಎಸ್ ಸುಮಂತ್

ಜೀ ಕನ್ನಡದಲ್ಲಿ ವೀಕೆಂಡ್ ಗೆ ಅಂತಾನೇ ಹಲವು ವಿಭಿನ್ನ ಕಾರ್ಯಕ್ರಮಗಳನ್ನ ಮಾಡ್ತಾರೆ. ಅದರಲ್ಲೂ ರಿಯಾಲಿಟಿ ಶೋಗಳಲ್ಲಿಯೇ ವಿಭಿನ್ನ ಎನಿಸುವಂತಹ, ಆಸಕ್ತಿದಾಯಕ ಶೋಗಳನ್ನು ನಡೆಸಿಕೊಡುತ್ತಾರೆ. ಈಗಾಗಲೆ 'ವೀಕೆಂಡ್ ವಿತ್ ರಮೇಶ್', 'ಡಿಕೆಡಿ' ಅಂತಹ ಕಾರ್ಯಕ್ರಮಗಳು ಜನರನ್ನು ರಂಜಿಸುತ್ತಿವೆ.

ಈ ಎಲ್ಲಾ ಕಾರ್ಯಕ್ರಮಗಳ ಜೊತೆಗೆ ಈಗ ಹೊಸದಾಗಿ ಸೇರ್ಪಡೆಯಾಗುತ್ತಿದೆ ಭರ್ಜರಿ ಬ್ಯಾಚುಲರ್ಸ್ ಶೋ. ಇದರ ಪ್ರೋಮೋ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇನ್ನೇನಿದ್ದರು ಕಾರ್ಯಕ್ರಮ ಯಾವಾಗ ಶುರುವಾಗಬಹುದು ಎಂಬ ಕುತೂಹಲವಿದೆ. ಈ ಶೋಗಾಗಿ ಕಾಯುವಿಕೆಯೂ ಜಾಸ್ತಿಯಾಗಿದೆ. ಆದರೆ ಕೆಲವು ಮೂಲಗಳಿಂದ ಹೊಸ ವಿಚಾರವೊಂದು ಫಿಲ್ಮಿ ಬೀಟ್‌ಗೆ ಲಭ್ಯವಾಗಿದೆ.

 Akul Balaji Will be hosting Zee kannada reality show Bharjari Bachelor

ಭರ್ಜರಿ ಬ್ಯಾಚುಲರ್ಸ್ ಪ್ರೋಮೋದಲ್ಲೇನಿದೆ..?

ಜೀ ಕನ್ನಡಲ್ಲಿ ಕಾರ್ಯಕ್ರಮಗಳು ಶುರುವಾಗುವುದಕ್ಕೂ ಮುನ್ನ ಪ್ರೋಮೋಗಳದ್ದೇ ಹೈಲೇಟ್. ಶೋ ನೀಡಬೇಕೆಂಬ ಕುತೂಹಲವನ್ನು ಹುಟ್ಟು ಹಾಕುವ ಲೆವೆಲ್‌ಗೆ ಜೀ ಕನ್ನಡ ಪ್ರೋಮೋಗಳನ್ನ ರೆಡಿ ಮಾಡಿರುತ್ತದೆ. ಅದು ರಿಪಿಟೆಡ್ ಶೋಗಳಾದರೂ ಸರಿ ಅದಕ್ಕೂ ಹೊಸ ರೀತಿಯ, ವಿಭಿನ್ನ ಎನಿಸುವ ಪ್ರೋಮೋಗಳನ್ನೇ ನೀಡುತ್ತೆ. ಇದೀಗ ಭರ್ಜರಿ ಬ್ಯಾಚುಲರ್ಸ್ ಪ್ರೋಮೋ ಬಿಟ್ಟು ಕುತೂಹಲವನ್ನು ಹೆಚ್ಚಿಸಿದೆ. ಅದರಲ್ಲಿ ಭರ್ಜರಿ ಬ್ಯಾಚುಲರ್ ಶೋ ಪ್ರೋಮೋದಲ್ಲಿ ಮೊದಲಿಗೆ ಫ್ಯಾಷನ್ ಶೋ ನಡೆಯುತ್ತಾ ಇರುತ್ತೆ. ಆಗ ನಿಮ್ಮ ಪಾಟ್ನರ್ಸ್ ಹೇಗಿರಬೇಕೆಂಬ ಪ್ರಶ್ನೆ ಜಡ್ಜ್ ಗಳಿಂದ ಬರುತ್ತೆ. ಆಗ ಮಾಡೆಲ್ ಗಳೆಲ್ಲಾ ಒಂದೊಂದು ರೀತಿಯ ಗುಣಗಳನ್ನು ಹೇಳುತ್ತಾರೆ. ಅದೇ ಸಮಯಕ್ಕೆ ಬ್ಯಾಚುಲರ್ಸ್ ಎಂಟ್ರಿಯಾಗ್ತಾರೆ.

ಅಕುಲ್ ಬಾಲಾಜಿ ಜೀ ಕನ್ನಡಕ್ಕೆ ಕಮ್ ಬ್ಯಾಕ್

ಒಂದು ಕಾರ್ಯಕ್ರಮ ಅದ್ಭುತವಾಗಿ ಬರಬೇಕು ಅಂದ್ರೆ ಅದರ ನಿರೂಪಕರು ಬಹಳ ಮುಖ್ಯವಾಗುತ್ತೆ. ಜೀ ಕನ್ನಡದ ಕಾರ್ಯಕ್ರಮಗಳಲ್ಲಿ ನಿರೂಪಣೆಗೂ ಬಹಳ ಪ್ರಾಮುಖ್ಯತೆ ನೀಡುತ್ತಾರೆ. ಇದೀಗ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ನಿರೂಪಕರ ವಿಚಾರವಾಗಿಯೂ ಸಾಕಷ್ಟು ಕುತೂಹಲ ಮೂಡಿದೆ. ಮೂಲಗಳ ಪ್ರಕಾರ 'ಭರ್ಜರಿ ಬ್ಯಾಚುಲರ್ಸ್' ಕಾರ್ಯಕ್ರಮವನ್ನು ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ ಎನ್ನಲಾಗುತ್ತಿದೆ. ಅಕುಲ್ ಬಾಲಾಜಿ ನಿರೂಪಣೆ ಎಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಧಾರಾವಾಹಿ ಅಂತ ನಿರೂಪಣೆಯಿಂದ ಕೊಂಚ ಮರೆಯಾಗಿದ್ದ ಅಕುಲ್ ಬಾಲಾಜಿ ಬಹಳ ವರ್ಷಗಳ ಬಳಿಕ ಜೀ ಕನ್ನಡಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ.

 Akul Balaji Will be hosting Zee kannada reality show Bharjari Bachelor

ಭರ್ಜರಿ ಬ್ಯಾಚುಲರ್ಸ್ ಜಡ್ಜ್ ಇವರೇ

ಇನ್ನು ಒಂದು ಕಾರ್ಯಕ್ರಮದ ನಿರೂಪಣೆ ಎಷ್ಟು ಮುಖ್ಯವೋ, ಜಡ್ಜಸ್ ಗಳು ಅಷ್ಟೇ ಮುಖ್ಯ. ಭರ್ಜರಿ ಬ್ಯಾಚುಲರ್ಸ್ ಶೋಗೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಜಡ್ಜ್‌ಗಳಾಗುತ್ತಾರೆ ಎನ್ನಲಾಗುತ್ತಿದೆ. ಬ್ಯಾಚುಲರ್‌ಗಳ ಕಷ್ಟ ಕೇಳುವುದಕ್ಕೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಬರಲಿದ್ದಾರೆ ಎನ್ನಲಾಗುತ್ತಿದೆ.

ಸ್ಪರ್ಧಿಗಳ ಡಿಟೈಲ್ ಇಲ್ಲಿದೆ

ಸೂರಜ್, ರಾಕೇಶ್, ಮನೋಹರ್, ಉಮೇಶ್, ನವಾಜ್, ರುದ್ರ ಮಾಸ್ಟರ್, ಹನುಮಂತ, ಜಗಪ್ಪ, ಗಿಲ್ಲಿ ನಟ, ರಾಕೇಶ್ ಭರ್ಜರಿ ಬ್ಯಾಚುಲರ್ಸ್ ನ ಕಂಟೆಸ್ಟೆಂಟ್ ಗಳಾಗಿದ್ದಾರೆ. ಈ ಶೋ ಇಂಟ್ರೆಸ್ಟಿಂಗ್ ಆಗಿ ಇರುವ ಎಲ್ಲಾ ಲಕ್ಷಣಗಳು ಕಾಣಿಸುತ್ತಾ ಇದೆ. ಯಾಕಂದ್ರೆ, ಪ್ರೋಮೋದಲ್ಲಿಯೇ ಸಿಕ್ಕಾಪಟ್ಟೆ ಮನರಂಜನೆ ಸಿಕ್ಕಿದೆ. ಹೀಗಾಗಿ ಕಾರ್ಯಕ್ರಮದಲ್ಲಿ ಇನ್ನಷ್ಟು ಎಂಜಾಯ್‌ಮೆಂಟ್ ಸಿಗುವ ನಿರೀಕ್ಷೆ ಇದೆ. ಹಾಗೇ ಮತ್ತೊಂದು ಆಸಕ್ತಿಕರವಾದ ಸಂಗತಿ ಎಂದರೆ ಈ ಶೋನಲ್ಲಿ ಸಾಕಷ್ಟು ಗೇಮ್‌ಗಳಿರಲಿವೆ ಎನ್ನಲಾಗ್ತಾ ಇದೆ. ಈ ಟಾಸ್ಕ್‌ಗಳು ಪಕ್ಕಾ ಬ್ಯಾಚುಲರ್‌ಗೆ ಏನೆಲ್ಲಾ ಸಂಕಷ್ಟಗಳು ಎದುರಾಗಲಿವೆ ಎಂಬುದಕ್ಕೆ ಸಂಬಂಧಿಸಿದ್ದಾಗಿರುತ್ತದೆ . ಅತಿ ಶೀಘ್ರದಲ್ಲಿಯೇ ಶುರುವಾಗಲಿದ್ದು, ಬಳಿಕ ಕುತೂಹಲಕ್ಕೆ ತೆರೆ ಬೀಳಲಿದೆ.

More from Filmibeat

English summary
Akul Balaji Will be hosting Zee kannada reality show Bharjari Bachelor . Here is the details about Barjari bachelor New Promo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X