For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ : ಗುಡ್ ಲಕ್ ಅಕುಲ್, ಬ್ಯಾಡ್ ಲಕ್ ಸೃಜನ್

  By ಜೇಮ್ಸ್ ಮಾರ್ಟಿನ್
  |

  ಸೂಪರ್ ಸ್ಟಾರ್ ಟಿವಿ ನಿರೂಪಕ ಅಕುಲ್ ಬಾಲಾಜಿ ಅವರು ಭಾನುವಾರ ನಡೆದ ಗ್ರಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಸೀಸನ್ 2 ಸ್ಪರ್ಧೆಯನ್ನು ಗೆದ್ದು, 50 ಲಕ್ಷ ರು. ಮೌಲ್ಯದ ಫ್ಲಾಟ್ ಒಡೆಯರಾಗಿದ್ದಾರೆ. ಇದು ಕೆಲವರಿಗೆ ನಿರೀಕ್ಷಿತ, ಹಲವರಿಗೆ ಅನಿರೀಕ್ಷಿತ.

  ಈ ಬಾರಿ ಮತ್ತೊಬ್ಬ ನಟ ಮತ್ತು ರಿಯಾಲಿಟಿ ಶೋ ನಿರೂಪಕ ಸೃಜನ್ ಲೋಕೇಶ್ ಬಿಗ್ ಬಾಸ್ ಸ್ಪರ್ಧೆ ಗೆಲ್ಲುತ್ತಾರೆಂದು ಹಲವರು ನಿರೀಕ್ಷಿಸಿದ್ದರು. ಆದರೆ ಎಲ್ಲರ ನಿರೀಕ್ಷೆಗಳನ್ನು ತಲೆಗೆಳಗೆ ಮಾಡುವ ಆಟವೇ ಬಿಗ್ ಬಾಸ್, ಇದು ತಮಾಷೆ ಅಲ್ಲ. ಅಂತಿಮ ಹಂತದಲ್ಲಿ ಶ್ವೇತಾ ಚೆಂಗಪ್ಪ ಮತ್ತು ದೀಪಿಕಾ ಕಾಮಯ್ಯ ಹೊರಬಂದು, ಅಕುಲ್ ಮತ್ತು ಸೃಜನ್ ಮಾತ್ರ ಫೈನಲ್ ನಲ್ಲಿ ಉಳಿದುಕೊಂಡಿದ್ದರು.

  ಫಲಿತಾಂಶ ಸೋರಿಕೆ : ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಕಿಚ್ಚ ಸುದೀಪ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 2 ನ ಅಂತಿಮ ಹಂತದ ಹಣಾಹಣಿಯಲ್ಲಿ ನಾಲ್ಕು ಮಂದಿ ಮಾತ್ರ ಇದ್ದಾರೆ. ಸೃಜನ್ ಲೋಕೇಶ್, ಅಕುಲ್ ಬಾಲಾಜಿ, ಶ್ವೇತಾ ಚೆಂಗಪ್ಪ ಹಾಗೂ ದೀಪಿಕಾ ಕಾಮಯ್ಯ ಇವರಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ 50 ಲಕ್ಷ ರು ಮೌಲ್ಯದ ಪ್ರಶ್ನೆಗೆ ಉತ್ತರ ಸಿಕ್ಕಿದೆ.

  ನಟ, ನಿರೂಪಕ ಅಕುಲ್ ಬಾಲಾಜಿ ಅವರು ಬಿಗ್ ಬಾಸ್ ಕನ್ನಡ 2 ನ ವಿಜೇತರಾಗಿದ್ದಾರೆ ಎಂದು ಸುದ್ದಿ ಸೋರಿಕೆಯಾಗಿದೆ. ಬಿಗ್ ಬಾಸ್ ಕನ್ನಡ 2 ಗೆದ್ದವರು ಯಾರು ಎಂಬುದು ಭಾನುವಾರ ರಾತ್ರಿ ಅಧಿಕೃತವಾಗಿ ಘೋಷಣೆಯಾಗಲಿದೆ. ಇಂಡಿಯನ್ ಶೋನ ಸ್ಪರ್ಧಿ ಪ್ರದೀಪ್ ಈ ಬಗ್ಗೆ ಫೇಸ್ ಬುಕ್ ನಲ್ಲಿ ಹಾಕಿದ್ದು ಹೀಗೆ

  ಜೂನ್ 29ರಂದು ಆರಂಭವಾದ ಬಿಗ್ ಬಾಸ್ ಶೋ ಅಕ್ಟೋಬರ್ 5ಕ್ಕೆ ಮುಕ್ತಾಯ ಕಾಣುತ್ತಿದೆ. ಅ.5ರಂದು ಸಂಜೆ 6 ಗಂಟೆಗೆ 11 ಗಂಟೆಯವರೆಗೂ ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಆಸಕ್ತರು ನೋಡಿ ಆನಂದಿಸಬಹುದು. ಅದರೆ, ಇದಕ್ಕೂ ಮುಂಚಿತವಾಗಿ ಅಕುಲ್ ಬಾಲಾಜಿ ಅವರು ಈ ರಿಯಾಲಿಟಿ ಶೋ ಗೆದ್ದಿದ್ದಾರೆ ಎಂದು ಅವರಿಗೆ ಶುಭ ಹಾರೈಕೆಗಳು ಸಲ್ಲಿಕೆಯಾಗಿವೆ. [ಗ್ರ್ಯಾಂಡ್ ಫಿನಾಲೆಗೆ ಮುನ್ನೋಟ ಇಲ್ಲಿದೆ]

  ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಅಕುಲ್ ಬಾಲಾಜಿಗೆ ನಟ, ನಟಿ, ಮಾಧ್ಯಮದವರು, ಸಿನಿ ವೆಬ್ ತಾಣಗಳು, ಸಾರ್ವಜನಿಕರು ವಿಶ್ ಮಾಡಿದ್ದಾರೆ. ರು.50,00,000 ಬೆಲೆಬಾಳುವ ಅಪಾರ್ಟ್ ಮೆಂಟ್ ಕೀ ಅಕುಲ್ ಕೈ ಸೇರಲಿದೆ.

  ರಿಯಾಲಿಟಿ ಶೋ ವಿಜೇತರ ಬಗ್ಗೆ ಸುದ್ದಿ

  ರಿಯಾಲಿಟಿ ಶೋ ವಿಜೇತರ ಬಗ್ಗೆ ಸುದ್ದಿ

  ಈಟಿವಿ ಕನ್ನಡ ವಾಹಿನಿಯ ಜನಪ್ರಿಯ ಡ್ಯಾನ್ಸಿಂಗ್ ರಿಯಾಲಿಟಿ ಶೋ 'ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್'ನಲ್ಲಿ ಸುನಾಮಿ ಕಿಟ್ಟಿ ಜೋಡಿ ನೃತ್ಯ ತಾರೆಗಳಾಗಿ ಹೊರ ಹೊಮ್ಮಿದ ಸುದ್ದಿ ಕೂಡಾ ಇದೇ ರೀತಿ ಸೋರಿಕೆಯಾಗಿತ್ತು. ಗ್ರ್ಯಾಂಡ್ ಫಿನಾಲೆ ಎಪಿಸೋಡು ಪ್ರಸಾರವಾಗುವುದಕ್ಕೂ ಮುಂಚಿತವಾಗಿ ಎಚ್ ಡಿಕೋಟೆಯ ಸುನಾಮಿ ಕಿಟ್ಟಿ ಪ್ರಶಸ್ತಿ ಗೆದ್ದಿರುವ ಸುದ್ದಿ ಬಂದಿತ್ತು. ಈ ಶೋನ ನಿರೂಪಕ ಅಕುಲ್ ಬಾಲಾಜಿಯಾಗಿದ್ದರು[ಕಿಟ್ಟಿ ಈಗ ತಕಧಿಮಿತ ಡ್ಯಾನ್ಸಿಂಗ್ ಸ್ಟಾರ್]

  ಅಕುಲ್ ಗೆ ಶುಭ ಕೋರಿದ್ದ ಮಹೇಶ್ ಬಾಬು

  ಅಕುಲ್ ಗೆ ಮತ ಹಾಕಿ ಗೆಲ್ಲಿಸಿ ಎಂದು ಟ್ವೀಟ್ ಮಾಡಿ ಶುಭ ಕೋರಿದ್ದ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು

  ನಟಿ ಮೇಘನಾ ಅವರಿಂದ ಅಕುಲ್ ಗೆ ವಿಶ್

  ನಟಿ ಮೇಘನಾ ಗಾಂವ್ಕರ್ ಅವರು ಬಿಗ್ ಬಾಸ್ ಗೆದ್ದಿದ್ದಕ್ಕೆ ಅಕುಲ್ ಬಾಲಾಜಿಗೆ ಶುಭ ಹಾರೈಸಿದ್ದಾರೆ.

  ಕನ್ನಡ ಬಾಕ್ಸಾಫೀಸ್ ತಾಣದಿಂದಲೂ ಶುಭ ಹಾರೈಕೆ

  ಕನ್ನಡ ಬಾಕ್ಸಾಫೀಸ್ ತಾಣದಿಂದಲೂ ಬಿಗ್ ಬಾಸ್ 2 ಗೆದ್ದ ಅಕುಲ್ ಬಾಲಾಜಿಗೆ ಶುಭ ಹಾರೈಕೆ

  ಆರ್ ಜೆ ಪ್ರದೀಪರಿಂದ ಸುದ್ದಿ ಸೋರಿಕೆ

  ಅಕುಲ್ ಬಾಲಾಜಿ ಅವರಿಗೆ ಸಿಗುತ್ತಿರುವ ಬಹುಮಾನ ಮೊತ್ತ ವಿವರಿಸಿ ಅಕುಲ್ ಅವರಿಗೆ ಶುಭ ಹಾರೈಸಿದ ಆರ್ ಜೆ ಪ್ರದೀಪ.

  ಪತ್ರಕರ್ತೆ ಕಾವ್ಯಾ ಕ್ರಿಸ್ಟೋಫರ್ ಅವರಿಂದ ಟ್ವೀಟ್

  ಅಕುಲ್ ಬಾಲಾಜಿ ಬಿಗ್ ಬಾಸ್ ಗೆದ್ದಿದ್ದಾರೆ ಎಂದು ಪತ್ರಕರ್ತೆ ಕಾವ್ಯಾ ಕ್ರಿಸ್ಟೋಫರ್ ಅವರಿಂದ ಟ್ವೀಟ್

  English summary
  Anchor, Actor Akul Balaji wins Suvarna Bigg Boss Kannada Season 2 according to reports. The second season of 'Big Boss' was launched on the 29th of June at the Suvarna entertainment channel and the programme is all set to be concluded on the 05th of October.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X