ಕುಡಿದ ನಶೆಯಲ್ಲಿ ಗಿಲ್ಲಿ ಗೆಲ್ಲಲ್ಲ ಅಂತ ಹೇಳಿದ್ದೆ - ಡಾಗ್ ಸತೀಶ್

''ಬಿಗ್ ಬಾಸ್'' ಈ ಬಾರಿ ಕೇವಲ ಕಾರ್ಯಕ್ರಮ ಆಗಿರಲಿಲ್ಲ. ಬದಲಿಗೆ ಹಲವರ ಪಾಲಿಗೆ ಭಾವನಾತ್ಮಕವಾದ ವಿಚಾರ ಆಗಿತ್ತು, ಇದಕ್ಕೆ ಕೈಗನ್ನಡಿ ಎಂಬಂತೆ ಕಾರ್ಯಕ್ರಮ ಶುರುವಾದ ಮೊದಲ ದಿನದಿಂದಲೇ ಗಿಲ್ಲಿ ಹೆಸರು ರಾಜ್ಯದ ಗಲ್ಲಿ ಗಲ್ಲಿಗಳಲ್ಲಿ ಕೂಡ ಸದ್ದು ಮಾಡಲು ಶುರು ಮಾಡಿತ್ತು. ಮಂಡ್ಯದ ಮಣ್ಣಿನ ಮಗ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆ ಇಡೀ ರಾಜ್ಯವೇ ಕೇಕೆ ಹಾಕಿತು.

ಇನ್ನೂ.. ಬೆಂಬಲ ಕೊಡುವವರು ಇರುವಲ್ಲಿ ಕಾಲೆಳೆಯುವರು ಕೂಡ ಇರುತ್ತಾರೆ. ಗಿಲ್ಲಿ ವಿಚಾರದಲ್ಲಿ ಕೂಡ ಇದೇ ಆಗಿತ್ತು. ಗಿಲ್ಲಿಯ ಮುಗ್ದತೆ.. ಹಾಸ್ಯ ಪ್ರಜ್ಞೆ.. ಹಲವರ ಹೃದಯವನ್ನೂ ಗೆಲ್ಲುತ್ತಿದ್ದ ಸಮಯದಲ್ಲಿ ಕೆಲವರು ಗಿಲ್ಲಿ ಕುರಿತು ಕೊಂಕು ಮಾತನಾಡಿದ್ದರು. ಗಿಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ವಾದವನ್ನು ಮಾಡುತ್ತಿದ್ದರು. ಬಹಿರಂಗವಾಗಿ ಸವಾಲು ಹಾಕಿದ್ದರು. ಆ ಪೈಕಿ ಒಬ್ಬರಾಗಿದ್ದವರು ಡಾಗ್ ಸತೀಶ್.

Alcohol Made Me Do It Dog Satish s Shocking U-Turn After Gilli Nata Wins BBK 12

ಹೌದು, ಡಾಗ್ ಸತೀಶ್.. ಮೂರನೇ ಸ್ಪರ್ಧಿಯಾಗಿ ''ಬಿಗ್ ಬಾಸ್'' 12ನೇ ಸೀಸನ್ ಮನೆ ಪ್ರವೇಶ ಮಾಡಿದ್ದ ಖ್ಯಾತ ಡಾಗ್ ಬ್ರೀಡರ್. ಎಳವೆಯಿಂದಲೇ ನಾಯಿಗಳ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಡಾಗ್ ಸತೀಶ್ ಹತ್ತನೇ ತರಗತಿಯಲ್ಲಿದ್ದಾಗಲೇ ನಾಯಿಗಳ ಮಾರಾಟದಲ್ಲಿ ತೊಡಗಿಕೊಂಡಿದ್ದರು. ಕೋಟ್ಯಂತರ ಮೌಲ್ಯದ ನಾಯಿಗಳನ್ನು ಖರೀದಿಸುವ, ಮಾರಾಟ ಮಾಡುವುದೇ ಇವರ ಉದ್ಯೋಗ. ಖುದ್ದು ಡಾಗ್ ಸತೀಶ್ ''ಬಿಗ್ ಬಾಸ್'' ವೇದಿಕೆಯಲ್ಲಿಈ ಮಾತನ್ನು ಹೇಳಿದ್ದರು.

ಇಂಥಾ ಡಾಗ್ ಸತೀಶ್ ಈ ಬಾರಿ ಗಿಲ್ಲಿ ''ಬಿಗ್ ಬಾಸ್'' ಗೆಲ್ಲಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಅಪ್ಪಿ ತಪ್ಪಿ ಗೆದ್ದರೆ ಗಿಲ್ಲಿಯ ಕಾಲ ಕೆಳಗೆ ನುಸುಳುತ್ತೇನೆ ಎಂದು ಬೇರೆ ಹೇಳಿದ್ದರು.

ಡಾಗ್ ಸತೀಶ್ ದುರಾದೃಷ್ಟ. ಗಿಲ್ಲಿ ಕೊನೆಗೂ ''ಬಿಗ್ ಬಾಸ್'' ಗೆದ್ದರು. ಇನ್ನೇನು..? ಆ ಕಡೆ ಗಿಲ್ಲಿ ಹಿಂದೆ ಸೆಲ್ಫಿ ಕ್ಲಿಕಿಸಿಕೊಳ್ಳಲು ಜನ ಬಿದ್ದರೆ ಈ ಕಡೆ ಡಾಗ್ ಸತೀಶ್ ಬೆನ್ನ ಹಿಂದೆ ಗಿಲ್ಲಿ ಅಭಿಮಾನಿಗಳು ಬಿದ್ದರು. ಗಿಲ್ಲಿಯ ಕಾಲ ಕೆಳಗೆ ನುಸುಳುವುದು ಯಾವಾಗ ಎಂದು ಡಾಗ್ ಸತೀಶ್ ಕಾಲೆಳೆಯಲು ಶುರು ಮಾಡಿದರು. ಟ್ರೋಲ್ ಮಾಡಿದರು. ಈಗ ಹಲವರು ಕೇಳುತ್ತಿದ್ದ ಪ್ರಶ್ನೆಗೆ ಡಾಗ್ ಸತೀಶ್ ಉತ್ತರ ನೀಡಿದ್ದಾರೆ. ಕುಡಿದ ಮತ್ತಿನಲ್ಲಿ ಏನೋ ಹೇಳಿದೆ ಎಂದು ಹೇಳಿದ್ದಾರೆ.

ಈ ಕುರಿತು ಕೆಲ ಯೂಟ್ಯೂಬರ್ಸ್‌ಗಳ ಜೊತೆ ಮಾತನಾಡಿರುವ ಡಾಗ್ ಸತೀಶ್ ಹೇಳಿದ್ದೇ ಅದಕ್ಕೆ ಏನು ಮಾಡೋಣ ಈಗ ಎಂದು ಪ್ರಶ್ನೆ ಮಾಡಿದ್ದಾರೆ. ನಾನೇನು ಜ್ಯೋತಿಷಿನಾ? ಗೆಲ್ಲಲ್ಲ ಅಂದಿದ್ದೆ. ಆದರೆ, ಗೆದ್ದಿದ್ದಾರೆ. ನಾನು ಕುಡಿದಾಗ ಹೇಳಿದ್ದೆ ಎಂದು ಹೇಳಿರುವ ಡಾಗ್ ಸತೀಶ್ ಎಷ್ಟೋ ಸ್ವಾಮಿಜಿಗಳು ಹೇಳಿದ್ದೆ ಸುಳ್ಳಾಯ್ತು. ಹಾಗಂತ ಏನ್‌ ಮಾಡೋಣ. ನಾನು ಕುಡಿದ ನಶೆಯಲ್ಲಿ ಹೇಳಿದ್ದೆ ಎಂದು ಹೇಳಿದ್ದಾರೆ.

Alcohol Made Me Do It Dog Satish s Shocking U-Turn After Gilli Nata Wins BBK 12

ಮುಂದುವರೆದು ಸೋತವರಿಗಾಗಿಯೇ ಪಬ್‌ನಲ್ಲಿ ನಾನೊಂದು ಅದ್ದೂರಿ ಪಾರ್ಟಿ ಹಮ್ಮಿಕೊಳ್ಳುತ್ತಿದ್ದೇನೆ ಎಂದು ಹೇಳಿರುವ ಡಾಗ್ ಸತೀಶ್, ಈ ಪಾರ್ಟಿಗೆ ಗಿಲ್ಲಿಗೆ ಆಹ್ವಾನ ಇರುವುದಿಲ್ಲ ಎಂದಿದ್ದಾರೆ. ಗಿಲ್ಲಿಯನ್ನು ಬಿಟ್ಟು ನಾವು ಉಳಿದ ಎಲ್ಲರೂ ಪಾರ್ಟಿ ಮಾಡುತ್ತೇವೆ ಎಂದಿದ್ದಾರೆ.

ಇನ್ನೂ ''ಬಿಗ್ ಬಾಸ್'' ಮನೆಗೆ ಹೋಗಿ ಬಂದ ತಕ್ಷಣ, ಅದರಲ್ಲಿಯೂ ಗಿಲ್ಲಿ ಬಗ್ಗೆ ಭವಿಷ್ಯ ನುಡಿದ ನಂತರ ಇವರಿಗೆ ಮಾನನಸಿಕ ಕಿರುಕುಳು ನೀಡುವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆ ಸುಮಾರು 80ಜನರ ವಿರುದ್ಧ ಡಾಗ್ ಸತೀಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಆ ಪೈಕಿ 8 ಜನ ಅರೆಸ್ಟ್ ಆಗಿದ್ದು ಎಲ್ಲರು ಜಾಮೀನು ಕೂಡ ಪಡೆದು ಹೊರ ಬಂದಿದ್ದಾರೆ. ಹಾಗಂಥ ಡಾಗ್ ಸತೀಶ್ ಇವರನ್ನೆಲ್ಲ ಸುಮ್ಮನೆ ಬಿಡಲ್ಲ. ಬದಲಿಗೆ ಸುಪ್ರೀಂ ಕೋರ್ಟ್‌ವರೆಗೆ ಹೋಗುವ ತೀರ್ಮಾನವನ್ನು ಕೂಡ ಮಾಡಿದ್ದಾರೆ. ಈ ಮಾತುಗಳನ್ನು ಕೂಡ ಡಾಗ್ ಸತೀಶ್ ಅವರೇ ಹೇಳಿದ್ದಾರೆ.

More from Filmibeat

English summary
"I was drunk!" BBK 12's Dog Satish finally breaks his silence on trolling Gilli Nata. After claiming Gilli would never win, Satish makes a shocking confession following the grand finale. Read his full explanation and see how fans are reacting to this viral U-turn!
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X