For Quick Alerts
  ALLOW NOTIFICATIONS  
  For Daily Alerts

  ದಕ್ಷಿಣ ನಟಿಯರ ಬಗ್ಗೆ ಹೀನಾಯವಾಗಿ ಮಾತಾಡಿದ ಹೀನಾ ಖಾನ್ ಯಾರು.?

  By Harshitha
  |

  ''ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಪ್ಪಗಿರುವ ನಟಿಯರೇ ಹೆಚ್ಚು. ಹೀರೋಯಿನ್ ಸೀರೆ ಧರಿಸಿದಾಗ ಗುಂಡು ಗುಂಡಾಗಿ ಕಾಣಬೇಕೆಂದು ಅಲ್ಲಿನ ನಿರ್ದೇಶಕರು ಬಯಸುತ್ತಾರೆ. ಎಕ್ಸ್ ಪೋಸಿಂಗ್ ಮಾಡಿ ಹೀರೋಯಿನ್ ಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ. ಭಾಷೆ ಗೊತ್ತಿಲ್ಲದ ನಾಯಕಿಯರು ಡೈಲಾಗ್ ಹೇಳುವ ಬದಲು ಒನ್ ಟು ಥ್ರೀ ಫೋರ್ ಎಂದು ಹೇಳುತ್ತಾರೆ. ಆಮೇಲೆ ಅದಕ್ಕೆ ಡಬ್ಬಿಂಗ್ ಮಾಡಲಾಗುತ್ತೆ'' ಅಂತೆಲ್ಲ ದಕ್ಷಿಣ ಭಾರತದಲ್ಲಿ ಅಭಿನಯಿಸುವ ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿದವರು ಬೇರೆ ಯಾರೂ ಅಲ್ಲ, 'ಬಿಗ್ ಬಾಸ್ 11' ಸ್ಪರ್ಧಿ ನಟಿ ಹೀನಾ ಖಾನ್.

  ಹೀನಾ ಖಾನ್ ಹೀಗೆ ದಕ್ಷಿಣ ನಟಿಯರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು ಬೇರೆ ಎಲ್ಲೂ ಅಲ್ಲ, ಭಾರತದ ಅತಿದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್ 11'ರಲ್ಲಿಯೇ.!

  ದಕ್ಷಿಣ ಭಾರತದ ನಟಿಯರ ಬಗ್ಗೆ ಮಾತ್ರ ಅಲ್ಲ, ತನ್ನ ಸಹ ಸ್ಪರ್ಧಿಗಳಾದ ಶಿಲ್ಪಾ ಶಿಂಧೆ, ಬಂದಗಿ ಕಾಲ್ರಾ, ಅರ್ಶಿ ಖಾನ್ ಬಗ್ಗೆ ಕೂಡ ಕೇವಲವಾಗಿ ಮಾತನಾಡಿರುವ ಹೀನಾ ಖಾನ್ ಸದ್ಯ 'ಬಿಗ್ ಬಾಸ್ 11'ರ ಟಾಪ್ 4 ಪಟ್ಟಕ್ಕೆ ಏರಿದ್ದಾರೆ.

  'ಬಿಗ್ ಬಾಸ್ 11' ರ ಗ್ರ್ಯಾಂಡ್ ಫಿನಾಲೆ ಹಂತ ತಲುಪಿರುವ ಹೀನಾ ಖಾನ್ ಯಾರು.? ಆಕೆಯ ಹಿನ್ನಲೆ ಏನು.? ಸಂಪೂರ್ಣ ವರದಿ ಇಲ್ಲಿದೆ ಓದಿರಿ...

  'ಶ್ರೀನಗರ'ದ ಹುಡುಗಿ

  'ಶ್ರೀನಗರ'ದ ಹುಡುಗಿ

  ಹೀನಾ ಖಾನ್ ಹುಟ್ಟಿದ್ದು ಶ್ರೀನಗರ (ಜಮ್ಮು ಮತ್ತು ಕಾಶ್ಮೀರ)ದಲ್ಲಿ. ಎಂ.ಬಿ.ಎ ಪದವಿ ಪಡೆದಿರುವ ಹೀನಾ ಖಾನ್ ಹಿಂದಿ ಕಿರುತೆರೆಗೆ ಪದಾರ್ಪಣೆ ಮಾಡಿದ್ದು 2009 ರಲ್ಲಿ. ಅದು 'ಯೇ ರಿಶ್ತಾ ಕ್ಯಾ ಕೆಹಲಾತಾ ಹೇ' ಧಾರಾವಾಹಿ ಮೂಲಕ.

  ದಕ್ಷಿಣ ನಟಿಯರ ಬಗ್ಗೆ 'ಕೀಳಾಗಿ' ಮಾತನಾಡಿದ 'ಬಿಗ್ ಬಾಸ್' ಸ್ಪರ್ಧಿ.!

  ಎಂಟು ವರ್ಷ ಒಂದೇ ಧಾರಾವಾಹಿ

  ಎಂಟು ವರ್ಷ ಒಂದೇ ಧಾರಾವಾಹಿ

  ಎಂಟು ವರ್ಷಗಳ ಕಾಲ ಒಂದೇ ಧಾರಾವಾಹಿಯಲ್ಲಿ (ಯೇ ರಿಶ್ತಾ ಕ್ಯಾ ಕೆಹಲಾತಾ ಹೇ) ಅಭಿನಯಿಸಿದ ಹೀನಾ ಖಾನ್ 2016 ರಲ್ಲಿ ಹೊರಬಂದರು. ಇದೇ ಧಾರಾವಾಹಿಯ ಸೂಪರ್ ವೈಸರ್ ಪ್ರೊಡ್ಯೂಸರ್ ರಾಕಿ ಜೈಸ್ವಾಲ್ ಈಕೆಯ ಬಾಯ್ ಫ್ರೆಂಡ್.

  ಯಾರೀ 'ಬಿಗ್ ಬಾಸ್' ಮಾಸ್ಟರ್ ಮೈಂಡ್ ವಿಕಾಸ್ ಗುಪ್ತ.?

  ಖತರೋಂಕೆ ಖಿಲಾಡಿ

  ಖತರೋಂಕೆ ಖಿಲಾಡಿ

  'ಯೇ ರಿಶ್ತಾ ಕ್ಯಾ ಕೆಹಲಾತಾ ಹೇ' ಧಾರಾವಾಹಿಯಿಂದ ಹೊರಬಂದ ಬಳಿಕ ಕಲರ್ಸ್ ಟಿವಿಯ 'ಫಿಯರ್ ಫ್ಯಾಕ್ಟರ್: ಖತರೋಂಕೆ ಖಿಲಾಡಿ' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಹೀನಾ ಖಾನ್, ಮೊದಲ ರನ್ನರ್ ಅಪ್ ಸ್ಥಾನ ಪಡೆದರು.

  ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ 'ಬಿಗ್ ಬಾಸ್' ಫೈನಲಿಸ್ಟ್ ಶಿಲ್ಪಾ: ಯಾರೀಕೆ.?

  ಈಗ 'ಬಿಗ್ ಬಾಸ್'

  ಈಗ 'ಬಿಗ್ ಬಾಸ್'

  'ಖತರೋಂಕೆ ಖಿಲಾಡಿ' ಬಳಿಕ 'ಬಿಗ್ ಬಾಸ್' ಮನೆ ಸೇರಿರುವ ಹೀನಾ ಖಾನ್ ಸದ್ಯ ಟಾಪ್ 4 ಹಂತಕ್ಕೆ ಬಂದಿದ್ದಾರೆ. ಸಹ ಮಹಿಳಾ ಸ್ಪರ್ಧಿಗಳ ಬಗ್ಗೆ ಕೇವಲವಾಗಿ ಮಾತನಾಡಿರುವ ಹೀನಾ ಅನೇಕ ಬಾರಿ ಟ್ರೋಲ್ ಆಗಿದ್ದಾರೆ.

  ಹೀನಾಗೆ ಧಿಕ್ಕಾರ

  ಹೀನಾಗೆ ಧಿಕ್ಕಾರ

  ದಕ್ಷಿಣ ಭಾರತದ ನಟಿಯರ ಬಗ್ಗೆ ಹೀನಾಯವಾಗಿ ಮಾತನಾಡಿದ್ಮೇಲೆ, ದಕ್ಷಿಣದ ಹಲವು ತಾರೆಯರು ಕೂಡ ಹೀನಾಗೆ ಧಿಕ್ಕಾರ ಕೂಗಿದ್ದರು.

  ಇನ್ನೊಂದೇ ಹೆಜ್ಜೆ

  ಇನ್ನೊಂದೇ ಹೆಜ್ಜೆ

  ಒಳ್ಳೆಯದ್ದಕ್ಕೋ, ಕೆಟ್ಟದ್ದಕ್ಕೋ... ಒಟ್ನಲ್ಲಿ ಸದಾ ಸುದ್ದಿಯಲ್ಲಿ ಇರುವ ಹೀನಾ ಖಾನ್ ಗ್ರ್ಯಾಂಡ್ ಫಿನಾಲೆ ವರೆಗೂ ಬಂದಾಗಿದೆ. ಆಕೆಯ ಗೆಲುವಿಗೆ ಇನ್ನೊಂದೇ ಹೆಜ್ಜೆ ಬಾಕಿ.

  ಗ್ರ್ಯಾಂಡ್ ಫಿನಾಲೆ ಯಾವಾಗ.?

  ಗ್ರ್ಯಾಂಡ್ ಫಿನಾಲೆ ಯಾವಾಗ.?

  'ಬಿಗ್ ಬಾಸ್ 11' ಇದೇ ಭಾನುವಾರ (ಜನವರಿ 14) ರಂದು ರಾತ್ರಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಗೆಲುವಿನ ಕಿರೀಟ ಯಾರ ಮುಡಿಗೆ ಸೇರುತ್ತದೆಯೋ, ಕಾದು ನೋಡಬೇಕು.

  English summary
  Hina Khan, Bigg Boss 11 Contestant, Grand Finalist is an Indian Television Actress. She is best known for playing Akshara in Yek Rishta Kya Kehlata Hai. Will Hina Khan win #BB11 trophy.? Lets wait and watch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X