»   » 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆಗೆ ಲಗ್ಗೆ ಇಟ್ಟಿರುವ ಕಾಮನ್ ಮ್ಯಾನ್ ಪುನೀಶ್ ಹಿನ್ನಲೆ ಏನು.?

'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆಗೆ ಲಗ್ಗೆ ಇಟ್ಟಿರುವ ಕಾಮನ್ ಮ್ಯಾನ್ ಪುನೀಶ್ ಹಿನ್ನಲೆ ಏನು.?

Posted By:
Subscribe to Filmibeat Kannada

'ಬಿಗ್ ಬಾಸ್ 11' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಸೆಲೆಬ್ರಿಟಿಗಳನ್ನೇ ಹಿಂದಕ್ಕೆ ತಳ್ಳಿ ಟಾಪ್ 4 ಹಂತ ಅರ್ಥಾತ್ ಗ್ರ್ಯಾಂಡ್ ಫಿನಾಲೆ ತಲುಪಿರುವ 'ಕಾಮನ್ ಮ್ಯಾನ್' ಪುನೀಶ್ ಶರ್ಮಾ.

ಸಹ ಸ್ಪರ್ಧಿ ಬಂದಗಿ ಕಾಲ್ರಾ ಜೊತೆಗಿನ ಲವ್ವಿ-ಡವ್ವಿ ಮೂಲಕ ಅರ್ಧ 'ಬಿಗ್ ಬಾಸ್' ಜರ್ನಿ ಮುಗಿಸಿದ ಪುನೀಶ್ ಬಳಿಕ ಶಿಲ್ಪಾ ಶಿಂಧೆ ಪರವಾಗಿ ಬ್ಯಾಟಿಂಗ್ ಮಾಡಲು ಆರಂಭಿಸಿದರು.

ಇತ್ತೀಚೆಗಷ್ಟೇ 'ಬಿಗ್ ಬಾಸ್' ಮನೆಯೊಳಗೆ ನಡೆದ ಪತ್ರಿಕಾಗೋಷ್ಠಿಯಲ್ಲೂ ಶಿಲ್ಪಾ ಶಿಂಧೆ ಪರ ದನಿ ಎತ್ತಿದ ಪುನೀಶ್ ಶರ್ಮಾ ವೀಕ್ಷಕರ ಮನಗೆದ್ದಿದ್ದರು. ಹಾಗಾದ್ರೆ, ಈ ಬಾರಿ ಕಾಮನ್ ಮ್ಯಾನ್ ಪುನೀಶ್ ಶರ್ಮಾ 'ಬಿಗ್ ಬಾಸ್' ವಿಜೇತರಾಗುತ್ತಾರಾ.? ಅಸಲಿಗೆ ಈ ಪುನೀಶ್ ಶರ್ಮಾ ಹಿನ್ನಲೆ ಏನು.? ಸಂಪೂರ್ಣ ವರದಿ ಇಲ್ಲಿದೆ, ಓದಿರಿ...

ಪುನೀಶ್ ಶರ್ಮಾ ಎಲ್ಲಿಯವರು.?

ಗುರುಗ್ರಾಮ್, ದೆಹಲಿಯಲ್ಲಿ ಹುಟ್ಟಿ ಬೆಳೆದ ಪುನೀಶ್ ಶರ್ಮಾ ಅವರಿಗಿನ್ನೂ 28 ವರ್ಷ ವಯಸ್ಸು. ಕನ್ಸ್ಟ್ರಕ್ಷನ್ ಬಿಸಿನೆಸ್ ಮಾಡುವ ಪುನೀಶ್ ಶರ್ಮಾ ಸದ್ಯ 'ಬಿಗ್ ಬಾಸ್ 11' ಗ್ರ್ಯಾಂಡ್ ಫಿನಾಲೆ ಹಂತ ತಲುಪಿರುವ ಏಕೈಕ ಕಾಮನ್ ಮ್ಯಾನ್.

'ಬಿಗ್ ಬಾಸ್' ಮನೆಯಲ್ಲಿ ಲಿಪ್ ಲಾಕ್ ಮಾಡಿದ 'ಲವ್ ಬರ್ಡ್ಸ್'.!

ಲವ್ ಸ್ಟೋರಿ

'ಬಿಗ್ ಬಾಸ್ 11' ಕಾರ್ಯಕ್ರಮದಲ್ಲಿ ಮೊದಲ ಆರೇಳು ವಾರ ಪುನೀಶ್ ಶರ್ಮಾ ಸದ್ದು ಮಾಡಿದ್ದೇ ಲವ್ ಸ್ಟೋರಿ ಮೂಲಕ. ಸಹ ಸ್ಪರ್ಧಿ ಬಂದಗಿ ಕಾಲ್ರಾ ಜೊತೆಗಿನ ವಿಪರೀತ ಆತ್ಮೀಯತೆಯಿಂದಾಗಿ ಪುನೀಶ್ ಹೆಡ್ ಲೈನ್ಸ್ ಮಾಡಿದ್ದರು.

ಲಿಪ್ ಲಾಕ್ ನಂತರ 'ಬಾತ್ ರೂಂ'ನಲ್ಲಿ ಲಾಕ್ ಆದ ಬಿಗ್ ಬಾಸ್ ಜೋಡಿ

ಕಿರುತೆರೆಗೆ ಹೊಸಬರೇನೂ ಅಲ್ಲ.!

2009 ರಲ್ಲಿ ಪ್ರಸಾರವಾದ 'ಸರ್ಕಾರ್ ಕಿ ದುನಿಯಾ' ಎಂಬ ರಿಯಾಲಿಟಿ ಶೋನಲ್ಲಿ ಪುನೀಶ್ ಶರ್ಮಾ ವಿಜೇತರಾಗಿದ್ದರು. ಹೀಗಾಗಿ, 'ಬಿಗ್ ಬಾಸ್' ಶೋ ಕೂಡ ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸ ಪುನೀಶ್ ಗಿದೆ. ಸೆಲೆಬ್ರಿಟಿಗಳ ಬದಲು ಕಾಮನ್ ಮ್ಯಾನ್ ಗೆಲ್ಲಬೇಕು ಎಂಬ ಆಸೆ ವೀಕ್ಷಕರಿಗೆ ಇದ್ದರೆ, ಪುನೀಶ್ ಖಂಡಿತ 'ಬಿಗ್ ಬಾಸ್ 11' ವಿನ್ನರ್ ಆಗಬಹುದು.

ಗ್ರ್ಯಾಂಡ್ ಫಿನಾಲೆ ಯಾವಾಗ.?

'ಬಿಗ್ ಬಾಸ್ 11' ಇದೇ ಭಾನುವಾರ (ಜನವರಿ 14) ರಂದು ರಾತ್ರಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಗೆಲುವಿನ ಕಿರೀಟ ಯಾರ ಮುಡಿಗೆ ಸೇರುತ್ತದೆಯೋ, ಕಾದು ನೋಡಬೇಕು.

English summary
Puneesh Sharma, Bigg Boss 11 Contestant, Grand Finalist is a commoner, who hails from Gurugram and has a construction business. Will Puneesh Sharma win #BB11 trophy.? Lets wait and watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X