»   » ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ 'ಬಿಗ್ ಬಾಸ್' ಫೈನಲಿಸ್ಟ್ ಶಿಲ್ಪಾ: ಯಾರೀಕೆ.?

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ 'ಬಿಗ್ ಬಾಸ್' ಫೈನಲಿಸ್ಟ್ ಶಿಲ್ಪಾ: ಯಾರೀಕೆ.?

Posted By:
Subscribe to Filmibeat Kannada

ಸುಮಾರು 19 ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯರಾಗಿ, ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿರುವ ನಟಿ ಶಿಲ್ಪಾ ಶಿಂಧೆ ಅದ್ಯಾವಾಗ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ರೋ... ಆಕೆಯ ಅಭಿಮಾನಿ ಬಳಗ ದಿನದಿಂದ ದಿನಕ್ಕೆ ಡಬಲ್ ಆಗ್ತಾ ಹೋಯ್ತು.!

ನಿಜ ಹೇಳ್ಬೇಕು ಅಂದ್ರೆ, ಶಿಲ್ಪಾ ಶಿಂಧೆ ಫೇಸ್ ಬುಕ್ ನಲ್ಲಾಗಲಿ, ಟ್ವಿಟ್ಟರ್ ನಲ್ಲಾಗಲಿ, ಇನ್ಸ್ಟಾಗ್ರಾಮ್ ನಲ್ಲಾಗಲಿ ಇಲ್ಲ. ತಮ್ಮ ಪರ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಟಿಂಗ್ ಮಾಡೋಕೆ, ಡ್ಯಾಮೇಜ್ ಕಂಟ್ರೋಲ್ ಮಾಡೋಕೆ ಶಿಲ್ಪಾ ಯಾರನ್ನೂ ನೇಮಿಸಿಲ್ಲ. ಹೀಗಿದ್ದರೂ, 'ಬಿಗ್ ಬಾಸ್' ಮನೆಯಲ್ಲಿ ಬಂಧಿಯಾಗಿರುವ ಶಿಲ್ಪಾ ಶಿಂಧೆ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದ್ದಾರೆ.

ಅತ್ತ 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಶಿಲ್ಪಾ ಎಲ್ಲರ ಮನ ಗೆಲ್ಲುತ್ತಿದ್ದರೆ, ಇತ್ತ ಟ್ವಿಟ್ಟರ್ ನಲ್ಲಿ #ShilpaWinningHearts, #WeStandByShilpa ಎಂಬ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಎಷ್ಟರ ಮಟ್ಟಿಗೆ ಅಂದ್ರೆ, 329K ಟ್ವೀಟ್ ಗಳು #ShilpaWinningHearts ಎಂಬ ಹ್ಯಾಶ್ ಟ್ಯಾಗ್ ಹೊಂದಿದ್ರೆ, #WeStandByShilpa ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ 500K ಟ್ವೀಟ್ ಗಳಿದ್ವು.

ಕಿರುತೆರೆಯ ಇತಿಹಾಸದಲ್ಲಿಯೇ, 'ಬಿಗ್ ಬಾಸ್' ಹಿಸ್ಟ್ರಿಯಲ್ಲಿಯೇ ಈ ಮಟ್ಟಕ್ಕೆ ಜನ ಬೆಂಬಲ ಹಾಗೂ ಟ್ರೆಂಡ್ ಆಗಿರುವ ಮೊದಲ ಹಾಗೂ ಏಕೈಕ ಸ್ಪರ್ಧಿ ಅಂದ್ರೆ ಅದು ನಟಿ ಶಿಲ್ಪಾ ಶಿಂಧೆ. ಅಷ್ಟಕ್ಕೂ, ಯಾರೀ ಶಿಲ್ಪಾ ಶಿಂಧೆ.? ಆಕೆಯ ಹಿನ್ನಲೆ ಏನು.? ಸಂಪೂರ್ಣ ವಿವರ ಇಲ್ಲಿದೆ ಓದಿರಿ...

ಯಾರು ಈ ಶಿಲ್ಪಾ ಶಿಂಧೆ.?

ಮುಂಬೈನಲ್ಲಿ ಹುಟ್ಟಿ ಬೆಳೆದ ಶಿಲ್ಪಾ ಶಿಂಧೆ, ಬಣ್ಣದ ಬದುಕಿಗೆ ಕಾಲಿಟ್ಟಿದ್ದು 1999 ರಲ್ಲಿ. 'ಬಾಭಿ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡ ಶಿಲ್ಪಾ ಶಿಂಧೆ, 'ಕಭಿ ಆಯೇ ನಾ ಜುದಾಯಿ', 'ಸಂಜೀವಿನಿ', 'ಆಮ್ರಪಾಲಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಮಿಂಚಿದರು.

ಬಿಗ್ ಬಾಸ್: ಎಲಿಮಿನೇಟ್ ಆಗಿದ್ದಕ್ಕೆ ಸಲ್ಮಾನ್ ವಿರುದ್ಧ ದೂರಿತ್ತ ಸ್ಪರ್ಧಿ

'ಮಿಸ್ ಇಂಡಿಯಾ'

2004 ರಲ್ಲಿ ಡಿಡಿ ನ್ಯಾಷನಲ್ ನಲ್ಲಿ ಪ್ರಸಾರವಾದ ಡ್ರಾಮಾ ಸರಣಿ 'ಮಿಸ್ ಇಂಡಿಯಾ'ದಲ್ಲೂ ಶಿಲ್ಪಾ ಶಿಂಧೆ ಕಾಣಿಸಿಕೊಂಡಿದ್ದರು.

ಸಾಲು ಸಾಲು ಧಾರಾವಾಹಿಗಳು

'ವಾರಿಸ್', 'ಚಿಡಿಯಾ ಘರ್', 'ದೋ ದಿಲ್ ಏಕ್ ಜಾನ್', 'ದೇವೋಂಕೆ ದೇವ್ ಮಹಾದೇವ್' ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿ ಬೃಹತ್ ಅಭಿಮಾನಿ ಬಳಗವನ್ನು ಹೊಂದಿದ್ದ ಶಿಲ್ಪಾ ಶಿಂಧೆ 2016 ರಲ್ಲಿ ವಿವಾದದ ಸುಳಿಯಲ್ಲಿ ಸಿಲುಕಿದರು.

ವಿವಾದದ ಸುಳಿಯಲ್ಲಿ ಶಿಲ್ಪಾ

&TV ಯಲ್ಲಿ ಪ್ರಸಾರ ಆಗುತ್ತಿದ್ದ 'ಬಾಭಿ ಜಿ ಘರ್ ಪರ್ ಹೇ' ಧಾರಾವಾಹಿಯಲ್ಲಿ 'ಅಂಗೂರಿ ಬಾಭಿ'ಯಾಗಿ ಫೇಮಸ್ ಆಗಿದ್ದ ಶಿಲ್ಪಾ ಇದ್ದಕ್ಕಿದ್ದಂತೆ ಇದೇ ಧಾರಾವಾಹಿಯಿಂದ ಹೊರಬಂದರು. ಬಳಿಕ ಧಾರಾವಾಹಿಯ ಪ್ರೊಡಕ್ಷನ್ ಹೌಸ್ ಹಾಗೂ ಶಿಲ್ಪಾ ಶಿಂಧೆ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆ ಆಯ್ತು.

ಬೆಂಬಿಡದ ವಿಕಾಸ್ ಗುಪ್ತಾ

'ಬಾಭಿ ಜಿ ಘರ್ ಪರ್ ಹೇ' ಧಾರಾವಾಹಿಯಿಂದ ಶಿಲ್ಪಾ ಶಿಂಧೆ ಹೊರಬರಲು ಪ್ರಮುಖ ಕಾರಣ &TV ವಾಹಿನಿಯ ಪ್ರೋಗ್ರಾಮಿಂಗ್ ಹೆಡ್ ವಿಕಾಸ್ ಗುಪ್ತ ಎಂದೂ ಹೇಳಲಾಗಿತ್ತು. ಇದೇ ವಿಕಾಸ್ ಗುಪ್ತ ಸದ್ಯ ಶಿಲ್ಪಾ ಶಿಂಧೆ ಜೊತೆ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗಿದ್ದಾರೆ.

ವಿಕಾಸ್ ವರ್ಸಸ್ ಶಿಲ್ಪಾ

ವಿಕಾಸ್ ಗುಪ್ತಾ ಹಾಗೂ ಶಿಲ್ಪಾ ಶಿಂಧೆ ನಡುವಿನ ವೈಮನಸ್ಯ 'ಬಿಗ್ ಬಾಸ್' ಮನೆಯೊಳಗೂ ಮುಂದುವರೆಯಿತು. ಮೊದಲ ಐದು-ಆರು ವಾರಗಳ ಕಾಲ ವಿಕಾಸ್ ಹಾಗೂ ಶಿಲ್ಪಾ ನಡುವೆ ದೊಡ್ಡ ರಾಮಾಯಣವೇ ನಡೆದು ಹೋಯ್ತು.

ಒಮ್ಮೆ ಗೆಳೆತನ, ಇನ್ನೊಮ್ಮೆ ಹಗೆತನ

'ಬಿಗ್ ಬಾಸ್' ಮನೆಯೊಳಗೆ ಯಾರ ಮನಸ್ಸು ಯಾವಾಗ ಬದಲಾಗುತ್ತದೆ ಎಂದು ಹೇಳುವುದೇ ಕಷ್ಟ. ಹಾಗೇ, ಶಿಲ್ಪಾ ಹಾಗೂ ವಿಕಾಸ್ ನಡುವೆ ಇದ್ದ ವೈಮನಸ್ಯ ಕಳೆದು ಹೋಗಿ ಗೆಳೆತನ ಆರಂಭ ಆಯ್ತು. ಮಧ್ಯೆದಲ್ಲಿ ಆಗಾಗ ಇಬ್ಬರ ನಡುವೆ ಸಮರ ನಡೆದರೂ, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಮುರಿದು ಬಿತ್ತು ಮದುವೆ, ಸಿಂಗಲ್ ಆಗಿರುವ ಶಿಲ್ಪಾ

ಕಿರುತೆರೆ ನಟ ರೋಮಿತ್ ರಾಜ್ ರನ್ನ ಪ್ರೀತಿಸಿ, ಮದುವೆ ಆಗಲು ಶಿಲ್ಪಾ ಶಿಂಧೆ ತುದಿಗಾಲಲ್ಲಿದ್ದರು. ಮದುವೆಗೆ ಸಕಲ ತಯಾರಿ ಕೂಡ ನಡೆದಿತ್ತು. ಇನ್ನೇನು ವಿವಾಹ ನಡೆದೇ ಹೋಯ್ತು ಎನ್ನುವಷ್ಟರಲ್ಲಿ ಶಿಲ್ಪಾ-ರೋಮಿತ್ ಮದುವೆ ಮುರಿದು ಬಿತ್ತು. ಅಂದಿನಿಂದ ಇಂದಿನವರೆಗೂ ಶಿಲ್ಪಾ ಸಿಂಗಲ್ ಆಗೇ ಇದ್ದಾರೆ. ಹೀಗಿದ್ದರೂ, 'ಬಿಗ್ ಬಾಸ್' ಮನೆಯೊಳಗೆ 'ಅಮ್ಮ'ನಾಗೂ ಜನಪ್ರಿಯತೆ ಪಡೆದರು.

ಕಿಚನ್ ರಾಣಿ ಶಿಲ್ಪಾ

'ಬಿಗ್ ಬಾಸ್' ಮನೆಯೊಳಗೆ ಶಿಲ್ಪಾ ಹೆಚ್ಚು ಕಾಣಿಸಿಕೊಂಡಿದ್ದು ಅಡುಗೆ ಮನೆಯಲ್ಲಿ. ಎಲ್ಲ ಸದಸ್ಯರಿಗೂ ರುಚಿ ರುಚಿಯಾಗಿ ಅಡುಗೆ ಮಾಡುವ ಶಿಲ್ಪಾ, ವೀಕ್ಷಕರ ಮನವನ್ನೂ ಅಡುಗೆ ಮನೆಯಿಂದಲೇ ಗೆದ್ದಿದ್ದಾರೆ.

ಎಲ್ಲರ ನೆಚ್ಚಿನ ಸ್ಪರ್ಧಿ

ಅಡುಗೆ ಮನೆಯಲ್ಲೇ ಹೆಚ್ಚು ಕಾಲ ಕಳೆದ ಶಿಲ್ಪಾ, ಸರಿಯಾಗಿ ಟಾಸ್ಕ್ ಗಳಲ್ಲಿ ಭಾಗಿಯಾಗಲಿಲ್ಲ ಎಂಬ ಆರೋಪ ಕೂಡ ಅವರ ಮೇಲೆ ಇದೆ. ಹೀಗಿದ್ದರೂ, ಘನತೆ ಕಾಪಾಡಿಕೊಂಡ ಶಿಲ್ಪಾ ಶಿಂಧೆ ಇದೀಗ ಟಾಪ್ 4 ಹಂತಕ್ಕೆ ಬಂದು (ಗ್ರ್ಯಾಂಡ್ ಫಿನಾಲೆ) ಗೆಲ್ಲುವ ನೆಚ್ಚಿನ ಸ್ಪರ್ಧಿ ಆಗಿದ್ದಾರೆ.

ಗೆಲುವಿನ ನಗೆ ಬೀರುತ್ತಾರಾ ಶಿಲ್ಪಾ.?

ಸೋಷಿಯಲ್ ಮೀಡಿಯಾದಲ್ಲಿ ಇಲ್ಲದೆ ಇದ್ದರೂ, ಶಿಲ್ಪಾ ಶಿಂಧೆ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿದೆ. 'ಬಿಗ್ ಬಾಸ್ 11' ಟ್ರೋಫಿ ಶಿಲ್ಪಾ ಶಿಂಧೆ ಪಾಲಾಗಲಿದೆ ಎಂದೇ ಕಿರುತೆರೆ ಲೋಕದ ಹಲವು ಕಲಾವಿದರು ಭವಿಷ್ಯ ನುಡಿದಿದ್ದಾರೆ.

ಗ್ರ್ಯಾಂಡ್ ಫಿನಾಲೆ ಯಾವಾಗ.?

'ಬಿಗ್ ಬಾಸ್ 11' ಇದೇ ಭಾನುವಾರ (ಜನವರಿ 14) ರಂದು ರಾತ್ರಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಗೆಲುವಿನ ಕಿರೀಟ ಯಾರ ಮುಡಿಗೆ ಸೇರುತ್ತದೆಯೋ, ಕಾದು ನೋಡಬೇಕು.

English summary
Shilpa Shinde, Bigg Boss 11 Contestant, Grand Finalist is an Indian Television Actress. She is best known for playing Angoori Bhabi in Bhabhi Ji Ghar Par Hai. Will Shilpa Shinde win #BB11 trophy.? Lets wait and watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X