»   » ಯಾರೀ 'ಬಿಗ್ ಬಾಸ್' ಮಾಸ್ಟರ್ ಮೈಂಡ್ ವಿಕಾಸ್ ಗುಪ್ತ.?

ಯಾರೀ 'ಬಿಗ್ ಬಾಸ್' ಮಾಸ್ಟರ್ ಮೈಂಡ್ ವಿಕಾಸ್ ಗುಪ್ತ.?

Posted By:
Subscribe to Filmibeat Kannada

'ಬಿಗ್ ಬಾಸ್' ಯಾವುದೇ ಚಟುವಟಿಕೆ ಕೊಡಲಿ... ಅದನ್ನ ''ಹೀಗೆ ಮಾಡಬೇಕು, ಹೀಗೆ ಮಾಡಿದರೆ... ಹೀಗೆ ಆಗುತ್ತೆ'' ಎಂದು ಲೆಕ್ಕಾಚಾರ ಹಾಕಿ, ಹಲವು ಸ್ಪರ್ಧಿಗಳಿಗೆ ಮನೆ ಕಡೆ ದಾರಿ ತೋರಿಸಿರುವ, ''ಬಿಗ್ ಬಾಸ್ 11' ರ ಮಾಸ್ಟರ್ ಮೈಂಡ್'' ಎಂದೇ ಖ್ಯಾತಿ ಗಳಿಸಿರುವ ಸ್ಪರ್ಧಿ ವಿಕಾಸ್ ಗುಪ್ತ.

ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ವಿಕಾಸ್ ಗುಪ್ತ ಸದ್ಯ 'ಬಿಗ್ ಬಾಸ್ 11' ರ ಗ್ರ್ಯಾಂಡ್ ಫೈನಲಿಸ್ಟ್. ಬಾಲಿವುಡ್ ನ ಸ್ಮಾಲ್ ಸ್ಕ್ರೀನ್ ಲೋಕವೇ ವಿಕಾಸ್ ಗುಪ್ತ ಗೆಲುವಿಗೆ ಸಪೋರ್ಟ್ ಮಾಡುತ್ತಿದೆ.

'ಎ ಲಾಸ್ಟ್ ಬಾಯ್ ಪ್ರೊಡಕ್ಷನ್ಸ್' ಎಂಬ ಪ್ರೊಡಕ್ಷನ್ ಹೌಸ್ ಹೊಂದಿರುವ ವಿಕಾಸ್ ಗುಪ್ತ 'ಬಿಗ್ ಬಾಸ್ 11' ಗೆಲ್ಲಲು ಯಶಸ್ವಿ ಆಗ್ತಾರಾ.? ಈ ಪ್ರಶ್ನೆಗೆ ಇದೇ ಭಾನುವಾರ ಉತ್ತರ ಸಿಗಲಿದೆ. ಅದಕ್ಕೂ ಮುನ್ನ 'ಮಾಸ್ಟರ್ ಮೈಂಡ್' ವಿಕಾಸ್ ಗುಪ್ತ ಯಾರು ಅಂತ ನೋಡ್ಕೊಂಡ್ ಬರೋಣ ಬನ್ನಿ...

ಯಾರೀ ವಿಕಾಸ್ ಗುಪ್ತ.?

ದೆಹ್ರಾದೂನ್ ನಲ್ಲಿ ಹುಟ್ಟಿದ ವಿಕಾಸ್, ಬೆಳೆದಿದ್ದೆಲ್ಲ ಮುಂಬೈನಲ್ಲಿ. ಟೆಲಿವಿಷನ್ ಶೋ ಪ್ರೊಡ್ಯೂಸರ್, ಕ್ರಿಯೇಟಿವ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿರುವ ವಿಕಾಸ್ ಗುಪ್ತ ಸದ್ಯ 'ಎ ಲಾಸ್ಟ್ ಬಾಯ್ ಪ್ರೊಡಕ್ಷನ್ಸ್' ಎಂಬ ಸ್ವಂತ ಪ್ರೊಡಕ್ಷನ್ ಹೌಸ್ ತೆರೆದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿರುವ 'ಬಿಗ್ ಬಾಸ್' ಫೈನಲಿಸ್ಟ್ ಶಿಲ್ಪಾ: ಯಾರೀಕೆ.?

ಸೀರಿಯಲ್ ನಿರ್ಮಾಪಕ

ತಮ್ಮ 'ಲಾಸ್ಟ್ ಬಾಯ್ ಪ್ರೊಡಕ್ಷನ್ಸ್' ಮೂಲಕ 'ಗುಮ್ರಾಹ್: ಎಂಡ್ ಆಫ್ ಇನ್ನೊಸೆನ್ಸ್', 'ಯೇ ಹೇ ಆಶಿಕಿ' ಹಾಗೂ 'ಎಂ.ಟಿ.ವಿ ವೆಬ್ಡ್' ಧಾರಾವಾಹಿಗಳನ್ನ ನಿರ್ಮಾಣ ಮಾಡಿದ್ದಾರೆ ವಿಕಾಸ್ ಗುಪ್ತ. ನಿರ್ಮಾಣದ ಜೊತೆಗೆ ಸ್ಕ್ರಿಪ್ಟ್ ರೈಟಿಂಗ್ ನಲ್ಲೂ ವಿಕಾಸ್ ಗುಪ್ತ ಎತ್ತಿದ ಕೈ.

ಶಿಲ್ಪಾ ವರ್ಸಸ್ ವಿಕಾಸ್

ಕಿರುತೆರೆ ಲೋಕದಲ್ಲಿ ದೊಡ್ಡ ಹೆಸರು ಮಾಡಿರುವ ವಿಕಾಸ್ ಗುಪ್ತ ಸದ್ಯ 'ಬಿಗ್ ಬಾಸ್' ಮನೆ ಸೇರಿದ್ದಾರೆ. ಕಿರುತೆರೆ ನಟಿ ಶಿಲ್ಪಾ ಶಿಂಧೆ ಜೊತೆ ಭಿನ್ನಾಭಿಪ್ರಾಯ ಹೊಂದಿದ್ದ ವಿಕಾಸ್, ಅದೇ ಶಿಲ್ಪಾ ಶಿಂಧೆ ಜೊತೆ 'ಬಿಗ್ ಬಾಸ್' ಮನೆಯಲ್ಲಿ ಬಂಧಿಯಾಗಿದ್ದಾರೆ.

ಮಾಸ್ಟರ್ ಮೈಂಡ್ ವಿಕಾಸ್

'ಬಿಗ್ ಬಾಸ್' ಮನೆಯೊಳಗೆ ಮೊದಲ ಐದು-ಆರು ವಾರಗಳ ಕಾಲ ಶಿಲ್ಪಾ ಶಿಂಧೆ ಜೊತೆಗೆ ವೈಮನಸ್ಯ ಮುಂದುವರೆಸಿದ ವಿಕಾಸ್, ಬಳಿಕ ಶಿಲ್ಪಾ ಶಿಂಧೆ ಮನಗೆದ್ದು ಗೆಳೆತನ ಆರಂಭಿಸಿದರು. ಶಿಲ್ಪಾ ಶಿಂಧೆ ಜೊತೆಗೆ ಒಂದು ಶೋ ಮಾಡುವ ಬಗ್ಗೆ ಕೂಡ ಇದೇ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪ್ರಸ್ತಾಪ ಮಾಡಿದರು.

'ಬಿಗ್ ಬಾಸ್' ವಿನ್ನರ್ ಆಗ್ತಾರಾ ವಿಕಾಸ್.?

ಎಲ್ಲ ಚಟುವಟಿಕೆಗಳನ್ನೂ ಅಳೆದು-ತೂಗಿ ಪರ್ಫಾಮ್ ಮಾಡುತ್ತಿರುವ ವಿಕಾಸ್ ಸದ್ಯ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದ್ದಾರೆ. ಸದ್ಯ 'ಬಿಗ್ ಬಾಸ್' ಮನೆಯೊಳಗೆ ಡಿಕ್ಟೇಟರ್ ಆಗಿರುವ ವಿಕಾಸ್, 'ಬಿಗ್ ಬಾಸ್ 11' ವಿಜೇತರಾಗುತ್ತಾರಾ.?

ಗ್ರ್ಯಾಂಡ್ ಫಿನಾಲೆ ಯಾವಾಗ.?

'ಬಿಗ್ ಬಾಸ್ 11' ಇದೇ ಭಾನುವಾರ (ಜನವರಿ 14) ರಂದು ರಾತ್ರಿ ಕಲರ್ಸ್ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಗೆಲುವಿನ ಕಿರೀಟ ಯಾರ ಮುಡಿಗೆ ಸೇರುತ್ತದೆಯೋ, ಕಾದು ನೋಡಬೇಕು.

English summary
Vikas Gupta, Bigg Boss 11 Contestant, Grand Finalist is an Indian Television show producer, creative director, screen writer. Will Vikas Gupta win #BB11 trophy.? Lets wait and watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X