'ಬಿಗ್ ಬಾಸ್' ಮನೆಯ ಮಹಾನುಭಾವ ಕರಣ್ವೀರ್ ಬೋರಾ ಬಗ್ಗೆ ನಿಮಗೆಷ್ಟು ಗೊತ್ತು.?

ಹಿಂದಿ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-12' ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. 'ಬಿಗ್ ಬಾಸ್-12' ವಿನ್ನರ್ ಯಾರಾಗುತ್ತಾರೆ ಎಂಬುದನ್ನು ತಿಳಿಯಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

'ಬಿಗ್ ಬಾಸ್-12' ಟಾಪ್ 5 ಹಂತಕ್ಕೆ ಕಿರುತೆರೆ ನಟ ಕರಣ್ವೀರ್ ಬೋರಾ ತಲುಪಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಇವರು 'ಮಹಾನುಭಾವ' ಅಂತಲೇ ಫೇಮಸ್. ಇಲ್ಲಿಯವರೆಗೂ ಯಾವುದೇ ವಿವಾದಗಳಿಗೆ ಸಿಲುಕದ ಕರಣ್ವೀರ್ ಬೋರಾ ಸಲೀಸಾಗಿ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಯಾವ ಗುಂಪಿಗೂ ಸೇರದೆ, ಬಹುತೇಕ 'ಒಂಟಿ'ಯಾಗಿದ್ದ ಕರಣ್ವೀರ್ ಬೋರಾಗೆ ವೀಕ್ಷಕರ ಬೆಂಬಲ ಸಿಗುತ್ತಾ.? ಕರಣ್ವೀರ್ ಬೋರಾ 'ಬಿಗ್ ಬಾಸ್' ವಿನ್ನರ್ ಆಗ್ತಾರಾ.? ಅಂತ ತಿಳಿದುಕೊಳ್ಳುವ ಮುನ್ನ 'ಬಿಗ್ ಬಾಸ್' ಮನೆಯಲ್ಲಿ ಕರಣ್ವೀರ್ ಬೋರಾ ಜರ್ನಿ ಹೇಗಿತ್ತು ಅಂತ ನೋಡಿಕೊಂಡು ಬರೋಣ ಬನ್ನಿ...

ಯಾರೀ ಕರಣ್ವೀರ್ ಬೋರಾ.?

ಯಾರೀ ಕರಣ್ವೀರ್ ಬೋರಾ.?

ಫಿಲ್ಮ್ ಮೇಕರ್ ಮಹೇಂದ್ರ ಬೋರಾ ಪುತ್ರ ಈ ಕರಣ್ವೀರ್ ಬೋರಾ. ಕಿರುತೆರೆಯಲ್ಲಿ 'ಕಸೌತಿ ಝಿಂದಗಿ ಕೇ', 'ಸೌಭಾಗ್ಯವತಿ ಭವಃ', 'ಶರಾರತ್', 'ನಾಗಿನ್-2' ಮುಂತಾದ ಧಾರಾವಾಹಿಯಲ್ಲಿ ಕರಣ್ವೀರ್ ಬೋರಾ ನಟಿಸಿದ್ದಾರೆ. 'ಕಿಸ್ಮತ್ ಕನೆಕ್ಷನ್' ಸೇರಿದಂತೆ ಹಲವು ಸಿನಿಮಾಗಳಲ್ಲೂ ಕರಣ್ವೀರ್ ಬೋರಾ ಅಭಿನಯಿಸಿದ್ದಾರೆ. 'ಝಲಕ್ ದಿಖಲಾಜಾ-6', 'ಖತರೋಂಕೆ ಖಿಲಾಡಿ' ಸೇರಿದಂತೆ ಅನೇಕ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿರುವ ಕರಣ್ವೀರ್ ಬೋರಾ ಇದೀಗ 'ಬಿಗ್ ಬಾಸ್-12' ಫೈನಲಿಸ್ಟ್.

ಕರಣ್ವೀರ್ ಕಾಲೆಳೆದ ಸಲ್ಮಾನ್ ಖಾನ್

ಕರಣ್ವೀರ್ ಕಾಲೆಳೆದ ಸಲ್ಮಾನ್ ಖಾನ್

ಕರಣ್ವೀರ್ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಸಲ್ಮಾನ್ ಖಾನ್ ಸದಾ ಕಾಲೆಳೆಯುತ್ತಿರುತ್ತಾರೆ. ಕರಣ್ವೀರ್ ಕಂಡ್ರೆ ಸಾಕು ಸಲ್ಮಾನ್ ಖಾನ್ ಜೋಕ್ ಮಾಡುತ್ತಾರೆ. ಎಲ್ಲವನ್ನೂ ಹಸನ್ಮುಖಿ ಆಗಿಯೇ ಕರಣ್ವೀರ್ ಸ್ವೀಕರಿಸುತ್ತಾರೆ.

'ಮಹಾನುಭಾವ' ಕರಣ್ವೀರ್

'ಮಹಾನುಭಾವ' ಕರಣ್ವೀರ್

'ಬಿಗ್ ಬಾಸ್' ಮನೆಯಲ್ಲಿ ಹಲವು ಬಾರಿ ದೊಡ್ಡತನ ಪ್ರದರ್ಶಿಸಿ, 'ಮಹಾನುಭಾವ'ರಂತೆ ಬಿಂಬಿಸಿಕೊಂಡಿದ್ದಾರೆ ಕರಣ್ವೀರ್ ಬೋರಾ. ಇದೇ ಕಾರಣಕ್ಕೆ ಕರಣ್ವೀರ್ ಬೋರಾ ಟಾರ್ಗೆಟ್ ಕೂಡ ಆಗಿದ್ದರು.

ಶ್ರೀಶಾಂತ್ ಜೊತೆಗೆ ಜಗಳ

ಶ್ರೀಶಾಂತ್ ಜೊತೆಗೆ ಜಗಳ

ಮೊದಮೊದಲು ಶ್ರೀಶಾಂತ್ ಮತ್ತು ದೀಪಿಕಾ ಜೊತೆಗೆ ಕರಣ್ವೀರ್ ಚೆನ್ನಾಗಿಯೇ ಇದ್ದರು. ಆದರೆ ಬಳಿಕ ಆಟದ ಡೈನಾಮಿಕ್ಸ್ ಚೇಂಜ್ ಆಗುತ್ತಿದ್ದಂತೆಯೇ, ಶ್ರೀಶಾಂತ್ ಮತ್ತು ಕರಣ್ವೀರ್ ನಡುವೆ ವೈಮನಸ್ಯ ಮೂಡಿತು. ಇವರಿಬ್ಬರ ನಡುವೆ ಹಲವು ಬಾರಿ ವಾಗ್ಯುದ್ಧ ನಡೆದಿದೆ.

ಬಹುತೇಕ ಒಂಟಿ

ಬಹುತೇಕ ಒಂಟಿ

ದೀಪಿಕಾ ಮತ್ತು ಶ್ರೀಶಾಂತ್ ರಿಂದ ದೂರ ಸರಿದ ಮೇಲೆ ಸೃಷ್ಟಿ ರೋಡ್ ಮತ್ತು ದೀಪಕ್ ಠಾಕೂರ್ ಜೊತೆಗೆ ಕರಣ್ವೀರ್ ಕ್ಲೋಸ್ ಆಗಿದ್ದರು. ಅತ್ತ ಸೃಷ್ಟಿ ರೋಡ್ ಎಲಿಮಿನೇಟ್ ಆದರು. ಇತ್ತ ದೀಪಕ್ ಜೊತೆಗಿದ್ದರೂ, ಕರಣ್ವೀರ್ ಆಟಕ್ಕೆ ಯಾವುದೇ ಅನುಕೂಲ ಆಗಲಿಲ್ಲ.

ಕಾಫಿ-ಸಕ್ಕರೆ ಕದಿಯೋದು ಯಾಕೆ.?

ಕಾಫಿ-ಸಕ್ಕರೆ ಕದಿಯೋದು ಯಾಕೆ.?

'ಬಿಗ್ ಬಾಸ್' ಮನೆಯೊಳಗೆ ಕಾಫಿ ಮತ್ತು ಸಕ್ಕರೆಯನ್ನ ಕದ್ದು ಕರಣ್ವೀರ್ ಬೋರಾ ಮುಚ್ಚಿಟ್ಟುಕೊಳ್ತಿದ್ದರು. ಕರಣ್ ಹೀಗೆ ಯಾಕೆ ಮಾಡ್ತಿದ್ರು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

ತನಗಾಗಿ ಆಡಿಲ್ಲ.!

ತನಗಾಗಿ ಆಡಿಲ್ಲ.!

ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ, ತನಗಾಗಿ ಕರಣ್ವೀರ್ ಯಾವತ್ತೂ ಆಟ ಆಡಿಲ್ಲ. ಇನ್ನೊಬ್ಬರಿಗೆ ಆಟವನ್ನು ಬಿಟ್ಟುಕೊಟ್ಟು 'ಮಹಾನುಭಾವ'ರಾಗುತ್ತಿದ್ದರು ಕರಣ್ವೀರ್ ಬೋರಾ.

'ಬಿಗ್ ಬಾಸ್' ಟ್ರೋಫಿ ಗೆಲ್ಲುತ್ತಾರಾ ಕರಣ್ವೀರ್.?

'ಬಿಗ್ ಬಾಸ್' ಟ್ರೋಫಿ ಗೆಲ್ಲುತ್ತಾರಾ ಕರಣ್ವೀರ್.?

ಕಿರುತೆರೆ ನಟ ಆಗಿರುವ ಕರಣ್ವೀರ್ ಬೋರಾಗೆ ಫ್ಯಾನ್ ಫಾಲೋವಿಂಗ್ ತುಂಬಾ ಇದೆ. 'ಬಿಗ್ ಬಾಸ್' ಮನೆಯಲ್ಲಿ ದೊಡ್ಡತನ ಮೆರೆದಿರುವ ಕರಣ್ವೀರ್ ಕೈಗೆ ಟ್ರೋಫಿ ಸಿಗುತ್ತಾ.? ನೋಡೋಣ.

More from Filmibeat

English summary
Karanvir Bohra, Bigg Boss 12 Contestant, Grand Finalist is an Indian Television Actor. Will Karanvir Bohra win #BB12 trophy.? Lets wait and watch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X