twitter
    For Quick Alerts
    ALLOW NOTIFICATIONS  
    For Daily Alerts

    ಶ್ರೀಶಾಂತ್ ಎದುರು ತೊಡೆ ತಟ್ಟಿ ನಿಂತ ರೋಮಿಲ್ 'ಬಿಗ್ ಬಾಸ್' ಗೆಲ್ತಾರಾ.?

    |

    ''ನಾನು 'ಬಿಗ್ ಬಾಸ್' ಟ್ರೋಫಿಯನ್ನ ಎತ್ತಿ ಹಿಡಿಯುವೆ. ಇದನ್ನ ತಪ್ಪಿಸಲು ಯಾರಿಂದಲೂ ಸಾಧ್ಯ ಇಲ್ಲ'' ಎಂದು 'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ಎದುರು ತೊಡೆ ತಟ್ಟಿ ಹೇಳಿದವರು ರೋಮಿಲ್ ಚೌಧರಿ.

    ವೃತ್ತಿಯಲ್ಲಿ ವಕೀಲನಾಗಿರುವ ರೋಮಿಲ್ ಚೌಧರಿ 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಕಾಮನ್ ಮ್ಯಾನ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟರು. 'ಬಿಗ್ ಬಾಸ್' ಮನೆಯಲ್ಲಿ ಮೊದಮೊದಲು ಸೈಲೆಂಟ್ ಆಗಿದ್ದ ರೋಮಿಲ್ ಚೌಧರಿ ಆರಂಭದಲ್ಲೇ ಎಲಿಮಿನೇಟ್ ಕೂಡ ಆದರು.

    ಸೆಕೆಂಡ್ ಚಾನ್ಸ್ ಪಡೆದುಕೊಂಡ ರೋಮಿಲ್ ಚೌಧರಿ, ರೋಡೀಸ್ ಸ್ಪರ್ಧಿ ಸುರ್ಭಿ ರಾಣಾ ಜೊತೆಗೆ 'ಬಿಗ್ ಬಾಸ್' ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದರು. ಅಲ್ಲಿಂದ, ಕಾಮನ್ ಮ್ಯಾನ್ ಸ್ಪರ್ಧಿಗಳನ್ನೆಲ್ಲಾ ಒಟ್ಟಿಗೆ ಸೇರಿಸಿ 'ಹ್ಯಾಪಿ ಕ್ಲಬ್' ಶುರು ಮಾಡಿದ ರೋಮಿಲ್ 'ಬಿಗ್ ಬಾಸ್' ಮನೆಯಲ್ಲಿ ಉಳಿದುಕೊಳ್ಳಲು ಮಾಡಿದ ಸ್ಟ್ರಾಟೆಜಿ, ಗೇಮ್ ಪ್ಲಾನ್ ಒಂದೆರಡಲ್ಲ.

    'ಹ್ಯಾಪಿ ಕ್ಲಬ್' ಒಡೆದು ಚೂರು ಚೂರಾದರೂ, ಗ್ರ್ಯಾಂಡ್ ಫಿನಾಲೆವರೆಗೂ ರೋಮಿಲ್ ಚೌಧರಿ ಬಂದಿದ್ದಾರೆ. ಇನ್ನೊಬ್ಬರ ತಪ್ಪನ್ನು ಎತ್ತಿ ಹಿಡಿದು ಸದಾ ವಾದ ಮಾಡುವ ರೋಮಿಲ್ ಚೌಧರಿ 'ಬಿಗ್ ಬಾಸ್-12' ಗೆಲ್ತಾರಾ.? ಈ ಪ್ರಶ್ನೆಗೆ ಉತ್ತರ ಸಿಗುವ ಮುನ್ನ 'ಬಿಗ್ ಬಾಸ್' ಮನೆಯಲ್ಲಿ ರೋಮಿಲ್ ಚೌಧರಿ ಜರ್ನಿ ಹೇಗಿತ್ತು ಅಂತ ನೋಡಿಕೊಂಡು ಬರೋಣ ಬನ್ನಿ...

    ಯಾರೀ ರೋಮಿಲ್ ಚೌಧರಿ.?

    ಯಾರೀ ರೋಮಿಲ್ ಚೌಧರಿ.?

    ವೃತ್ತಿಯಲ್ಲಿ ವಕೀಲನಾಗಿರುವ ರೋಮಿಲ್ ಚೌಧರಿ, ತಮ್ಮ ಆಪ್ತ ಸ್ನೇಹಿತ ನಿರ್ಮಲ್ ಸಿಂಗ್ ಜೊತೆಗೆ 'ವಿಚಿತ್ರ ಜೋಡಿ' ಕಾನ್ಸೆಪ್ಟ್ ಅನ್ವಯ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು. ಮೊದಮೊದಲು ರೋಮಿಲ್-ನಿರ್ಮಲ್ ಜೋಡಿ ಅಂಥ ಕಮಾಲ್ ಏನೂ ಮಾಡಲಿಲ್ಲ. ಹೀಗಾಗಿ ಎಲಿಮಿನೇಟ್ ಆದರು.

    ಬಿಗ್ ಬಾಸ್-12: 'ಇವರೇ' ನೋಡಿ ವಿಚಿತ್ರ ಜೋಡಿಗಳು, ಸೆಲೆಬ್ರಿಟಿ ಸ್ಪರ್ಧಿಗಳು.! ಬಿಗ್ ಬಾಸ್-12: 'ಇವರೇ' ನೋಡಿ ವಿಚಿತ್ರ ಜೋಡಿಗಳು, ಸೆಲೆಬ್ರಿಟಿ ಸ್ಪರ್ಧಿಗಳು.!

    ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ರೋಮಿಲ್

    ವೈಲ್ಡ್ ಕಾರ್ಡ್ ಎಂಟ್ರಿಕೊಟ್ಟ ರೋಮಿಲ್

    'ಬಿಗ್ ಬಾಸ್' ಮನೆಯಿಂದ ನಿರ್ಮಲ್ ಸಿಂಗ್ ಮತ್ತು ರೋಮಿಲ್ ಚೌಧರಿ ಔಟ್ ಆದ್ಮೇಲೆ, ರೋಮಿಲ್ ಗೆ ಮಾತ್ರ ಸೆಕೆಂಡ್ ಚಾನ್ಸ್ ನೀಡಲಾಯಿತು. ಸುರ್ಭಿ ರಾಣಾ ಜೊತೆಗೆ 'ಜೋಡಿ'ಯಾಗಿ ರೋಮಿಲ್ ಪುನಃ 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟರು.

    'ಬಿಗ್ ಬಾಸ್' ವಿನ್ನರ್ ಆದವರು ಈಗೆಲ್ಲಿದ್ದಾರೆ.? ಏನು ಮಾಡುತ್ತಿದ್ದಾರೆ.? 'ಬಿಗ್ ಬಾಸ್' ವಿನ್ನರ್ ಆದವರು ಈಗೆಲ್ಲಿದ್ದಾರೆ.? ಏನು ಮಾಡುತ್ತಿದ್ದಾರೆ.?

    ಹ್ಯಾಪಿ ಕ್ಲಬ್ ಉದಯ

    ಹ್ಯಾಪಿ ಕ್ಲಬ್ ಉದಯ

    'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಉಳಿದುಕೊಳ್ಳಲು ಗೇಮ್ ಪ್ಲಾನ್ ರೂಪಿಸಿದ ರೋಮಿಲ್ ಚೌಧರಿ, ಕಾಮನ್ ಮ್ಯಾನ್ ಸ್ಪರ್ಧಿಗಳನ್ನೆಲ್ಲಾ ಒಟ್ಟುಗೂಡಿಸಿ 'ಹ್ಯಾಪಿ ಕ್ಲಬ್'ಗೆ ನಾಂದಿ ಹಾಡಿದರು.

    'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ತಲುಪಿರುವ ದೀಪಿಕಾ ಕಕ್ಕರ್ ಯಾರು.? 'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ತಲುಪಿರುವ ದೀಪಿಕಾ ಕಕ್ಕರ್ ಯಾರು.?

    ಸೆಲೆಬ್ರಿಟಿ ಸ್ಪರ್ಧಿಗಳಿಗೆ ಠಕ್ಕರ್ ನೀಡಿದ ರೋಮಿಲ್

    ಸೆಲೆಬ್ರಿಟಿ ಸ್ಪರ್ಧಿಗಳಿಗೆ ಠಕ್ಕರ್ ನೀಡಿದ ರೋಮಿಲ್

    ಸೆಲೆಬ್ರಿಟಿ ಸ್ಪರ್ಧಿಗಳಾದ ದೀಪಿಕಾ ಕಕ್ಕರ್, ಶ್ರೀಶಾಂತ್, ಮೇಘಾ ಧಾಡೆ ವಿರುದ್ಧ ತಿರುಗಿಬಿದ್ದ ರೋಮಿಲ್ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದರು. ಹ್ಯಾಪಿ ಕ್ಲಬ್ ಒಡೆದು ಚೂರು ಚೂರಾದ್ಮೇಲೆ ರೋಮಿಲ್ ಕೊಂಚ ಗಲಿಬಿಲಿಗೊಂಡಿದ್ದರು. ಆದ್ರೀಗ, ಹಾಗೂ ಹೀಗೂ ಗ್ರ್ಯಾಂಡ್ ಫಿನಾಲೆ ತಲುಪಿದ್ದಾರೆ.

    ಸೋಮಾರಿ ರೋಮಿಲ್

    ಸೋಮಾರಿ ರೋಮಿಲ್

    ರೋಮಿಲ್ ಚೌಧರಿ ಮೇಲಿರುವ ಬಹುದೊಡ್ಡ ಆಪಾದನೆ ಅಂದ್ರೆ ಆತ ಸೋಮಾರಿ. 'ಬಿಗ್ ಬಾಸ್' ಮನೆಯಲ್ಲಿ ಲೈಟ್ಸ್ ಆನ್ ಆದ್ಮೇಲೂ ನಿದ್ದೆ ಮಾಡಿ, ಹಲವು ಬಾರಿ ಇತರೆ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    'ಬಿಗ್ ಬಾಸ್' ಗೆಲ್ತಾರಾ ರೋಮಿಲ್.?

    'ಬಿಗ್ ಬಾಸ್' ಗೆಲ್ತಾರಾ ರೋಮಿಲ್.?

    'ಬಿಗ್ ಬಾಸ್' ಕಾರ್ಯಕ್ರಮದಿಂದ ಕಾಮನ್ ಮ್ಯಾನ್ ರೋಮಿಲ್ ಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಭಿಮಾನಿಗಳ ಕೃಪೆಯಿಂದ ರೋಮಿಲ್ 'ಬಿಗ್ ಬಾಸ್' ಗೆಲ್ಲುತ್ತಾರಾ.? ನೋಡೋಣ.

    English summary
    Romil Chaudhary, Bigg Boss 12 Contestant, Grand Finalist is a Lawyer. Will Romil Chaudhary win #BB12 trophy.? Lets wait and watch.
    Saturday, December 29, 2018, 16:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X