ಮಾಸ್ಟರ್ ಮೈಂಡ್ ಶ್ರೀಶಾಂತ್ 'ಬಿಗ್ ಬಾಸ್-12' ಗೆಲ್ಲೋದು ಖಚಿತ.?

'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಅತ್ಯಂತ ವಿವಾದಾತ್ಮಕ ಸ್ಪರ್ಧಿ ಯಾರು ಅಂತ ಕೇಳಿದ್ರೆ, ನಿಸ್ಸಂಶಯವಾಗಿ 'ಶ್ರೀಶಾಂತ್' ಎಂದು ಉತ್ತರ ಕೊಡಬಹುದು. ಅಷ್ಟರಮಟ್ಟಿಗೆ ಪ್ರತಿ ವಾರ ಒಂದಲ್ಲಾ ಒಂದು ವಿವಾದ, ಕಿತ್ತಾಟದಿಂದ 'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ಸದ್ದು ಮಾಡಿದ್ದಾರೆ.

ಐಪಿಎಲ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪ ಎದುರಿಸಿದ್ದ ಶ್ರೀಶಾಂತ್ 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಆಗಿ ಸರಾಗವಾಗಿ ಗ್ರ್ಯಾಂಡ್ ಫಿನಾಲೆವರೆಗೂ ಬಂದಿದ್ದಾರೆ.

''ಬಿಗ್ ಬಾಸ್' ಮನೆಯಲ್ಲಿ ಹಲವು ನಿಯಮಗಳನ್ನು ಮುರಿದಿದ್ದರೂ, ಶ್ರೀಶಾಂತ್ ಪರ 'ಬಿಗ್ ಬಾಸ್' ಆಯೋಜಕರು ಮೃದು ಧೋರಣೆ ಅನುಸರಿಸಿದ್ದಾರೆ. 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಶ್ರೀಶಾಂತ್ ರನ್ನ 'ಹೀರೋ' ಅಂತೆ ಬಿಂಬಿಸಲಾಗಿದೆ. ಈ ಬಾರಿಯ ವಿನ್ನರ್ ಶ್ರೀಶಾಂತ್ ಎಂಬುದು ಮೊದಲೇ 'ಫಿಕ್ಸ್' ಆಗಿದೆ'' ಎಂಬೆಲ್ಲಾ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.

'ಬಿಗ್ ಬಾಸ್' ಕಾರ್ಯಕ್ರಮದಿಂದ ಶ್ರೀಶಾಂತ್ ಗೆ ಎಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೋ, ಅಷ್ಟೇ ವಿರೋಧಿಗಳು ಕೂಡ ಇದ್ದಾರೆ. ಟ್ವಿಟ್ಟರ್ ಮತ್ತು ಫೇಸ್ ಬುಕ್ ನಲ್ಲಿ ಶ್ರೀಶಾಂತ್ ಪರ-ವಿರೋಧ ಚರ್ಚೆ ಜೋರಾಗಿ ನಡೆಯುತ್ತಿದೆ.

'ಬಿಗ್ ಬಾಸ್' ಮನೆಯಲ್ಲಿ ತಮ್ಮ ಕ್ರಿಕೆಟ್ ಜೀವನದ ಹಲವು ಸತ್ಯಗಳನ್ನು ಬಾಯಿ ಬಿಟ್ಟಿರುವ ಶ್ರೀಶಾಂತ್ 'ಬಿಗ್ ಬಾಸ್' ಟ್ರೋಫಿ ಗೆಲ್ಲುತ್ತಾರಾ.? ಈ ಪ್ರಶ್ನೆಗೆ ಉತ್ತರ ಸಿಗುವ ಮುನ್ನ 'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ಜರ್ನಿ ಹೇಗಿತ್ತು ಅಂತ ನೋಡಿಕೊಂಡು ಬರೋಣ ಬನ್ನಿ...

ಮಾಜಿ ಕ್ರಿಕೆಟರ್ ಶ್ರೀಶಾಂತ್

ಮಾಜಿ ಕ್ರಿಕೆಟರ್ ಶ್ರೀಶಾಂತ್

ಸ್ಪಾಟ್ ಫಿಕ್ಸಿಂಗ್ ಕೇಸ್ ನಲ್ಲಿ ಆರೋಪ ಎದುರಿಸಿದ್ದ ಕ್ರಿಕೆಟರ್ ಶ್ರೀಶಾಂತ್ ಅವರಿಗೆ ಜೀವನ ಪರ್ಯಂತ ನಿಷೇಧ ಹೇರಲಾಗಿದೆ. ಕ್ರಿಕೆಟ್ ಅಂಗಳದಲ್ಲಿ ಅತಿರೇಕದ ವರ್ತನೆಯಿಂದ ಸದ್ದು ಮಾಡಿದ್ದ ಶ್ರೀಶಾಂತ್, ಭಾವಾವೇಶಕ್ಕೆ ಒಳಗಾಗಿ ಹರ್ಭಜನ್ ಸಿಂಗ್ ಕೈಯಲ್ಲಿ ಏಟು ತಿಂದಿದ್ದು ನಿಮಗೆಲ್ಲಾ ಗೊತ್ತೇ ಇದೆ. ಕಾಂಟ್ರೋವರ್ಸಿಗಳಿಂದಲೇ ಸೌಂಡ್ ಮಾಡಿದ ಶ್ರೀಶಾಂತ್, 'ಬಿಗ್ ಬಾಸ್' ಮನೆಯಲ್ಲೂ ಸುಮ್ಮನೆ ಇರಲಿಲ್ಲ.

ಪದೇ ಪದೇ 'ಹೊರಗೆ ಹೋಗುವೆ' ಎನ್ನುತ್ತಿದ್ದ ಶ್ರೀಶಾಂತ್

ಪದೇ ಪದೇ 'ಹೊರಗೆ ಹೋಗುವೆ' ಎನ್ನುತ್ತಿದ್ದ ಶ್ರೀಶಾಂತ್

'ಬಿಗ್ ಬಾಸ್' ಮನೆಯಲ್ಲಿ ವಾಕ್ಸಮರ ನಡೆದಾಗ, ಯಾರಾದರೂ ಕೇವಲವಾಗಿ ಮಾತನಾಡಿದಾಗ, ಇತರೆ ಸ್ಪರ್ಧಿಗಳು ಬೆಟ್ಟು ಮಾಡಿ ತೋರಿಸಿದಾಗ... ''ಬಾಗಿಲು ತೆಗೆಯಿರಿ ಬಿಗ್ ಬಾಸ್, ನಾನು ಇಲ್ಲಿ ಇರಲ್ಲ. ನಾನು ಹೊರಗೆ ಹೋಗುವೆ'' ಅಂತ ಶ್ರೀಶಾಂತ್ ಬೆದರಿಸುತ್ತಿದ್ದರು. ಭಾವಾವೇಶದಿಂದ ಕಣ್ಣೀರು ಸುರಿಸುತ್ತಿದ್ದರು. ಬಾತ್ ರೂಮ್ ಒಳಗೆ ಹೋಗಿ ಕೈ-ತಲೆಗೆ ಪೆಟ್ಟು ಮಾಡಿಕೊಳ್ಳುತ್ತಿದ್ದರು. ಇದನ್ನೆಲ್ಲ ಗಮನಿಸಿದ 'ಬಿಗ್ ಬಾಸ್' ಶ್ರೀಶಾಂತ್ ರನ್ನ ಕನ್ಫೆಶನ್ ರೂಮ್ ಒಳಗೆ ಕರೆದು ಸಮಾಧಾನ ಪಡಿಸಿದ ಉದಾಹರಣೆಯೂ ಇದೆ.

ಶ್ರೀಶಾಂತ್ ಬೆನ್ನಿಗೆ ನಿಂತ ದೀಪಿಕಾ

ಶ್ರೀಶಾಂತ್ ಬೆನ್ನಿಗೆ ನಿಂತ ದೀಪಿಕಾ

'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ತಾಳ್ಮೆ ಕಳೆದುಕೊಂಡಾಗ, ಶ್ರೀಶಾಂತ್ ಸಹನೆಯ ಕಟ್ಟೆ ಒಡೆದಾಗ, ಭಾವೋದ್ವೇಗಕ್ಕೆ ಒಳಗಾದಾಗ.. ಸದಾ ಅವರ ಬೆನ್ನಿಗೆ ನಿಂತಿದ್ದು ಕಿರುತೆರೆ ನಟಿ ದೀಪಿಕಾ ಕಕ್ಕರ್. ಇದೇ ಕಾರಣಕ್ಕೆ, ದೀಪಿಕಾ ರನ್ನ 'ತಂಗಿ'ಯಂತೆ ಪ್ರೀತಿಯಿಂದ ಕಾಣುತ್ತಾರೆ ಶ್ರೀಶಾಂತ್.

ವಿವಾದಾತ್ಮಕ ಹೇಳಿಕೆಗಳು

ವಿವಾದಾತ್ಮಕ ಹೇಳಿಕೆಗಳು

ಅವಹೇಳನಕಾರಿಯಾಗಿ ಮಾತನಾಡುವುದರಿಂದ ಹಿಡಿದು ಸಹ ಸ್ಪರ್ಧಿಗಳ ಮೇಲೆ ಶ್ರೀಶಾಂತ್ ಮಾಡಿದ ಕೆಲ ಕಾಮೆಂಟ್ ಗಳು ವಿವಾದದ ಕೇಂದ್ರಬಿಂದು ಆಗಿತ್ತು. ಎಲ್ಲವನ್ನೂ ಸಲ್ಮಾನ್ ಖಾನ್ ಪ್ರಶ್ನಿಸಿದ ಮೇಲೆ ತಮ್ಮ ತಪ್ಪನ್ನ ಅರಿತು ಶ್ರೀಶಾಂತ್ ಕ್ಷಮೆಯನ್ನೂ ಕೇಳಿದ್ದರು.

ಬೇಕು ಅಂತ ಶ್ರೀಶಾಂತ್ ರನ್ನ ಕೆಣಕುತ್ತಿದ್ದ ಸ್ಪರ್ಧಿಗಳು

ಬೇಕು ಅಂತ ಶ್ರೀಶಾಂತ್ ರನ್ನ ಕೆಣಕುತ್ತಿದ್ದ ಸ್ಪರ್ಧಿಗಳು

ಚಟುವಟಿಕೆಗಳಲ್ಲಿ ಮೇಲುಗೈ ಸಾಧಿಸಲು ಇತರೆ ಸ್ಪರ್ಧಿಗಳು ಎಷ್ಟೋ ಬಾರಿ ಬೇಕು ಅಂತ ಶ್ರೀಶಾಂತ್ ರನ್ನ ಕೆಣಕಿದ್ದಾರೆ, ಕೆರಳಿಸಿದ್ದಾರೆ. ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಶ್ರೀಶಾಂತ್ ಬಾಯಿಗೆ ಬಂದ ಹಾಗೆ ಮಾತನಾಡಿದ್ದೂ ಇದೆ. ಬಳಿಕ ಶಿಕ್ಷೆಯ ರೂಪದಲ್ಲಿ 'ಬಿಗ್ ಬಾಸ್' ಮನೆಯಲ್ಲಿ ಹಲವು ಬಾರಿ ಜೈಲು ವಾಸ ಅನುಭವಿಸಿದ್ದಾರೆ ಶ್ರೀಶಾಂತ್.

ಸೀಕ್ರೆಟ್ ಬಿಚ್ಚಿಟ್ಟ ಶ್ರೀಶಾಂತ್

ಸೀಕ್ರೆಟ್ ಬಿಚ್ಚಿಟ್ಟ ಶ್ರೀಶಾಂತ್

ತಮ್ಮ ಕಪಾಳಕ್ಕೆ ಹರ್ಭಜನ್ ಸಿಂಗ್ ಹೊಡೆದಿದ್ದು ಯಾಕೆ.? ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದು ಯಾವಾಗ.? ಕೇರಳದಲ್ಲಿ ಕಳೆದ ಕಷ್ಟದ ದಿನಗಳು.. ಹೀಗೆ ತಮ್ಮ ಜೀವನದ ಹಲವು ಸೀಕ್ರೆಟ್ ಗಳನ್ನು ಶ್ರೀಶಾಂತ್ 'ಬಿಗ್ ಬಾಸ್' ಮನೆಯಲ್ಲಿ ಬಿಚ್ಚಿಟ್ಟಿದ್ದರು.

ಮಾಸ್ಟರ್ ಮೈಂಡ್ ಶ್ರೀಶಾಂತ್

ಮಾಸ್ಟರ್ ಮೈಂಡ್ ಶ್ರೀಶಾಂತ್

ಚಟುವಟಿಕೆಯಲ್ಲಿ ಗೆಲ್ಲದೇ ಹೋದರೂ, ತಮ್ಮ ಪ್ಲಾನ್ ಪ್ರಕಾರ ಆಟವನ್ನು ಮುನ್ನಡೆಸುವಲ್ಲಿ ಚಾಲಾಕಿತನ ತೋರಿದ್ದರು ಶ್ರೀಶಾಂತ್. ಕಾಲ ಕಾಲಕ್ಕೆ ಯಾರಿಗೆ ಸಪೋರ್ಟ್ ಕೊಡಬೇಕೋ ಅವರಿಗೆ ಶ್ರೀಶಾಂತ್ ಬೆಂಬಲ ನೀಡಿದ್ದರು.

ಗೆದ್ದೇ ಗೆಲ್ಲುವೆ.!

ಗೆದ್ದೇ ಗೆಲ್ಲುವೆ.!

'ಬಿಗ್ ಬಾಸ್ ಟ್ರೋಫಿಯನ್ನ ಗೆದ್ದೇ ಗೆಲ್ಲುವೆ' ಎಂಬ ಆತ್ಮವಿಶ್ವಾಸ, ನಂಬಿಕೆ ಶ್ರೀಶಾಂತ್ ರಲ್ಲಿದೆ. ಇದೇ ಕಾರಣಕ್ಕೆ, ಈತ 'ಫಿಕ್ಸ್ಡ್ ವಿನ್ನರ್' ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಶ್ರೀಶಾಂತ್ 'ಬಿಗ್ ಬಾಸ್' ಗೆಲ್ಲುತ್ತಾರಾ.?

ಶ್ರೀಶಾಂತ್ 'ಬಿಗ್ ಬಾಸ್' ಗೆಲ್ಲುತ್ತಾರಾ.?

'ಬಿಗ್ ಬಾಸ್' ಮನೆಯಲ್ಲಿ ಶ್ರೀಶಾಂತ್ ರಿಂದ ಬೇಕಾದಷ್ಟು ತಪ್ಪುಗಳಾಗಿವೆ ನಿಜ. ಆದ್ರೆ, ಎಲ್ಲದಕ್ಕೂ ಕ್ಷಮೆ ಕೇಳಿ, ತಪ್ಪನ್ನು ತಿದ್ದಿಕೊಂಡಿದ್ದಾರೆ ಶ್ರೀಶಾಂತ್. ತಮ್ಮ ಬಗ್ಗೆ ಇತರೆ ಸ್ಪರ್ಧಿಗಳು ಕೀಳಾಗಿ ಮಾತನಾಡಿದ್ದರೂ, ಅದನ್ನೆಲ್ಲಾ ಕ್ಷಮಿಸಿ ಅವಶ್ಯಕತೆ ಇದ್ದಾಗ ಆ ಸ್ಪರ್ಧಿಗಳಿಗೆ ಶ್ರೀಶಾಂತ್ ಸಾಥ್ ಕೊಟ್ಟಿದ್ದಾರೆ. ವಿಲನ್ ಮತ್ತು ಹೀರೋ... ತಮ್ಮ ಈ ಎರಡೂ ಮುಖಗಳನ್ನು 'ಬಿಗ್ ಬಾಸ್' ಮೂಲಕ ಹೊರಗೆ ಹಾಕಿರುವ ಶ್ರೀಶಾಂತ್ 'ಬಿಗ್ ಬಾಸ್' ಗೆಲ್ಲುತ್ತಾರಾ.? ನೋಡೋಣ.

More from Filmibeat

English summary
Sreesanth, Bigg Boss 12 Contestant, Grand Finalist is a Former Indian Cricketer. Will Sreesanth win #BB12 trophy.? Lets wait and watch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X