ಬಿಗ್ ಬಾಸ್ ಮನೆಗೆ ಬಂದಿರುವ ಗುರುಲಿಂಗ ಸ್ಮಾಮೀಜಿ ಯಾರು?
Recommended Video
ಬಿಗ್ ಬಾಸ್ ಮನೆಯೊಳಗೆ ಖಾವಿ ತೊಟ್ಟ ಸ್ವಾಮೀಜಿಗಳು ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋದು ಹೊಸದೇನಲ್ಲ. ಕನ್ನಡದ ಮೊದಲ ಆವೃತ್ತಿಯಲ್ಲಿ ಜೋತಿಷ್ಯ ಹೇಳುವ ಬ್ರಹ್ಮಾಂಡ ಗುರೂಜಿ ಹಾಗೂ ರಿಷಿ ಕುಮಾರ ಸ್ವಾಮೀಜಿ ದೊಡ್ಮನೆಗೆ ಬಂದಿದ್ದರು. ನಂತರ ಸಮೀರಾಚಾರ್ಯ ಕೂಡ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ, ಮೊದಲ ಸಲ ಮಠ ನಡೆಸುತ್ತಿರುವ ಸ್ವಾಮೀಜಿಯೊಬ್ಬರು ಬಿಗ್ ಮನೆಗೆ ಕಾಲಿಟ್ಟಿದ್ದಾರೆ. 8ನೇ ಸ್ಪರ್ಧಿಯಾಗಿ ದೊಡ್ಮನೆ ಅಖಾಡಕ್ಕೆ ಬಂದ ಅಗಡಿಯ ಗುರುಲಿಂಗ ಸ್ವಾಮೀಜಿ ಪ್ರವೇಶಿಸಿದ್ದಾರೆ.
ಅಷ್ಟಕ್ಕೂ, ಈ ಗುರುಲಿಂಗ ಸ್ವಾಮೀಜಿ ಯಾರು? ಇವರ ಬಗ್ಗೆ ಏನಿದೆ ಮಾಹಿತಿ? ಮುಂದೆ ಓದಿ....

ಏಳನೇ ವಯಸ್ಸಿನಲ್ಲಿಯೇ ಮಠಕ್ಕೆ ಬಂದೆ
ಅಗಡಿ ಅಕ್ಕಿ ಮಠದ ಪೀಠಾಧಿಪತಿಗಳಾಗಿದ್ದ ಚೆನ್ನಬಸವ ಸ್ವಾಮಿ ಅವರ ಸೇವೆಗಾಗಿ ಏಳನೇ ವಯಸ್ಸಿನಲ್ಲಿ ಗುರುಲಿಂಗ ಅವರು ತೊಡಗಿಕೊಂಡರಂತೆ. ತಂದೆ-ತಾಯಿ ಅವರು ಸ್ವತಃ ಸ್ವಾಮೀಜಿ ಸೇವೆಗೆಂದು ಬಿಟ್ಟು ಹೋದರಂತೆ. ತಂದೆ-ತಾಯಿ ಪ್ರೀತಿ ನೋಡಿಲ್ವಂತೆ. ಆಗಲೇ ಅವರು ನನ್ನ ಉತ್ತರಾಧಿಕಾರಿ ಎಂದು ಘೋಷಿಸಿದ್ದರಂತೆ. ಸುಮಾರು 15 ರಿಂದ 16 ವರ್ಷ ಅವರೊಂದಿಗೆ ಇದ್ದ ಗುರುಲಿಂಗ ಅವರು ಕಳೆದ ನಾಲ್ಕೈದು ವರ್ಷದಿಂದ ಮಠಾಧಿಪತಿಯಾಗಿ ಸೇವೆ ಸಲ್ಲಿಸುತ್ತಿದ್ದಾರಂತೆ.

ನೂರು ಮನಸ್ಸುಗಳ ಪರಿವರ್ತನೆ
''ಈಗ ಧರ್ಮದರ್ಶನದಿಂದ ದೂರದರ್ಶನಕ್ಕೆ ಜನರು ಬದಲಾಗಿದ್ದಾರೆ. ನಾನು ಬಿಗ್ ಬಾಸ್ ನಲ್ಲಿ ಎಷ್ಟು ದಿನ ಇರ್ತೀನಿ ಎನ್ನುವುದು ನನಗೆ ಗೊತ್ತಿಲ್ಲ. ನೂರು ದಿನ ಇರ್ತೀನಿ ಅನ್ನೊದಕ್ಕಿಂತ ನೂರು ಮನಸ್ಸುಗಳನ್ನ ಪರಿವರ್ತನೆ ಮಾಡುತ್ತೇನೆ ಎಂಬ ಆತ್ಮವಿಶ್ವಾಸದಿಂದ ಮನೆಯೊಳಗೆ ಹೋಗುತ್ತಿದ್ದೇನೆ'' ಎಂದು ಗುರುಲಿಂಗ ಸ್ವಾಮೀಜಿ ಹೇಳಿ ಬಿಗ್ ಮನೆಗೆ ಎಂಟ್ರಿ ಕೊಟ್ಟರು.

ಬಿಗ್ ಬಾಸ್ ನೋಡೇ ಇಲ್ಲ
'ಆರು ವರ್ಷಗಳಿಂದ ಮಠದಲ್ಲಿ ಟಿವಿ ಇಲ್ಲ. ಇದುವರೆಗೂ ಬಿಗ್ ಬಾಸ್ ಶೋ ನೋಡಿಲ್ಲ. ಬಿಗ್ ಬಾಸ್ ಕುರಿತು ಚರ್ಚೆ ಆರಂಭವಾದಾಗ ಇತ್ತೀಚಿಗೆ ಆರೇಳು ದಿನ ವೂಟ್ (Voot) ನಲ್ಲಿ ಶೋ ನೋಡಿ ತಿಳಿದುಕೊಂಡಿದ್ದಾರಂತೆ ಗುರುಲಿಂಗ ಸ್ವಾಮೀಜಿ.

ನೆರೆಸಂತ್ರಸ್ಥರಿಗಾಗಿ ಆಡಲು ಬಂದಿದ್ದೇನೆ
ಹಾವೇರಿ ಮೂಲದ ಗುರುಲಿಂಗ ಸ್ವಾಮೀಜಿ ಅವರು, ಯಾವುದೇ ಪ್ರಚಾರಕ್ಕಾಗಲಿ ಅಥವಾ ಬೇರೆ ಉದ್ದೇಶಕ್ಕಾಗಿ ಬಿಗ್ ಬಾಸ್ ಬಂದಿಲ್ಲವಂತೆ. ಈ ಆಟದಿಂದ ಒಂದು ವೇಳೆ ಸ್ವಾಮೀಜಿ ಗೆದ್ದರೆ, ಅದರಿಂದ ಬಂದ ಹಣವನ್ನ ನೆರೆಸಂತ್ರಸ್ಥರಿಗೆ ನೀಡಿ ಅವರಿಗೆ ಸಹಾಯ ಮಾಡಬೇಕು ಎಂಬ ಕಾರಣಕ್ಕಾಗಿ ಬಿಗ್ ಬಾಸ್ ಗೆ ಬಂದಿದ್ದಾರಂತೆ.

ಸುದೀಪ್ ಸನ್ಮಾನಿಸದ ಸ್ವಾಮೀಜಿ
ಬಿಗ್ ಬಾಸ್ ವೇದಿಕೆ ಮೇಲೆ ಬರುವಾಗಲೇ ಮಾಲೆ ಮತ್ತು ಬಸವಣ್ಣ ಅವರ ಫೋಟೋ ಸಮೇತ ಬಂದ ಗುರುಲಿಂಗ ಸ್ವಾಮೀಜಿ ಅವರು, ಅದನ್ನ ಕಿಚ್ಚ ಸುದೀಪ್ ಅವರಿಗೆ ನೀಡಿ ಸನ್ಮಾನಿಸಿದರು.


Click it and Unblock the Notifications











