'ಬಿಗ್ ಬಾಸ್' ಕಾರ್ಯಕ್ರಮದ ಹೊರಗಿನ ಚಂದನ್ ಶೆಟ್ಟಿ ಕಥೆ ಕೇಳಿ!
ನಿನ್ನೆ Rapper ಚಂದನ್ ಶೆಟ್ಟಿ 'ಬಿಗ್ ಬಾಸ್' ಮನೆಗೆ ಹೋದ ಕ್ಷಣದಲ್ಲಿ ಕೆಲವರು 'ಓ..ಚಂದನ್ ಶೆಟ್ಟಿ ಹೋಗುತ್ತಾರಾ ಸೂಪರ್...' ಎಂದರೆ, ಹಲವರು 'ಯಾರು ಈ ಹುಡುಗ..?' ಅಂತ ರಾಗ ಎಳೆದ್ರು. ಜೊತೆಗೆ ಚಂದನ್ ಶೆಟ್ಟಿ ಎಂಟ್ರಿಗೆ ಐಂದ್ರಿತಾ ರೇ ಯಾಕೆ ಡ್ಯಾನ್ಸ್ ಮಾಡಿದ್ರು ಎನ್ನುವ ಕನ್ಫ್ಯೂಷನ್ ಕೂಡ ಅನೇಕರಿಗೆ ಕಾಡಿತ್ತು.
ಚಂದನ್ ಶೆಟ್ಟಿ ಒಬ್ಬ ಪ್ರತಿಭಾವಂತ Rapper. ತನ್ನ ಹಾಡುಗಳ ಮೂಲಕ ಯುವ ಜನತೆಯ ಹಾಟ್ ಫೇವರೆಟ್ ಆಗಿದ್ದಾರೆ. ತಾನೇ ಹಾಡುಗಳನ್ನು ಬರೆದು, ಸಂಗೀತ ನೀಡಿ, ಹಾಡಿ ಇಂದು ರಾಕ್ ಸ್ಟಾರ್ ಆಗಿದ್ದಾರೆ. ಈವರೆಗೂ ಬರೀ ನಾಲ್ಕೇ ನಾಲ್ಕು ಹಾಡುಗಳನ್ನು ಮಾಡಿರುವ ಚಂದನ್ ಶೆಟ್ಟಿ ಈಗ ಬಿಗ್ ಬಾಸ್ ವೇದಿಕೆ ಏರಿದ್ದಾರೆ.
ಅಂದಹಾಗೆ, ಸದ್ಯ 'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮದ ಸ್ಪರ್ಧಿಯಾಗಿರುವ ಚಂದನ್ ಶೆಟ್ಟಿ ಬಗ್ಗೆ ಒಂದಷ್ಟು ವಿವರಗಳು ಇಲ್ಲಿದೆ ಓದಿ...

ಹಾಸನದ ಹುಡುಗ
ಚಂದನ್ ಶೆಟ್ಟಿ ಮೂಲತಃ ಹಾಸನದ ಹುಡುಗ. ಮ್ಯೂಸಿಕ್ ಮೇಲೆ ಸಾಕಷ್ಟು ಆಸಕ್ತಿ ಹೊಂದಿರುವ ಚಂದನ್ ಸದ್ಯ ಜನಪ್ರಿಯ Rapper .

6 ವರ್ಷಗಳ ಹಿಂದೆ
6 ವರ್ಷಗಳ ಹಿಂದೆ ಚಂದನ್ ಶೆಟ್ಟಿ ತಮ್ಮ ಮೊದಲ ಹಾಡನ್ನು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಿದ್ದರು. ಈ ಹಾಡು 2 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಅರ್ಜುನ್ ಜನ್ಯ ಜೊತೆ ಕೆಲಸ
'ಅಲೆಮಾರಿ' ಚಿತ್ರದಿಂದ ಚಂದನ್ ಶೆಟ್ಟಿ ಸಿನಿಮಾ ಜರ್ನಿ ಶುರುವಾಯ್ತು. ಮೊದಲು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಜೊತೆ ಚಂದನ್ ಕೆಲಸ ಶುರು ಮಾಡಿದರು.

'ಧಮ್ ಪವರೇ..' ಹಾಡು ಬರೆದರು
ಅರ್ಜುನ್ ಜನ್ಯ ಜೊತೆ ಕೆಲಸ ಮಾಡುತ್ತಿದ್ದ ಚಂದನ್ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ಪುನೀತ್ ನಟನೆಯ 'ಪವರ್' ಸಿನಿಮಾದ 'ಧಮ್ ಪವರೇ..' ಹಾಡು. ಈ ಹಾಡನ್ನು ಚಂದನ್ ಬರೆದಿದ್ದಾರೆ.

'ಹಾಳಾಗೋದೆ..'
'ಹಾಳಾಗೋದೆ..' ಎಂಬ ಹಾಡನ್ನು ಮಾಡಿದ ಮೇಲೆ ಚಂದನ್ ಶೆಟ್ಟಿ ಜನರಿಗೆ ಬಹಳ ಹತ್ತಿರವಾದರು. ಇದು ಕನ್ನಡದಲ್ಲಿ ದೊಡ್ಡ ಹಿಟ್ ಆದ ರಾಪ್ ಹಾಡುಗಳ ಪೈಕಿ ಪ್ರಮುಖ ಸ್ಥಾನದಲ್ಲಿದೆ.

ರಾಕ್ ಸ್ಟಾರ್
ಚಂದನ್ ಶೆಟ್ಟಿ ಅವರ 'ಮೂರೇ ಮೂರು ಪೆಗ್...', 'ಪಕ್ಕಾ ಚಾಕಲೇಟ್ ಗರ್ಲ್..' ಹಾಡುಗಳು ಯೂ ಟ್ಯೂಬ್ ನಲ್ಲಿ ಸಂಚಲನ ಸೃಷ್ಟಿಸಿದವು. ಮೂರೇ ಮೂರು ಪೇಗ್...' ಹಾಡಿನಲ್ಲಿ ನಟಿ ಐಂದ್ರಿತಾ ರೇ ಕಾಣಿಸಿಕೊಂಡಿದ್ದರು.

ಸದ್ಯ ಹೀರೋ ಕೂಡ
ಸದ್ಯ ಚಂದನ್ ಶೆಟ್ಟಿ ಹೀರೋ ಕೂಡ ಆಗಿದ್ದು, 'ವಿಚಿತ್ರ ಪ್ರೇಮ ಕಥೆ' ಎನ್ನುವ ಚಿತ್ರಕ್ಕೆ ನಾಯಕನಾಗಿದ್ದಾರೆ.


Click it and Unblock the Notifications











