'ಬಿಗ್ ಬಾಸ್' ನಿವಾಸಕ್ಕೆ ಕಾಲಿಟ್ಟಿರುವ ಕೊಡಗಿನ ಕುವರಿ ಕೃಷಿ ತಾಪಂಡ ಬಗ್ಗೆ ಸಣ್ಣ ಪರಿಚಯ
ಪ್ರತಿ ಬಾರಿಯ 'ಬಿಗ್ ಬಾಸ್' ಕಾರ್ಯಕ್ರಮದಂತೆ ಈ ಬಾರಿ ಕೂಡ ಪ್ರೇಕ್ಷಕರ ಲೆಕ್ಕಾಚಾರ ಉಲ್ಪಾ ಆಗಿದೆ. ಬಿಗ್ ಮನೆಗೆ ಯಾರು ಹೊಗುತ್ತಾರೆ ಎನ್ನುವ ಚರ್ಚೆಯಲ್ಲಿಯೇ ಇರಲ್ಲಿಲ್ಲದ ನಟಿ ಕೃಷಿ ತಾಪಂಡ ಕೊನೆಗೆ ಬಿಗ್ ಬಾಸ್ ಸ್ಪರ್ಧಿ ಆಗಿದ್ದಾರೆ.
ಕೃಷಿ ತಾಪಂಡ ಈಗಾಗಲೇ 'ಬಿಗ್ ಬಾಸ್' ನಿವಾಸಕ್ಕೆ ಹೋಗಿದ್ದಾರೆ. ಇನ್ನೂ ಕಾರ್ಯಕ್ರಮ ಶುರುವಾಗಿ ಒಂದೇ ಒಂದು ದಿನ ಕಳೆದಿರುವುದರಿಂದ ಅವರ ಬಗ್ಗೆ ಯಾರಿಗೂ ಹೆಚ್ಚಿನ ವಿಷಯಗಳು ತಿಳಿದಿಲ್ಲ. ಸೋ, 'ಬಿಗ್ ಬಾಸ್ ಕನ್ನಡ' ಸೀಸನ್ 5 ಕಾರ್ಯಕ್ರಮದ ಸೆಲೆಬ್ರಿಟಿ ಸ್ಪರ್ಧಿಗಳಲ್ಲಿ ಒಬ್ಬರಾದ ಕೃಷಿ ತಾಪಂಡ ಬಗ್ಗೆ ಒಂದಷ್ಟು ಮಾಹಿತಿ ಮುಂದಿದೆ ಓದಿ..

ಕೊಡಗು ಚೆಲುವೆ
ಸದ್ಯ 'ಬಿಗ್ ಬಾಸ್' ವೇದಿಕೆ ಎರಿರುವ ನಟಿ ಕೃಷಿ ತಾಪಂಡ ಮೂಲತಃ ಕೊಡಗಿನವರು.

ಒಬ್ಬರೇ ಇರುವುದಕ್ಕೆ ಇಷ್ಟ ಪಡುತ್ತಾರೆ
ಕೃಷಿ ಅವರೇ ಹೇಳುವ ಹಾಗೆ ಅವರು ತುಂಬ ಮಾತನಾಡುವ ಹುಡುಗಿ. ಜೊತೆಗೆ ಯಾವಾಗಲು ಒಬ್ಬರೇ ಇರುವುದಕ್ಕೆ ಇಷ್ಟ ಪಡುತ್ತಾರೆ. ಹಾಗಾಗಿ ಜಾಸ್ತಿ ಯಾರ ಜೊತೆಯೂ ಅವರು ಬೆರೆಯುವುದಿಲ್ಲವಂತೆ.

ಎಂ ಎನ್ ಸಿ ಕೆಲಸ ಬಿಟ್ಟರು
ಎಂ ಎನ್ ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷಿ ಸಿನಿಮಾ ಆ ಕೆಲಸ ಬಿಟ್ಟು ಚಿತ್ರರಂಗಕ್ಕೆ ಬಂದರು.

ಮೊದಲ ಸಿನಿಮಾ
ಕೃಷಿ ತಾಪಂಡ 'ಅಕಿರ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಸಿನಿಮಾರಂಗಕ್ಕೆ ಕಾಲಿಟ್ಟರು.

'ಕಹಿ' ಚಿತ್ರಕ್ಕೆ ಪ್ರಶಂಸೆ
'ಅಕಿರ' ಚಿತ್ರದ ಜೊತೆ ಜೊತೆಗೆ ಕೃಷಿ 'ಕಹಿ' ಎನ್ನುವ ಸಿನಿಮಾ ಮಾಡಿದರು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸಕ್ಸಸ್ ಕಾಣದಿದ್ದರು ಒಳ್ಳೆಯ ಹೆಸರು ತಂದು ಕೊಟ್ಟಿತು.

ಸಾಲು ಸಾಲು ಸಿನಿಮಾಗಳು
ಕೃಷಿ ಅವರ 'ಎರಡು ಕನಸು' ಸಿನಿಮಾ ಈಗಾಗಲೇ ಬಿಡುಗಡೆಯಾಗಿದೆ. 'ಅಲ್ಪ ವಿರಾಮ' ಮತ್ತು 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ.

17ನೇ ಸ್ಪರ್ಧಿ
ಕೃಷಿ ಸದ್ಯ 17ನೇ ಸ್ಪರ್ಧಿ ಅಂದರೆ ಕೊನೆಯ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಗೆ ಹೋಗಿದ್ದಾರೆ.


Click it and Unblock the Notifications











