'ಬಿಗ್ ಬಾಸ್' ಲೆಕ್ಕಾಚಾರವನ್ನೇ ಉಲ್ಟಾ ಮಾಡ್ತಾರಾ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.?

By Bharath Kumar

'ಬಿಗ್ ಬಾಸ್' ಮನೆಯಲ್ಲಿ ಎಲ್ಲ ರೀತಿಯ ವ್ಯಕ್ತಿಗಳು ಹೋಗಿ ಬಂದಿದ್ದಾರೆ. ಮೊದಲನೇ ಆವೃತ್ತಿಯಲ್ಲಿ ಬ್ರಹ್ಮಾಂಡ ಗುರೂಜಿ, ನಂತರ ರಿಷಿಕುಮಾರ ಸ್ವಾಮೀಜಿ ಈಗ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.

'ಸಂಖ್ಯಾಶಾಸ್ತ್ರ'ದಲ್ಲಿ ನಂಬಿಕೆ ಇರೋರಿಗೆ ಜಯಶ್ರೀನಿವಾಸನ್ ಅವರ ಬಗ್ಗೆ ತಿಳಿದಿರುತ್ತೆ. ಟಿವಿಯಲ್ಲಿ ಪ್ರತಿದಿನ ಬರ್ತಾರೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ನೀಡ್ತಾರೆ.

ಇದೀಗ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ 'ಬಿಗ್ ಬಾಸ್' ಮನೆಗೆ ಹೋಗಿದ್ದಾರೆ. ಈ ಬಾರಿ 17 ಸ್ಪರ್ಧಿಗಳಲ್ಲಿ ಇವರು ಮೊದಲಿಗರಾಗಿ ಮನೆ ಪ್ರವೇಶ ಮಾಡಿದ್ದಾರೆ. ಹಾಗಿದ್ರೆ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಅವರ ಬಗ್ಗೆ ನಿಮಗೆಷ್ಟು ಗೊತ್ತು? 'ಬಿಗ್ ಬಾಸ್' ಮನೆಗೆ ಅವರು ಬಂದಿರುವುದೇಕೆ? ಮುಂದೆ ಓದಿ.....

ಟಿವಿಯಲ್ಲಿ ಮೊದಲು ಸಂಖ್ಯಾಶಾಸ್ತ್ರ ಹೇಳಿದವರು

ಟಿವಿಯಲ್ಲಿ ಮೊದಲು ಸಂಖ್ಯಾಶಾಸ್ತ್ರ ಹೇಳಿದವರು

ಖ್ಯಾತ ಸಂಖ್ಯಾಶಾಸ್ತ್ರಜ್ಞ, ವಾಸ್ತು ಜ್ಯೋತಿಷಿ ಜಯ ಶ್ರೀನಿವಾಸನ್ ಅವರು ಟಿವಿ ಲೋಕದಲ್ಲಿ ಮೊದಲ ಬಾರಿಗೆ ಸಂಖ್ಯಾಶಾಸ್ತ್ರ ಹೇಳಿದವರು ಎಂಬ ಖ್ಯಾತಿ ಹೊಂದಿದ್ದಾರೆ.

ಮಿನಿಸ್ಟರ್ ಆಗಬೇಕಿದ್ದವರಂತೆ

ಮಿನಿಸ್ಟರ್ ಆಗಬೇಕಿದ್ದವರಂತೆ

ಸುದೀಪ್ ಅವರು ವೇದಿಕೆಯಲ್ಲಿ ಹೇಳಿದ ಪ್ರಕಾರ ಜಯ ಶ್ರೀನಿವಾಸನ್ ಅವರಿಗೆ ಮಿನಿಸ್ಟರ್ ಆಗುವ ಕನಸಿದೆಯಂತೆ.

ವಿಶೇಷ ಸಾಧನೆ

ವಿಶೇಷ ಸಾಧನೆ

ಜಯಶ್ರೀನಿವಾಸನ್ ಅವರು ಸುಮಾರು 50 ಸಾವಿರ ಜೋಡಿಗಳಿಗೆ ಮರುಮಾಂಗಲ್ಯ ಮಾಡಿಸಿ ವಿಶೇಷ ದಾಖಲೆ ಹೊಂದಿದ್ದಾರೆ.

ಜಯಶ್ರೀನಿವಾಸನ್ ಅವರ ದಿನಚರಿ

ಜಯಶ್ರೀನಿವಾಸನ್ ಅವರ ದಿನಚರಿ

ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿದು 10 ನಿಮಿಷ ಸರಳವಾಗಿ ಯೋಗ ಮಾಡ್ತಾರೆ. ಸುಮಾರು ಅರ್ಧಗಂಟೆ ಧ್ಯಾನ ಮಾಡ್ತಾರೆ. 7 ಗಂಟೆಗೆಲ್ಲಾ ಮನೆ ಬಿಡ್ತಾರೆ. ಟಿವಿಯಲ್ಲಿ ನೇರ ಪ್ರಸಾರ ಕಾರ್ಯಕ್ರಮ ಮುಗಿಸಿ ಅಲ್ಲಿಂದ ನೇರವಾಗಿ ಆಫೀಸ್ ಗೆ ಹೋಗ್ತಾರೆ. ಸುಮಾರು 10-15 ಜನರು ಪ್ರತಿನಿತ್ಯ ಭೇಟಿ ಮಾಡುವುದಕ್ಕೆ ಬರ್ತಾರೆ. ಇದು ಜಯಶ್ರೀನಿವಾಸನ್ ರವರ ದಿನಚರಿ

ಸಿನಿಮಾ ಹೆಚ್ಚಾಗಿ ನೋಡ್ತಾರೆ

ಸಿನಿಮಾ ಹೆಚ್ಚಾಗಿ ನೋಡ್ತಾರೆ

ಜಯಶ್ರೀನಿವಾಸನ್ ಅವರು ಸಿನಿಮಾಗಳನ್ನ ಹೆಚ್ಚಾಗಿ ನೋಡ್ತಾರೆ. ಎಲ್ಲರ ಮಧ್ಯೆ ಹೋದಾಗ ಜನ ಕಂಡು ಹಿಡಿಯುತ್ತಾರೆ ಎಂದು, ಸಿನಿಮಾ ಶುರು ಆದ್ಮೇಲೆ ಥಿಯೇಟರ್ ಒಳಗೆ ಹೋಗ್ತಾರಂತೆ.

ಬಿಗ್ ಬಾಸ್ ಗೆ ಯಾಕೆ ಬರ್ತಿದ್ದಾರೆ?

ಬಿಗ್ ಬಾಸ್ ಗೆ ಯಾಕೆ ಬರ್ತಿದ್ದಾರೆ?

''ಬಿಗ್ ಬಾಸ್ ಆರಂಭವಾಗ್ತಿರೋದು ಅಕ್ಟೋಬರ್ 15, ಅಂದ್ರೆ 6. ಶುಕ್ರಗ್ರಹ. ಆ ದಿನ ನನಗೆ ತುಂಬ ಲಕ್ಕಿ. ಆದ್ದರಿಂದ 'ಬಿಗ್ ಬಾಸ್'ನೂ ಅರ್ಥ ಮಾಡಿಕೊಳ್ಳುತ್ತೇನೆ. ನಿಮ್ಮನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇಬ್ಬರ ಮನಸ್ಸು ಗೆಲ್ಲುತ್ತೇನೆ. ಬಿಗ್ ಬಾಸ್ ಕೂಡ ಗೆಲ್ಲುತ್ತೇನೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Who is Jaya Sreenivasan.? Read the article to know more about Bigg Boss Kannada 5 contestant, Numerologist Jaya Sreenivasan and his background. 'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮದ ಸ್ಪರ್ಧಿ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಬಗ್ಗೆ ಒಂದಷ್ಟು ವಿವರಗಳು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X