ಸುರಸುಂದರಿ, ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಬಗ್ಗೆ ನಿಮಗೆಷ್ಟು ಗೊತ್ತು.?
ಕರ್ನಾಟಕದಲ್ಲಿ ಹುಟ್ಟಿ ಮುಂಬೈನಲ್ಲಿ ಹೆಸರು ಮಾಡಿರುವ ಕನ್ನಡತಿ ಒಬ್ಬರು 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ್ದಾರೆ. ಅವರೇ ಶ್ರುತಿ ಪ್ರಕಾಶ್.
''ಕೈಸಿ ಪಹೇಲಿ...'' ಎಂಬ ಹಿಂದಿ ಹಾಡನ್ನು ಹಾಡುತ್ತಾ 'ಬಿಗ್ ಬಾಸ್' ವೇದಿಕೆ ಮೇಲೆ ಬಂದ ಶ್ರುತಿ ಪ್ರಕಾಶ್ ಕನ್ನಡತಿ ಆಗಿದ್ದರೂ, ಆಕೆಗೆ ಸರಾಗವಾಗಿ ಸುಲಲಿತವಾಗಿ ಕನ್ನಡ ಮಾತನಾಡಲು ಬರುವುದಿಲ್ಲ.
ಹಿಂದಿ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿರುವ ಶ್ರುತಿ ಪ್ರಕಾಶ್ ಹಿನ್ನಲೆ ಕುರಿತ ಸಂಪೂರ್ಣ ವಿವರ ಇಲ್ಲಿದೆ, ಓದಿರಿ...

ಹೊರನಾಡ ಕನ್ನಡತಿ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ ಆಗಿರುವ ಶ್ರುತಿ ಪ್ರಕಾಶ್ ಮೂಲತಃ ಬೆಳಗಾವಿಯವರು.

ತಂದೆ ಆರ್ಮಿ ಆಫೀಸರ್
ಶ್ರುತಿ ಪ್ರಕಾಶ್ ರವರ ತಂದೆ ಪ್ರಕಾಶ್ ಇಂಡಿಯನ್ ಆರ್ಮಿಯಲ್ಲಿ ಕರ್ನಲ್ ಆಗಿದ್ದವರು. ಈಗ ನಿವೃತ್ತಿ ಹೊಂದಿದ್ದಾರೆ. ತಾಯಿ ಸವಿತಾ ಪ್ರಕಾಶ್ ಗೃಹಿಣಿ.

ಗಾಯಕಿ ಶ್ರುತಿ ಪ್ರಕಾಶ್
ಶ್ರುತಿ ಪ್ರಕಾಶ್ ಗಾಯಕಿ ಆಗಿ ಅನೇಕ ಲೈವ್ ಶೋಗಳನ್ನು ನೀಡಿದ್ದಾರೆ. ಟ್ರೇನ್ಡ್ ಸಿಂಗರ್ ಅಲ್ಲದೇ ಇದ್ದರೂ, ಶ್ರುತಿ ಬದ್ಧವಾಗಿ ಶ್ರುತಿ ಪ್ರಕಾಶ್ ಹಾಡುತ್ತಾರೆ.

ನಟಿ ಶ್ರುತಿ ಪ್ರಕಾಶ್
'ಚಾನೆಲ್ ವಿ' ಯಲ್ಲಿ ಪ್ರಸಾರ ಆಗುತ್ತಿದ್ದ 'ಇಶ್ಕ್ ಅನ್ ಪ್ಲಗ್ಡ್' ಹಾಗೂ ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಆಗುತ್ತಿದ್ದ 'ಸಾಥ್ ನಿಭಾನಾ ಸಾಥಿಯಾ' ಧಾರಾವಾಹಿಗಳಲ್ಲಿ ಶ್ರುತಿ ಪ್ರಕಾಶ್ ಅಭಿನಯಿಸಿದ್ದಾರೆ.

ಮುಂಬೈನಲ್ಲಿ ಪ್ರಸಿದ್ಧಿ
ನಟನೆ ಹಾಗೂ ಗಾಯನದಿಂದ ಮುಂಬೈನಲ್ಲಿ ಪ್ರಸಿದ್ಧಿ ಪಡೆದಿರುವ ಶ್ರುತಿ ಪ್ರಕಾಶ್, ಇದೀಗ ಕನ್ನಡದ 'ಬಿಗ್ ಬಾಸ್' ಮೂಲಕ ಕರುನಾಡ ಜನರನ್ನು ತಲುಪಲು ಮುಂದಾಗಿದ್ದಾರೆ.

ಕನ್ನಡ ಪೂರ್ತಿ ಬರಲ್ಲ ಯಾಕೆ.?
ಕನ್ನಡತಿ ಆಗಿದ್ದರೂ ಸರಾಗವಾಗಿ ಕನ್ನಡ ಮಾತನಾಡಲು ಯಾಕೆ ಬರಲ್ಲ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಬಹುದು. ಅದಕ್ಕೆ ''ತಂದೆ ಆರ್ಮಿಯಲ್ಲಿ ಇದ್ದಿದ್ರಿಂದ ಒಂದು ಕಡೆ ಎರಡು ವರ್ಷಕ್ಕಿಂತ ಹೆಚ್ಚಾಗಿ ಇರಲಿಲ್ಲ. ಮನೆಯಲ್ಲಿ ಮಾತ್ರ ಕನ್ನಡ ಮಾತನಾಡುತ್ತೇವೆ'' ಎನ್ನುತ್ತಾರೆ ಶ್ರುತಿ ಪ್ರಕಾಶ್. ಜೊತೆಗೆ ''ಕನ್ನಡ ಭಾಷೆ ಬಗ್ಗೆ ಹೆಮ್ಮೆ ಇದೆ'' ಎನ್ನುತ್ತಾರೆ.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅಭಿನಯಿಸುವ ಆಸೆ
ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸುವ ಆಸೆ ಇಟ್ಟುಕೊಂಡಿದ್ದಾರೆ ಶ್ರುತಿ ಪ್ರಕಾಶ್. ಹೀಗಾಗಿ ಅವರಿಗೆ 'ಬಿಗ್ ಬಾಸ್' ಒಂದೊಳ್ಳೆ ವೇದಿಕೆ.

ಶ್ರುತಿಗೆ ಹೊಸ ಚಾಲೆಂಜ್
''ಬಿಗ್ ಬಾಸ್'ಗೆ ಹೋಗಬೇಕು ಅಂತ ಯಾವತ್ತೂ ಅಂದುಕೊಂಡಿರಲಿಲ್ಲ'' ಎನ್ನುವ ಶ್ರುತಿ ಪ್ರಕಾಶ್ ರವರಿಗೆ ಇದು ಹೊಸ ಚಾಲೆಂಜ್. ಅಚ್ಚ ಕನ್ನಡ ಶೋ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಶ್ರುತಿ ಪ್ರಕಾಶ್ ಜರ್ನಿ ಹೇಗಿರುತ್ತೆ ಅಂತ ಕಾದು ನೋಡೋಣ.


Click it and Unblock the Notifications











