'ಬಿಗ್ ಬಾಸ್' ಮನೆಯ ಹೊಸ 'ಅಮ್ಮ' ಸುಮಾ ರಾಜ್ ಕುಮಾರ್ ಜೀವನ ಹಿನ್ನೋಟ.!
ಈ ಬಾರಿ 'ಬಿಗ್ ಬಾಸ್' ಮನೆಗೆ ಕಾಮಾನ್ ಮ್ಯಾನ್ ವಿಭಾಗದಲ್ಲಿ ಪ್ರವೇಶ ಪಡೆದ ಸ್ಪರ್ಧಿಯ ಪೈಕಿ ಸುಮಾ ರಾಜ್ ಕುಮಾರ್ ಕೂಡ ಒಬ್ಬರು. ಈಕೆಯ ಮೂಲ ಹೆಸರು ಮಹಾರಾಣಿ ಸುಮಿತ್ರಾ ದೇವಿ.
ಮಹಾರಾಣಿ ಸುಮಿತ್ರಾ ದೇವಿ ಅವರದ್ದು ರಾಜಮನೆತನ ಇರಬಹುದಾ ಎಂದುಕೊಳ್ಳಬೇಡಿ. ಆ ಹೆಸರಿನ ಹಿಂದೆ ಒಂದು ಇತಿಹಾಸವಿದೆ. ಅಂದ್ಹಾಗೆ, ಇವರು ಈ ಆವೃತ್ತಿಯ ಬಿಗ್ ಬಾಸ್ ಮನೆಯಲ್ಲಿ 'ಅಮ್ಮ'ನ ಸ್ಥಾನ ತುಂಬಲಿದ್ದಾರಂತೆ.
'ಬಿಗ್ ಬಾಸ್' ಮನೆಯ ಹೊಸ ಅಮ್ಮ ಸುಮಾ ರಾಜ್ ಕುಮಾರ್ ಕುರಿತ ಕಿರು ಪರಿಚಯ ಇಲ್ಲಿದೆ ನೋಡಿ....

ಮೈಸೂರಿನ ಗೃಹಿಣಿ
ಸುಮಾ ರಾಜ್ ಕುಮಾರ್ ಅಲಿಯಾಸ್ ಮಹಾರಾಣಿ ಸುಮಿತ್ರಾ ದೇವಿ ಮೈಸೂರು ಮೂಲದ ಗೃಹಿಣಿ. ಇವರ ಪತಿಯ ಹೆಸರು ರಾಜ್ ಕುಮಾರ್. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದಾರೆ.

ಗೊಂಬೆ ಶೋ & ಮ್ಯಾಜಿಕ್ ಮಾಡ್ತಾರೆ
ಸುಮಾ ರಾಜ್ ಕುಮಾರ್ ಅವರು ಗೃಹಿಣಿಯಾಗಿದ್ದರೂ, ವೃತ್ತಿಯಲ್ಲಿ 'ಮ್ಯಾಜಿಕ್ ಶೋ' ಮತ್ತು 'ಗೊಂಬೆ ಶೋ' ಅಂತಹ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಾರೆ.

ಮಹಾರಾಣಿ ಸುಮಿತ್ರಾ ದೇವಿ ಹೆಸರಿನ ಹಿಂದಿನ ಕಥೆ
ಸುಮಾ ರಾಜ್ ಕುಮಾರ್, ಮಹಾರಾಣಿ ಸುಮಿತ್ರಾ ದೇವಿ ಎಂದು ಗುರುತಿಸಿಕೊಳ್ಳಲು ಒಂದು ಇತಿಹಾಸವಿದೆ. ಅದೇನಪ್ಪಾ ಅಂದ್ರೆ, ಸುಮಾ ರಾಜ್ ಕುಮಾರ್ ಅವರ ತಂದೆ ಚಿಕ್ಕ ವಯಸ್ಸಿನಲ್ಲಿ ಚಿಕ್ಕಪ್ಪನ ಜೊತೆ ಅರಮನೆಯಲ್ಲಿ ಊಟ ಮಾಡುತ್ತಿದ್ದರಂತೆ. ಅದನ್ನ ಜೀವನ ಪರ್ಯಾಂತ ಮರೆಯಬಾರದು ಎಂಬ ಕಾರಣಕ್ಕೆ, ಹಿರಿಯ ಮಗಳಿಗೆ ರಾಣಿ ಮಂಜುಳಾ ದೇವಿ, ಮಗನಿಗೆ ರಾಜಕುಮಾರ್ ಹಾಗೂ ಸುಮ ಅವರಿಗೆ ಮಹಾರಾಣಿ ಸುಮಿತ್ರಾ ದೇವಿ ಎಂದು ಹೆಸರಿಟ್ಟಿದ್ದರಂತೆ. ಮದುವೆಯ ನಂತರ ಸುಮಾ ರಾಜ್ ಕುಮಾರ್ ಆಗಿ ಹೆಸರು ಬದಲಿಸಿಕೊಂಡಿದ್ದಾರೆ.

ಸುಮಾ ಬಗ್ಗೆ ಪತಿ ರಾಜ್ ಕುಮಾರ್ ಹೇಳಿದ್ದೇನು?
ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡು ಗೊಂಬೆ ಶೋ & ಮ್ಯಾಜಿಕ್ ಕಾರ್ಯಕ್ರಮಗಳನ್ನ ಮಾಡಿಕೊಡ್ತಿದ್ದಾರೆ. ಹೊಟ್ಟೆ ಹಸಿದಾಗ ಮಾತ್ರ ಕೋಪ ಬರುತ್ತೆ. ಅದು ಅವರ ಸ್ವಭಾವವೆಂದು ತಿಳಿಸಿದರು.

'ಬಿಗ್ ಬಾಸ್' ಯಾಕೆ?
'ಬಿಗ್ ಬಾಸ್' ಯಾಕೆ ಎಂದು ಸುದೀಪ್ ಅವರು ಕೇಳಿದ್ದಕ್ಕೆ ಜೀವನದಲ್ಲಿ ಒಂದು ಆಸೆ ಅದಕ್ಕೆ ಬಿಗ್ ಬಾಸ್ ಅಂತಾರೆ ಸುಮಾ ರಾಜ್ ಕುಮಾರ್. ಅಂದ್ಹಾಗೆ, ಸುಮಾ ಅವರು ಅಡುಗೆ ಚೆನ್ನಾಗಿ ಮಾಡ್ತಾರೆ. ಆದ್ರೆ, ಸಸ್ಯಹಾರಿಗಳಿಗೆ ಮಾತ್ರವೆನ್ನುವುದು ಗಮನಾರ್ಹ.


Click it and Unblock the Notifications











