twitter
    For Quick Alerts
    ALLOW NOTIFICATIONS  
    For Daily Alerts

    'ಬಿಗ್ ಬಾಸ್' ಮನೆಯ ಹೊಸ 'ಅಮ್ಮ' ಸುಮಾ ರಾಜ್ ಕುಮಾರ್ ಜೀವನ ಹಿನ್ನೋಟ.!

    By Bharath Kumar
    |

    ಈ ಬಾರಿ 'ಬಿಗ್ ಬಾಸ್' ಮನೆಗೆ ಕಾಮಾನ್ ಮ್ಯಾನ್ ವಿಭಾಗದಲ್ಲಿ ಪ್ರವೇಶ ಪಡೆದ ಸ್ಪರ್ಧಿಯ ಪೈಕಿ ಸುಮಾ ರಾಜ್ ಕುಮಾರ್ ಕೂಡ ಒಬ್ಬರು. ಈಕೆಯ ಮೂಲ ಹೆಸರು ಮಹಾರಾಣಿ ಸುಮಿತ್ರಾ ದೇವಿ.

    ಮಹಾರಾಣಿ ಸುಮಿತ್ರಾ ದೇವಿ ಅವರದ್ದು ರಾಜಮನೆತನ ಇರಬಹುದಾ ಎಂದುಕೊಳ್ಳಬೇಡಿ. ಆ ಹೆಸರಿನ ಹಿಂದೆ ಒಂದು ಇತಿಹಾಸವಿದೆ. ಅಂದ್ಹಾಗೆ, ಇವರು ಈ ಆವೃತ್ತಿಯ ಬಿಗ್ ಬಾಸ್ ಮನೆಯಲ್ಲಿ 'ಅಮ್ಮ'ನ ಸ್ಥಾನ ತುಂಬಲಿದ್ದಾರಂತೆ.

    'ಬಿಗ್ ಬಾಸ್' ಮನೆಯ ಹೊಸ ಅಮ್ಮ ಸುಮಾ ರಾಜ್ ಕುಮಾರ್ ಕುರಿತ ಕಿರು ಪರಿಚಯ ಇಲ್ಲಿದೆ ನೋಡಿ....

    ಮೈಸೂರಿನ ಗೃಹಿಣಿ

    ಮೈಸೂರಿನ ಗೃಹಿಣಿ

    ಸುಮಾ ರಾಜ್ ಕುಮಾರ್ ಅಲಿಯಾಸ್ ಮಹಾರಾಣಿ ಸುಮಿತ್ರಾ ದೇವಿ ಮೈಸೂರು ಮೂಲದ ಗೃಹಿಣಿ. ಇವರ ಪತಿಯ ಹೆಸರು ರಾಜ್ ಕುಮಾರ್. ಇವರಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳಿದ್ದಾರೆ.

    'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಚಂದ್ರು ಸಿಹಿಯೋ.? ಕಹಿಯೋ.?'ಬಿಗ್ ಬಾಸ್' ವೇದಿಕೆ ಮೇಲೆ ಚಮಕ್ ಕೊಟ್ಟ ಚಂದ್ರು ಸಿಹಿಯೋ.? ಕಹಿಯೋ.?

    ಗೊಂಬೆ ಶೋ & ಮ್ಯಾಜಿಕ್ ಮಾಡ್ತಾರೆ

    ಗೊಂಬೆ ಶೋ & ಮ್ಯಾಜಿಕ್ ಮಾಡ್ತಾರೆ

    ಸುಮಾ ರಾಜ್ ಕುಮಾರ್ ಅವರು ಗೃಹಿಣಿಯಾಗಿದ್ದರೂ, ವೃತ್ತಿಯಲ್ಲಿ 'ಮ್ಯಾಜಿಕ್ ಶೋ' ಮತ್ತು 'ಗೊಂಬೆ ಶೋ' ಅಂತಹ ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಾರೆ.

    'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ

    ಮಹಾರಾಣಿ ಸುಮಿತ್ರಾ ದೇವಿ ಹೆಸರಿನ ಹಿಂದಿನ ಕಥೆ

    ಮಹಾರಾಣಿ ಸುಮಿತ್ರಾ ದೇವಿ ಹೆಸರಿನ ಹಿಂದಿನ ಕಥೆ

    ಸುಮಾ ರಾಜ್ ಕುಮಾರ್, ಮಹಾರಾಣಿ ಸುಮಿತ್ರಾ ದೇವಿ ಎಂದು ಗುರುತಿಸಿಕೊಳ್ಳಲು ಒಂದು ಇತಿಹಾಸವಿದೆ. ಅದೇನಪ್ಪಾ ಅಂದ್ರೆ, ಸುಮಾ ರಾಜ್ ಕುಮಾರ್ ಅವರ ತಂದೆ ಚಿಕ್ಕ ವಯಸ್ಸಿನಲ್ಲಿ ಚಿಕ್ಕಪ್ಪನ ಜೊತೆ ಅರಮನೆಯಲ್ಲಿ ಊಟ ಮಾಡುತ್ತಿದ್ದರಂತೆ. ಅದನ್ನ ಜೀವನ ಪರ್ಯಾಂತ ಮರೆಯಬಾರದು ಎಂಬ ಕಾರಣಕ್ಕೆ, ಹಿರಿಯ ಮಗಳಿಗೆ ರಾಣಿ ಮಂಜುಳಾ ದೇವಿ, ಮಗನಿಗೆ ರಾಜಕುಮಾರ್ ಹಾಗೂ ಸುಮ ಅವರಿಗೆ ಮಹಾರಾಣಿ ಸುಮಿತ್ರಾ ದೇವಿ ಎಂದು ಹೆಸರಿಟ್ಟಿದ್ದರಂತೆ. ಮದುವೆಯ ನಂತರ ಸುಮಾ ರಾಜ್ ಕುಮಾರ್ ಆಗಿ ಹೆಸರು ಬದಲಿಸಿಕೊಂಡಿದ್ದಾರೆ.

    'ಬಿಗ್ ಬಾಸ್' ಕಾರ್ಯಕ್ರಮದ ಹೊರಗಿನ ಚಂದನ್ ಶೆಟ್ಟಿ ಕಥೆ ಕೇಳಿ!'ಬಿಗ್ ಬಾಸ್' ಕಾರ್ಯಕ್ರಮದ ಹೊರಗಿನ ಚಂದನ್ ಶೆಟ್ಟಿ ಕಥೆ ಕೇಳಿ!

    ಸುಮಾ ಬಗ್ಗೆ ಪತಿ ರಾಜ್ ಕುಮಾರ್ ಹೇಳಿದ್ದೇನು?

    ಸುಮಾ ಬಗ್ಗೆ ಪತಿ ರಾಜ್ ಕುಮಾರ್ ಹೇಳಿದ್ದೇನು?

    ತನ್ನ ಮಾತನ್ನೇ ಬಂಡವಾಳ ಮಾಡಿಕೊಂಡು ಗೊಂಬೆ ಶೋ & ಮ್ಯಾಜಿಕ್ ಕಾರ್ಯಕ್ರಮಗಳನ್ನ ಮಾಡಿಕೊಡ್ತಿದ್ದಾರೆ. ಹೊಟ್ಟೆ ಹಸಿದಾಗ ಮಾತ್ರ ಕೋಪ ಬರುತ್ತೆ. ಅದು ಅವರ ಸ್ವಭಾವವೆಂದು ತಿಳಿಸಿದರು.

    ಸುರಸುಂದರಿ, ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಬಗ್ಗೆ ನಿಮಗೆಷ್ಟು ಗೊತ್ತು.?ಸುರಸುಂದರಿ, ಹೊರನಾಡ ಕನ್ನಡತಿ ಶ್ರುತಿ ಪ್ರಕಾಶ್ ಬಗ್ಗೆ ನಿಮಗೆಷ್ಟು ಗೊತ್ತು.?

    'ಬಿಗ್ ಬಾಸ್' ಯಾಕೆ?

    'ಬಿಗ್ ಬಾಸ್' ಯಾಕೆ?

    'ಬಿಗ್ ಬಾಸ್' ಯಾಕೆ ಎಂದು ಸುದೀಪ್ ಅವರು ಕೇಳಿದ್ದಕ್ಕೆ ಜೀವನದಲ್ಲಿ ಒಂದು ಆಸೆ ಅದಕ್ಕೆ ಬಿಗ್ ಬಾಸ್ ಅಂತಾರೆ ಸುಮಾ ರಾಜ್ ಕುಮಾರ್. ಅಂದ್ಹಾಗೆ, ಸುಮಾ ಅವರು ಅಡುಗೆ ಚೆನ್ನಾಗಿ ಮಾಡ್ತಾರೆ. ಆದ್ರೆ, ಸಸ್ಯಹಾರಿಗಳಿಗೆ ಮಾತ್ರವೆನ್ನುವುದು ಗಮನಾರ್ಹ.

    'ಬಿಗ್ ಬಾಸ್' ಲೆಕ್ಕಾಚಾರವನ್ನೇ ಉಲ್ಟಾ ಮಾಡ್ತಾರಾ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.?'ಬಿಗ್ ಬಾಸ್' ಲೆಕ್ಕಾಚಾರವನ್ನೇ ಉಲ್ಟಾ ಮಾಡ್ತಾರಾ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್.?

    English summary
    Who is Suma Rajkumar.? Read the article to know more about Bigg Boss Kannada 5 Contestant Suma Rajkumar and her background.
    Tuesday, October 17, 2017, 13:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X