ವಿಷ್ಣುವರ್ಧನ್ ಮಗಳಾಗಿದ್ದ ತೇಜಸ್ವಿನಿ ಪ್ರಕಾಶ್ ಈಗ 'ಬಿಗ್ ಬಾಸ್' ಮೆಟ್ಟಿಲೇರಿದ್ದಾರೆ!
ಈ ಬಾರಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹದಿಮೂರನೇ ಸ್ಪರ್ಧಿಯಾಗಿದ್ದು ನಟಿ ತೇಜಸ್ವಿನಿ ಪ್ರಕಾಶ್. ತೇಜಸ್ವಿನಿ ಇತ್ತ ಚಿಕ್ಕ ಪುಟ್ಟ ನಟಿಯೂ ಅಲ್ಲ.. ಅತ್ತ ದೊಡ್ಡ ಸ್ಟಾರ್ ಕೂಡ ಅಲ್ಲ. ಹೀಗಾಗಿ ತೇಜಸ್ವಿನಿ ಬಗ್ಗೆ ಅನೇಕರಿಗೆ ಹೆಚ್ಚು ಗೊತ್ತಿಲ್ಲ.
ತೇಜಸ್ವಿನಿ ಅಪ್ಪಟ್ಟ ಕನ್ನಡದ ನಟಿ. ಡಾ.ವಿಷ್ಣುವರ್ಧನ್ ಮಗಳಾಗಿ ನಟಿಸಿರುವ ಖ್ಯಾತಿ ಅವರಿಗೆ ಇದೆ. ಸದ್ಯ ಸಿನಿಮಾದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ತೇಜಸ್ವಿನಿ ಈಗ 'ಬಿಗ್ ಬಾಸ್' ಮೂಲಕ ದರ್ಶನ ನೀಡಿದ್ದಾರೆ.
ಈ ಬಾರಿಯ 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮ ಸ್ಪರ್ಧಿಗಳ ಪೈಕಿ ಒಬ್ಬರಾದ ತೇಜಸ್ವಿನಿ ಪ್ರಕಾಶ್ ಅವರ ಬಗ್ಗೆ ಕೆಲ ವಿವರಗಳು ಇಲ್ಲಿದೆ ಓದಿ...

ಸಿನಿಮಾ ನಂಟು
ತೇಜಸ್ಟಿನಿ ಅವರ ತಂದೆ ಸಿನಿಮಾಗಳಲ್ಲಿ ಸ್ಟಂಟ್ ಮ್ಯಾನ್ ಆಗಿದ್ದು, ಅವರೂ ಕೂಡ ಸಿನಿಮಾದಲ್ಲಿ ನಟಿಸಿದ್ದರು. ಇನ್ನೂ ಸಾಯಿ ಬಾಬಾ ಭಕ್ತೆ ಆಗಿರುವ ಇವರಿಗೆ ಟ್ರಾವೆಲಿಂಗ್ ಅಂದರೆ ಸಖತ್ ಇಷ್ಟ.

ವಿಷ್ಣುವರ್ಧನ್ ಜೊತೆ ನಟನೆ
ನಟ ವಿಷ್ಣುವರ್ಧನ್ ಅವರ ಜೊತೆಗೆ ಮಗಳ ಪಾತ್ರದಲ್ಲಿ 'ಮಾತಾಡ್ ಮಾತಾಡು ಮಲ್ಲಿಗೆ' ಸಿನಿಮಾದಲ್ಲಿ ತೇಜಸ್ವಿನಿ ನಟಿಸಿದ್ದರು.

ಸೈಮಾ ಪ್ರಶಸ್ತಿ
'ಗೂಳಿಹಟ್ಟಿ' ಚಿತ್ರದ ನಟನೆಗಾಗಿ 'ಸೈಮಾ ಪ್ರಶಸ್ತಿ'ಯನ್ನು ತೇಜಸ್ವಿನಿ ಮುಡಿಗೇರಿಸಿಕೊಂಡಿದ್ದರು.

ಅನೇಕ ಚಿತ್ರದಲ್ಲಿ ನಟಿಸಿದ್ದಾರೆ
ತೇಜಸ್ವಿನಿ 'ಸವಿ ಸವಿ ನೆನಪು', 'MR. ಪ್ರೇಮಿ', 'ಕಿಲಾಡಿ ಕೃಷ್ಣ', 'ನಿತ್ಯ ಸತ್ಯ' ರೀತಿಯ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವುಗಳಲ್ಲಿ ಗೆದ್ದ ಸಿನಿಮಾಗಳು ಕೆಲವೇ ಕೆಲವು.

ತೆಲುಗು ಸಿನಿಮಾದಲ್ಲಿ ನಟನೆ
ಕನ್ನಡ ಮಾತ್ರವಲ್ಲದೆ ತೆಲುಗು ಚಿತ್ರದಲ್ಲಿಯೂ ತೇಜಸ್ವಿನಿ ನಟಿಸಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ಹೇಳಿಕೊಳ್ಳುವ ಮಟ್ಟಿಗೆ ಯಶಸ್ಸು ಸಿಗಲಿಲ್ಲ.

ಧಾರಾವಾಹಿಗಳಲ್ಲಿ ಅಭಿನಯ
ಸಿನಿಮಾದ ಜೊತೆ ಜೊತೆಗೆ 'ನಿಹಾರಿಕ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿಯೂ ತೇಜಸ್ವಿನಿ ಅಭಿನಯಿಸಿದ್ದಾರೆ.

ಸೂಪರ್ ಹಿಟ್ ಆಗ್ತೀನಿ
ಇಷ್ಟು ದಿನ ಸೋಲು ಗೆಲುವು ಏನೇ ಇದ್ದರೂ ಈಗ ತೇಜಸ್ವಿನಿ 'ಬಿಗ್ ಬಾಸ್' ಮನೆಗೆ ಹೋಗಿದ್ದಾರೆ. ''ನಾನು ಒಂಟಿಯಾಗಿ 100 ಡೇಸ್ ಇದ್ದು, ಸೂಪರ್ ಹಿಟ್ ಆಗಿ ಆಚೆ ಬರುತ್ತೀನಿ'' ಎಂದು ಹೇಳಿ ತೇಜಸ್ವಿನಿ ಬಿಗ್ ಹೌಸ್ ಪ್ರವೇಶಿಸಿದ್ದಾರೆ.


Click it and Unblock the Notifications











