"ತಂದೆ-ತಾಯಿ ನನ್ನನ್ನು ದೂರ ಮಾಡಿದರು" - ಆಡಂ ಪಾಶಾ

Recommended Video

Bigg Boss Kannada Season 6: ಬಿಗ್ ಮನೆಗೆ ಮೊದಲ ಬಾರಿಗೆ ಕಾಲಿಟ್ಟ ಮಂಗಳಮುಖಿ ಆಡಂ ಪಾಶಾ ಕಥೆ ಕೇಳಿ

ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿ ಆರಂಭವಾಗಿದ್ದು, ಹಲವು ಅಚ್ಚರಿಗಳು ಗಮನ ಸೆಳೆದಿದೆ. ಅವರು ಬರ್ತಾರೆ, ಇವರು ಬರ್ತಾರೆ ಎಂಬ ಲೆಕ್ಕಾಚಾರವನ್ನ ಉಲ್ಟಾ ಮಾಡಿದ ಬಿಗ್ ಬಾಸ್ ಬಹುತೇಕ ಸೆಮಿ ಸೆಲೆಬ್ರಿಟಿ ಹಾಗೂ ಜನಸಾಮಾನ್ಯರಿಗೆ ಮಣೆ ಹಾಕಿದ್ದಾರೆ. ಹೇಳಿಕೊಳ್ಳುವಂತಹ ಸಿನಿಮಾ ನಟ-ನಟಿಯರು ಯಾರೂ ಇಲ್ಲ.

ಆದ್ರೆ, ಈ ಬಾರಿಯ ಬಿಗ್ ಬಾಸ್ ನಲ್ಲಿ ಇದೆಲ್ಲವನ್ನ ಸೈಡಿಗಿಟ್ಟು ಆಕರ್ಷಣೆ ಮಾಡಿದ್ದು ಮಾತ್ರ ಮಂಗಳಮುಖಿ ಆಡಂ ಪಾಶಾ. ಹೌದು, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಶೋಗೆ ಮಂಗಳಮುಖಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

ಆಡಂ ಪಾಶ ಮೂಲತಃ ಕರ್ನಾಟಕದವರಾದ್ರೂ, ಬೆಳೆದಿದ್ದೆಲ್ಲವೂ ವಿದೇಶದಲ್ಲಿ. ಮಂಗಳಮುಖಿಯಾಗಿ ಆಡಂಪಾಶಾ ಮಾಡಿರುವ ಸಾಧನೆಗೆ ನಿಜಕ್ಕೂ ಶ್ಲಾಘನೀಯ. ಇನ್ನು ಬಿಗ್ ಬಾಸ್ ಗೆ ಅವರು ಬಂದಿರುವ ಉದ್ದೇಶವೂ ಮೆಚ್ಚುವಂತಹದ್ದು. ಹಾಗಿದ್ರೆ, ಆಡಂ ಪಾಶಾ ಹಿನ್ನೆಲೆ ಏನು.? ಮುಂದೆ ಓದಿ.....

18ನೇ ವಯಸ್ಸಿನಲ್ಲಿ ಮಂಗಳಮುಖಿ ಬಗ್ಗೆ ಅರಿವು

18ನೇ ವಯಸ್ಸಿನಲ್ಲಿ ಮಂಗಳಮುಖಿ ಬಗ್ಗೆ ಅರಿವು

ಆಡಂ ಪಾಶಾ ಅವರು ಹುಟ್ಟಿದ್ದು ಮತ್ತು ಬೆಳದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ಬೆಂಗಳೂರಿನ ಬೆಟ್ಟದಾಸನಪುರದಲ್ಲಿ ನೆಲೆಸಿದ್ದಾರೆ. ನಾಲ್ಕು ವರ್ಷದಲ್ಲೇ ಡ್ಯಾನ್ಸ್ ಆರಂಭಿಸಿದ್ದ ಆಡಂಗೆ ಈಗ 35 ವರ್ಷ ವಯಸ್ಸು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿ, ವೃತ್ತಿಯಲ್ಲಿ ಡ್ಯಾನ್ಸರ್ ಆಗಿದ್ದಾರೆ.

'ಡ್ರ್ಯಾಗ್ ಕ್ವೀನ್' ಎಂದೇ ಖ್ಯಾತಿ

'ಡ್ರ್ಯಾಗ್ ಕ್ವೀನ್' ಎಂದೇ ಖ್ಯಾತಿ

ಮಂಗಳಮುಖಿ ಎಂದೇ ಯಾವತ್ತೂ ಕೀಳರಿಮೆ ಪಡೆದ ಇವರು ಅದನ್ನೇ ಚಾಲೆಂಜ್ ಆಗಿ ಸ್ವೀಕರಿಸಿ ವೃತ್ತಿಯಲ್ಲಿ ಯಶಸ್ಸು ಕಂಡಿದ್ದಾರೆ. ವಿದೇಶದಲ್ಲಿ ನಾರ್ಮಲ್ ಹುಡುಗನೊಬ್ಬ ಹುಡುಗಿಯ ಬಟ್ಟೆ ಹಾಕ್ಕೊಂಡು ಕಾರ್ಯಕ್ರಮ ಕೊಡೋದು. ಬೆಂಗಳೂರಿನ ಮೊದಲ 'ಡ್ರ್ಯಾಗ್ ಕ್ವೀನ್' ಎಂದೇ ಖ್ಯಾತಿ ಗಳಿಸಿಕೊಂಡಿದ್ದಾರೆ. ಈಗಾಗಲೇ ದೇಶ-ವಿದೇಶದಲ್ಲೂ ಶೋ ಕೊಟ್ಟಿದ್ದಾರೆ. 2009 ರಲ್ಲಿ ಇಂಡಿಯನ್ ಸೂಪರ್ ಕ್ವೀನ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂತರ 2010 ರಲ್ಲಿ ಥೈಲೆಂಡ್​ನಲ್ಲಿ ನಡೆದ ಇಂಟರ್​ನ್ಯಾಷನಲ್​ ಸೂಪರ್​ ಕ್ವೀನ್​ ಕಿರೀಟವನ್ನ ಗೆದ್ದಿದ್ದರು.

ತಂದೆ-ತಾಯಿ ದೂರ ಮಾಡಿದರು

ತಂದೆ-ತಾಯಿ ದೂರ ಮಾಡಿದರು

ಆಡಂ ಪಾಶಾ ಅವರು ತೃತೀಯ ಲಿಂಗಿ ಎಂದು ಗೊತ್ತಾಗುತ್ತಿದ್ದಂತೆ ಮನೆಯವರು ದೂರ ಮಾಡಿಕೊಂಡರಂತೆ. ಅವರ ತಾಯಿ ನಾರಾಯಣ ಹೃದಯಾಲಯ ಮತ್ತು ಮಲ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು. 2010ರಲ್ಲಿ ನಿಧನರಾದರು. ಅಮ್ಮ ನಿಧನವಾದ ನಂತರ ನಾನು ವಿದೇಶಕ್ಕೆ ಹೋದೆ. ಬಟ್, ನಮ್ಮ ತಂದೆ ಜೊತೆ ನಾನು ಯಾವತ್ತು ಖುಷಿಯಾಗಿಲ್ಲ.

ಅಪ್ಪನಿಂದ ನೋವು ತಿಂದಿದ್ದರು

ಅಪ್ಪನಿಂದ ನೋವು ತಿಂದಿದ್ದರು

ಆಡಂ ಪಾಶಾ ಅವರಿಗೆ ಇಬ್ಬರು ಅಕ್ಕಂದಿರಿದ್ದಾರೆ. ಒಮ್ಮೆ ಆಡಂ ಅವರ ದೊಡ್ಡ ಅಕ್ಕ ಫೋನ್ ಮಾಡಿ ಅಪ್ಪಗೆ ಆರೋಗ್ಯ ಚೆನ್ನಾಗಿಲ್ಲ ಬೇಗ ವಾಪಸ್ ಬಾ ಎಂದರಂತೆ. ಆಗ ವಿದೇಶದಿಂದ ವಾಪಸ್ ಬಂದ ಆಡಂಗೆ ತಂದೆ ಸ್ವಾಗತಿಸಲಿಲ್ಲ. ನೀನು ಹಿಜಿಡಾ, ನೀನ್ಯಾಕೆ ನನ್ನ ನೋಡಲು ಬಂದೆ, ಹೋಗು ಎಂದು ನಿಂದಿಸಿದರಂತೆ. ಈ ನೋವನ್ನ ಆಡಂ ಹೇಳಿಕೊಂಡರು.

ನಮಗೂ ಬದುಕುವ ಹಕ್ಕಿದೆ

ನಮಗೂ ಬದುಕುವ ಹಕ್ಕಿದೆ

ನನಗೆ ಯಾವುದೇ ಪ್ಲ್ಯಾನ್ ಮಾಡೋಕೆ ಬರಲ್ಲ. ನಾನು ಇಲ್ಲಿಗೆ ಬಂದಿರುವುದು ಜನರಿಗೆ ನಮ್ಮಂತ ಜನರು ಇದ್ದಾರೆ ಅಂತ ತೋರಿಸುವುದಕ್ಕೆ ಅಷ್ಟೇ. ನಾವು ಎಲ್ಲರಂತೆ ಬದುಕಬಹುದು ಎಂದು ಸಾಮಾನ್ಯರಿಗೆ ಗೊತ್ತಾಗಬೇಕಿದೆ ಎಂದು ಉದ್ದೇಶ ಹೊಂದಿದ್ದಾರೆ.

ನೂರು ದಿನ ಇರ್ತಾರಂತೆ

ನೂರು ದಿನ ಇರ್ತಾರಂತೆ

ಈ ಬಾರಿ ಬಿಗ್ ಬಾಸ್ ನಲ್ಲಿ ಭಾಗವಹಿಸಿರುವ ವಿಭಿನ್ನ ವ್ಯಕ್ತಿತ್ವದ ಪಾತ್ರಗಳಲ್ಲಿ ಮಂಗಳಮುಖಿ ಆಡಂ ಪಾಶಾ ಅವರು ವಿಶೇಷ ಮತ್ತು ಆಕರ್ಷಕ. ಇವರು ಬಿಗ್ ಬಾಸ್ ಮನೆಯಲ್ಲಿ ಪಕ್ಕಾ ನೂರು ದಿನ ಇದ್ದೇ ಇರ್ತಾರೆ ಅಂತ ಮಾಜಿ ಸ್ಪರ್ಧಿಗಳು ಶ್ರುತಿ, ನಿವೇದಿತಾ ಗೌಡ, ಅರುಣ್ ಸಾಗರ್ ಭವಿಷ್ಯ ನುಡಿದರು.

More from Filmibeat

English summary
All about bigg boss kannada 6 contestant transgender adam pasha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X