ರಂಗಭೂಮಿಯ ಅಕ್ಷತಾಗೆ ಆಸರೆ ನೀಡುತ್ತಾ 'ಬಿಗ್ ಬಾಸ್' ಮನೆ
Recommended Video

ನಿಜ ಜೀವನದಲ್ಲಿ ನಾಟಕ ಮಾಡುವುದು ಸುಲಭ. ಆದರೆ, ವೇದಿಕೆ ಏರಿ ಅಷ್ಟೊಂದು ಜನರ ಮುಂದೆ ನಿಂತು ನಾಟಕ ಮಾಡುವುದು ಕಷ್ಟ. ಆ ವಿಷಯದಲ್ಲಿ ಅಕ್ಷತಾ ಪಾಂಡವಪುರ ಈಗಾಗಲೇ ಗೆದ್ದಿದ್ದಾರೆ.
ಮೇಕಪ್ ಹಾಕಿ ನಾಟಕ ಮಾಡುತ್ತಿದ್ದ ಅಕ್ಷತಾ ಈಗ ಮೇಕಪ್ ಇಲ್ಲದೆ ನಾಟಕ ಮಾಡುವ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಪ್ರಯೋಗಾತ್ಮಕ ನಾಟಕಗಳನ್ನು ಮಾಡುತ್ತಿದ್ದ ಅವರು ಈಗ ರಿಯಲ್ ಜೀವನದ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಒಂದು ವಾರ ಮುಗಿದಿರುವ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಏನೇನೋ ಆಗಿ ಹೋಗಿದೆ. ಈ ಬಾರಿಯ ಸ್ಪರ್ಧಿಗಳ ಪೈಕಿ ಒಬ್ಬರಾಗಿರುವ ಅಕ್ಷತಾ ಎಲ್ಲರ ಗಮನ ಸೆಳೆದಿದ್ದಾರೆ.
ಹಾಗಾದರೆ, ಬಿಗ್ ಬಾಸ್ ಮನೆ ಸೇರಿರುವ ಅಕ್ಷತಾ ಪಾಂಡವಪುರ ಯಾರು ಎನ್ನುವ ಕುತೂಹಲ ಇದ್ದರೆ ಮುಂದೆ ಓದಿ....

ಅಕ್ಷತಾ ಪಾಂಡವಪುರ ಹಿನ್ನಲೆ
ಹೆಸರೇ ಹೇಳುವಂತೆ ಅಕ್ಷತಾ ಮೂಲತಃ ಪಾಂಡವಪುರದ ಹುಡುಗಿ. ಈಗ ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮುಗಿಸಿದ ಅವರು ನಂತರ ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡರು.

ನೀನಾಸಂ ನಲ್ಲಿ ರಂಗ ತರಬೇತಿ
ಪ್ರಾರಂಭದಲ್ಲಿ ಅಕ್ಷತಾ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕ್ಕಿನ ನೀನಾಸಂ ನಲ್ಲಿ ರಂಗ ತರಬೇತಿ ಪಡೆದರು. ನಂತರ ದೆಹಲಿಯ ನ್ಯಾಷಿನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಮೂರು ವರ್ಷ ರಂಗಭೂಮಿಯ ಬಗ್ಗೆ ತಿಳಿದುಕೊಂಡರು. ಆ ಎರಡು ಜಾಗಗಳು ಅವರ ರಂಗಭೂಮಿಯ ಜ್ಞಾನವನ್ನು ಹೆಚ್ಚಿಸುವುದಕ್ಕೆ ಕಾರಣವಾಯ್ತು.

'ಒಬ್ಬಳು' ನಾಟಕ ಯಶಸ್ವಿ ಪ್ರದರ್ಶನ
'ಒಬ್ಬಳು' ಅಕ್ಷತಾ ಪಾಂಡವಪುರ ಅವರ ಇತ್ತೀಚಿಗಿನ ನಾಟಕ. ಈ ನಾಟಕ ಏಕ ವ್ಯಕ್ತಿ ಪ್ರದರ್ಶನವಾಗಿದ್ದು, ಸುಮಾರು 30ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಪ್ರಸನ್ನ ಡಿ ಈ ನಾಟಕದ ನಿರ್ದೇಶನ ಮಾಡಿದ್ದಾರೆ. ಇದು ಅಕ್ಷತಾರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿದೆ.

ರಾಜ್ಯ ಪ್ರಶಸ್ತಿ ಬಂದಿದೆ
ನಾಟಕಗಳ ಜೊತೆ ಜೊತೆಗೆ ಸಿನಿಮಾಗಳಲ್ಲಿಯೂ ಅಕ್ಷತಾ ಅಭಿನಯಿಸಿದ್ದಾರೆ. 'ಪಲ್ಲಟ' ಎನ್ನುವ ಸಿನಿಮಾದ ನಟನೆಗೆ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಎಸ್ ಪಿ ರಘು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು.

ಅಕ್ಷತಾ ಅವರ ಕನಸು
ಪಾಂಡವಪುರದ ಕೆ ಎಸ್ ಪುಟ್ಟಣ್ಣಯ್ಯ ಅಕ್ಷತಾ ಅವರ ಮಾನಸ ಗುರುಗಳಂತೆ. ಆ ಊರಿನ ಪ್ರತಿ ರೈತ ಕುಟುಂಬದಲ್ಲಿ ಒಬ್ಬರು ರಂಗಭೂಮಿಗೆ ಬರಬೇಕು, ಹಾಗೂ ಅವರ ಜೊತೆಗೆ ದೇಶ ವಿದೇಶದಲ್ಲಿ ನಾಟಕ ಮಾಡಬೇಕು ಎನ್ನುವುದು ಅಕ್ಷತಾ ಕನಸಾಗಿದೆ. ಇದೇ ಕಾರಣದಿಂದ 'ದಿ ಚಾನಲ್ ಥೇಟರ್ಸ್' ಎನ್ನುವ ತಮ್ಮದೆ ಆದ ರಂಗ ತಂಡವನ್ನು ಕಟ್ಟಿಕೊಂಡಿದ್ದಾರೆ.


Click it and Unblock the Notifications











