'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.?

Recommended Video

Bigg Boss Kannada Season 6 : ಬಿಗ್ ಬಾಸ್ ಸ್ಪರ್ಧಿ ಆನಂದ್ ಮಾಲಗತ್ತಿ ಕಿರು ಪರಿಚಯ | Filmibeat Kannada

ಪ್ರತಿದಿನ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಟಿಕೆಟ್ ಕೊಡುವ ಕಂಡಕ್ಟರ್ ಆನಂದ ಮಾಲಗತ್ತಿ ಅವರಿಗೆ 'ಬಿಗ್ ಬಾಸ್' ಮನೆಯೊಳಗೆ ಹೋಗುವ ಟಿಕೆಟ್ ಈ ಬಾರಿ ಸಿಕ್ಕಿದೆ.

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 'ಕಾಮನ್ ಮ್ಯಾನ್' ಸ್ಪರ್ಧಿಗಳ ಪೈಕಿ ಆನಂದ ಮಾಲಗತ್ತಿ ಕೂಡ ಒಬ್ಬರು. 'ಒಳ್ಳೆ ಹುಡುಗ' ಪ್ರಥಮ್ ನಂತೆ ಡೈಲಾಗ್ ಹೊಡೆಯುವ ಆನಂದ ಮಾಲಗತ್ತಿ 'ಸಾಧನೆ' ಮಾಡಲು 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ.

ಪ್ರಥಮ್, ಚಂದನ್ ಶೆಟ್ಟಿ ಹಾಗೂ ದಿವಾಕರ್ ಕಂಡ್ರೆ ಆನಂದ ಮಾಲಗತ್ತಿ ಅವರಿಗೆ ಸಿಕ್ಕಾಪಟ್ಟೆ ಇಷ್ಟ ಅಂತೆ. ಅವರುಗಳಂತೆಯೇ 'ಬಿಗ್ ಬಾಸ್' ಮನೆಯಲ್ಲಿ ಆಟ ಆಡ್ತಾರಾ ಆನಂದ ಮಾಲಗತ್ತಿ.? ಗೊತ್ತಿಲ್ಲ. ಸದ್ಯಕ್ಕೆ ಅವರ ಬಗ್ಗೆ ಕಿರುಪರಿಚಯ ಇಲ್ಲಿದೆ, ಓದಿರಿ...

ಯಾದಗಿರಿಯ ಯುವಕ ಆನಂದ

ಯಾದಗಿರಿಯ ಯುವಕ ಆನಂದ

ಆನಂದ ಮಾಲಗತ್ತಿ ಮೂಲತಃ ಯಾದಗಿರಿ ಜಿಲ್ಲೆಯ ಕಲ್ಲದೇವನಹಳ್ಳಿ ಗ್ರಾಮದವರು. ಮೂರು ವರ್ಷ ಇರುವಾಗಲೇ, ತಾಯಿಯನ್ನ ಕಳೆದುಕೊಂಡ ಆನಂದ ಮಾಲಗತ್ತಿ ಕಷ್ಟಪಟ್ಟು ಜೀವನ ಸಾಗಿಸಿದ್ದಾರೆ.

ಬಸ್ ಕಂಡಕ್ಟರ್

ಬಸ್ ಕಂಡಕ್ಟರ್

25 ವರ್ಷದ ಆನಂದ ಮಾಲಗತ್ತಿ ಆರು ವರ್ಷಗಳಿಂದ ಬಿ.ಎಂ.ಟಿ.ಸಿ ಬಸ್ ಕಂಡಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಹೋದ್ಯೋಗಿಯನ್ನೇ ಪ್ರೀತಿಸಿ ಮದುವೆ ಆಗಿರುವ ಆನಂದ ಮಾಲಗತ್ತಿ ಅವರಿಗೆ ಮುದ್ದಾದ ಮಗು ಇದೆ.

'ಬಿಗ್ ಬಾಸ್' ವೀಕ್ಷಕ

'ಬಿಗ್ ಬಾಸ್' ವೀಕ್ಷಕ

'ಬಿಗ್ ಬಾಸ್ ಕನ್ನಡ-3', 'ಬಿಗ್ ಬಾಸ್ ಕನ್ನಡ-4', 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಗಳನ್ನ ಮಿಸ್ ಮಾಡದೆ ನೋಡಿದ್ದಾರಂತೆ ಆನಂದ ಮಾಲಗತ್ತಿ. ಪ್ರಥಮ್, ದಿವಾಕರ್ ಹಾಗೂ ಚಂದನ್ ಶೆಟ್ಟಿ ಅಂದ್ರೆ ಇವರಿಗೆ ಅಚ್ಚುಮೆಚ್ಚು.

'ಬಿಗ್ ಬಾಸ್' ಗೆಲ್ತಾರಾ ಆನಂದ ಮಾಲಗತ್ತಿ.?

'ಬಿಗ್ ಬಾಸ್' ಗೆಲ್ತಾರಾ ಆನಂದ ಮಾಲಗತ್ತಿ.?

ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಲು 'ಬಿಗ್ ಬಾಸ್' ಗೆಲ್ಲಬೇಕು ಅನ್ನೋದು ಆನಂದ ಮಾಲಗತ್ತಿ ಬಯಕೆ. ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಇವರು 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ. ಆನಂದ್ ಮಾಲಗತ್ತಿ ಅವರನ್ನ ಗೆಲ್ಲಿಸುವುದು, ಬಿಡುವುದು ನಿಮ್ಮ ಕೈಯಲ್ಲೇ ಇದೆ.

More from Filmibeat

English summary
Anand Malagatti, Bigg Boss Kannada 6 Contestant hails from Yadagiri. Read the article to know more about Anand Malagatti and his background.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X