'ತಿಂಡಿಪೋತ' ಆಂಡ್ರೂ ಆಹಾರ ಪದ್ಧತಿ ನೋಡಿದ್ರೆ ಬೆರಗಾಗ್ತೀರಾ.!
'ಬಿಗ್ ಬಾಸ್ ಅನ್ನೋದು ಒಂದು ಆಟ. ಅಲ್ಲಿ ಆಡಿಸೋದು ಅಂದ್ರೆ ಊಟ. ಅದು ಗೊತ್ತಿದ್ದು ಕೂಡ ಈ ತೂಕದ ಮನುಷ್ಯ ಇಲ್ಲಿ ಯಾಕೆ ಬರ್ತಿದ್ದಾರೆ' ಎಂದು ಪರಿಚಯ ಮಾಡಿ ಇವರನ್ನ ಬಿಗ್ ಮನೆಗೆ ಕಿಚ್ಚ ಸುದೀಪ್ ಬರಮಾಡಿಕೊಂಡರು. ಇವರ ಹೆಸರು ಆಂಡ್ರೂ.
'ಬಿಗ್ ಬಾಸ್' ಆರನೇ ಆವೃತ್ತಿಯಲ್ಲಿ ಎರಡನೇ ಸ್ಪರ್ಧಿಯಾಗಿ ಕಾಲಿಟ್ಟ ಆಂಡ್ರೂ ಬರೋಬ್ಬರಿ 140 ಕೆಜಿ ಇದ್ದಾರೆ. ಇವರೇ ಹೇಳೋಹಾಗೆ ಇವರೊಬ್ಬ ತಿಂಡಿಪೋತ. ಏನ್ ಕೊಟ್ರು ತಿನ್ನುವಷ್ಟು ತಿಂಡಿಗಳು ಅಂದ್ರೆ ಇವರಿಗೆ ಸಿಕ್ಕಾಪಟ್ಟೆ ಇಷ್ಟ.
ಬಿಗ್ ಬಾಸ್ ಮನೇಲೆ ಎಂತಹ ಟಾಸ್ಕ್ ಕೊಟ್ರು ಮಾಡ್ತೀನಿ, ಆದ್ರೆ, ಸಮಯಕ್ಕೆ ತಕ್ಕ ಹಾಗೆ ಊಟ ಕೊಟ್ಬಿಡಿ ಅಂತಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಹೇಗೆ ಇರಬೇಕು ಅಂತ ಪಕ್ಕಾ ಪ್ಲಾನ್ ಮಾಡಿ ಬಂದಿದ್ದಾರಂತೆ. ಅಷ್ಟಕ್ಕೂ, ತಿಂಡಿಪೋತ ಆಂಡ್ರೂ ಯಾರು.? ಮುಂದೆ ಓದಿ.....

ಬೆಂಗಳೂರಿನ ದೈತ್ಯ ಪ್ರತಿಭೆ
ಯಾವಾಗಲೂ ಖುಷಿಯಾಗಿರುವುದು ಆಂಡ್ರೂ ಸ್ವಭಾವ. ಕ್ರೇಜಿಯಾಗಿರುವುದು ಇವರಿಗೆ ಇಷ್ಟ. ಯಾವುದೇ ಜಗಳ ಮಾಡ್ಕೋಬಾರದು, ಬೇರೆಯವರ ವಿಷ್ಯಕ್ಕೆ ತಲೆ ಹಾಕಬಾರದು ಅಂದುಕೊಂಡು ಬಿಗ್ ಬಾಸ್ ಮನೆಗೆ ಹೋಗಿದ್ದಾರೆ. ಇವರು ಮೂಲತಃ ಬೆಂಗಳೂರು. ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರು. ಹೀಗಾಗಿ, ಇವರು ಅಪ್ಪಟ ಬೆಂಗಳೂರಿನ ದೈತ್ಯ ಪ್ರತಿಭೆ.

ಮಿನಿ ಬುಲೆಟ್ ಅಂತೆ
ವೃತ್ತಿಯಲ್ಲಿ ಕಾಪ್ರೈಟ್ ಟ್ರೈನರ್ (corporate trainer) ಆಗಿರುವ ಆಂಡ್ರೂ ಬುಲೆಟ್ ಪ್ರಕಾಶ್ ಅವರನ್ನ ಫಾಲೋ ಮಾಡ್ತಿದ್ದಾರೆ. ಬುಲೆಟ್ ಪ್ರಕಾಶ್ ಅವರು ಈಗ ಸಣ್ಣ ಆಗಿದ್ದಾರೆ. ಅವರ ಜಾಗಕ್ಕೆ ನಾನು ಈಗ ಮಿನಿ ಬುಲೆಟ್ ಎಂದು ಹೇಳುವ ಆಂಡ್ರೂಗೆ ಮಾತೇ ಬಂಡವಾಳ. ಹಾಡ್ತಾರೆ, ನಗಿಸ್ತಾರೆ, ನಗ್ತಾರೆ, ಪಟಪಟಾ ಅಂತಹ ಡೈಲಾಗ್ ಹೇಳ್ತಾರೆ.

ಇವರ ಡಯಟ್ ಕೇಳಿದ್ರೆ ಶಾಕ್ ಆಗ್ತೀರಾ.?
ಅವರೇ ಹೇಳುವಾಗೆ ಅವರೊಬ್ಬ ತಿಂಡಿಪೋತ. ಸಣ್ಣ ಆಗ್ಬೇಕು ಎಂಬ ಆಸೆಯಿಲ್ಲ. ಒಂದು ವೇಳೆ ಸಣ್ಣ ಆದರೂ ಅದಕ್ಕಿಂತ ಖುಷಿ ಇನ್ನೊಂದಿಲ್ಲ ಎನ್ನುವ ಆಂಡ್ರೂಗೆ, 20 ಇಡ್ಲಿ, ಹಾಫ್ ಕೆಜಿ ಅನ್ನ, ಚಿಕ್ಕನ್ ಪೀಸ್, ಹದಿನೈದು ಚಪಾತಿ, ಅರ್ಧ ಕೆಜಿ ಮಟನ್ ಕೊಟ್ರೆ ಸಾಕು ಅಂತಾರೆ. ಇದು ಇವರು ಸಾಮಾನ್ಯವಾದ ಡಯಟ್ ಅಂತೆ. ಹಾಗಿದ್ರೆ, ರೆಗ್ಯೂಲರ್ ಊಟ ಹೇಗಿರಬಹುದು.?

ನೂರು ದಿನ ಇರ್ತಾರಂತೆ.?
ಕಾಮಾನ್ ಮ್ಯಾನ್ ವಿಭಾದಲ್ಲಿ ಬಿಗ್ ಬಾಸ್ ಮನೆಗೆ ಬಂದಿರುವ ಆಂಡ್ರೂ ಅವರು, ಬಹುಶಃ ಮನೆಯಲ್ಲಿ ನೂರು ದಿನ ಇರುವ ಭರವಸೆ ವ್ಯಕ್ತಪಡಿಸಿದ್ದಾರೆ. ಬಟ್, ಎಷ್ಟು ದಿನ ಇರ್ತಾರೋ ಗೊತ್ತಿಲ್ಲ. ಬಟ್, ಬಿಗ್ ಬಾಸ್ ಮನೆಯಲ್ಲಿ ಊಟದಿಂದಲೇ ಮಹಾಯುದ್ಧಗಳು ಆದ ಉದಾಹರಣೆಗಳಿವೆ. ಆಂಡ್ರೂ ಈ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸ್ತಾರೆ ಎಂಬ ನಿರೀಕ್ಷೆ ಪ್ರೇಕ್ಷರದ್ದು.


Click it and Unblock the Notifications











