twitter
    For Quick Alerts
    ALLOW NOTIFICATIONS  
    For Daily Alerts

    ಜಿಮ್ ರವಿ ಮಾಡಿರುವ ಸಾಧನೆ ಬಗ್ಗೆ ನಿಮಗೆಷ್ಟು ಗೊತ್ತು.?

    |

    Recommended Video

    Bigg Boss Kannada Season 6 : ಬಿಗ್ ಬಾಸ್ ಸ್ಪರ್ಧಿ ಜಿಮ್ ರವಿ ಪರಿಚಯ ಹಾಗು ಅವರ ಸಾಧನೆಯ ವಿವರ

    'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಊಟಕ್ಕಾಗಿ ನಡೆದ ಕಿತ್ತಾಟಗಳು ನಿಮಗೆ ನೆನಪಿರಬಹುದು. 'ಬಿಗ್ ಬಾಸ್' ಮನೆಯಲ್ಲಿ ತಿಂಡಿ-ಊಟಕ್ಕಾಗಿ, ರೇಷನ್ ಗಾಗಿ ಯುದ್ಧಗಳೇ ನಡೆದು ಹೋಗಿವೆ. ಹೀಗಿರುವಾಗ, ಬಾಡಿ ಬಿಲ್ಡರ್ ಒಬ್ಬರು 'ಬಿಗ್ ಬಾಸ್' ಸ್ಪರ್ಧಿ ಆಗಲು ಸಾಧ್ಯವೇ.?

    ಇಂತಹ ಅನುಮಾನ ಇರುವಾಗಲೇ, ಕನ್ನಡದ ಖ್ಯಾತ ಬಾಡಿ ಬಿಲ್ಡರ್ ಜಿಮ್ ರವಿ ಅಲಿಯಾಸ್ ಎ.ವಿ.ರವಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದಾರೆ.

    ''ಊಟ ಮಾಡಲು ನಾನು 'ಬಿಗ್ ಬಾಸ್' ಮನೆಗೆ ಬರುತ್ತಿಲ್ಲ. ಊಟ ಕೊಟ್ಟರೆ ಸಂತೋಷ, ಇಲ್ಲಾಂದ್ರೆ ಟಾಸ್ಕ್ ಮಾಡ್ತೀನಿ. ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡಬಹುದು ಎಂಬ ಅರಿವನ್ನು ಜನರಿಗೆ ಮೂಡಿಸಲು 'ಬಿಗ್ ಬಾಸ್' ಮನೆಗೆ ಬಂದಿದ್ದೇನೆ'' ಎಂದು ಹೆಮ್ಮೆಯಿಂದ ಹೇಳುತ್ತಾರೆ ಜಿಮ್ ರವಿ.

    ದೇಹದಾರ್ಢ್ಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಜಿಮ್ ರವಿ ಕುರಿತ ವಿವರ ಇಲ್ಲಿದೆ, ಓದಿರಿ...

    ಯಾರೀ ಜಿಮ್ ರವಿ.?

    ಯಾರೀ ಜಿಮ್ ರವಿ.?

    ಎ.ವಿ.ರವಿ ಅಲಿಯಾಸ್ ಜಿಮ್ ರವಿ ಮೂಲತಃ ಕೋಲಾರದವರು. ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು. ಪ್ರೋಟೀನ್ ಇಂಜೆಕ್ಷನ್ ಗಳನ್ನು ಪಡೆಯದೆ, ಮನೆ ಊಟ ಮಾಡಿ ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡಿ ಖ್ಯಾತಿ ಗಳಿಸಿರುವವರು ಇದೇ ಎ.ವಿ.ರವಿ.

    'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳು.!'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 18 ಸ್ಪರ್ಧಿಗಳು.!

    ಇವರಿಗೆ ವಯಸ್ಸು ಎಷ್ಟಿರಬಹುದು ಹೇಳಿ.?

    ಇವರಿಗೆ ವಯಸ್ಸು ಎಷ್ಟಿರಬಹುದು ಹೇಳಿ.?

    ನೋಡಲು ಕಟ್ಟುಮಸ್ತಾಗಿ ಕಾಣುವ ಎ.ವಿ.ರವಿ ವಯಸ್ಸು ಎಷ್ಟು ಇರಬಹುದು ಹೇಳಿ ನೋಡೋಣ. 38 ವರ್ಷಗಳಿಂದ ಜಿಮ್, ವರ್ಕೌಟ್ ಮಾಡುತ್ತಿರುವ ಎ.ವಿ.ರವಿ ಅವರಿಗೆ ಸದ್ಯ 52 ವರ್ಷ ವಯಸ್ಸು. ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡಿದರೆ ನೂರು ವರ್ಷ ಆರೋಗ್ಯವಾಗಿ ಬದುಕಬಹುದು ಅಂತಾರೆ ರವಿ.

    'ಬಿಗ್ ಬಾಸ್ ಕನ್ನಡ-6': ಒಟ್ಟು 18 ಸ್ಪರ್ಧಿಗಳು, ಅದರಲ್ಲಿ ಅರ್ಧದಷ್ಟು ಸೆಮಿ-ಸೆಲೆಬ್ರಿಟಿಗಳು.!'ಬಿಗ್ ಬಾಸ್ ಕನ್ನಡ-6': ಒಟ್ಟು 18 ಸ್ಪರ್ಧಿಗಳು, ಅದರಲ್ಲಿ ಅರ್ಧದಷ್ಟು ಸೆಮಿ-ಸೆಲೆಬ್ರಿಟಿಗಳು.!

    ಪಡೆದಿರುವ ಪ್ರಶಸ್ತಿ ಹಲವು.!

    ಪಡೆದಿರುವ ಪ್ರಶಸ್ತಿ ಹಲವು.!

    ರಾಜ್ಯ ಸರ್ಕಾರದಿಂದ ಏಕಲವ್ಯ ಪ್ರಶಸ್ತಿ ಪಡೆದಿರುವ ಎ.ವಿ.ರವಿ ಅನೇಕ ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 'ಭಾರತ ಶ್ರೀ', 'ಭಾರತ ಶ್ರೇಷ್ಠ', 'ಕರ್ನಾಟಕ ಶ್ರೀ', 'ಕರ್ನಾಟಕ ಶ್ರೇಷ್ಠ' ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಹಾಗೂ 90ಕ್ಕೂ ಹೆಚ್ಚು ಚಿನ್ನದ ಪದಕಗಳನ್ನ ಎ.ವಿ.ರವಿ ಪಡೆದಿದ್ದಾರೆ.

    'ಬಿಗ್ ಬಾಸ್ ಕನ್ನಡ-6': ಈ ಬಾರಿ 'ಕಿಚ್ಚ'ನ್ ಟೈಮ್ ಇರಲ್ಲ ಸ್ವಾಮಿ.!'ಬಿಗ್ ಬಾಸ್ ಕನ್ನಡ-6': ಈ ಬಾರಿ 'ಕಿಚ್ಚ'ನ್ ಟೈಮ್ ಇರಲ್ಲ ಸ್ವಾಮಿ.!

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ

    ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ

    ದೇಹದಾರ್ಢ್ಯ ವಿಭಾಗದಲ್ಲಿ 15 ಬಾರಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರವಿ ಪ್ರತಿನಿಧಿಸಿದ್ದಾರೆ. ನಾಲ್ಕು ಬಾರಿ ಭಾರತ ತಂಡದ ನಾಯಕನಾಗಿ, ಎರಡು ಬಾರಿ ಭಾರತ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇಂಡೋ-ಪಾಕಿಸ್ತಾನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ - ಗೋಲ್ಡ್ ಮೆಡಲ್ ಪಡೆದಿದ್ದಾರೆ.

    ಇನ್ ಕಮ್ ಟ್ಯಾಕ್ಸ್ ಇನ್ಸ್ ಪೆಕ್ಟರ್.!

    ಇನ್ ಕಮ್ ಟ್ಯಾಕ್ಸ್ ಇನ್ಸ್ ಪೆಕ್ಟರ್.!

    ಎ.ವಿ.ರವಿ ಮಾಡಿರುವ ಸಾಧನೆ ಗುರುತಿಸಿ ಕೇಂದ್ರ ಸರ್ಕಾರ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಇನ್ಸ್ ಪೆಕ್ಟರ್ ಆಗಿ ಕೆಲಸ ನೀಡಿದೆ.

    ಚಿರಂಜೀವಿಗೆ ಜಿಮ್ ಟ್ರೈನರ್

    ಚಿರಂಜೀವಿಗೆ ಜಿಮ್ ಟ್ರೈನರ್

    ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ, ಪವರ್ ಸ್ಟಾರ್ ಪವನ್ ಕಲ್ಯಾಣ್, ಜಗ್ಗೇಶ್, ಶರಣ್ ಸೇರಿದಂತೆ ಹಲವು ನಟರಿಗೆ ಜಿಮ್ ಟ್ರೈನಿಂಗ್ ಕೊಟ್ಟಿದ್ದಾರೆ ರವಿ.

    ನ್ಯಾಚುರಲ್ ಬಾಡಿ ಬಿಲ್ಡಿಂಗ್

    ನ್ಯಾಚುರಲ್ ಬಾಡಿ ಬಿಲ್ಡಿಂಗ್

    ಡ್ರಗ್ಸ್ ತೆಗೆದುಕೊಳ್ಳದೇ, ನ್ಯಾಚುರಲ್ ಆಗಿ ಬಾಡಿ ಬಿಲ್ಡ್ ಮಾಡಲು ಇಪ್ಪತ್ತು ವರ್ಷಗಳಿಂದ ಎ.ವಿ.ರವಿ ಅರಿವು ಮೂಡಿಸುತ್ತಿದ್ದಾರೆ. ನ್ಯಾಚುರಲ್ ಬಾಡಿ ಬಗ್ಗೆ ಪ್ರಚಾರ ಮಾಡಲು 'ಬಿಗ್ ಬಾಸ್' ಮನೆಗೆ ಬಂದೆ ಅಂತಾರೆ ಜಿಮ್ ರವಿ.

    ಅಂದು ತಿನ್ನಲು ದುಡ್ಡು ಇಲ್ಲದೆ ಬಾಡಿ ಬಿಲ್ಡಿಂಗ್.!

    ಅಂದು ತಿನ್ನಲು ದುಡ್ಡು ಇಲ್ಲದೆ ಬಾಡಿ ಬಿಲ್ಡಿಂಗ್.!

    ''ಬಾಡಿ ಬಿಲ್ಡಿಂಗ್ ಶುರು ಮಾಡಿದಾಗ ತಿನ್ನಲು ದುಡ್ಡು ಇರಲಿಲ್ಲ. ಮನೆಯಲ್ಲಿ ಅಮ್ಮ ಏನು ಊಟ ಕೊಡ್ತಿದ್ರೋ, ಅದನ್ನೇ ತಿಂದು ಬಾಡಿ ಬಿಲ್ಡ್ ಮಾಡಿದೆ. ರಾಗಿ ಮುದ್ದೆ, ಕಡಲೆ ಕಾಳು, ಸೊಪ್ಪು, ತರಕಾರಿ, ಗೆಣಸು ತಿಂದು ವರ್ಕೌಟ್ ಮಾಡಿದ್ದೇನೆ'' ಎನ್ನುವ ಜಿಮ್ ರವಿ ದಿನಕ್ಕೆ ನಾಲ್ಕು-ಐದು ಗಂಟೆ ವರ್ಕೌಟ್ ಮಾಡ್ತಾರಂತೆ.

    'ಬಿಗ್ ಬಾಸ್' ಮನೆಯಲ್ಲಿ ಎಷ್ಟು ದಿನ ಇರ್ತಾರೋ.?

    'ಬಿಗ್ ಬಾಸ್' ಮನೆಯಲ್ಲಿ ಎಷ್ಟು ದಿನ ಇರ್ತಾರೋ.?

    ಮನೆಯಲ್ಲಿ ಯಾರಿಗೂ ಹೇಳದೆ 'ಬಿಗ್ ಬಾಸ್' ಮನೆಗೆ ಬಂದ ಜಿಮ್ ರವಿ 'ಬಿಗ್ ಬಾಸ್' ಮನೆಯಲ್ಲಿ ಎಷ್ಟು ದಿನ ಇರ್ತಾರೋ, ನೋಡಬೇಕು. ಮೊದಲ ವಾರವೇ ಜಿಮ್ ರವಿ ನಾಮಿನೇಟ್ ಆಗಿದ್ದಾರೆ. ಅವರನ್ನ ಸೇಫ್ ಮಾಡುವ ಜವಾಬ್ದಾರಿ ನಿಮ್ಮದೇ.

    English summary
    AV Ravi, Bigg Boss Kannada 6 Contestant hails from Kolar. Read the article to know more about AV Ravi and his background.
    Tuesday, October 23, 2018, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X