ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಯಾರು.?
Recommended Video

''ಫ್ರೆಂಡ್ ಗೆ ಫ್ರೆಂಡು... ಇಲ್ಲಾಂದ್ರೆ ತೆಗೀತೀನಿ ಅವರ ಬೆಂಡು'' ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಗೆ ಕಾಲಿಟ್ಟವರು ಧನರಾಜ್. ಹೆಸರಿನಲ್ಲಿ 'ಧನ' ಇದ್ದರೂ, ಇವರ ಬದುಕಿಗೆ 'ಧನಲಕ್ಷ್ಮಿ' ಇನ್ನೂ ಒಲಿದಿಲ್ಲ.
ಆದಾಯಕ್ಕಾಗಿ ಹತ್ತಾರು ಕೆಲಸ ಮಾಡುತ್ತಿರುವ ಧನರಾಜ್ ಒಳಗೆ ಓರ್ವ ಪ್ರತಿಭಾವಂತ ಇದ್ದಾನೆ. ಅದ್ಭುತವಾಗಿ ಮಿಮಿಕ್ರಿ ಮಾಡುವ ಧನರಾಜ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರನ್ನೇ ಇಂಪ್ರೆಸ್ ಮಾಡಿದ್ದಾರೆ ಅಂದ್ರೆ ಸುಮ್ನೆನಾ ಹೇಳಿ.?
ಬ್ಯಾಡ್ ಲಕ್ ಇಂದ ಹಲವಾರು ಬಾರಿ ಸೋತಿರುವ ಧನರಾಜ್ ಅದೃಷ್ಟ ಪರೀಕ್ಷೆಗೆಂದು 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ. 'ಬಿಗ್ ಬಾಸ್' ಮೂಲಕ ವೀಕ್ಷಕರು ಧನರಾಜ್ ಕೈಹಿಡಿದರೆ, ಅವರ ಅದೃಷ್ಟ ಖುಲಾಯಿಸುವುದು ಪಕ್ಕಾ.! ಮುಂದೆ ಓದಿರಿ...

ಕುಂದಾಪುರದ ಕುವರ ಧನರಾಜ್
ಧನರಾಜ್ ಮೂಲತಃ ಕುಂದಾಪುರದವರು. ಸದ್ಯ ಬೆಂಗಳೂರಿನಲ್ಲೇ ನೆಲೆಸಿರುವ ಧನರಾಜ್, ಅವಕಾಶಕ್ಕಾಗಿ ಹಾತೊರೆಯುತ್ತಿರುವ ನಟ, ವಾಯ್ಸ್ ಓವರ್ ಆರ್ಟಿಸ್ಟ್ ಹಾಗೂ ಡಬ್ಬಿಂಗ್ ಆರ್ಟಿಸ್ಟ್. ಮಿಮಿಕ್ರಿ ಮಾಡುವ ಧನರಾಜ್ ಹಲವು ಕಾರ್ಟೂನ್ ಗಳಿಗೆ ವಾಯ್ಸ್ ಕೊಟ್ಟಿದ್ದಾರೆ. ಕೆ.ಜಿ.ಎಫ್ ಚಿತ್ರದ ಒಂದು ಕ್ಯಾರೆಕ್ಟರ್ ಗೂ ಧನರಾಜ್ ದನಿ ನೀಡಿದ್ದಾರೆ.

ನೋ ಸ್ಟ್ರಾಟೆಜಿ
ಧನರಾಜ್ ಮಾತಿನ ಮಲ್ಲ... ಸಿಕ್ಕಾಪಟ್ಟೆ ಮಾತನಾಡುವ ಧನರಾಜ್ ಯಾವುದೇ ಸ್ಟ್ರಾಟೆಜಿ ಮಾಡಿಕೊಂಡು 'ಬಿಗ್ ಬಾಸ್' ಮನೆಗೆ ಬಂದಿಲ್ಲ. ತಮ್ಮ ಪ್ರತಿಭೆ ಮೂಲಕ ವೀಕ್ಷಕರಿಗೆ ಮನರಂಜನೆ ಕೊಡಬೇಕು ಅನ್ನೋದು ಧನರಾಜ್ ಅಭಿಲಾಷೆ.

ಫೈನಲ್ ವರೆಗೂ ಇರುವ ಆಸೆ
'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಫಿನಾಲೆವರೆಗೂ ಇರಬೇಕು ಎಂಬುದು ಧನರಾಜ್ ಅವರ ಆಸೆ. ತಮ್ಮ ಪ್ರತಿಭೆ ಮೂಲಕ 'ಬಿಗ್ ಬಾಸ್' ಗೆಲ್ಲುವೆ ಎಂಬ ಭರವಸೆ ಕೂಡ ಧನರಾಜ್ ರಲ್ಲಿ ಇದೆ. ಇದಕ್ಕೆ ವೀಕ್ಷಕರು ಸಾಥ್ ಕೊಡಬೇಕು ಅಷ್ಟೇ.

ಜೊತೆಗೆ ನಟಿಸೋಣ ಎಂದ ಶಿವಣ್ಣ
ಥೇಟ್ ಶಿವಣ್ಣ ರಂತೆ ಮಿಮಿಕ್ರಿ ಮಾಡಿದ ಧನರಾಜ್ ಸೆಂಚುರಿ ಸ್ಟಾರ್ ನ ಇಂಪ್ರೆಸ್ ಮಾಡಿದರು. ಶಿವಣ್ಣ ಹುಟ್ಟಿದ ಹಬ್ಬ ಹಾಗೂ ಧನರಾಜ್ ಜನ್ಮದಿನ ಒಂದೇ ದಿನ. ಹೀಗಾಗಿ, ಒಟ್ಟಿಗೆ ಕೇಕ್ ಕಟ್ ಮಾಡಬಹುದಾ ಅಂತ ಧನರಾಜ್ ಕೇಳಿಕೊಂಡಿದ್ದಕ್ಕೆ ಒಟ್ಟಿಗೆ ಆಕ್ಟ್ ಮಾಡೋಣ ಅಂತ ಶಿವಣ್ಣ ಹೇಳಿದರು. ಅಲ್ಲಿಗೆ, ಧನರಾಜ್ ಭಾಗ್ಯದ ಬಾಗಿಲು ತೆಗೆದ ಹಾಗೆ...


Click it and Unblock the Notifications











