For Quick Alerts
  ALLOW NOTIFICATIONS  
  For Daily Alerts

  ಚಿಕ್ಕ ವಯಸ್ಸಿನಲ್ಲಿ ಮದುವೆ, ಸಾಲು, ಸಾಲು ಕಷ್ಟಗಳು : ಜಯಶ್ರೀ ಮನದಾಳ

  |

  'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಎಲ್ಲ ವರ್ಗದಿಂದ ಸ್ಪರ್ಧಿಗಳು ಬರುತ್ತಾರೆ. ಧಾರಾವಾಹಿ ಕ್ಷೇತ್ರದಿಂದ ಪ್ರತಿ ಬಾರಿಯೂ ಯಾರಾದರೂ ಸ್ಪರ್ಧಿಗಳು ಇದ್ದೇ ಇರುತ್ತಾರೆ. ಅದೇ ರೀತಿ ಈ ಬಾರಿ ಇಬ್ಬರು ಸೀರಿಯಲ್ ನಟಿಯರು ಬಿಗ್ ಬಾಸ್ ಗೆ ಹೋಗಿದ್ದಾರೆ.

  ಈ ಬಾರಿ ಇಬ್ಬರು ಸೀರಿಯಲ್ ಸ್ಪರ್ಧಿಗಳಲ್ಲಿ ಒಬ್ಬರು ಕವಿತಾ ಗೌಡ ಆದ್ರೆ, ಇನ್ನೊಬ್ಬರು ಜಯಶ್ರೀ. ಕನ್ನಡದ ಪ್ರತಿಭಾವಂತ ಕಿರುತೆರೆ ನಟಿಯಲ್ಲಿ ಜಯಶ್ರೀ ಕೂಡ ಪ್ರಮುಖರು. ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ತರಹೇವಾರಿ ಪಾತ್ರಗಳಲ್ಲಿ ನಟಿಸಿರುವ ಇವರು ಈಗ ಬಿಗ್ ಬಾಸ್ ಆಟ ಆಡಲು ಬಂದಿದ್ದಾರೆ.

  ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ

  ಅಂದಹಾಗೆ, ಸದ್ಯ ಜಯಶ್ರೀ ಅವರೇ ತಾವು 'ಬಿಗ್ ಬಾಸ್' ಗೆ ಬಂದ ಕಾರಣ ಹಾಗೂ ಅವರ ಬಣ್ಣದ ಬದುಕಿನ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

  8 ಕ್ಲಾಸ್ ನಲ್ಲಿ ನಟನೆ ಶುರು ಮಾಡಿದರು

  8 ಕ್ಲಾಸ್ ನಲ್ಲಿ ನಟನೆ ಶುರು ಮಾಡಿದರು

  ಕೇವಲ 8 ಕ್ಲಾಸ್ ಓದುವಾಗಲೇ ಜಯಶ್ರೀ ನಟನೆ ಮಾಡಲು ಶುರು ಮಾಡಿದರು. ಮೊದಲು ನಿರ್ದೇಶಕ ಸೀತಾರಾಮ್ ಅವರ ಗರಡಿಯಲ್ಲಿ ಪಳಗಿದರು. 'ಮಾಯಾಮೃಗ' ಧಾರಾವಾಹಿಯ ಮೂಲಕ ತಮ್ಮ ಪಯಣ ಪ್ರಾರಂಭ ಮಾಡಿದರು. ಆ ಕಾಲಕ್ಕೆ ಈ ಧಾರಾವಾಹಿ ದೊಡ್ಡ ಮಟ್ಟದ ಜನ ಮನ್ನಣೆಗಳಿಸಿತ್ತು.

  'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.? 'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.?

  21 ವರ್ಷಗಳ ಅನುಭವ

  21 ವರ್ಷಗಳ ಅನುಭವ

  ಕಳೆದ 21 ವರ್ಷಗಳಿಂದ ಜಯಶ್ರೀ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ದೊಡ್ಡ ಪಾತ್ರಗಳನ್ನು ಮಾಡಿದ್ದಾರೆ. ಸೀರಿಯಲ್ ಗಳ ಜೊತೆಗೆ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರು ನಟನೆಯಲ್ಲಿ ತೊಡಗಿದ್ದಾರೆ.

  ಚಿಕ್ಕ ವಯಸ್ಸಿನಲ್ಲಿ ಮದುವೆ

  ಚಿಕ್ಕ ವಯಸ್ಸಿನಲ್ಲಿ ಮದುವೆ

  ಜಯಶ್ರೀ ಅವರೇ ಹೇಳಿಕೊಂಡಿರುವ ಹಾಗೆ ಅವರು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಆದರಂತೆ. ನಟನೆ ಬಿಟ್ಟು ಅಮೇರಿಕಾಕ್ಕೆ ಹೋದರಂತೆ. ಆದರೆ, ಮತ್ತೆ ಭಾರತಕ್ಕೆ ಬಂದು, ಮತ್ತೆ ಹೊಸ ಜೀವನ ಶುರು ಮಾಡಿದ್ದಾರೆ. ಛಲದಿಂದ ಇಂದು ಅವರು ಒಂದು ಸ್ಥಾನಕ್ಕೆ ಬಂದಿದ್ದಾರೆ.

  ಶುಭ ಕೋರಿದ ಸೀತಾರಾಮ್

  ಶುಭ ಕೋರಿದ ಸೀತಾರಾಮ್

  ಜಯಶ್ರೀ ಅವರ ಬಗ್ಗೆ ಮಾತನಾಡಿದ ನಿರ್ದೇಶಕ ಸೀತಾರಾಮ್ ''ಎಲ್ಲರ ಫೇವರೇಟ್ ಜಾಗಕ್ಕೆ ನೀವು ಹೋಗಿದ್ದೀರಿ. ಶುಭವಾಗಲಿ. ನೀನು ಧೈರ್ಯವಂತ ಹುಡುಗಿ. ನೀನು ಎಲ್ಲವನ್ನು ಗೆಲ್ಲುವ ಹುಡುಗಿ. ನೀನು ಒಬ್ಬ ಫೈಟರ್, ಕೊನೆಯವರೆಗೂ ಫೈಟ್ ಮಾಡು.'' ಎಂದು ಶುಭ ಹಾರೈಸಿದರು.

  ಯಾಕೆ 'ಬಿಗ್ ಬಾಸ್' ?

  ಯಾಕೆ 'ಬಿಗ್ ಬಾಸ್' ?

  ಕಾರ್ಯಕ್ರಮದ ಬಗ್ಗೆ ಮಾತನಾಡಿರುವ ಜಯಶ್ರೀ ''ಜಯಶ್ರೀ ಯಾರು?, ಆಕೆಯ ವ್ಯಕ್ತಿತ್ವ ಏನು?, ಒಬ್ಬ ಕಲಾವಿದ ಎನ್ನುವುದನ್ನು ಬಿಟ್ಟು ಈಗ ನಾನು ಏನು? ಎಲ್ಲವನ್ನು ತಿಳಿದುಕೊಳ್ಳಲು 'ಬಿಗ್ ಬಾಸ್' ಗೆ ಹೋಗುತ್ತಿದ್ದೇನೆ. 6 ನನ್ನ ಲಕ್ಕಿ ನಂಬರ್, ಅದೇ ಸೀಸನ್ ನಲ್ಲಿ ಬಿಗ್ ಬಾಸ್ ಮನೆಯ ಒಳಗೆ ಹೋಗುತ್ತಿದ್ದೇನೆ.'' ಎಂದು ಹೇಳಿದರು.

  English summary
  Jayashree kannada serial actress, Bigg Boss Kannada 6 Contestant hails from Bengaluru. Read the article to know more about Jayashree and her background.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X