ಸೀರಿಯಲ್ ಚಿನ್ನು 'ಬಿಗ್ ಬಾಸ್'ಗೆ ಬಂದಿದ್ದು ಯಾಕೆ?
ಈ ಬಾರಿಯ 'ಬಿಗ್ ಬಾಸ್'ನಲ್ಲಿ ಇರುವ ಸ್ಪರ್ಧಿಗಳಲ್ಲಿ ಕೆಲವರು ಈ ಹಿಂದೆಯೇ ಕನ್ನಡ ಪ್ರೇಕ್ಷಕರಿಗೆ ಚಿರ ಪರಿಚಿತರಾಗಿದ್ದಾರೆ. ಅದರಲ್ಲಿಯೂ ನಟಿ ಕವಿತಾ ಗೌಡ ಕಿರುತೆರೆಯಲ್ಲಿ ಒಳ್ಳೆಯ ಹೆಸರು ಮಾಡಿದ ನಟಿ ಆಗಿದ್ದಾರೆ.
ಸೀರಿಯಲ್ ಹಾಗೂ ಸಿನಿಮಾ ಅಂತ ಬ್ಯುಸಿ ಇದ್ದ ಕವಿತಾ ಗೌಡ ಈ ಬಾರಿಯ 'ಬಿಗ್ ಬಾಸ್' ವೇದಿಕೆ ಏರುತ್ತಾರೆ ಎಂದು ಯಾರು ಅಂದುಕೊಂಡಿರಲಿಲ್ಲ. ಆದರೆ, ಕವಿತಾ 'ಬಿಗ್ ಬಾಸ್ ಕನ್ನಡ 6' ಸ್ಪರ್ಧಿಯಾಗಿ ಮತ್ತೆ ವೀಕ್ಷಕರ ಮುಂದೆ ಒಂದಿದ್ದಾರೆ.
ಅಂದಹಾಗೆ, ಸದ್ಯ ಕವಿತಾ ಗೌಡ 'ಬಿಗ್ ಬಾಸ್' ಯಾಕೆ ಬಂದರು? ಅಂತ ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿ...

'ಲಕ್ಷ್ಮಿ ಬಾರಮ್ಮ' ಧಾರಾವಾಹಿ
ನಟಿ ಕವಿತಾ ಗೌಡ ಎಂದ ತಕ್ಷಣ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ನೆನಪಾಗುತ್ತದೆ. ಈ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಕವಿತಾ ಮನೆ ಮಾತಾಗಿದ್ದರು. ಸತತ ಮೂರು ವರ್ಷ ಈ ಸೀರಿಯಲ್ ನಲ್ಲಿ ನಟಿಸಿದ್ದ ಇವರು ನಂತರ ತೆಲುಗು, ತಮಿಳು ಸೀರಿಯಲ್ ನಲ್ಲಿ ಬಣ್ಣ ಹಾಚಿದ್ದಾರೆ.

'ಶ್ರೀನಿವಾಸ ಕಲ್ಯಾಣ' ಚಿತ್ರದಲ್ಲಿ ನಟನೆ
ಸೀರಿಯಲ್ ನಿಂದ ಸಿನಿಮಾ ಜರ್ನಿ ಶುರು ಮಾಡಿರುವ ಕವಿತಾ ಸದ್ಯ ಮೂರು ಸಿನಿಮಾ ಮಾಡಿದ್ದಾರೆ. 'ಶ್ರೀನಿವಾಸ ಕಲ್ಯಾಣ' ಅವರ ಮೊದಲ ಸಿನಿಮಾ ಆಗಿತ್ತು. ಸದ್ಯ ಅದೇ ತಂಡದ ಜೊತೆಗೆ 'ಬೀರ್ ಬಲ್' ಚಿತ್ರದಲ್ಲಿ ಸಹ ಅವರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಮಲ್ಲೇಶ್ವರಂ ಹುಡುಗಿ
ಕವಿತಾ ಗೌಡ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂ ಇವರ ಅಡ್ಡ. ಹಾಗೆ ಹೇಳಬೇಕು ಅಂದರೆ, ಇವರು 'ಮಲ್ಲೇಶ್ವರಂ ಹುಡುಗಿ'. ಕವಿತಾ ಪಾಲಿಗೆ ಮಲ್ಲೇಶ್ವರಂ ಎನ್ನುವುದು ಪುಟ್ಟ ಜಗತ್ತು.

ಭರತನಾಟ್ಯ ಬರುತ್ತೆ
ಡ್ಯಾನ್ಸ್ ಅಂದರೆ ಕವಿತಾ ಅವರಿಗೆ ಬಹಳ ಇಷ್ಟವಂತೆ. ಸದ್ಯಕ್ಕೆ ಅವರು ಭರತನಾಟ್ಯ ಪ್ರವೀಣೆ ಆಗಿದ್ದಾರೆ. ಮುಂದೆ ಬೇರೆ ಬೇರೆ ಶೈಲಿಯ ಡ್ಯಾನ್ಸ್ ಕಲಿಯಬೇಕು ಎನ್ನುವುದು ಅವರ ಆಸೆಯಾಗಿದೆಯಂತೆ.

'ಬಿಗ್ ಬಾಸ್'ಗೆ ಬಂದ ಉದ್ದೇಶ
'ಬಿಗ್ ಬಾಸ್' ಬಂದ ಕಾರಣದ ಬಗ್ಗೆ ಮಾತನಾಡಿದ ಕವಿತಾ ''ಕೋಟಿ ಕೊಟ್ಟರು 'ಬಿಗ್ ಬಾಸ್'ಗೆ ಹೋಗಲ್ಲ ಅಂತ ಹೇಳುತ್ತಿದೆ. ಆದರೆ, ಇದು ಒಮ್ಮೆ ಆಗುವ ಅನುಭವ. ನಾನು ನನ್ನ ಬಗ್ಗೆ ತಿಳಿದುಕೊಳ್ಳಲು ಇದಕ್ಕಿಂತ ಮತ್ತೊಂದು ಒಳ್ಳೆಯ ಅವಕಾಶ ಸಿಗುವುದಿಲ್ಲ ಎನಿಸಿತು. ನನಗೆ ಅಂತ ಸಮಯ ಸಿಗುತ್ತದೆ ಅಂತ 'ಬಿಗ್ ಬಾಸ್'ಗೆ ಬಂದೆ.'' ಎಂದು ಹೇಳಿದ್ದಾರೆ.


Click it and Unblock the Notifications











