twitter
    For Quick Alerts
    ALLOW NOTIFICATIONS  
    For Daily Alerts

    ನಿಮಗೆ ಗೊತ್ತಿರದ 'ಎಂಜೆ' ರಾಕೇಶ್ ಅವರ ಇನ್ನೊಂದು ಮುಖ.!

    |

    ಬಿಗ್ ಬಾಸ್ ಮನೆಯಲ್ಲಿ ಎರಡು ಹಾಡುಗಳು ಫೇಮಸ್. ಬೆಳಗಿನ ಸಮಯದಲ್ಲಿ ನಿದ್ದೆ ಮಾಡೋರಿಗಾಗಿ 'ಎದ್ದೇಳು ಮಂಜುನಾಥ....' ಹಾಗೂ ಕನ್ನಡ ಬಿಟ್ಟು ಬೇರೆ ಭಾಷೆ ಮಾತನಾಡೋರಿಗೆ ಎಚ್ಚರಿಸೋಕೆ 'ಕರುನಾಡ ತಾಯಿ...'

    ಬಿಗ್ ಬಾಸ್ ಆರನೇ ಆವೃತ್ತಿಯ ನಾಲ್ಕನೇ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ ಎಂಜೆ ರಾಕೇಶ್ ಅವರಿಗೆ ಎರಡನೇ ಹಾಡು ಹೆಚ್ಚು ಹತ್ತಿರವಾಗಬಹುದು ಎಂಬ ಊಹೆ. ಯಾಕಂದ್ರೆ, ರಾಕೇಶ್ ಕನ್ನಡದವರಲ್ಲ. ಆದ್ರೂ, ಕನ್ನಡಿಗರು.

    'ತಿಂಡಿಪೋತ' ಆಂಡ್ರೂ ಆಹಾರ ಪದ್ಧತಿ ನೋಡಿದ್ರೆ ಬೆರಗಾಗ್ತೀರಾ.! 'ತಿಂಡಿಪೋತ' ಆಂಡ್ರೂ ಆಹಾರ ಪದ್ಧತಿ ನೋಡಿದ್ರೆ ಬೆರಗಾಗ್ತೀರಾ.!

    ವೃತ್ತಿಯಲ್ಲಿ ರೇಡಿಯೋ ಜಾಕಿಯಾಗಿದ್ದ ರಾಕೇಶ್ ಬಿಗ್ ಬಾಸ್ ಮನೆಗೆ ಬರೋ ಮುಂಚೆ ಚುನಾವಣೆಯಲ್ಲೂ ಸ್ಪರ್ಧೆ ಮಾಡಿದ್ದರಂತೆ. ಕಡಿಮೆ ವಯಸ್ಸಿನಲ್ಲೇ ಅತಿ ಹೆಚ್ಚು ಅನುಭವ ಹೊಂದಿರುವ ರಾಕೇಶ್, ತಮ್ಮ ಕನಸಿನ ಜೀವನವನ್ನ ಬಿಗ್ ಬಾಸ್ ವೇದಿಕೆಯಲ್ಲಿ ಹಂಚಿಕೊಂಡರು. ಹಾಗಿದ್ರೆ, ಎಂಜೆ ರಾಕೇಶ್ ಅವರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಏನಿದೆ.? ಮುಂದೆ ಓದಿ....

    12 ವರ್ಷದಿಂದ ಆರ್ ಜೆ

    12 ವರ್ಷದಿಂದ ಆರ್ ಜೆ

    ರಾಕೇಶ್ ಅವರು ಹನ್ನೆರಡು ವರ್ಷದಿಂದ ರೇಡಿಯೋ ಜಾಕಿಯಾಗಿ ಕೆಲಸ ಮಾಡ್ತಿದ್ದಾರೆ. ಈಗ ಮೈಕ್ ಜಾಕಿ ವೃತ್ತಿ ಮುಂದುವರಿಸುತ್ತಿದ್ದಾರೆ. ಕಾರ್ಯಕ್ರಮಗಳ ನಿರೂಪಣೆ, ಪ್ರೋ ಕಬ್ಬಡಿ, ಐಪಿಎಲ್ ಅಂತಹ ದೊಡ್ಡ ಶೋಗಳಲ್ಲಿ ಇವರು ವಾಯ್ಸ್ ಕೇಳಿರಬಹುದು.

    ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಯಾರು.? ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಯಾರು.?

    ಪ್ರೋಫೆಸರ್ ಉಲ್ಫಾತ್ ಸುಲ್ತಾನ್

    ಪ್ರೋಫೆಸರ್ ಉಲ್ಫಾತ್ ಸುಲ್ತಾನ್

    ಪ್ರೋಫೆಸರ್ ಉಲ್ಫಾತ್ ಸುಲ್ತಾನ್ ಎಂಬ ಪಾತ್ರದಿಂದ ರಾಕೇಶ್ ಅವರು ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನ ಮಿಕ್ಸ್ ಮಾಡಿ ಮಾತನಾಡುವ ರಾಕೇಶ್ ಅವರ ಈ ಕಲೆಗೆ ಅಭಿಮಾನಿಗಳು ಕೂಡ ಇದ್ದಾರೆ.

    ಚಿಕ್ಕ ವಯಸ್ಸಿನಲ್ಲಿ ಮದುವೆ, ಸಾಲು, ಸಾಲು ಕಷ್ಟಗಳು : ಜಯಶ್ರೀ ಮನದಾಳ ಚಿಕ್ಕ ವಯಸ್ಸಿನಲ್ಲಿ ಮದುವೆ, ಸಾಲು, ಸಾಲು ಕಷ್ಟಗಳು : ಜಯಶ್ರೀ ಮನದಾಳ

    ಮೂಲತಃ ರಾಜ್ತಸಾನ

    ಮೂಲತಃ ರಾಜ್ತಸಾನ

    ರಾಕೇಶ್ ಅವರು ಮೂಲತಃ ರಾಜಸ್ತಾನದವರು. ಆದ್ರೆ, ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲಿ. ತಾಯಿ ಮತ್ತು ತಂಗಿ ಹಾಗೂ ತಂಗಿಯ ಇಬ್ಬರು ಮಕ್ಕಳು ಅಂದ್ರೆ ಅಚ್ಚುಮೆಚ್ಚು. ಮೈಕ್ ಅಂದ್ರೆ ತುಂಬಾ ಇಷ್ಟ. ರಂಜಿಸುವುದು ಇವರ ವೃತ್ತಿ. ಮನರಂಜನೆ ಇವರ ಶಕ್ತಿ.

    ಸೀರಿಯಲ್ ಚಿನ್ನು 'ಬಿಗ್ ಬಾಸ್'ಗೆ ಬಂದಿದ್ದು ಯಾಕೆ? ಸೀರಿಯಲ್ ಚಿನ್ನು 'ಬಿಗ್ ಬಾಸ್'ಗೆ ಬಂದಿದ್ದು ಯಾಕೆ?

    ಎಲೆಕ್ಷನ್ ಗೆ ಸ್ಪರ್ಧೆ.!

    ಎಲೆಕ್ಷನ್ ಗೆ ಸ್ಪರ್ಧೆ.!

    ಕಳೆದ ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದಕ್ಕೆ ಪ್ರಯತ್ನ ಪಟ್ಟಿದ್ದರಂತೆ. ಆದ್ರೆ, ಸಾಧ್ಯವಾಗಿರಲಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ ಮನಸ್ಸು ಮಾಡಿದ್ರೆ ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬಹುದು ಅಂದುಕೊಂಡೆ. ಅದು ಆಗಲಿಲ್ಲ. ಎರಡನೇ ಸಲ ಪ್ರಯತ್ನ ಮಾಡಿದೆ. ಬಟ್, ಬೇರೆ ಕೆಲಸದಿಂದ ಸ್ಪರ್ಧೆ ಮಾಡೋಕೆ ಆಗಲಿಲ್ಲ.

    'ಬಿಗ್ ಬಾಸ್' ಮುನ್ನವೇ ನಯನ ಈ ರಿಯಾಲಿಟಿ ಶೋ ವಿನ್ನರ್ 'ಬಿಗ್ ಬಾಸ್' ಮುನ್ನವೇ ನಯನ ಈ ರಿಯಾಲಿಟಿ ಶೋ ವಿನ್ನರ್

    35 ವರ್ಷ, ಗೆಳತಿಯರ ಸಂಖ್ಯೆ ಗೊತ್ತಿಲ್ಲ

    35 ವರ್ಷ, ಗೆಳತಿಯರ ಸಂಖ್ಯೆ ಗೊತ್ತಿಲ್ಲ

    ರಾಕೇಶ್ ಅವರಿಗೆ ಈಗ 35 ವರ್ಷ. ಆದ್ರೆ, 50 ವರ್ಷದ ಅನುಭವ ಹೊಂದಿದ್ದೇನೆ ಎಂಬುದು ಅವರ ನಂಬಿಕೆ. ಇನ್ನೂ ಮದುವೆ ಆಗಿಲ್ಲ, ಗರ್ಲ್ ಫ್ರೆಂಡ್ ಗಳ ಸಂಖ್ಯೆ ಗೊತ್ತಿಲ್ಲ ಅಂತಾರೆ. ಮದುವೆ ಯಾವಾಗ ಅಂದ್ರೆ, ಮದ್ವೆ ರಿಟೈರ್ ಮೆಂಟ್ ಆದಾಗ ಎಂಬ ಉತ್ತರ ಕೊಡ್ತಾರೆ.

    ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ ಸಾವಿನ ಮನೆಯಲ್ಲಿ ಹಾಡುತ್ತಿದ್ದ ನವೀನ್ 'ಬಿಗ್ ಬಾಸ್'ಗೆ ಬಂದ ಕಥೆ

    ರಾಕೇಶ್ ಗೆ ಒಂದು ಬೇಸರ ಇದೆ

    ರಾಕೇಶ್ ಗೆ ಒಂದು ಬೇಸರ ಇದೆ

    ಹೀಗೆ, ಹುಟ್ಟಿ ಬೆಳೆದಿದ್ದು ಕರ್ನಾಟಕದಲ್ಲೇ ಆದರೂ ರಾಕೇಶ್ ಅವರನ್ನ ಕನ್ನಡಿಗ ಎಂದು ಒಪ್ಪಿಕೊಳ್ಳಲು ಕೆಲವು ಸಿದ್ಧವಿಲ್ಲ. 'ನಾನು ಕನ್ನಡದವನು ಎನ್ನುವುದಕ್ಕೆ ಹೆಮ್ಮೆ ಇದೆ. ನಾನು ಕನ್ನಡದವನಲ್ಲ, ಆದ್ರೂ ಕನ್ನಡಿಗ ಅಂತ ಹೇಳ್ತೀನಿ. ಆದ್ರೆ, ಕನ್ನಡದವರೇ ನನ್ನನ್ನು ಕನ್ನಡಿಗ ಅಂತ ಒಪ್ಪಿಕೊಳ್ಳಲ್ಲ. ನೀರು, ಜನ, ಕೆಲಸ, ದುಡ್ಡು ಎಲ್ಲಿ ತಗೊಂಡು, ಇಲ್ಲೇ ಕೊಡೊವನು ನಿಜವಾದ ಕನ್ನಡಿಗ' ಎಂದು ರಾಕೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.? 'ಬಿಗ್ ಬಾಸ್' ಮನೆಗೆ ಟಿಕೆಟ್ ಪಡೆದುಕೊಂಡ ಆನಂದ ಮಾಲಗತ್ತಿ ಯಾರು.?

    English summary
    MJ Rakesh, Bigg Boss Kannada 6 Contestant hails from Banglore. Read the article to know more about Andrew and his background.
    Monday, October 29, 2018, 18:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X