For Quick Alerts
  ALLOW NOTIFICATIONS  
  For Daily Alerts

  ಏನ್ ಗೊತ್ತಾ? ರಾಪಿಡ್ ರಶ್ಮಿಗೆ ಮದುವೆಯಾಗಿದೆಯಂತೆ! ಗುಟ್ಟು ರಟ್ಟಾಯ್ತಾ?

  |
  Bigg Boss Kannada Season 6: ರಾಪಿಡ್ ರಶ್ಮಿ ಬಗ್ಗೆ ಬಯಲಾಯ್ತು ಹೊಸ ವಿಚಾರ | FILMIBEAT KANNADA

  ಇಷ್ಟು ದಿನ ಬಿಗ್ ಎಫ್ ಎಂ ನಲ್ಲಿ ನಾನ್ ಸ್ಟಾಪ್ ಆಗಿ ಮಾತನಾಡುತ್ತಿದ್ದ ಆರ್ ಜೆ ರಾಪಿಡ್ ರಶ್ಮಿ ಈಗ 'ಬಿಗ್ ಬಾಸ್'ಗೆ ಬಂದಿದ್ದಾರೆ. ಒಂದು ವಾರ ಬಿಗ್ ಬಾಸ್ ಮನೆಯಲ್ಲಿ ಕಳೆದಿರುವ ಅವರು ಎಲ್ಲರಿಂದ ಟಾರ್ಗೆಟ್ ಆಗಿದ್ದಾರೆ.

  ''ಇವತ್ತಿಗೂ ವಾಕ್ಸ್ ನನ್ನ ಫೇಸ್, ಆದರೆ ನನ್ನ ಫೇಸೂ ಫೇಸಾಗಬೇಕು ಎಂದರೆ ಈ ಶೋ ಬೇಕು. ನನ್ನ ಇಮೇಜ್ ಕಾಪಾಡಿಕೊಂಡು ನಿಮ್ಮನ್ನು ರಂಜಿಸುತ್ತೇನೆ ಎಂಬ ಧೈರ್ಯದಿಂದ ಈ ಹೆಜ್ಜೆ ಇಟ್ಟಿದ್ದೇನೆ'' ಎಂದು ಹೇಳುತ್ತ ರಶ್ಮಿ ಬಿಗ್ ಬಾಸ್ ಮನೆಗೆ ಹೋಗಿದ್ದಾರೆ.

  ರಂಗಭೂಮಿಯ ಅಕ್ಷತಾಗೆ ಆಸರೆ ನೀಡುತ್ತಾ 'ಬಿಗ್ ಬಾಸ್' ಮನೆ ರಂಗಭೂಮಿಯ ಅಕ್ಷತಾಗೆ ಆಸರೆ ನೀಡುತ್ತಾ 'ಬಿಗ್ ಬಾಸ್' ಮನೆ

  ರಶ್ಮಿ ಸಾಕಷ್ಟು ವರ್ಷಗಳಿಂದ ಎಲ್ಲರಿಗೂ ಚಿರಪರಿಚಿತ ಆಗಿದ್ದಾರೆ. ಹೀಗಿದ್ದರೂ ಅವರಿಗೆ ಮದುವೆ ಆಗಿರುವ ವಿಷಯ ಅನೇಕರಿಗೆ ತಿಳಿದಿರಲಿಲ್ಲ. ಆ ಸಂಗತಿಯನ್ನು ಅವರೇ ಹಂಚಿಕೊಂಡಿದ್ದಾರೆ. ಮುಂದೆ ಓದಿ....

  ಹೆಚ್ಚು ಜನರಿಗೆ ತಿಳಿದಿಲ್ಲ

  ಹೆಚ್ಚು ಜನರಿಗೆ ತಿಳಿದಿಲ್ಲ

  ಇದೀಗ ತಮ್ಮ ಪತಿಯ ಬಗ್ಗೆ ರಾಪಿಡ್ ರಶ್ಮಿ ಮಾತನಾಡಿದ್ದಾರೆ. ''ನನಗೆ ಮದುವೆ ಆಗಿರುವ ವಿಷಯ ಅನೇಕರಿಗೆ ತಿಳಿದಿಲ್ಲ. ನಾನೂ ಆಚೆ ಹೇಳಿಕೊಂಡಿರಲಿಲ್ಲ. ಆದರೆ, ಬಿಗ್ ಬಾಸ್ ಮೂಲಕ ಈ ವಿಷಯ ಎಲ್ಲರಿಗೆ ತಿಳಿದಿದೆ.'' ಎಂದಿರುವ ಅವರು ತಮ್ಮ ಪತಿ ಡೇವಿಸ್ ಅವರನ್ನು ಕಾರ್ಯಕ್ರಮದಲ್ಲಿ ಪರಿಚಯ ಮಾಡಿ ಕೊಟ್ಟರು.

  ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಯಾರು.? ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಯಾರು.?

  12 ವರ್ಷಗಳಿಂದ ಆರ್ ಜೆ

  12 ವರ್ಷಗಳಿಂದ ಆರ್ ಜೆ

  ರಾಪಿಡ್ ರಶ್ಮಿ ಅವರೇ ಹೇಳುವ ಹಾಗೆ ಅವರ ದೊಡ್ಡ ಶಕ್ತಿ ಮಾತು. ಅದೇ ಕಾರಣಕ್ಕೆ ಅವರು ಕಳೆದ 12 ವರ್ಷಗಳಿಂದ ರೇಡಿಯೋ ಜಾಕಿಯಾಗಿ ಬಿಗ್ ಎಫ್ ಎಂ ನಲ್ಲಿ ಕೆಲಸ ಮಾಡುತ್ತಿದ್ದಾರೆ. ರೆಟ್ರೋ ಸವಾರಿ ಎಂಬ ಅವರ ಕಾರ್ಯಕ್ರಮ ದೊಡ್ಡ ವೀಕ್ಷಕ ಬಳಗ ಹೊಂದಿದೆ.

  'ತಿಂಡಿಪೋತ' ಆಂಡ್ರೂ ಆಹಾರ ಪದ್ಧತಿ ನೋಡಿದ್ರೆ ಬೆರಗಾಗ್ತೀರಾ.!'ತಿಂಡಿಪೋತ' ಆಂಡ್ರೂ ಆಹಾರ ಪದ್ಧತಿ ನೋಡಿದ್ರೆ ಬೆರಗಾಗ್ತೀರಾ.!

  ಅನೇಕ ಕಾರ್ಯಕ್ರಮಗಳು

  ಅನೇಕ ಕಾರ್ಯಕ್ರಮಗಳು

  ಈ ಹಿಂದೆ ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಡ್ಯಾನ್ಸಿಂಗ್ ಸ್ಟಾರ್ 2' ಕಾರ್ಯಕ್ರಮದಲ್ಲಿ ರಶ್ಮಿ ಸ್ಪರ್ಧಿ ಆಗಿದ್ದರು. ಇತ್ತೀಚಿಗೆ ತಮ್ಮ ಯೂ ಟ್ಯೂಬ್ ಚಾನೆಲ್ ಹಾಗೂ ಫೇಸ್ ಬುಕ್ ಪೇಜ್ ಮೂಲಕ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿದ್ದಾರೆ.

  ನಿಮಗೆ ಗೊತ್ತಿರದ 'ಎಂಜೆ' ರಾಕೇಶ್ ಅವರ ಇನ್ನೊಂದು ಮುಖ.! ನಿಮಗೆ ಗೊತ್ತಿರದ 'ಎಂಜೆ' ರಾಕೇಶ್ ಅವರ ಇನ್ನೊಂದು ಮುಖ.!

  'ನಮಕ್ ಹರಾಮ್' ಚಿತ್ರದಲ್ಲಿ ನಟನೆ

  'ನಮಕ್ ಹರಾಮ್' ಚಿತ್ರದಲ್ಲಿ ನಟನೆ

  ರಶ್ಮಿ ಸಿನಿಮಾದಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿದ್ದಾರೆ. ಆದರೆ, ಅದು ವರ್ಕ್ ಔಟ್ ಆಗಲಿಲ್ಲ. 'ನಮಕ್ ಹರಾಮ್' ಎಂಬ ಸಿನಿಮಾದ ಮೂಲಕ ರಶ್ಮಿ ನಟಿಯಾಗಿ ಸ್ಯಾಂಡಲ್ ವುಡ್ ಖಾತೆ ತೆರೆದರು. ನಟ ಗಣೇಶ್ ಸಹೋದರ ಮಹೇಶ್ ಈ ಸಿನಿಮಾದ ನಾಯಕ ಆಗಿದ್ದರು.

  ಬಿಗ್ ಬಾಸ್ ಯಾಕೆ ?

  ಬಿಗ್ ಬಾಸ್ ಯಾಕೆ ?

  ಬಿಗ್ ಬಾಸ್ ಗೆ ಬಂದಿದ್ದು ಏಕೆ ಎಂದು ಹೇಳಿರುವ ರಶ್ಮಿ ''ನಾನು ಇಷ್ಟು ವರ್ಷ ಟೆಸ್ಟ್ ಮ್ಯಾಚ್ ಆಡುತ್ತಿದೆ. ಈಗ ಟಿ 20 ಮ್ಯಾಚ್ ಆಡುವ ಸಮಯ ಬಂದಿದೆ. ನಾನು ಬೆಂಗಳೂರಿನಲ್ಲಿ ಇರುವವರಿಗೆ, ಇಂಟರ್ ನೆಟ್ ಬಳಸುವವರಿಗೆ ಮಾತ್ರ ಸೀಮಿತ ಆಗಬಾರದು. ಕರ್ನಾಟಕದ ತುಂಬ ಈ ರೀತಿ ಹುಡುಗಿ ಇದ್ದಾಳೆ ಎಂದು ತಿಳಿಯಲಿ ಅಂತ ಈ ವೇದಿಕೆ ಆಯ್ಕೆ ಮಾಡಿಕೊಂಡೆ.'' ಎಂದಿದ್ದಾರೆ.

  English summary
  RJ Rapid Rashmi, Bigg Boss Kannada 6 Contestant hails from Bengaluru. Read the article to know more about Rapid Rashmi and her background.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X