'ಸಾಫ್ಟ್ ವೇರ್ ಸುಂದರಿ' ರೀಮಾ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು
ಬಿಗ್ ಬಾಸ್ ಮೊದಲ ಆವೃತ್ತಿಯಿಂದಲೂ ಒಂದು ಬೇಡಿಕೆ ಇತ್ತು. ಬಹುತೇಕ ಎಲ್ಲ ಕ್ಷೇತ್ರದಿಂದಲೂ ಒಬ್ಬೊಬ್ಬರು ಬಂದಿದ್ದಾರೆ. ಆದ್ರೆ, ಸಾಫ್ಟ್ ವೇರ್ ಕ್ಷೇತ್ರದಿಂದ ಯಾರಿಗಾದರೂ ಅವಕಾಶ ಕೊಡಿ ಎಂದು ಕಲರ್ಸ್ ವಾಹಿನಿ ಪೇಜ್ ನಲ್ಲಿ ಡಿಮ್ಯಾಂಡ್ ಮಾಡ್ತಿದ್ದಾರೆ.
ಬಹುಶಃ ಈ ಮನವಿ ಬಿಗ್ ಬಾಸ್ ಗೆ ಕೇಳಿಸಿದೆ. ಅದಕ್ಕಾಗಿಯೇ ಈ ಬಾರಿ ಬಿಗ್ ಮನೆಗೆ ಸಾಫ್ಟ್ ವೇರ್ ಸುಂದರಿ ಒಬ್ಬರನ್ನ ಕರೆತಂದಿದ್ದಾರೆ. ಹೆಸರು ರೀಮಾ. ಫಟಾಫಟ್ ಅಂತ ಮಾತನಾಡುವ ಈಕೆ ಕಣ್ಣಲ್ಲೇ ಎಲ್ಲರನ್ನ ಮೋಡಿ ಮಾಡ್ತಾರೆ. ಬಿಗ್ ಮನೆಗೆ ಈ ಸೀಸನ್ ಗೆ ಗ್ಲಾಮರ್ ಹೆಚ್ಚಿಸುವ ಕ್ವೀನ್ ಆದರೂ ಅಚ್ಚರಿಯಿಲ್ಲ.
ಬಟ್, ಈ ಸಾಫ್ಟ್ ವೇರ್ ಸುಂದರಿ ನೀವು ಅಂದುಕೊಂಡಂತೆ ಇಲ್ಲ. ಬರಿ ಕಂಪ್ಯೂಟರ್ ಮುಂದೆ ಕೂತು ಕೆಲಸ ಮಾಡೋ ಹುಡುಗಿ ಅಂತೂ ಅಲ್ಲವೇ ಅಲ್ಲ. 'ಜಾಲಿಡೇಸ್' ಎಂದು ಹೇಳುತ್ತಾ ಲೈಫ್ ಎಂಜಾಯ್ ಮಾಡ್ತಿರುವ ಮಾಡ್ರನ್ ಹುಡುಗಿ. ಅಷ್ಟಕ್ಕೂ, ರೀಮಾ ಯಾರು,? ರೀಮಾ ಬಗ್ಗೆ ಹೆಚ್ಚಿನ ವಿಷ್ಯಗಳು ಏನಿದೆ.? ಮುಂದೆ ಓದಿ......

ಪುತ್ತೂರಿನ ಮುತ್ತು
ಹೆಸರು ರೀಮಾ. ಮೂಲತಃ ಮಂಗಳೂರು ಜಿಲ್ಲೆಯ ಪುತ್ತೂರಿನ ಗೊಂಬೆ. ಸದ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡ್ತಿದ್ದಾರೆ. ಅವರ ತಾಯಿ ವೃತ್ತಿಯಲ್ಲಿ ಟೀಚರ್. ಹಾಗಂತ ಶಿಸ್ತಿನಿ ಹುಡುಗಿ ಅಂತೂ ಈಕೆಯಲ್ಲ. ಎಲ್ಲ ವಿಷ್ಯಗಳಲ್ಲಿ ಟಾಪ್ ನಲ್ಲಿದ್ದೀನಿ ಎನ್ನುವ ರೀಮಾಗೆ ಗೈಡ್ಸ್ ನಲ್ಲಿ ರಾಷ್ಟ್ರಪತಿ ಪುರಸ್ಕಾರ ಸಿಕ್ಕಿರುವುದು ಹೆಮ್ಮೆ.

ಡ್ಯಾನ್ಸ್ ಅಂದ್ರೆ ಇಷ್ಟ...
ರೀಮಾಗೆ ಡ್ಯಾನ್ಸ್ ಅಂದ್ರೆ ಇಷ್ಟ ಕೊರಿಯೋಗ್ರಫಿ ಅಂದ್ರೆ ಪ್ರಾಣ ಅಂತೆ. ಬಿಗ್ ಬಾಸ್ ನಲ್ಲಿ ಯಾವುದೇ ಟಾಸ್ಕ್ ಕೊಟ್ರು, ನನ್ನ ಸ್ಟೈಲ್ ನಲ್ಲೇ ನಾನು ಮಾಡ್ತೀನಿ ಎನ್ನುವು ರೀಮಾ ಲೀಡರ್ ಆಗುವಷ್ಟು ಕಾನ್ಫಿಡೆನ್ಸ್. ಅವರ ತಂದೆ ಹೇಳಿದ್ರಂತೆ ನಿನಗೆ ಬಿಗ್ ಬಾಸ್ ಆಗಬರಲ್ಲ ಅಂತ. ಆದ್ರೆ, ಯಾಕೆ ಆಗಿಬರಲ್ಲ ಅಂತ ಪ್ರಶ್ನಿಸಿ ಬಂದಿದ್ದಾರೆ ರೀಮಾ.

ಐಟಿ ಉದ್ಯೋಗಿಗಳ ಪ್ರತಿನಿಧಿ
ಐಟಿ ಕ್ಷೇತ್ರ ಅಂದ್ರೆ ಬರಿ ಕೆಲಸ ಮಾತ್ರವಲ್ಲ. ಅವರಲ್ಲೂ ವಿಶೇಷವಾದ ಟ್ಯಾಲೆಂಟ್ ಗಳು ಇರುತ್ತೆ ಎನ್ನುವುದು ನಾನು ಪ್ರತಿನಿಧಿಸುತ್ತೇನೆ. ಆ ಕಾರಣದಿಂದ ನಾನು ಬಿಗ್ ಬಾಸ್ ಗೆ ಬರ್ತಿದ್ದೀನಿ ಎಂದು ಹೇಳಿಕೊಂಡು ಬಿಗ್ ಮನೆ ಪ್ರವೇಶ ಮಾಡಿದ್ದಾರೆ ರೀಮಾ.

ಕ್ರಶ್ ಆದ್ರೆ ಯೋಚನೆ ಮಾಡ್ತಾರಂತೆ.!
ಮನೆಯಲ್ಲಿ ಮದುವೆ ಆಗು ಎನ್ನುತ್ತಿದ್ದಾರೆ. ಆದ್ರೆ, ನಾನು ಬಿಗ್ ಬಾಸ್ ಗೆ ಬಂದಿದ್ದೇನೆ. ಒಂದು ವೇಳೆ ಇಲ್ಲಿ ಯಾರ ಮೇಲೆ ಆದರೂ ಕ್ರಶ್ ಆದ್ರೆ, ಅವರು ನಿಜವಾಗಲೂ ಇಷ್ಟಪಡ್ತಿದ್ರೆ ಸ್ವಲ್ಪ ಯೋಚನೆ ಮಾಡ್ತೀನಿ. ಹೊರಗಡೆ ನನಗೆ ದಿನಕ್ಕೆ ಮೂರ್ನಾಲ್ಕು ಕ್ರಶ್ ಆಗುತ್ತೆ ಎಂದು ಓಪನ್ ಆಗಿ ಹೇಳಿಕೊಂಡಿದ್ದಾರೆ ರೀಮಾ.


Click it and Unblock the Notifications











