ಆಧುನಿಕ ರೈತ ಶಶಿಕುಮಾರ್ 5 ಚಿನ್ನದ ಪದಕಕ್ಕೆ ಒಡೆಯ.! ಎಲ್ಲಿ, ಹೇಗೆ.?
ಬಿಗ್ ಬಾಸ್ ಕನ್ನಡದಲ್ಲಿ ಮೊದಲಿನಿಂದಲೂ ಒಂದು ಕೂಗು. ರೈತರನ್ನ ಮನೆಯೊಳಗೆ ಕಳುಹಿಸಿ, ರೈತರಿಗೆ ಅವಕಾಶ ಕೊಡಿ ಅಂತ. ಈ ಬೇಡಿಕೆ ಕೊನೆಗೂ ಆರನೇ ಆವೃತ್ತಿಯಲ್ಲಿ ನೆರವೇರಿದೆ.
ಹೌದು, 26 ವರ್ಷದ ಶಶಿಕುಮಾರ್ ಎಂಬ ಆಧುನಿಕ ರೈತ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ವೃತ್ತಿಯಲ್ಲಿ ರೈತನಾಗಿರುವ ಶಶಿಕುಮಾರ್ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಬರಿ ಬರಿ ರೈತನಾಗಿ ಕೃಷಿ ಬೆಳೆಯುವುದು ಮಾತ್ರವಲ್ಲ, ಇತರೆ ಕಲೆಗಳನ್ನ ಮೈಗೂಡಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಶಶಿಕುಮಾರ್ ಮತ್ತು ಅವರ ತಂಡದ ಸಾಧನೆಗೆ ಐದು ಚಿನ್ನದ ಪದಕ ಸಿಕ್ಕಿದೆ. ಅಷ್ಟಕ್ಕೂ, ಶಶಿಕುಮಾರ್ ಅವರಿಗೆ ಚಿನ್ನದ ಪದಕ ಸಿಕ್ಕಿದ್ದು ಯಾವ ಕ್ಷೇತ್ರದಲ್ಲಿ.? ಯಾವ ಸಾಧನೆಗಾಗಿ.? ಎಂಬುದನ್ನ ತಿಳಿಯಲು ಮುಂದೆ ಓದಿ....

ಚಿಕ್ಕಬಳ್ಳಾಪುರದ ಯುವಕ
ಶಶಿಕುಮಾರ್ ಗೆ ಈಗ ವಯಸ್ಸು 26. ಇನ್ನೂ ಮದುವೆ ಆಗಿಲ್ಲ. ಚಿಕ್ಕಬಳ್ಳಾಪುರ ಚಿಂತಮಣಿ ಮೂಲದ ಇವರು ಮಾಡ್ರನ್ ರೈತ. ಬೆಂಗಳೂರಿನ ಜಿಕೆವಿಕೆಯಲ್ಲಿ ಕೃಷಿ ವಿಭಾಗದಲ್ಲಿ ಪದವಿ ಹಾಗೂ ಧಾರಾವಾಡ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಮುಗಿಸಿದ್ದಾರೆ.

ಜಾನಪದ ಪ್ರತಿಭೆ
ಆಧುನಿಕ ತಂತ್ರಜ್ಞಾನವನ್ನ ಬಳಸಿ ಕೃಷಿ ಬೆಳೆಯುವ ಶಶಿಕುಮಾರ್ ಜೊತೆಗೆ ಜಾನಪದ ಕಲೆಗಾರ. ಡ್ಯಾನ್ಸ್ ಹಾಗೂ ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ. ಭೂಮಿಕ ಎಂಬ ತಂಡ ಕಟ್ಟಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾರ್ಯಕ್ರಮಗಳನ್ನ ನೀಡಿದ್ದಾರೆ. ಇದರ ಪ್ರತಿಫಲವಾಗಿ ಶಶಿಕುಮಾರ್ ಮತ್ತು ತಂಡಕ್ಕೆ ಐದು ಚಿನ್ನದ ಪದಕ ಸಿಕ್ಕಿದೆ. ಇದರಲ್ಲಿ ಮೂರು ನೃತ್ಯಕ್ಕೆ ಎರಡು ನಾಟಕ ವಿಭಾದಲ್ಲಿ ಎನ್ನುವುದು ವಿಶೇಷ.

ರೈತನ ಬಗ್ಗೆ ಜಾಗೃತಿ
'ರೈತ ಅಂದ್ರೆ ಪಲಾವ್ ಜೊತೆ ಕೊಡೋ ಮೊಸರು ಬಜ್ಜಿ ಅಲ್ಲ, ಭೂಮಿಯಲ್ಲಿ ಉತ್ತಿ ಭಿತ್ತಿ ಬೆಳಯುವ ರೈತ. ರೈತ ಅಂದ್ರೆ ಪಂಚೆ ಉಟ್ಟುಕೊಂಡು ಇರ್ತಾನೆ. ಮಣ್ಣಿನಲ್ಲಿ ಕೆಲಸ ಮಾಡ್ತಾನೆ. ಅರಿದು ಹೋಗಿರುವ ಬಟ್ಟೆಗಳನ್ನ ಬಳಸ್ತಾನ ಎಂಬ ಭಾವನೆ ಇದೆ. ಅದರ ಜೊತೆಗೆ ಕೆಲವೊಂದು ಟ್ಯಾಗ್ ಅಂದ್ರೆ ಸಬ್ಸಿಡಿ, ಸಾಲಮನ್ನಾ, ಆತ್ಮಹತ್ಯೆ ಎಂಬುದು ಇದೆ. ಇದನ್ನ ಬದಲಿಸಬೇಕು. ಆಧುನಿಕವಾಗಿ ಕೃಷಿ ಬೆಳಯುವ ರೈತರು ಇದನ್ನ ಉದ್ಯಮವನ್ನಾಗಿ ತೊಡಗಿಕೊಳ್ಳಬೇಕು' ಎಂದು ಶಶಿಕುಮಾರ್ ಹೇಳ್ತಾರೆ.

ಶಶಿಕುಮಾರ್ ಕಲೆ ಯಾವುದು.?
ಶಶಿಕುಮಾರ್ ಅವರಿಗೆ ಡೊಳ್ಳು ಕುಣಿತ, ಪೂಜೆ ಕುಣಿತ, ವೀರಗಾಸೆ, ಕಂಸಾಳೆ ಸೇರಿದಂತೆ ಹಲವು ರೀತಿ ಜಾನಪದ ನೃತ್ಯಗಳು ಬರುತ್ತೆ. ಇದನ್ನ ಬೇರಯವರಿಗೆ ಕಲಿಸಿದ್ದಾರೆ. ಭೂಮಿಕಾ ಸಾಂಸ್ಕೃತಿಕ ತಂಡವನ್ನ ಕಟ್ಟಿಕೊಂಡು ಹಲವು ಕಾರ್ಯಕ್ರಮ ನೀಡಿದ್ದಾರೆ. ಬಿಗ್ ಬಾಸ್ ನಿಂದ ಬಂದ್ಮೇಲೂ ನಾನು ನನ್ನ ಕೃಷಿ ಚಟುವಟಿಕೆಗಳನ್ನ ಮುಂದುವರಿಸಿಕೊಂಡು ಎಲ್ಲ ರೈತರಿಗೂ ಮಾದರಿಯಾಗಿರ್ತೇನೆ ಎಂದು ಶಶಿಕುಮಾರ್ ಹೇಳಿದ್ದಾರೆ.


Click it and Unblock the Notifications











