'ಬಿಗ್ ಬಾಸ್' ಮನೆಯೊಳಗೆ ಸ್ನೇಹ ಆಚಾರ್ಯ ಹೆಚ್ಚು ದಿನ ಇರೋದು ಡೌಟು.?

Recommended Video

Bigg Boss Kannada Season 6 : ಬಿಗ್ ಬಾಸ್ ಸ್ಪರ್ಧಿ ಸ್ನೇಹ ಆಚಾರ್ಯ ಹೆಚ್ಚು ದಿನ ಮನೇಲಿ ಇರ್ತಾರಾ | ಯಾರು ಈಕೆ?

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ವಿನ್ನರ್ ಆಗಬೇಕು... 'ಬಿಗ್ ಬಾಸ್' ಟ್ರೋಫಿ ಎತ್ತಿ ಹಿಡಿಯಬೇಕು... 'ಬಿಗ್ ಬಾಸ್' ಮೂಲಕ ಜನರಿಗೆ ಹೆಚ್ಚು ಹತ್ತಿರ ಆಗಬೇಕು... ಎಂಬೆಲ್ಲ ಆಸೆಗಳನ್ನು ಇಟ್ಟುಕೊಂಡು ಕೆಲವರು 'ದೊಡ್ಮನೆ'ಯೊಳಗೆ ಕಾಲಿಡುತ್ತಾರೆ.

ನಟಿ ಹಾಗೂ ನೃತ್ಯ ಸಂಯೋಜಕಿ ಸ್ನೇಹ ಆಚಾರ್ಯ ಮನಸ್ಸಿನಲ್ಲೂ ತಾವು 'ಬಿಗ್ ಬಾಸ್' ಗೆಲ್ಲಬೇಕು ಎಂಬ ಆಸೆ ಇರಬಹುದು. ಆದ್ರೆ, ಪರಿಸ್ಥಿತಿಯನ್ನ ನೋಡಿದರೆ ಅವರು ಯಾಕೋ, 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರುವ ಹಾಗೇ ಕಾಣುತ್ತಿಲ್ಲ.

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಅದಾಗಲೇ ನಾಮಿನೇಷನ್ ಟಾಸ್ಕ್ ಚಾಲ್ತಿಯಲ್ಲಿದೆ. 'ಬಿಗ್ ಬಾಸ್' ಮೊದಲನೇ ಸಂಚಿಕೆಯಲ್ಲಿ ಸ್ನೇಹ ಆಚಾರ್ಯ ಅಷ್ಟಾಗಿ ಕಾಣಿಸಿಕೊಂಡೇ ಇಲ್ಲ.

ಅಷ್ಟಕ್ಕೂ, ಯಾರೀ ಸ್ನೇಹ ಆಚಾರ್ಯ ಅಂದ್ರಾ.. ತಿಳಿದುಕೊಳ್ಳುವ ಕುತೂಹಲ ಇದ್ದರೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

ಕನ್ನಡ ನಟಿ ಸ್ನೇಹ ಆಚಾರ್ಯ

ಕನ್ನಡ ನಟಿ ಸ್ನೇಹ ಆಚಾರ್ಯ

'ಜೋಶ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಸ್ನೇಹ ಆಚಾರ್ಯ. 'ಕೃಷ್ಣ ಲೀಲಾ', 'ಆಕೆ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಸ್ನೇಹ ಆಚಾರ್ಯ ಅಭಿನಯಿಸಿದ್ದಾರೆ.

ಬಾಲಿವುಡ್ ನಲ್ಲಿ ನೃತ್ಯ ಸಂಯೋಜಕಿ

ಬಾಲಿವುಡ್ ನಲ್ಲಿ ನೃತ್ಯ ಸಂಯೋಜಕಿ

ಡ್ಯಾನ್ಸ್ ಕಲಿತಿರುವ ಸ್ನೇಹ ಆಚಾರ್ಯ ಮುಂಬೈನಲ್ಲಿ ನೃತ್ಯ ಸಂಯೋಜಕಿ ಆಗಿದ್ದಾರೆ. ಬಾಲಿವುಡ್ ನಟ ಗೋವಿಂದಾ, ಶಾಹಿದ್ ಕಪೂರ್, ಪ್ರಭುದೇವ, ಪ್ರಿಯಾಂಕಾ ಛೋಪ್ರಾ ಗೆ ಕೋರಿಯೋಗ್ರಫಿ ಮಾಡುವ ತಂಡದಲ್ಲಿ ಸ್ನೇಹ ಆಚಾರ್ಯ ಕೂಡ ಇದ್ದಾರೆ.

ಪಕ್ಕಾ ಬೆಂಗಳೂರು ಹುಡುಗಿ

ಪಕ್ಕಾ ಬೆಂಗಳೂರು ಹುಡುಗಿ

ನಟಿಯಾಗಿ, ನೃತ್ಯ ಸಂಯೋಜಕಿ ಆಗಿ, ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸ್ನೇಹ ಆಚಾರ್ಯ ಪಕ್ಕಾ ಬೆಂಗಳೂರು ಹುಡುಗಿ. ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ಸ್ನೇಹ ಆಚಾರ್ಯ ಸದ್ಯ 'ಬಿಗ್ ಬಾಸ್' ಶೋನಲ್ಲಿ ಸ್ಪರ್ಧಿಸಿದ್ದಾರೆ.

ಮುಂದಿನ ತಿಂಗಳು ಮದುವೆ

ಮುಂದಿನ ತಿಂಗಳು ಮದುವೆ

ನ್ಯೂಯಾರ್ಕ್ ಮೂಲದ ರಾಯನ್ ಜೊತೆಗೆ ಈಗಾಗಲೇ ಸ್ನೇಹ ಆಚಾರ್ಯಗೆ ನಿಶ್ಚಿತಾರ್ಥ ಆಗಿದೆ. ಮುಂದಿನ ತಿಂಗಳು ಅಂದ್ರೆ ನವೆಂಬರ್ 24-25 ರಂದು ಸ್ನೇಹ ಆಚಾರ್ಯ-ರಾಯನ್ ಮದುವೆ ಫಿಕ್ಸ್ ಆಗಿದೆ. ಹೀಗಿರುವಾಗಲೇ, ಸ್ನೇಹ ಆಚಾರ್ಯ 'ಬಿಗ್ ಬಾಸ್' ಮನೆಗೆ ಬಂದಿದ್ದಾರೆ. ಮದುವೆ ಇರುವ ಕಾರಣ, ಸ್ನೇಹ ಆಚಾರ್ಯ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರೋದು ಡೌಟು ಅನ್ನೋದು ಹಲವರ ಅಭಿಪ್ರಾಯ.

More from Filmibeat

English summary
Sneha Acharya, Bigg Boss Kannada 6 Contestant hails from Bengaluru. Read the article to know more about Sneha Acharya and her background.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X