ಯಾರೀ ಜವಾರಿ ಹುಡುಗಿ ಸೋನು ಪಾಟೀಲ್.? ಆಕೆಯ ನಿಜ ನಾಮ ನಿಮ್ಗೆ ಗೊತ್ತೇನು.?

Recommended Video

Bigg Boss Kannada Season 6 : ಬಿಗ್ ಮನೆಗೆ ಕಾಲಿಟ್ಟ ಮೊದಲ ಸ್ಪರ್ಧಿ ಸೋನು ಪಾಟೀಲ್ ಹಿನ್ನೆಲೆ ಏನು?

''ತೊಡೆ ತಟ್ಟಿ ನಿಂತರೆ ಒಂದು ಕೈ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವನಿಗಿಂತ ಜಾಸ್ತಿ ಇದ್ದೇನೆ'' , ''ನಾನು ಮೂರು ಅಡಿ ಬುಲೆಟ್ಟು'' , ''ಆಟಂ ಬಾಂಬು'' ಅಂತೆಲ್ಲಾ ಬಿಲ್ಡಪ್ ತಗೊಂಡು 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ 'ದೊಡ್ಮನೆ'ಯೊಳಗೆ ಮೊಟ್ಟ ಮೊದಲು ಕಾಲಿಟ್ಟಾಕೆ ಸೋನು ಪಾಟೀಲ್.

ಉತ್ತರ ಕರ್ನಾಟಕದ ಹುಡುಗಿ ಸೋನು ಪಾಟೀಲ್ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟ ಮೊದಲ ದಿನವೇ ಜಿಮ್ ರವಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಸಲಿಗೆ ಪಟಪಟ ಅಂತ ಮಾತನಾಡುವ ಸೋನು ಪಾಟೀಲ್ ನಿಜನಾಮ ಬೇರೆಯೇ ಇದೆ ಅನ್ನೋದು ನಿಮ್ಗೆ ಗೊತ್ತೇ.?

''ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡುತ್ತಿರುವೆ'' ಅಂತ ಹೇಳಿಕೊಂಡಿರುವ ಸೋನು ಪಾಟೀಲ್ ಯಾವೆಲ್ಲ ಚಿತ್ರಗಳಲ್ಲಿ ನಟಿಸಿದ್ದಾರೆ.? ಆಕೆಯ ಹಿನ್ನಲೆ ಏನು.? ಅಂತ ತಿಳಿದುಕೊಳ್ಳುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ....

ಜವಾರಿ ಹುಡುಗಿ

ಜವಾರಿ ಹುಡುಗಿ

ಉತ್ತರ ಕರ್ನಾಟಕದ ಜವಾರಿ ಹುಡುಗಿ ಸೋನು ಪಾಟೀಲ್. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದಾಕೆ ಸೋನು ಪಾಟೀಲ್.

ಗಟ್ಟಿಗಿತ್ತಿ

ಗಟ್ಟಿಗಿತ್ತಿ

ಬಡ ರೈತನ ಪುತ್ರಿ ಆಗಿದ್ದರೂ ಸೋನು ಪಾಟೀಲ್ ಗಟ್ಟಿಗಿತ್ತಿ. ಎಂ.ಎ ಜರ್ನಲಿಸಂ ಓದಿರುವ ಸೋನು ಪಾಟೀಲ್ ಅವಕಾಶಗಳನ್ನು ಅರಿಸಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ನಿಜ ನಾಮ ಏನು.?

ನಿಜ ನಾಮ ಏನು.?

ಸೋನು ಪಾಟೀಲ್ ನಿಜ ನಾಮ ಜ್ಯೋತಿ. ಸ್ನೇಹಿತರೆಲ್ಲ ಈಕೆಯನ್ನ ಪ್ರೀತಿಯಿಂದ ಸೋನು ಅಂತ ಕರೆಯುತ್ತಿದ್ದರಂತೆ. ಅದೇ ಹೆಸರಿನಿಂದ ಅದೃಷ್ಟ ಖುಲಾಯಿಸಿದರಿಂದ 'ಸೋನು ಪಾಟೀಲ್' ಎಂದೇ ತಮ್ಮ ಹೆಸರನ್ನ ಬದಲಾಯಿಸಿಕೊಂಡಿದ್ದಾರೆ.

ಬೆಂಗಳೂರಿಗೆ ಬಂದು ಕಷ್ಟ ಅನುಭವಿಸಿದ ಸೋನು ಪಾಟೀಲ್

ಬೆಂಗಳೂರಿಗೆ ಬಂದು ಕಷ್ಟ ಅನುಭವಿಸಿದ ಸೋನು ಪಾಟೀಲ್

ಅಪ್ಪ, ಅಮ್ಮ ಹಾಗೂ ಅಜ್ಜಿಯನ್ನ ಸಾಕಲು ಉದ್ಯೋಗ ಅರಿಸಿ ಸೋನು ಪಾಟೀಲ್ ಬೆಂಗಳೂರಿಗೆ ಬಂದಾಗ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಸ್ಟ್ ಸ್ಟ್ಯಾಂಡ್ ಗಳಲ್ಲಿ ರಾತ್ರಿ ನಿದ್ದೆ ಮಾಡಿ, ಬೀದಿ ಬೀದಿ ಅಲೆದು ಕೆಲ ಮನೆಗಳಲ್ಲಿ ಕೆಲಸ ಮಾಡಿ ತುತ್ತು ಊಟಕ್ಕಾಗಿ ಸೋನು ಪಾಟೀಲ್ ಕಷ್ಟ ಪಟ್ಟಿದ್ದಾರೆ.

ಧಾರಾವಾಹಿಗಳಲ್ಲಿ ನಟಿಸಿದ ಸೋನು ಪಾಟೀಲ್

ಧಾರಾವಾಹಿಗಳಲ್ಲಿ ನಟಿಸಿದ ಸೋನು ಪಾಟೀಲ್

'ಮೊಗ್ಗಿನ ಮನಸ್ಸು', 'ಗಾಂಧಾರಿ', 'ಅಮೃತ ವರ್ಷಿಣಿ', 'ಪಂಚ ಕಜ್ಜಾಯ', 'ಶ್ರೀಮಾನ್ ಶ್ರೀಮತಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಸೋನು ಪಾಟೀಲ್ ನಟಿಸಿದ್ದಾರೆ.

ಸೋನು ಪಾಟೀಲ್ ಅಭಿನಯಿಸಿದ ಚಿತ್ರಗಳಾವುವು.?

ಸೋನು ಪಾಟೀಲ್ ಅಭಿನಯಿಸಿದ ಚಿತ್ರಗಳಾವುವು.?

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಜೊತೆಗೆ 'ಕೊಟ್ಟೂರೇಶ್ವರ ಮಹಾತ್ಮೆ', 'ಗರ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಸೋನು ಪಾಟೀಲ್ ಅಭಿನಯಿಸಿದ್ದಾರೆ.

ಸುದೀಪ್ ಅಭಿಮಾನಿ

ಸುದೀಪ್ ಅಭಿಮಾನಿ

ಸುದೀಪ್ ಕಂಡ್ರೆ ಸೋನು ಪಾಟೀಲ್ ಹಾಗೂ ಆಕೆಯ ಅಜ್ಜಿಗೆ ಅಚ್ಚುಮೆಚ್ಚು. ಜೀವಮಾನದಲ್ಲಿ ಒಮ್ಮೆಯಾದರೂ ಸುದೀಪ್ ಜೊತೆಗೆ ನಟಿಸಬೇಕು ಅನ್ನೋದು ಸೋನು ಪಾಟೀಲ್ ಕನಸು.

'ಬಿಗ್ ಬಾಸ್' ಗೆಲ್ಲುವ ಹುಮ್ಮಸ್ಸಿನಲ್ಲಿ ಸೋನು ಪಾಟೀಲ್

'ಬಿಗ್ ಬಾಸ್' ಗೆಲ್ಲುವ ಹುಮ್ಮಸ್ಸಿನಲ್ಲಿ ಸೋನು ಪಾಟೀಲ್

ಮಾಂಸಾಹಾರ ಸೇವಿಸದ ಸೋನು ಪಾಟೀಲ್ ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಭಾಯಿಸಲು 'ಬಿಗ್ ಬಾಸ್' ಕಾರ್ಯಕ್ರಮಕ್ಕೆ ಬಂದಿದ್ದಾರೆ. 'ಬಿಗ್ ಬಾಸ್' ಗೆಲ್ಲಬೇಕು ಎಂಬ ಛಲ ಸೋನು ಪಾಟೀಲ್ ರಲ್ಲಿ ಇದೆ. ಗೆಲ್ಲಿಸುವುದು ಬಿಡುವುದು ವೀಕ್ಷಕರ ಕೈಯಲ್ಲಿದೆ.

More from Filmibeat

English summary
Sonu Patil, Bigg Boss Kannada 6 Contestant hails from Bagalkot. Read the article to know more about Sonu Patil and her background.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X