ಚೈತ್ರಾ ಕೋಟೂರ್ 'ಬಿಗ್ ಬಾಸ್' ಬರೋಕೆ ಆ 'ವಿವಾದ' ಕಾರಣವಾಯ್ತಾ?
Recommended Video
ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯಲ್ಲಿ 16 ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ ಚೈತ್ರಾ ಕೋಟೂರ್ ಅವರ ಪರಿಚಯ ಅಷ್ಟಾಗಿ ಜನಸಾಮಾನ್ಯರಿಗೆ ಇಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ಇವರನ್ನ ನೋಡಿದ್ಮೇಲೆ 'ಯಾರು ಈ ಚೈತ್ರಾ' ಎಂಬ ಪ್ರಶ್ನೆ ಹಲವರನ್ನ ಕಾಡಿದೆ.
ಸ್ವತಃ ಸುದೀಪ್ ಅವರೇ ಪರಿಚಯ ಮಾಡಿಕೊಟ್ಟಂತೆ ಚೈತ್ರಾ ಕೋಟೂರ್ ಬಹರಗಾರ್ತಿ, ರಂಗಭೂಮಿ ಕಲಾವಿದೆ ಹಾಗೂ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಸಾಮಾನ್ಯವಾಗಿ ಸುದ್ದಿಯಲ್ಲಿರುವ ಅಥವಾ ಏನಾದರೂ ವಿವಾದಗಳಲ್ಲಿ ಸುದ್ದಿಯಾಗಿರುವ ವ್ಯಕ್ತಿಗಳು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಉದಾಹರಣೆಗಳಿವೆ.
ಈ ಹಿನ್ನಲೆಯಲ್ಲಿ ಗಮನಿಸದಾಗ, ಚೈತ್ರಾ ಕೋಟೂರ್ ಅವರು ಬಿಗ್ ಬಾಸ್ ಪ್ರವೇಶ ಮಾಡೋಕೆ ಆ ಒಂದು ವಿವಾದ ಕಾರಣ ಆಯ್ತಾ ಎಂಬ ಅನುಮಾನ ಕಾಡುತ್ತೆ. ಅಷ್ಟಕ್ಕೂ, ಚೈತ್ರಾ ಕೋಟೂರ್ ಹೆಸರು ಸಿಲುಕಿಕೊಂಡಿದ್ದ ಆ ವಿವಾದ ಯಾವುದು? ಮುಂದೆ ಓದಿ.....

ಯೋಗರಾಜ್ ಭಟ್ಟರ ಅಸಿಸ್ಟಂಟ್
ನಟಿ, ಬರಹಗಾರ್ತಿಯಾಗಿರುವ ಚೈತ್ರಾ ಕೋಟೂರ್ ಅವರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ. ಸಂಭಾಷಣೆ, ಹಾಡುಗಳನ್ನ ಬರೆದಿದ್ದಾರೆ. ಸೂಜಿದಾರ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ನಟಿಸಿ, ಸಂಭಾಷಣೆ ಬರೆದು ಒಂದು ಹಾಡನ್ನು ಬರೆದಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಅವರ ಬಳಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.

'ಸೂಜಿದಾರ' ಸಿನಿಮಾದಲ್ಲಿ ನಟಿಸಿದ್ದರು
ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಸೂಜಿದಾರ ಚಿತ್ರದಲ್ಲಿ ಚೈತ್ರಾ ಕೋಟೂರ್ ಅವರು 'ರಾಜಿ' ಎಂಬ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಆದರೆ, ಸೂಜಿದಾರ ಸಿನಿಮಾದಲ್ಲಿ ಚೈತ್ರಾ ಕೋಟೂರ್ ಅವರನ್ನ ಹೆಚ್ಚು ಹೈಲೈಟ್ ಮಾಡಲಾಗಿದೆ ಎಂದು ಆರೋಪಿಸಿದ್ದರು. ಇದು ಗಾಂಧಿನಗರದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತು.

ಪ್ರಚಾರಕ್ಕೆ ಬರಬಾರದು ಎಂದಿದ್ದರಂತೆ
ಚೈತ್ರಾ ಕೋಟೂರ್ ನಟಿಸಿದ್ದ ಪಾತ್ರ ಸೂಜಿದಾರ ಸಿನಿಮಾದಲ್ಲಿ ಆಕರ್ಷಣೆಯಾಗಿದ್ದ ಕಾರಣ, ಚೈತ್ರಾ ಅವರು ಯಾವ ಪ್ರಚಾರದಲ್ಲೂ ಭಾಗಿಯಾಗಬಾರದು, ಪೋಸ್ಟರ್ ಗಳಲ್ಲು ಅವರು ಇರಬಾರದು ಎಂದು ಹರಿಪ್ರಿಯಾ ಅವರ ತಾಯಿ ಚಿತ್ರತಂಡಕ್ಕೆ ತಿಳಿಸಿದ್ದರಂತೆ. ಇದರಿಂದ ಬೇಸರಗೊಂಡಿದ್ದ ಚೈತ್ರಾ ಎರಡ್ಮೂರು ದಿನ ಮಾನಸಿಕವಾಗಿ ನೊಂದಿದ್ದರಂತೆ.

ಈ ವಿವಾದ ಬಳಿಕವೇ ಚೈತ್ರಾ ಹೆಸರು ಸದ್ದು ಮಾಡಿದ್ದು
ಈ ವಿವಾದ ಉದ್ದೇಶಪೂರ್ವಕವಾಗಿ ಆಯಿತಾ ಅಥವಾ ಅಕಸ್ಮಾತ್ ಆಗಿ ಆಯ್ತಾ ಎಂಬುದಕ್ಕಿಂತ, ಈ ಘಟನೆ ಆದ ಬಳಿಕ ಚೈತ್ರಾ ಕೋಟೂರ್ ಅವರ ಹೆಸರು ಮಾಧ್ಯಮಗಳಲ್ಲಿ ಚರ್ಚೆಯಾಯಿತು. ಅಲ್ಲಿಯವರೆಗೂ ನಿರ್ದೇಶಕರ ತಾಂತ್ರಿಕ ವರ್ಗದಲ್ಲಿ ಹಾಗೂ ನಾಟಕಗಳಲ್ಲಿ ನಟಿಸುತ್ತಿದ್ದ ಚೈತ್ರಾ, ಜನಸಾಮಾನ್ಯರಿಗೆ ಅಷ್ಟಾಗಿ ಪರಿಚಯ ಇರಲಿಲ್ಲ.

ಚೈತ್ರಾ ಕೋಟೂರ್ ಕುಟುಂಬದ ಬಗ್ಗೆ ಪರಿಚಯ
ಚೈತ್ರಾ ಅವರ ತಂದೆ ನಾರಾಯಣಪ್ಪ ಆರ್ಮಿಯಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದ್ದಾರೆ. ಜೊತೆಗೆ ಚುಟುಕ ಸಾಹಿತ್ಯದಲ್ಲಿ ಕೆಲಸ ಮಾಡಿದ್ದಾರೆ. ತಾಯಿ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡಿ, ನಿವೃತ್ತಿ ಹೊಂದಿದ್ದಾರೆ. ಸಹೋದರ ಪ್ರದೀಪ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ.

ಬಿಗ್ ಬಾಸ್ ಕೈಹಿಡಿಯುತ್ತಾ?
ಚೈತ್ರಾ ಕೋಟೂರ್ ಅಂದ್ರೆ ಸೂಜಿದಾರ ನಟಿ, ಆ ಸಮಯದಲ್ಲಿ ಹರಿಪ್ರಿಯಾ ಅವರ ಜೊತೆ ವಿವಾದ ಮಾಡಿಕೊಂಡಿದ್ದರು ಅಲ್ವಾ ಅವರೆ ಎಂಬುದು ಇದೆ. ಅದನ್ನ ಬಿಗ್ ಬಾಸ್ ಶೋ ಮೂಲಕ ಸೈಡಿಗೆ ತಳ್ಳಿ, ಚೈತ್ರಾ ಕೋಟೂರ್ ಅಂದ್ರೆ ಯಾರು ಎಂಬುದು ಸಾಬೀತು ಪಡಿಸುವ ಅವಕಾಶ ಅವರ ಮುಂದಿದೆ. ಇದನ್ನ ಸರಿಯಾಗಿ ಬಳಸಿಕೊಳ್ಳುತ್ತಾರಾ?


Click it and Unblock the Notifications











