'ಬಿಗ್ ಬಾಸ್' ವಿನ್ನರ್ ಆದವರು ಈಗೆಲ್ಲಿದ್ದಾರೆ.? ಏನು ಮಾಡುತ್ತಿದ್ದಾರೆ.?

ಹಿಂದಿ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್-12' ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 16 ರಿಂದ ಕಲರ್ಸ್ ವಾಹಿನಿಯಲ್ಲಿ 'ಬಿಗ್ ಬಾಸ್-12' ಪ್ರಸಾರವಾಗಲಿದೆ.

ಈ ಬಾರಿ 'ಬಿಗ್ ಬಾಸ್' ಮೂಲಕ ವಿಚಿತ್ರ ಜೋಡಿಗಳು ನಿಮಗೆಲ್ಲ ಭರಪೂರ ಮನರಂಜನೆ ನೀಡಲಿದ್ದಾರೆ. ವರದಿಗಳ ಪ್ರಕಾರ, ಕಾಮಿಡಿ ಕ್ವೀನ್ ಭಾರತಿ ಸಿಂಗ್, ಕ್ರಿಕೆಟರ್ ಶ್ರೀಶಾಂತ್, ನಟಿ ತನುಶ್ರೀ ದತ್ತಾ, ರಿಯಾಲಿಟಿ ಶೋ ಸುಂದರಿ ದಿವ್ಯ ಅಗರ್ವಾಲ್ ಮುಂತಾದವರು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ.

'ಬಿಗ್ ಬಾಸ್-12' ಶುರುವಾಗುವ ಮುನ್ನ, ಇಲ್ಲಿಯವರೆಗೂ ಹಿಂದಿ 'ಬಿಗ್ ಬಾಸ್' ಗೆದ್ದ ಹನ್ನೊಂದು ಸ್ಪರ್ಧಿಗಳ ಪರಿಚಯ ಇಲ್ಲಿದೆ. ಹಾಗೇ, 'ಬಿಗ್ ಬಾಸ್' ವಿನ್ನರ್ ಆದವರು ಈಗೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದರ ವಿವರ ಕೂಡ ಇಲ್ಲಿದೆ. ಮುಂದೆ ಓದಿರಿ...

'ಬಿಗ್ ಬಾಸ್-11' ವಿನ್ನರ್ ಶಿಲ್ಪಾ ಶಿಂಧೆ.!

'ಬಿಗ್ ಬಾಸ್-11' ವಿನ್ನರ್ ಶಿಲ್ಪಾ ಶಿಂಧೆ.!

ಹಿಂದಿ ಕಿರುತೆರೆಯ ಪರಿಚಿತ ಮುಖ ಶಿಲ್ಪಾ ಶಿಂಧೆ. 'ಬಾಭಿ', 'ಕಭಿ ಆಯೇ ನಾ ಜುದಾಯಿ', 'ಬಾಭಿ ಜಿ ಘರ್ ಪರ್ ಹೇ' ಮುಂತಾದ ಧಾರಾವಾಹಿಗಳಲ್ಲಿ ಶಿಲ್ಪಾ ಶಿಂಧೆ ಮಿಂಚಿದ್ದರು. 'ಬಿಗ್ ಬಾಸ್' ಮನೆಯಲ್ಲಿದ್ದು ಜನರ ಮನಗೆದ್ದ ಶಿಲ್ಪಾ ಶಿಂಧೆ, 'ಬಿಗ್ ಬಾಸ್-11' ವಿನ್ನರ್ ಆದರು. ಬಳಿಕ ಕೆಲ ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು ನಟಿ ಶಿಲ್ಪಾ ಶಿಂಧೆ.

'ಬಿಗ್ ಬಾಸ್-10' ವಿನ್ನರ್ ಮನ್ವೀರ್ ಗುರ್ಜರ್

'ಬಿಗ್ ಬಾಸ್-10' ವಿನ್ನರ್ ಮನ್ವೀರ್ ಗುರ್ಜರ್

'ಬಿಗ್ ಬಾಸ್-10' ರಿಯಾಲಿಟಿ ಶೋ ಗೆದ್ದ ಜನಸಾಮಾನ್ಯ ಈ ಮನ್ವೀರ್ ಗುರ್ಜರ್. ಉತ್ತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಮನ್ವೀರ್ ರೈತ ಕಮ್ ಡೈರಿ ಮಾಲೀಕ. ಆಡಿಷನ್ಸ್ ಮೂಲಕ ಮನ್ವೀರ್ 'ಬಿಗ್ ಬಾಸ್' ಮನೆ ಪ್ರವೇಶಿಸಿದರು. ಹಾಗೇ, 'ಬಿಗ್ ಬಾಸ್' ಗೆಲ್ಲುವಲ್ಲಿಯೂ ಯಶಸ್ವಿ ಆದರು. ಬಳಿಕ 'ಖತರೋಂಕಿ ಖಿಲಾಡಿ-9' ನಲ್ಲಿ ಮನ್ವೀರ್ ಭಾಗವಹಿಸಿದರು.

'ಬಿಗ್ ಬಾಸ್-9' ವಿನ್ನರ್ ಪ್ರಿನ್ಸ್ ನರುಲಾ

'ಬಿಗ್ ಬಾಸ್-9' ವಿನ್ನರ್ ಪ್ರಿನ್ಸ್ ನರುಲಾ

ಎಂಟಿವಿ ರೋಡೀಸ್ ಹಾಗೂ ಎಂಟಿವಿ ಸ್ಪ್ಲಿಟ್ಸ್ ವಿಲ್ಲಾ ಗೆದ್ದಿದ್ದ ಪ್ರಿನ್ಸ್ ನರುಲಾ 'ಬಿಗ್ ಬಾಸ್-9' ಕೂಡ ಸಲೀಸಾಗಿ ಗೆದ್ದು ಬಿಟ್ಟರು. ರಿಯಾಲಿಟಿ ಶೋಗಳ ಸರದಾರ ಆಗಿರುವ ಪ್ರಿನ್ಸ್, ರೋಡೀಸ್ ರಿಯಾಲಿಟಿ ಶೋನಲ್ಲಿ ಸದ್ಯ ಗ್ಯಾಂಗ್ ಲೀಡರ್ ಆಗಿದ್ದಾರೆ. ಜೊತೆಗೆ ಕೆಲ ಧಾರಾವಾಹಿಗಳಲ್ಲೂ ಅಭಿನಯಿಸುತ್ತಿದ್ದಾರೆ.

'ಬಿಗ್ ಬಾಸ್-8' ವಿನ್ನರ್ ಗೌತಮ್ ಗುಲಾಟಿ

'ಬಿಗ್ ಬಾಸ್-8' ವಿನ್ನರ್ ಗೌತಮ್ ಗುಲಾಟಿ

'ಕಸಮ್ ಸೇ', 'ಪ್ಯಾರ್ ಕಿ ಯೇ ಏಕ್ ಕಹಾನಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಗೌತಮ್ ಗುಲಾಟಿ 'ಬಿಗ್ ಬಾಸ್-8' ವಿನ್ನರ್ ಆದರು. ಬಳಿಕ 'ಎಂಟಿವಿ ಬಿಗ್ ಎಫ್' ಕಾರ್ಯಕ್ರಮವನ್ನ ನಿರೂಪಣೆ ಮಾಡಿದರು. ಹಲವು ರಿಯಾಲಿಟಿ ಶೋಗಳಲ್ಲಿ ಅತಿಥಿಯಾಗಿ ಗೌತಮ್ ಗುಲಾಟಿ ಭಾಗವಹಿಸಿದ್ದಾರೆ.

'ಬಿಗ್ ಬಾಸ್-7' ವಿನ್ನರ್ ಗೌಹರ್ ಖಾನ್

'ಬಿಗ್ ಬಾಸ್-7' ವಿನ್ನರ್ ಗೌಹರ್ ಖಾನ್

ಮಾಡೆಲ್ ಕಮ್ ನಟಿಯಾಗಿ ಗೌಹರ್ ಖಾನ್ ವೃತ್ತಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದು 'ಬಿಗ್ ಬಾಸ್' ಕಾರ್ಯಕ್ರಮ. ಗೌಹರ್ ಖಾನ್ 'ಬಿಗ್ ಬಾಸ್' ವಿನ್ನರ್ ಆದ್ಮೇಲೆ 'ಖತರೋಂಕಿ ಖಿಲಾಡಿ' ಕಾರ್ಯಕ್ರಮದಲ್ಲಿ ಸ್ಪರ್ಧಿಯಾದರು. ಬಳಿಕ 'ಫೀವರ್', 'ಫುದ್ದು', 'ಬದ್ರಿನಾಥ್ ಕಿ ದುಲ್ಹನಿಯಾ' ಸಿನಿಮಾಗಳಲ್ಲಿ ಗೌಹರ್ ಖಾನ್ ನಟಿಸಿದರು.

'ಬಿಗ್ ಬಾಸ್-6' ವಿನ್ನರ್ ಊರ್ವಶಿ

'ಬಿಗ್ ಬಾಸ್-6' ವಿನ್ನರ್ ಊರ್ವಶಿ

'ಶಕ್ತಿಮಾನ್', 'ಘರ್ ಏಕ್ ಮಂದಿರ್', 'ಕಸೌತಿ ಝಿಂದಗಿ ಕೇ' ಮುಂತಾದ ಧಾರಾವಾಹಿಗಳಿಂದ ಮನೆ ಮಾತಾದ ಸುಂದರಿ ಊರ್ವಶಿ. 'ಬಿಗ್ ಬಾಸ್-6' ಕಾರ್ಯಕ್ರಮದಲ್ಲಿ ಗೆಲುವಿನ ನಗೆ ಬೀರಿದ ಊರ್ವಶಿ ಸದ್ಯ 'ಚಂದ್ರಕಾಂತ', 'ಕಸೌತಿ ಝಿಂದಗಿ ಕೇ-2' ಧಾರಾವಾಹಿಗಳಲ್ಲಿ ಬಿಜಿಯಾಗಿದ್ದಾರೆ.

'ಬಿಗ್ ಬಾಸ್-5' ವಿನ್ನರ್ ಜೂಹಿ

'ಬಿಗ್ ಬಾಸ್-5' ವಿನ್ನರ್ ಜೂಹಿ

'ಯೇ ಜೀವನ್ ಹೇ', ''ಕುಂಕುಮ್ ಏಕ್ ಪ್ಯಾರಾ ಸಾ ಬಂಧನ್' ಸೇರಿದಂತೆ ಹಲವು ಧಾರಾವಾಹಿಗಳು, ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಪ್ರತಿಭಾವಂತ ನಟಿ ಜೂಹಿ. 'ಬಿಗ್ ಬಾಸ್-5' ವಿನ್ನರ್ ಆದ ಜೂಹಿ ಇತ್ತೀಚೆಗಷ್ಟೇ ಪತಿಯಿಂದ ಬೇರ್ಪಟ್ಟು ಸಿಕ್ಕಾಪಟ್ಟೆ ಸದ್ದು ಮಾಡಿದರು.

'ಬಿಗ್ ಬಾಸ್-4' ವಿನ್ನರ್ ಶ್ವೇತಾ ತಿವಾರಿ

'ಬಿಗ್ ಬಾಸ್-4' ವಿನ್ನರ್ ಶ್ವೇತಾ ತಿವಾರಿ

'ಬಿಗ್ ಬಾಸ್-4' ವಿಜೇತರಾಗಿ ಹೊರಹೊಮ್ಮಿದವರು ನಟಿ ಶ್ವೇತಾ ತಿವಾರಿ. ಸದ್ಯ ಇಬ್ಬರು ಮುದ್ದಾದ ಮಕ್ಕಳಿಗೆ ತಾಯಿ ಆಗಿರುವ ಶ್ವೇತಾ ತಿವಾರಿ ಸುಖವಾದ ಸಂಸಾರ ನಡೆಸುತ್ತಿದ್ದಾರೆ.

'ಬಿಗ್ ಬಾಸ್-3' ವಿನ್ನರ್ ವಿಂಧು ದಾರಾ ಸಿಂಗ್

'ಬಿಗ್ ಬಾಸ್-3' ವಿನ್ನರ್ ವಿಂಧು ದಾರಾ ಸಿಂಗ್

ಹಿಂದಿ ಹಾಗೂ ಪಂಜಾಬಿ ಚಿತ್ರಗಳಲ್ಲಿ ಅಭಿನಯಿಸಿರುವ ನಟ ವಿಂಧು ದಾರಾ ಸಿಂಗ್ 'ಬಿಗ್ ಬಾಸ್-3' ವಿನ್ನರ್ ಆದರು. ಬಳಿಕ 'ಹೌಸ್ ಫುಲ್', 'ಜೋಕರ್', 'ಸನ್ ಆಫ್ ಸರ್ದಾರ್', 'ಹಿಮ್ಮತ್ವಾಲ್' ಚಿತ್ರಗಳಲ್ಲಿ ವಿಂಧು ಅಭಿನಯಿಸಿದರು.

'ಬಿಗ್ ಬಾಸ್-2' ವಿನ್ನರ್ ಆಶುತೋಷ್ ಕೌಶಿಕ್

'ಬಿಗ್ ಬಾಸ್-2' ವಿನ್ನರ್ ಆಶುತೋಷ್ ಕೌಶಿಕ್

'ಎಂಟಿವಿ ರೋಡೀಸ್-5' ರಿಯಾಲಿಟಿ ಶೋ ಗೆದ್ದಿದ್ದ ಆಶುತೋಷ್ ಕೌಶಿಕ್, 'ಬಿಗ್ ಬಾಸ್' ಕಾರ್ಯಕ್ರಮವನ್ನೂ ಗೆದ್ದುಬಿಟ್ಟರು. ಬಳಿಕ 'ಲಾಲ್ ರಂಗ್', 'ಝಿಲಾ ಘಜಿಯಾಬಾದ್', 'ಶಾರ್ಟ್ ಕಟ್ ರೋಮಿಯೋ' ಚಿತ್ರಗಳಲ್ಲಿ ಆಶುತೋಷ್ ನಟಿಸಿದರು.

'ಬಿಗ್ ಬಾಸ್-1' ವಿನ್ನರ್ ರಾಹುಲ್ ರಾಯ್

'ಬಿಗ್ ಬಾಸ್-1' ವಿನ್ನರ್ ರಾಹುಲ್ ರಾಯ್

'ಆಶಿಕಿ'. 'ಪ್ಯಾರ್ ಕಾ ಸಾಯಾ', 'ಜುನೂನ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ನಟ ರಾಹುಲ್ ರಾಯ್. 'ಬಿಗ್ ಬಾಸ್' ಮೊದಲ ಆವೃತ್ತಿಯಲ್ಲಿ ಗೆಲುವಿನ ನಗೆ ಬೀರಿದ ರಾಹುಲ್ ರಾಯ್ ಸದ್ಯ ಬಾಲಿವುಡ್ ನಲ್ಲಿ ಬಿಜಿಯಾಗಿದ್ದಾರೆ.

More from Filmibeat

English summary
Salman Khan's Bigg Boss 12 is all set to start from September 16th. Here is an article about former Bigg Boss winners. Have a look.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X